ಭವಿಷ್ಯ
Vastu Tips : ಮನೆಯ ಈ ದಿಕ್ಕಿನಲ್ಲಿಟ್ಟರೆ ಪೊರಕೆ; ಸಿಗಲಿದೆ ಲಕ್ಷ್ಮೀ ಕೃಪೆ!
ಮನೆ ಸ್ವಚ್ಛವಾಗಿದ್ದರೆ ಲಕ್ಷ್ಮೀ ಸದಾ ವಾಸವಾಗಿರುತ್ತಾಳೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಸ್ವಚ್ಛತೆಗೆ ಬೇಕಾದ ಪೊರಕೆ ಸಹ ಲಕ್ಷ್ಮೀ ಸ್ವರೂಪವೆಂದು ಹೇಳಲಾಗಿದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಮನೆಯ ಯಾವ ದಿಕ್ಕಿನಲ್ಲಿಡಬೇಕು? ಪೊರಕೆಗೆ ಸಂಬಂಧಿಸಿದಂತೆ ಪಾಲಿಸಬೇಕಾದ ನಿಯಮಗಳೇನು? ಮಾಹಿತಿಗೆ (Vastu Tips) ಇಲ್ಲಿ ಓದಿ.
ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ವಾಸ್ತು ಶಾಸ್ತ್ರದಲ್ಲಿ ನಿತ್ಯದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಿಸುವ ಅನೇಕ ನೀತಿ ನಿಯಮಗಳ ಮೇಲೆ ಬೆಳಕು (Vastu Tips) ಚೆಲ್ಲಲಾಗಿದೆ. ಮನೆಯಲ್ಲಿ ದಿನವೂ ಬಳಸುವ ವಸ್ತುಗಳ ಬಳಕೆ ಹೇಗೆ ಎಂಬುದನ್ನು ತಿಳಿಸಿರುವುದರ ಜತೆಗೆ ಅದನ್ನು ಸರಿಯಾದ ಸ್ಥಳದಲ್ಲಿ ಇಡುವುದು ಸಹ ಮನೆಯ ಸುಖ–ಸಮೃದ್ಧಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಹೇಳಲಾಗಿದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಬೇಕೆಂದರೆ ವಾಸ್ತು ಪ್ರಕಾರ ಕೆಲ ಸರಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಮನೆಯಲ್ಲಿ ಲಕ್ಷ್ಮೀ ಕೃಪೆ ಸದಾ ನೆಲೆಸಿರಬೇಕೆಂದು ಎಲ್ಲರೂ ಬಯಸುತ್ತಾರೆ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎಂದು ನಮ್ಮ ಹಿರಿಯರು ಹೇಳಿಕೊಂಡೇ ಬಂದಿದ್ದಾರೆ. ಇದೇ ಕಾರಣಕ್ಕಾಗಿಯೇ ಹಬ್ಬಗಳಿಗೂ ಮೊದಲು ಅದರಲ್ಲೂ ವಿಶೇಷವಾಗಿ ದೀಪಾವಳಿ ಹಬ್ಬಕ್ಕೂ ಮುನ್ನ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು. ಹಾಗಾಗಿ ಧನಲಕ್ಷ್ಮೀಯ ಕೃಪೆ ಬೇಕೆಂದರೆ ಶುಚಿತ್ವ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ.
ಸ್ವಚ್ಛತೆಗೆ ಸಹಾಯಕವಾಗುವ ಪೊರಕೆಯನ್ನು ಸಹ ಲಕ್ಷ್ಮೀ ದೇವಿಯ ಸ್ವರೂಪವೆಂದೇ ಹೇಳಲಾಗುತ್ತದೆ. ಹಾಗಾಗಿ ಪೊರಕೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ ಹೇಳುವ ಕೆಲವು ವಿಚಾರಗಳ (Broom Vastu Tips) ಬಗ್ಗೆ ಗಮನಹರಿಸೋಣ.
ಈ ದಿಕ್ಕಿನಲ್ಲಿ ಪೊರಕೆ ಇಡಬಾರದು
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು. ಹಾಗೆ ಇಡುವುದರಿಂದ ಆರ್ಥಿಕ ಸಂಕಷ್ಟ ಆರಂಭವಾಗುತ್ತದೆ, ಧನ ಹಾನಿಗೆ ಇದು ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಮನೆಯಲ್ಲಿ ವಾಸ್ತು ದೋಷ ಉಂಟಾಗಲು ಇದು ಎಡೆಮಾಡಿಕೊಡುತ್ತದೆ.
ಪೊರಕೆ ಈ ದಿಕ್ಕಿನಲ್ಲಿರಲಿ
ಪೊರಕೆಯನ್ನು ಇಡಲು ದಕ್ಷಿಣ ದಿಕ್ಕು ಸೂಕ್ತವೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಮನೆಯ ದಕ್ಷಿಣ ದಿಕ್ಕಿನಲ್ಲಿ ಪೊರಕೆ ಇಡುವುದರಿಂದ ಮನೆಯಲ್ಲಿ ಸುಖ – ಸಮೃದ್ಧಿ ನೆಲೆಸುವುದಲ್ಲದೇ ಲಕ್ಷ್ಮೀ ದೇವಿಯ ಆಶೀರ್ವಾದ ಸಹ ಸಿಗಲಿದೆ.
ಪೊರಕೆ ಸದಾ ಮರೆಯಲ್ಲೇ ಇರಲಿ
ಮನೆಯಲ್ಲಿ ಪೊರಕೆ ಎಲ್ಲರ ಕಣ್ಣಿಗೆ ಕಾಣುವಂತೆ ಇಡಬಾರದು. ಪೊರಕೆ ಯಾವಾಗಲೂ ಮರೆಯಲ್ಲೇ ಇರಬೇಕು. ಪೊರಕೆ ಕಣ್ಣಿಗೆ ಕಾಣುವಂತೆ ಇಟ್ಟರೆ ಧನ ನಷ್ಟವಾಗುವ ಸಂಭವವಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಪೊರಕೆ ಹೀಗೆ ಇಡಬೇಕು
ಶಾಸ್ತ್ರದ ಪ್ರಕಾರ ಪೊರಕೆಯನ್ನು ನಿಲ್ಲಿಸಿ ಇಡುವುದು ಅಪಶಕುನವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುವುದಲ್ಲದೇ, ಧನ ನಷ್ಟವಾಗುತ್ತದೆ. ಹಾಗಾಗಿ ಪೊರಕೆಯನ್ನು ಮಲಗಿಸಿಯೇ ಇಡಬೇಕೆಂದು ಹೇಳಲಾಗುತ್ತದೆ.
ಜ್ಯೋತಿಷ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಪೊರಕೆಯನ್ನು ತುಳಿಯಬಾರದು
ಪೊರಕೆಯನ್ನು ತುಳಿಯುವುದರಿಂದ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ವಾಸ್ತು ದೋಷ ಸಹ ಉಂಟಾಗುತ್ತದೆ. ಗೊತ್ತಿಲ್ಲದೆಯೇ ಪೊರಕೆ ಕಾಲಿಗೆ ತಾಗಿದರೆ, ಅದನ್ನು ಮುಟ್ಟಿ ನಮಸ್ಕರಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಅಡುಗೆ ಮನೆಯಲ್ಲಿ ಇಡಬಾರದು
ಪೊರಕೆಯನ್ನು ಅಡುಗೆ ಮನೆಯಲ್ಲಿ ಇಡಬಾರದು. ಹೀಗೆ ಇಡುವುದರಿಂದ ಮನೆಯ ಸದಸ್ಯರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಹಾಳಾದ ಪೊರಕೆಯನ್ನು ಬಳಸುವುದು ಸೂಕ್ತವಲ್ಲ ಮತ್ತು ಅದನ್ನು ಮನೆಯಲ್ಲಿ ಸಹ ಇಟ್ಟಕೊಳ್ಳಬಾರದು. ಮನೆಯ ಸದಸ್ಯರು ಕೆಲಸದ ನಿಮಿತ್ತ ಹೊರಗೆ ಹೊರಟ ತಕ್ಷಣ ಮನೆಯನ್ನು ಕಸ ಗುಡಿಸಬಾರದು. ಇದು ಅಪಶಕುನವೆಂದು ಹೇಳಲಾಗುತ್ತದೆ.
ಪೊರಕೆ ಖರೀದಿಗೆ ಈ ದಿನ ಶುಭ
ಶನಿವಾರದಂದು ಪೊರಕೆ ಖರೀದಿಸಲು ಶುಭದಿನವೆಂದು ಶಾಸ್ತ್ರ ಹೇಳುತ್ತದೆ. ಈ ದಿನ ಖರೀದಿ ಮಾಡಿದರೆ, ಲಕ್ಷ್ಮೀ ದೇವಿಯ ಕೃಪೆ ಲಭಿಸುವುದಲ್ಲದೇ, ಶನಿದೇವರ ಪ್ರಸನ್ನತೆಗೂ ಪಾತ್ರರಾಗಬಹುದಾಗಿದೆ.
ಇದನ್ನೂ ಓದಿ : Vastu Tips : ಮನೆಯಲ್ಲಿ ಈ ಸಂಕೇತಗಳು ಕಂಡರೆ ಬೇಡ ನಿರ್ಲಕ್ಷ್ಯ; ವಾಸ್ತು ದೋಷದಿಂದಲೂ ಹೀಗಾಗಬಹುದು!
ಪ್ರಮುಖ ಸುದ್ದಿ
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷದ ಪಂಚಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಂದ್ರನು ಮಂಗಳವಾರ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ವೃಷಭ, ಕಟಕ, ಸಿಂಹ, ವೃಶ್ಚಿಕ, ಧನಸ್ಸು, ಮೀನಾ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕಟಕ ರಾಶಿಯವರಿಗೆ ಅತ್ಯಂತ ಪ್ರಭಾವಿ ಜನರ ಬೆಂಬಲ ಸಿಗುವುದರಿಂದ ನಿಮ್ಮ ನೈತಿಕ ಸ್ಥೈರ್ಯವು ಹೆಚ್ಚಿಸಲಿದೆ. ಸಿಂಹ ರಾಶಿಯವರು ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ವೃಶ್ಚಿಕ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (3-10-2023)
ಮೇಷ: ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕುಟುಂಬ ಸದಸ್ಯರ ಆರೋಗ್ಯದ ಕುರಿತು ಕಾಳಜಿ ವಹಿಸಿ. ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಸ್ವಲ್ಪ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ವೃಷಭ: ಹಿರಿಯರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಲೇಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಪ್ರೀತಿ ಪಾತ್ರರೊಡನೆ ಸಮಯವನ್ನು ಕಳೆಯುವಿರಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕಾರ್ಯ ನಿಮಿತ್ತ ಪ್ರಯಾಣವು ಫಲಪ್ರದವಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಮಿಥುನ: ಸಂತಸದ ಸುದ್ಧಿ ನಿಮ್ಮ ಮನಸ್ಸಿಗೆ ಇನ್ನಷ್ಟು ಮುದ ನೀಡಲಿದೆ. ಮನೆಯ ಅಗತ್ಯ ವಸ್ತುಗಳ ಖರೀದಿಯಿಂದಾಗಿ ಖರ್ಚು ಹೆಚ್ಚಾಗಲಿದೆ. ಪ್ರೀತಿ ಪಾತ್ರರಿಂದ ಉಡುಗೊರೆ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಉತ್ಸಾಹ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ. ಕುಟುಂಬ ಸದಸ್ಯರ ಒಳ್ಳೆಯ ಸಲಹೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕೊಂಚ ಒತ್ತಡ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3
ಸಿಂಹ: ಹೂಡಿಕೆ ವ್ಯವಹಾರ ತಕ್ಕ ಮಟ್ಟಿಗೆ ಲಾಭ ತರಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ಆರೋಗ್ಯ ಮಧ್ಯಮವಾಗಿರಲಿದೆ. ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಕನ್ಯಾ: ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿ ಇರುವಿರಿ. ಈ ಹಿಂದೆ ಹೂಡಿಕೆ ಮಾಡಿದ ವ್ಯವಹಾರಗಳು ಈಗ ಲಾಭ ತಂದು ಕೊಡಲಿದೆ. ಉದ್ಯೋಗದ ಸಿಗುವ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ಸಿಗಲಿದೆ. ಕಲಾ ಪ್ರತಿಭೆಗಳಿಗೆ ಅವಕಾಶದ ಜತೆಗೆ ಪ್ರೋತ್ಸಾಹ ಸಿಗಲಿದೆ. ಸಾಮಾಜಿಕವಾಗಿ ನಿಮಗೆ ಗೌರವ ಪುರಸ್ಕಾರಗಳು ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಕಳೆದುಹೋಗಿರುವುದರ ಬಗ್ಗೆ ಯೋಚಿಸುತ್ತಿದ್ದರೆ ಹತಾಶೆಯು ನಿಮ್ಮ ಆರೋಗ್ಯವನ್ನು ನಾಶಮಾಡಬಹುದು. ಹೀಗಾಗಿ ಸಾಧ್ಯವಾದಷ್ಟೂ ವಿಶ್ರಾಂತಿ ತಗೆದುಕೊಳ್ಳಲು ಪ್ರಯತ್ನಿಸಿ. ದಿನದ ಮಟ್ಟಿಗೆ ಯಾವುದೇ ಹೊಸ ವ್ಯವಹಾರಗಳಲ್ಲಿ ಕೈ ಹಾಕದಿರಿ. ಸಹದ್ಯೋಗಿಗಳ ಸಹಕಾರ ಸಿಗಲಿದೆ. ಕೆಲಸದ ಸಂಬಂಧ ಮಾಡುವ ಪ್ರಯಾಣ ಲಾಭ ತರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2
ವೃಶ್ಚಿಕ: ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ಪ್ರೀತಿ-ಪಾತ್ರರೊಡನೆ ಪ್ರಯಾಣ ಮಾಡಬಹುದು. ವ್ಯಾಪಾರ ವ್ಯವಹಾರಗಳಲ್ಲಿ ತಕ್ಕ ಮಟ್ಟಿಗೆ ಲಾಭ ಸಿಗಲಿದೆ. ಆದರೆ ಇಂದು ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಧನಸ್ಸು: ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ನಿಮ್ಮ ಸಂಬಂಧಿಗಳ ಆರೋಗ್ಯದ ಕುರಿತು ವಿಚಾರ ಮಾಡುವಿರಿ.ಖರ್ಚು ಹೆಚ್ಚಾಗಲಿದೆ.ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಶುಭ ಫಲ
ಅದೃಷ್ಟ ಸಂಖ್ಯೆ: 1
ಶ್ರಾದ್ಧವನ್ನು ಏಕೆ ಮಾಡಬೇಕು ಗೊತ್ತಾ
ಮಕರ: ಜವಾಬ್ದಾರಿಗಳು ಇನ್ನಷ್ಟು ಹೆಚ್ಚಾಗಲಿವೆ. ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಆದರೂ ನಿಮ್ಮ ಬದುಕನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಬಂಧು ಮಿತ್ರರೊಡನೆ ಪ್ರೀತಿಯಿಂದ ವರ್ತಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ಕುಂಭ: ಅನಾವಶ್ಯಕ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ಉತ್ಸಾಹ ಕಳೆಯಬಹುದು, ಆದಷ್ಟು ಕುಲದೇವರ ದರ್ಶನ ಹಾಗೂ ಆಧ್ಯಾತ್ಮ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ. ಕುಟುಂಬ ಸದಸ್ಯರ ವಿರೋಧದಿಂದಾಗಿ ಕಾರ್ಯದಲ್ಲಿ ಅಡೆತಡೆ ಉಂಟಾಗಲಿದೆ. ವ್ಯಾಪಾರ ವ್ಯವಹಾರ ನಡೆಸುವವರಿಗೆ ಉತ್ತಮ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಒತ್ತಡದ ವಾತಾವರಣ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಅಮೂಲ್ಯ ವಸ್ತುಗಳ ಬಗೆಗೆ ಜಾಗೃತಿ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ.ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಪ್ರಮುಖ ಸುದ್ದಿ
Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್!
Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷದ ತದಿಗಿ/ಚೌತಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಂದ್ರನು ಸೋಮವಾರ ವೃಷಭ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಬಳಗದಲ್ಲಿ ಯಾವುದಾದರೂ ದುಃಖದ ಸನ್ನಿವೇಶ ನಡೆಬಹುದು. ವೃಷಭ ರಾಶಿಯವರಿಗೆ ಆಂತರಿಕ ಭಯವು ಸಂತೋಷವನ್ನು ಹಾಳು ಮಾಡಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡಬೇಡಿ. ಮಕರ ರಾಶಿಯವರ ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (2-10-2023)
ಮೇಷ: ದೈಹಿಕವಾಗಿ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ. ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು. ನಿಮ್ಮ ಬಳಗದಲ್ಲಿ ಯಾವುದಾದರೂ ದುಃಖದ ಸನ್ನಿವೇಶ ನಡೆಬಹುದು. ನಿಮ್ಮ ಶ್ರಮ ಮತ್ತು ಸಮರ್ಪಣೆ ನಿಮ್ಮ ಪರವಾಗಿ ಮಾತನಾಡುತ್ತವೆ ಮತ್ತು ನಿಮಗೆ ವಿಶ್ವಾಸ ಮತ್ತು ಬೆಂಬಲ ಗಳಿಸಿಕೊಡುತ್ತವೆ.
ಅದೃಷ್ಟ ಸಂಖ್ಯೆ: 1
ವೃಷಭ: ಆಂತರಿಕ ಭಯ ನಿಮ್ಮ ಸಂತೋಷವನ್ನು ಹಾಳು ಮಾಡಬಹುದು. ನಕಾರಾತ್ಮಕ ಆಲೋಚನೆಗಳನ್ನು ಮಾಡಬೇಡಿ. ಆಗ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ದಿನ ಕೊನೆಯ ಭಾಗದಲ್ಲಿ ಯಾವುದಾದರೂ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆರೋಗ್ಯ ಕೊಂಚಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಇರಲಿದೆ.
ಅದೃಷ್ಟ ಸಂಖ್ಯೆ: 9
ಮಿಥುನ: ಬೇರೆಯವರ ಮಾತನ್ನು ಕೇಳಿಕೊಂಡು ನಿಮ್ಮನ್ನು ಪ್ರೀತಿಯಿಂದ ಕಾಣುವ ವ್ಯಕ್ತಿಗಳನ್ನು ದ್ವೇಷಿಸುವುದು ಬೇಡ. ಇತರರ ಸಮಸ್ಯೆಗಳನ್ನು ಪರಿಹರಿಸಲು ನೀವು ಮಧ್ಯ ಪ್ರವೇಶ ಮಾಡುವ ಸಾಧ್ಯತೆ ಇದೆ. ಧಿಡೀರ್ ಪ್ರಯಾಣ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕಟಕ: ಅನಿವಾರ್ಯ ಪ್ರಸಂಗಗಳು ನಿಮಗೆ ಕೋಪವನ್ನು ತರಿಸಬಹುದು. ಹೀಗಾಗಿ ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಉತ್ತಮವಾಗಿರಲಿದೆ. ಕಠಿಣ ಪರಿಶ್ರಮ ನಿಮಗೆ ಫಲ ನೀಡಲಿದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ಸಿಂಹ: ನಿಮ್ಮ ಸಭ್ಯ ನಡವಳಿಕೆ ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಬಹುದು. ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆ ಅವಕಾಶ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ಕನ್ಯಾ: ಒತ್ತಡದಿಂದ ವಿಮುಕ್ತಿ ಹೊಂದಿ ವಿರಾಮದ ಸಂತೋಷವನ್ನು ಅನುಭವಿಸುವಿರಿ. ದೀರ್ಘಕಾಲದ ದೃಷ್ಟಿಕೋನದಿಂದ ಮಾಡಿದ ಹೂಡಿಕೆಯಿಂದ ಲಾಭ ಪಡೆಯುವಿರಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸಂಪೂರ್ಣ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ದಿಢೀರ್ ಧನಾಗಮನದಿಂದ ಸಂತೋಷ ಇಮ್ಮಡಿಯಾಗಲಿದೆ. ಅನೇಕ ಸಮಸ್ಯೆಗಳು ಇಂದು ಪರಿಹಾರವಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಬಹಳ ದಿನಗಳಿಂದ ಕಂಡ ಕನಸು ನನಸಾಗಲಿದೆ. ಉದ್ಯೋಗಿಗಳಿಗೆ ಶುಭ ಫಲ.
ಅದೃಷ್ಟ ಸಂಖ್ಯೆ: 1
ವೃಶ್ಚಿಕ: ನಿಮ್ಮ ಪ್ರಮುಖ ನಿರ್ಧಾರದಿಂದಾಗಿ ಮಾನಸಿಕವಾಗಿ ನೀವು ಬಳಲುವ ಸಾಧ್ಯತೆ ಇದೆ. ಅನಾವಶ್ಯಕ ಖರ್ಚು ಮಾಡಿ ಕೊರಗುವ ಸಾಧ್ಯತೆ ಇದೆ. ಆದಷ್ಟು ನಿಯಂತ್ರಣದಲ್ಲಿರಿ. ಸಂಗಾತಿಯ ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭಫಲ, ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 2
ಧನಸ್ಸು: ಆರೋಗ್ಯದ ಆರೈಕೆ ಇಂದು ಅಗತ್ಯವಿದೆ. ಆಪ್ತರೊಂದಿಗೆ ಸೇರಿಕೊಂಡು ಮಾಡುವ ವ್ಯಾಪಾರ ನಷ್ಟ ತಂದಿತು, ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 8
ನಾವು ಎಷ್ಟೇ ದುಡಿದರೂ ನಮ್ಮ ಮಿತಿ ಮೀರಬಾರದು
ಮಕರ: ಆಹಾರ ಕ್ರಮದ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಆದಷ್ಟು ಆಹಾರ ನಿಯಂತ್ರಣ ಮಾಡಿ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ದಿಢೀರ್ ಪ್ರಯಾಣ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8
ಕುಂಭ: ನಿಮ್ಮ ಸಾಧನೆಗೆ ಇಂದು ಪ್ರೋತ್ಸಾಹ ಸಿಗಲಿದೆ. ಅನೇಕ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಕೊಂಡ ಪ್ರಯಾಣ ಲಾಭವನ್ನು ತಂದುಕೊಡಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ ,ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಪ್ರಮುಖ ಸುದ್ದಿ
Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!
Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚಂದ್ರನು ಭಾನುವಾರವೂ ವೃಷಭ ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯ ಅಪರೂಪದ ವ್ಯಕ್ತಿಗಳ ಪರಿಚಯದಿಂದಾಗಿ ಅನೇಕ ವಿಚಾರಗಳು ಮನಸ್ಸಿನ ಆಳಕ್ಕೆ ಇಳಿಯಲಿದೆ. ಮಿಥುನ ರಾಶಿಯವರು ಯಾರನ್ನೂ ನಂಬಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕನ್ಯಾ ರಾಶಿಯವರಿಗೆ ಬಹಳ ದಿನಗಳಿಂದ ಬರದೆ ಇರುವ ನಿಮ್ಮ ಹಣ ಮರಳುವ ಸಾಧ್ಯತೆ ಇದೆ. ತುಲಾ ರಾಶಿಯವರು ಅನಿವಾರ್ಯ ಕಾರಣಗಳಿಂದ ನೀವು ಇತರರೊಂದಿಗೆ ಜಗಳಕ್ಕೆ ಇಳಿಯುವ ಸಾಧ್ಯತೆ ಇದೆ. ಇವೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (1-10-2023)
ಮೇಷ: ಆತ್ಮವಿಶ್ವಾಸದ ಕೊರತೆಯಿಂದಾಗಿ ಕಾರ್ಯದಲ್ಲಿ ನಿಧಾನಗತಿ ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ಸಿಗಲಿದೆ. ಅಪರೂಪದ ವ್ಯಕ್ತಿಗಳ ಪರಿಚಯದಿಂದಾಗಿ ಅನೇಕ ವಿಚಾರಗಳು ಮನಸ್ಸಿನ ಆಳಕ್ಕೆ ಇಳಿಯಲಿದೆ. ಉದ್ಯೋಗಿಗಳಿಗೆ ಶುಭ ಫಲ ಸಿಗಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7
ವೃಷಭ: ಹೂಡಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಆರ್ಥಿಕವಾಗಿ ಸದೃಢತೆ ಇರಲಿದೆ. ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಉತ್ತಮ. ಕಾಲಹರಣ ಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಉದ್ಯೋಗಿಗಳಿಗೆ ಶುಭ ಫಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಮಿಥುನ: ಸಂತೃಪ್ತ ಜೀವನ ನಿಮದಾಗಲಿದೆ. ಕಾರ್ಯದಲ್ಲಿ ಯಶಸ್ಸು ಸಿಗುವುದು. ಯಾರನ್ನೂ ನಂಬಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಆಪ್ತ ಸ್ನೇಹಿತರೊಂದಿಗೆ ಮಾತುಕತೆ ಇರಲಿದೆ. ದಿನದ ಕೊನೆಯ ಭಾಗದಲ್ಲಿ ಮಾನಸಿಕವಾಗಿ ದುರ್ಬಲವಾಗುವ ಸಾಧ್ಯತೆ ಇದೆ. ಮಕ್ಕಳು ಸಿಟ್ಟು ತರಿಸಬಹುದು. ಆರ್ಥಿಕವಾಗಿ ಸಾಧಾರಣವಾಗಿರಲಿದೆ. ಗುರುಗಳ ಅನುಗ್ರಹ ಪಡೆಯಿರಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5
ಕಟಕ: ಬೇರೆಯವರನ್ನು ಟೀಕೆ ಮಾಡುವ ಭರದಲ್ಲಿ ನೀವು ಟೀಕೆಗೆ ಒಳಗಾಗುವುದು ಬೇಡ. ಆಪ್ತರೊಂದಿಗೆ ಅತಿಯಾದ ಸಲುಗೆ ಒಳ್ಳೆಯದಲ್ಲ. ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆತುರದ ಮಾತುಗಳಿಗೆ ನಿಯಂತ್ರಣ ಇರಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಅತಿಥಿಗಳ ಆಗಮನದಿಂದ ಕಾರ್ಯ ವಿಳಂಬವಿದೆ. ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ಸಿಂಹ: ಒತ್ತಡದಿಂದ ಹೊರಬಂದು ಉತ್ಸಾಹದ ದಿನ ನಿಮದಾಗಲಿದೆ. ದೈಹಿಕವಾಗಿ ಮಾನಸಿಕವಾಗಿ ಆರೋಗ್ಯ ಉತ್ತಮವಾಗಿರಲಿದೆ. ಹಣಕಾಸು, ಹೂಡಿಕೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ದಿಢೀರ್ ಧನಾಗಮನವಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗಲಿದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳ ಸೂಚನೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕನ್ಯಾ: ಬಹಳ ದಿನಗಳಿಂದ ಬರದೆ ಇರುವ ನಿಮ್ಮ ಹಣ ಮರಳುವ ಸಾಧ್ಯತೆ ಇದೆ. ಆರೋಗ್ಯದ ಕಾಳಜಿ ವಹಿಸಿ. ದಿನದ ಮಟ್ಟಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸಾಮರಸ್ಯ ಮೂಡಲಿದೆ. ಆಪ್ತರೊಂದಿಗೆ ಮಾತುಕತೆ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಅನಿವಾರ್ಯ ಕಾರಣಗಳಿಂದ ನೀವು ಇತರರೊಂದಿಗೆ ಜಗಳಕ್ಕೆ ಇಳಿಯುವ ಸಾಧ್ಯತೆ ಇದೆ. ಆದಷ್ಟು ಮಾತಿನಲ್ಲಿ ನಿಯಂತ್ರಣ ಇರಲಿ. ಕುಟುಂಬದ ಆಪ್ತರು, ಸ್ನೇಹಿತರಿಂದ ಉಡುಗೊರೆ ಸಿಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7
ವೃಶ್ಚಿಕ: ಇಂದು ಮನೋರಂಜನೆಗೆ ಹೆಚ್ಚು ಮಹತ್ವ ಕೊಡುವ ಸಾಧ್ಯತೆ ಇದೆ. ಆಪ್ತರು ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಆತ್ಮವಿಶ್ವಾಸದಿಂದ ಮಾಡಿದ ಕಾರ್ಯ ಯಶಸ್ಸುನ್ನು ತಂದು ಕೊಡಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9
ಧನಸ್ಸು: ಬಹಳ ದಿನಗಳ ಕನಸು ನನಸಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆರ್ಥಿಕವಾಗಿ ಇಂದು ಸಬಲತೆ ಹೊಂದುವಿರಿ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಸಂತೋಷದ ಜತೆ ಜತೆಗೆ ನಿಮ್ಮನ್ನು ಯಾರಾದರೂ ಟೀಕಿಸುವ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಕೌಟುಂಬಿಕ ತಾಪತ್ರಯ ನಿಮ್ಮನ್ನು ನಿರಾಸೆಗೊಳಿಸಬಹುದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6
ಈ ರಾಶಿಯವರಿಗೆ ತುಂಬಾ ಒಳಿತಾಗುತ್ತೆ
ಮಕರ: ಆರೋಗ್ಯ ದಿನದ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ ಆದಷ್ಟು ಎಚ್ಚರಿಕೆ ಇರಲಿ. ಕುಟುಂಬದ ಸದಸ್ಯರ ಬೆಂಬಲ ನಿಮಗೆ ಪುಷ್ಟಿ ನೀಡಲಿದೆ. ಆರ್ಥಿಕವಾಗಿ ಬಲಗೊಳ್ಳುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6
ಕುಂಭ: ಒಂಟಿತನ ನಿಮ್ಮನ್ನು ಕಾಡಬಹುದು. ಕುಟುಂಬ ಸದಸ್ಯರ ಅನಾರೋಗ್ಯ ಕಾರಣಗಳಿಂದ ಖರ್ಚು ಸಾಧ್ಯತೆ ಇದೆ. ಬಾಕಿ ಇರುವ ಕೆಲಸ ಕಾರ್ಯಗಳನ್ನು ಮುಂದೂಡುವುದು ಬೇಡ. ಅತಿಯಾದ ಆಲಸ್ಯದಿಂದ ಹೊರ ಬಂದು ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4
ಇದನ್ನೂ ಓದಿ : ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?
ಮೀನ: ಭರವಸೆಯ ಬದುಕು ರೂಪುಗೊಳ್ಳಲಿದೆ. ಆಪ್ತರು ನೀಡುವ ಶುಭ ಸಂದೇಶ ನಿಮ್ಮನ್ನು ಹರ್ಷಿತರನ್ನಾಗಿ ಮಾಡುವುದು. ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೊಗದಲ್ಲಿ ಹೊಸ ಭರವಸೆ ಮೂಡಲಿದೆ. ಆರ್ಥಿಕವಾಗಿ ಬಲಿಷ್ಠರಾಗುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
ಆರೋಗ್ಯ
Vastu Tips For Health: ಆರೋಗ್ಯಪೂರ್ಣ ಆಗಿರಬೇಕೆ? ಈ ವಾಸ್ತು ಟಿಪ್ಸ್ ಪಾಲಿಸಿ
ಮನೆಯ ರಚನೆ ಮತ್ತು ಪೀಠೋಪಕರಣಗಳು ಅಲ್ಲಿ ವಾಸಿಸುತ್ತಿರುವವರ ಆರೋಗ್ಯದ ಮೇಲೆ (Vastu Tips For Health) ಪರಿಣಾಮ ಬೀರುತ್ತವೆ. ಹಾಗಾದರೆ ಆರೋಗ್ಯಪೂರ್ಣವಾಗಿರಬೇಕಿದ್ದರೆ ಏನು ಮಾಡಬೇಕು? ಇಲ್ಲಿದ ಮಾಹಿತಿ.
ಆರೋಗ್ಯವೇ ಭಾಗ್ಯ (Vastu Tips For Health) ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ಒಂದಿದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ಇದಕ್ಕಾಗಿ ನಮ್ಮ ಹಿರಿಯರು ಆರೋಗ್ಯವಂತ ಜೀವನಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದರು. ವಾಸ್ತು ಮಾನವನ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮನೆಯ ರಚನೆ ಮತ್ತು ಪೀಠೋಪಕರಣಗಳು ಅಲ್ಲಿ ವಾಸಿಸುತ್ತಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆರೋಗ್ಯಕಾರಿ ಜೀವನಕ್ಕೆ ನೀವು ಪಾಲಿಸಬೇಕಾದ ಕೆಲವೊಂದು ವಾಸ್ತು ಸಲಹೆಗಳನ್ನು ನಾವಿಲ್ಲಿ ನೀಡುತ್ತೇವೆ.
ಮಲಗುವ ದಿಕ್ಕು
ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ದೆ ಬಹಳ ಮುಖ್ಯ. ಅದೇ ರೀತಿ ನೆಮ್ಮದಿಯ ನಿದ್ದೆ ಬರಲು ನಾವು ಯಾವ ದಿಕ್ಕಿಗೆ ತಲೆಹಾಕಿ ಮಲಗುತ್ತೇವೆ ಎನ್ನುವುದೂ ಪ್ರಧಾನ ಅಂಶ. ನಮ್ಮ ಹಿರಿಯರು ಸಲಹೆ ನೀಡುವಂತೆ ದಕ್ಷಿಣ ಭಾಗಕ್ಕೆ ತಲೆ ಹಾಕಿ ಮಲಗುವುದನ್ನು ರೂಢಿ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಉತ್ತರ ಭಾಗಕ್ಕೆ ತಲೆ ಹಾಕಿ ಮಲಗಬೇಡಿ. ಗೋಡೆಯಿಂದ ನಿಮ್ಮ ಹಾಸಿಗೆ ಕನಿಷ್ಠ ಮೂರರಿಂದ ನಾಲ್ಕು ಇಂಚು ದೂರದಲ್ಲಿರಲಿ. ಮರದ ಮಂಚವೇ ನಿಮ್ಮ ಆದ್ಯತೆಯ ಆಯ್ಕೆಯಾಗಿರಲಿ.
ಶೌಚಗೃಹ
ಬಾತ್ ರೂಮ್ ಮತ್ತು ಟಾಯ್ಲೆಟ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಇಲ್ಲಿ ನೀರ ಪಸೆ ಇರುವುದರಿಂದ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನೈರ್ಮಲ್ಯಕ್ಕೆ ಪ್ರಾಧಾನ್ಯತೆ ಕೊಡಿ. ಬಾತ್ ರೂಮ್ ಒಳಗೆ ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ. ಅದೇ ರೀತಿ ನಳ್ಳಿಯಿಂದ ನೀರು ತೊಟ್ಟಿಕ್ಕುವುದು ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಆದ್ದರಿಂದ ಮನೆಯಲ್ಲಿ ಎಲ್ಲೂ ನೀರು ಸೋರಿಕೆಯಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಗೋಡೆಗೆ ಬಣ್ಣ
ಮನೆಯಲ್ಲಿ ಯಾರಿಗಾದರೂ ನಿರಂತರ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಸುತ್ತಲಿನ ಗೋಡೆಗೆ ಬಣ್ಣ ಹಚ್ಚಿ. ಇದಕ್ಕಾಗಿ ಕೆಂಪು ಅಥವಾ ಹಸುರು ಪೈಂಟ್ ಬಳಸಿ. ಕೆಂಪು ಬಣ್ಣ ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸಿದರೆ ಹಸುರು ಬಣ್ಣ ಶಾಂತತೆಯ ಸಂಕೇತ. ಗೋಡೆಗಳಲ್ಲಿ ಬಿರುಕು, ಕೊಳೆ ಇದ್ದರೆ ಅದನ್ನು ಶುಚಿಗೊಳಿಸಿ ಬಳಿಕ ಪೈಂಟ್ ಮಾಡಿ.
ಪೀಠೋಪಕರಣಗಳ ಸ್ಥಾನ
ಮನೆಗಳಲ್ಲಿ ಯಾವ ರೀತಿಯಲ್ಲಿ ನಾವು ಪೀಠೋಪಕರಣಗಳನ್ನು ಸೆಟ್ ಮಾಡಿ ಇಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಪ್ರತಿಫಲನ ಗುಣವುಳ್ಳ ಕನ್ನಡಿ ಅಥವಾ ಟಿವಿಯಂತಹ ವಸ್ತುಗಳನ್ನು ಬೆಡ್ ಅಥವಾ ಬೆಡ್ ರೂಮ್ ಎದುರು ಇಡಬೇಡಿ. ಬಾತ್ ರೂಮ್ ಮತ್ತು ಮೆಟ್ಟಿಲಿನ ಸಮೀಪ ಕತ್ತಲೆ ಇರದಂತೆ ನೋಡಿಕೊಳ್ಳಿ. ಅಭ್ಯಾಸ ಕೋಣೆಯಲ್ಲಿ ಮರ ಅಥವಾ ಮಾರ್ಬಲ್ ಪೀಠೋಪಕರಣಗಳನ್ನು ಇಡುವುದರಿಂದ ಸ್ಮರಣೆ ಶಕ್ತಿ ಮತ್ತು ಶ್ರದ್ಧೆ ಹೆಚ್ಚುತ್ತದೆ.
ಹೀಗಿರಲಿ ಅಡುಗೆ ಕೋಣೆ
ಆರೋಗ್ಯ ಮತ್ತು ಅಡುಗೆ ಕೋಣೆ ಪರಸ್ಪರ ಸಂಬಂಧ ಇರುವಂತಹದ್ದು. ಅಡುಗೆ ಕೋಣೆಯ ಮುಖ ಆಗ್ನೇಯ ದಿಕ್ಕಿಗೆ ಇರಬೇಕು. ಅಲ್ಲದೆ ಸ್ಟವ್ ಅಥವಾ ಒಲೆ ಪೂರ್ವ ದಿಕ್ಕಿನಲ್ಲಿ ಇರಿಸಿ. ಯಾವುದೇ ಕಾರಣಕ್ಕೂ ಈಶಾನ್ಯ ಭಾಗಕ್ಕೆ ಮುಖ ಮಾಡಿ ಅಡುಗೆ ಕೋಣೆ ಮತ್ತು ಸ್ಟವ್ ನಿಲ್ಲದಂತರೆ ನೋಡಿಕೊಳ್ಳಿ.
ಒಡೆದ ಕನ್ನಡಿ, ಕಿಟಕಿ ಇರಲೇ ಬಾರದು
ಒಡೆದ ಕನ್ನಡಿ ಮನೆಯೊಳಗೆ ಇರುವುದು ಅಪಶಕುನದ ಸಂಕೇತ ಎನ್ನಲಾಗುತ್ತದೆ. ಆದ್ದರಿಂದ ಕನ್ನಡಿ ಒಡೆದಿದ್ದರೆ ಕೂಡಲೆ ಅದನ್ನು ತೆಗೆದುಬಿಡಿ. ಕಿಟಕಿ, ಪೀಠೋಪಕರಣ ಒಡೆದಿದ್ದರೆ ಕೂಡಲೇ ಸರಿಪಡಿಸಿ. ಒಡೆದ ವಸ್ತುಗಳು ಮನಸ್ಸಿನ ಮೇಲೆ ಒತ್ತಡ ಹೇರಬಲ್ಲವು.
ದೇವರ ಕೋಣೆ ಹೀಗಿದ್ದರೆ ಚೆನ್ನ
ದೇವರ ಕೋಣೆ ಅಥವಾ ಧ್ಯಾನ ಮಾಡುವ ಸ್ಥಳ ಅತ್ಯಂತ ಶಾಂತ ವಾತಾವರಣವನ್ನು ಹೊಂದಿರುತ್ತವೆ. ವಿಗ್ರಹಗಳು ಸರಿಯಾದ ದಿಕ್ಕಿನಲ್ಲಿವೆ ಮತ್ತು ಯಾವುದೇ ಉಪಕರಣ ಒಡೆದಿಲ್ಲ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ವಿಗ್ರಹಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಡಿ. ಸಂಜೆ ಬೆಳಗುವ ಅಗರ್ಬತ್ತಿ, ದೀಪ ವಾತಾವರಣವನ್ನು ಶುಭ್ರವಾಗಿಸುತ್ತದೆ. ನಿಮ್ಮ ಗಾರ್ಡನ್‌ನ್ನಲ್ಲಿ ತುಳಸಿ ಮತ್ತು ಕಹಿ ಬೇವಿನ ಗಿಡ ಬೆಳೆಸಿ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ಇದನ್ನೂ ಓದಿ: Vastu Tips For Success: ಜೀವನದಲ್ಲಿ ಯಶಸ್ಸು ಸಿಗಬೇಕೆ? ಈ ವಾಸ್ತು ನಿಯಮ ಪಾಲಿಸಿ
-
ದೇಶ21 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ16 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್23 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ22 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್24 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ11 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕಿರುತೆರೆ6 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ಕ್ರೈಂ13 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?