Site icon Vistara News

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ : ಕೃಷಿಕರಿಗೆ ಶನೈಶ್ವರನಿಂದ ಲಾಭ

ಶನೈಶ್ವರನಿಂದ ದೃಷ್ಟಿ ಘಾತಕ್ಕೆ ಒಳಗಾಗಿರುವ ಗುರು, ಬುಧ, ರಾಹು ಮತ್ತು ಸೂರ್ಯರು ವಾಸ್ತವದಲ್ಲಿ ಅನೇಕ ಸಂಪನ್ನತೆಯನ್ನು ಒದಗಿಸಲು ವಿಫಲರಾಗುತ್ತಾರೆ. ಬೌದ್ಧಿಕ ಬಲದಿಂದ ಗೆಲ್ಲುತ್ತೇನೆ ಎಂಬ ನಿಮ್ಮ ಮನೋ ದಾರ್ಢ್ಯತೆಯನ್ನು ಕುಗ್ಗಿಸುತ್ತಾರೆ. ಅಪಾರವಾದ ನಿಮ್ಮ ವಿದ್ವತ್ತಿಗೆ ಬೆಲೆಯೇ ಇರದಂತೆ ಆಗುತ್ತದೆ. ಕೃಷಿಕರಿಗೆ ಶನೈಶ್ವರ ಲಾಭ ಒದಗಿಸುವ ಅವಕಾಶ ಜಾಸ್ತಿಯಾಗಿದೆ. ಚುನಾವಣಾ ಸ್ಪರ್ಧೆಯಲ್ಲಿ ಹೆಜ್ಜೆ ಇರಿಸಿದವರು ವೈರಿಗಳಿಂದ ಮೋಸ ಹೋಗುವ ಸಾಧ್ಯತೆ ಅಧಿಕ. ಎಚ್ಚರ ಇರಲಿ. ದುರ್ಗಾ ಮಾತೆಯನ್ನು ಸ್ತುತಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ವೃಷಭ: ಅತಿಯಾದ ಆತ್ಮವಿಶ್ವಾಸ ಬೇಡ

ಗುರುಬಲ ಕಳಕೊಂಡಿದ್ದೀರಿ. ಮಾತುಗಳು ನಿಷ್ಠುರವಾಗುವ ಮೂಲಕ ಅಪಾಯ ಜಾಸ್ತಿ. ಹಿರಿಯರ ಮೂಲಕ ಒಳಿತುಗಳ ಬಗೆಗೆ ನಿರ್ಧರಿಸಿ ಹೆಜ್ಜೆ ಇಡಿ. ನಿಮ್ಮ ಅಪಾರವಾದ ಬುದ್ಧಿ ಶಕ್ತಿಯು ಒಳ್ಳೆ ವಿಚಾರವೇ. ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ಬಾಳ ಸಂಗಾತಿಯ ಕಾರಣದಿಂದಾಗಿ ಹಣ ಕಾಸಿನ ವಿಚಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ರೀತಿಯ ಸೂಕ್ಷ್ಮ ವಿಚಾರಗಳ ಬಗೆಗೆ ಜಾಣ್ಮೆಯಿಂದಲೇ ನಿಯಂತ್ರಣ ಸಾಧಿಸಿ. ನಿಮ್ಮನ್ನು ಕೆಲ ಮಟ್ಟಿಗೆ ವಿರೋಧಿಗಳೇ ಒಳಿತಿನ ದಾರಿಗೆ ಅವಕಾಶ ಮಾಡಿಕೊಡಬಹುದು. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ದಕ್ಷಿಣ

ಮಿಥುನ: ಧೂರ್ತರ ಬಗ್ಗೆ ಎಚ್ಚರಿಕೆ ಇರಲಿ

ಅಯ್ಯೋ ದುಡುಕಿದೆ ಎಂಬ ಪಶ್ಚಾತ್ತಾಪದ ಧ್ವನಿ ಎದ್ದು ಬಾರದಂತೆ ಹೆಜ್ಜೆ ಇಡಿ. ಶನೈಶ್ವರನಿಂದಾಗಿ ಒಳಿತಿನ ಅವಕಾಶಗಳೆಲ್ಲ ಹೇರಳ. ನಿಮ್ಮ ಅನುಭವಗಳ ಒಟ್ಟು ಮೊತ್ತ ಪರದಾಟಗಳನ್ನು ನಿಶ್ಚಿತವಾಗಿ ನಿಗ್ರಹಿಸುವ ಶಕ್ತಿ ತೆಳೆದಿದೆ. ಜ್ಞಾನಿಗಳು, ಬುದ್ಧಿವಂತರು ಆದ ನೀವು ಚಾಟಿ ಮಾತುಗಳನ್ನು ತಂದು ಹೇಳುವ ಧೂರ್ತರ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳಿ. ಕಲಾ ತಾಂತ್ರಿಕತೆ, ಕಟ್ಟಡ ವಿನ್ಯಾಸಕಾರರು, ಎಂಜಿನಿಯರುಗಳಿಗೆ ಒಳಿತಿನ ಸಂಬಂಧವಾದ ವರ್ತಮಾನ ಇದಾಗಿದೆ. ನರಸಿಂಹನನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪೂರ್ವ

ಕಟಕ: ವಿರೋಧಿಗಳ ಕಾಟದ ಬಗ್ಗೆ ಎಚ್ಚರ ಇರಲಿ

ಆರ್ಥಿಕ ವಿಚಾರಗಳಿಗೆ ಬಾಧೆ ಬರಲು ಸಾಧ್ಯತೆಗಳು ಜಾಸ್ತಿಯಾದ ಕಾಲಘಟ್ಟ ಇದು. ವಿರೋಧಿಗಳು ಕಾಟ ಕೊಡುತ್ತಾರೆ ಎಚ್ಚರ ಇರಲಿ. ಮಂಗಳಕಾರಕಳಾದ ಶ್ರೀ ತ್ರಿಪುರ ಸುಂದರಿಯ ಅನುಗ್ರಹ ದೊರೆತಲ್ಲಿ ಅನೇಕ ರೀತಿಯ ಪ್ರಾಪ್ತಿಗಳಿಗೆ ಅವಕಾಶಗಳೂ ಇವೆ. ಸಹನೆಯಿಂದಲೇ ನಿಮ್ಮ ಪ್ರಯತ್ನ ನಡೆಸಿ. ಧೈರ್ಯವೂ ಇರಲಿ. ಆದರೆ ಧೈರ್ಯದ ವಿಚಾರದಲ್ಲಿ ಅವಸರವಿರದ ಜಾಣ್ಮೆ ಇರಲಿ. ಕೆಂಡಗಳ ಮೇಲೆ ನಿಂತಿದ್ದೀರಿ ಎಂಬುದು ನೆನಪಿರಲಿ. ಆದರೂ ಶ್ರೀ ರಾಮ ರಕ್ಷೆಯಿಂದ ಕಾಲು ಸುಡದಿರಲಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ವಾಯವ್ಯ

ಸಿಂಹ: ಗುರು ಬಲದಿಂದ ಹೆಚ್ಚಿನ ಭಾಗ್ಯಕ್ಕೆ ಅವಕಾಶ

ನಿಜವಾದ ಶೂರತ್ವಕ್ಕೆ ಪ್ರದರ್ಶನದ ಕಾಲವಾಗಬೇಕು ಸದ್ಯದ ವರ್ತಮಾನ ಎಂಬುದೆಲ್ಲಾ ವಾಸ್ತವವೇ ಸರಿ. ಆಗಮಿಸಿದ ಗುರು ಬಲ ಹೆಚ್ಚಿನ ಭಾಗ್ಯಕ್ಕೆ ಅವಕಾಶ ತೆರೆದಿಡಬೇಕಿತ್ತು. ಆದರೆ ವಿಪರ್ಯಾಸವೋ ಎಂಬಂತೆ ರಾಹು ವಿಷಮಯನಾಗಿದ್ದಾನೆ. ರಾಜಕಾರಣಿಗಳ ದಾರಿಯಲ್ಲಿ ಹಲವು ಎಡರುತೊಡರು ತಂದಿಡಬಲ್ಲ ದುಷ್ಟತನ ರಾಹುವಿನಿಂದ ಆಗುವ ಕಿತಾಪತಿಯಾಗಿದೆ. ಬಲಸಂವರ್ಧನೆಗಾಗಿ ಸರ್ವ ವಿಘ್ನ ಉಪಶಮನಕಾರಕ ಶಕ್ತಿ ಕೇಸರಿ ಸೂತ್ರ ಧರಿಸಿ. ನರಸಿಂಹನನ್ನು ಆರಾಧಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಕನ್ಯಾ: ವಿದೇಶ ಪ್ರವಾಸ, ಉನ್ನತ ವ್ಯಾಸಂಗಕ್ಕೆ ಸೂಕ್ತ ಕಾಲ

ಗುರುಬಲ ಕಳಕೊಂಡಿದ್ದೀರಿ. ಉಪದ್ರವ ಕೊಡುವ ಕೇತು ಮಾತನ್ನು ವಿಷವಾಗಿಸುತ್ತಾನೆ. ಇರುವ ಹಣಕಾಸುನ್ನು ಕರಗಿಸುತ್ತಾನೆ. ಬಂಧು ಜನರಿಂದ ಸಹಾಯವಿರುತ್ತದೆ. ವಿವೇಕದಿಂದ ವರ್ತಿಸಿ. ನಿಮ್ಮನ್ನು ಆದರಿಸುವ ಜನರನ್ನು ಕಾಪಾಡಿಕೊಳ್ಳಿ. ವಿದೇಶ ಪ್ರವಾಸ, ಉನ್ನತ ವ್ಯಾಸಂಗ, ಸಿನಿಮಾರಂಗದಲ್ಲಿನ ಅನಿರೀಕ್ಷಿತ ಯಶಸ್ಸು, ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ಯಶಸ್ಸು ಇತ್ಯಾದಿ ಒಳಿತುಗಳಿಗೆ ದಾರಿ ಗಟ್ಟಿ ಇದೆ. ಬಾಳ ಸಂಗಾತಿಯೊಡನೆ ಎಚ್ಚರದಿಂದಿರಿ. ಹೊಂದಿಕೊಂಡು ಸಾಗಿ, ಗೆಲ್ಲಿ. ಶ್ರೀ ಗುರು ದತ್ತಾತ್ರಯನನ್ನು ಸ್ತುತಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ತುಲಾ: ಬಾಳ ಸಂಗಾತಿಯ ಸಲಹೆ ಪಡೆಯಲು ಮರೆಯದಿರಿ!

ನ್ಯಾಯದ ತಕ್ಕಡಿಯಲ್ಲಿ ನ್ಯಾಯವನ್ನು ಹುಡುಕಿ ಬೆಂಡಾಗುತ್ತಿರುವ ಸಮಯವಿದು. ಆದರೆ ಒದಗಿ ಬಂದಿರುವ ಗುರು ಬಲದಿಂದ ಸಮಾಧಾನಕರವಾದ ವಿಷಯವನ್ನು ನಿರೀಕ್ಷಿಸಲು ಸದ್ಯ ಒಳ್ಳೆಯ ಕಾಲ ಘಟ್ಟವೇ. ಇದರ ಅರ್ಥ ಪ್ರತಿಯೊಂದು ಸಮರ್ಪಕವಾಗಿ ನಿಂತು ಬದುಕಿನ ಸಂದರ್ಭ ಗೆದ್ದು ನಿಲ್ಲಲು ಸಕಾಲ ಎಂಬ ಭ್ರಮೆ ಬೇಡ. ಶಿಸ್ತಿನಿಂದ ದುಡಿದಾಗ ಒಂದಿಷ್ಟು ಪ್ರತಿಫಲ ಸಿಗಲು ಕಾಲವು ಪಕ್ವತೆ ಪಡೆದಿದೆ. ಬಾಳ ಸಂಗಾತಿಯ ಸಲಹೆ ಪಡೆಯಲು ಮರೆಯದಿರಿ. ಶ್ರೀ ರಾಮ ರಕ್ಷಾ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ವೃಶ್ಚಿಕ: ಶ್ರಮವಹಿಸಿ ದುಡಿದರೆ ಧನಲಾಭ ಖಚಿತ

ನಿಶ್ಚಿತವಾದ, ಸಮತೋಲನದ ಹೆಜ್ಜೆಗಳು ಪರಿಣಾಮಕಾರಿಯಾದ ಮನಃ ಸಮಾಧಾನ ಹಾಗೂ ಸುಖವನ್ನು ತರಬಹುದಾಗಿದೆ. ಬಾಳ ಸಂಗಾತಿಯಿಂದ ಬೆಂಬಲ ನೈತಿಕ ಶಕ್ತಿ ಮತ್ತು ಸಹಕಾರಗಳು ಅಯಾಚಿತವಾಗಿ ಒದಗಿ ಬರಲು ಸುಸಂರ್ಭವಾಗಿದೆ ಇದು. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ನಿರೀಕ್ಷಿಸಬಹುದಾಗಿದೆ. ಗುರು ಬಲವು ದೂರವಾಗಿದೆ ಎಂಬುದು ಮಾತ್ರ ಮನದಲ್ಲಿಯೇ ಅರಿತಿರಿ. ಆದರೂ ಶ್ರಮವಹಿಸಿ ಮಾಡುವ ಕೆಲಸಗಳು ಕಿರಿಕಿರಿಯ ನಡುವೆಯೂ ಧನಲಾಭ ತರಲಿದೆ. ಶ್ರೀ ಗುರು ರಾಘವೇಂದ್ರರನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ಧನಸ್ಸು: ಜನ ಬೆಂಬಲದಿಂದ ಜನ ಪ್ರತಿನಿಧಿಯಾಗಬಹುದು!

ಒದಗಿ ಬಂದ ಗುರು ಬಲದಿಂದಾಗಿ ಅನೇಕ ರೀತಿಯ ಗುರಿಗಳನ್ನು, ಕನಸುಗಳನ್ನು ತಲುಪಿ, ಗೆದ್ದು ಸಂಭ್ರಮ ಪಡುವ ಕಾಲ ಇದಾಗಿದೆ. ಗಣೇಶನ ಆರಾಧನೆಯಿಂದ ಹಣಕಾಸಿನ ಸ್ಥಿತಿಗೆ ಸಿದ್ಧಿ ಲಭ್ಯ. ಜತೆಗೆ ಧೈರ್ಯದಿಂದ ಇಡುವ ಜಾಣ್ಮೆಯ ಹೆಜ್ಜೆಗಳಿಗೆ ಶನೈಶ್ವರನಿಂದ ಅಗಾಧವಾದ ಆನೆಬಲ, ಬೆಂಬಲ ನಿಮಗೆ ಸಿಗಲಿದೆ. ನಿಮ್ಮ ವರ್ಚಸ್ಸನ್ನು ಜನರ ನಡುವೆ ಸಂವರ್ಧಿಸಿಕೊಳ್ಳಲು, ಜನ ಬೆಂಬಲ ಪಡೆದು ಜನ ಪ್ರತಿನಿಧಿಯಾಗಲೂ ಕಾಲ ಸೂಕ್ತವಾದುದಾಗಿದೆ. ಸಹೋದ್ಯೋಗಿಗಳು ಬೆಂಬಲಿಸುತ್ತಾರೆ. ಷಣ್ಮುಖನನ್ನು ಆರಾಧಿಸಿ, ಒಳಿತಿದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಮಕ್ಕಳಿಂದ ಆನಂದದ ಕ್ಷಣ ಲಭ್ಯ

ಮಕ್ಕಳು ಸಮಾಧಾನ, ನೈತಿಕ ಬೆಂಬಲದಿಂದ ಉತ್ಸಾಹಕ್ಕಾಗಿನ ಸುಹಾಸಕರತೆಯನ್ನು ನಿರ್ಮಿಸಬಲ್ಲರು. ಗುರು ಬಲ ಬರಲೂ ಇಲ್ಲ. ಹೋಗಲೂ ಇಲ್ಲ. ಮುಂದುವರಿದ ಸಾಡೇಸಾತಿಯ ಶನಿಕಾಟದ ದಿನಗಳು. ಯಾಕಾದರೂ ಮಿಥ್ಯಾರೋಪಗಳು, ಅಸೂಯೆ ಪಡುತ್ತ ವಿಘ್ನ ತಂದಿಡುವ ಬಂಧುಗಳು, ಸ್ನೇಹಿತರು ಯಾಕೆ ಈ ರೀತಿಯಾಗಿ ಬಾಧೆ ತರುತ್ತಿದ್ದಾರೆ ಎಂಬ ನೋವು ಸದಾ ನಿಮ್ಮನ್ನು ಮುಕ್ಕಿ ತಿನ್ನುತ್ತಿರುತ್ತದೆ. ನಿಮ್ಮ ಸಣ್ಣ ತಪ್ಪನ್ನೂ ಭೂತಗನ್ನಡಿಯಲ್ಲಿ ಹಿಡಿದು ತೋರಿಸಿ, ಮೂಗು ಮುರಿಯುತ್ತಾರೆ. ಶ್ರೀ ದಶರಥ ಮಹಾರಾಜ ವಿರಚಿತ ಶನಿ ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ

ಕುಂಭ: ಸಾಲ ಮಾಡಲೂ ಬೇಡಿ, ಕೊಡಲೂ ಬೇಡಿ

ವರ್ಚಸ್ಸಿಗೆ ಧಕ್ಕೆಯ ದಿನಗಳು. ಬಡ್ಡಿಗೆ ಸಾಲ ತರಲು ಹೋಗಬೇಡಿ. ಬ್ಯಾಂಕ್‌ ಸಾಲದಿಂದ ಹೆಜ್ಜೆ ಇರಿಸಿ. ವಹಿವಾಟು ನಡೆಸಲು ಯಾವ ಉದ್ದೇಶಕ್ಕಾಗಿ ಹಣ ತಂದಿರೋ ಅದೇ ಉದ್ದೇಶಕ್ಕಾಗಿ ಹಣವನ್ನು ತೊಡಗಿಸಿ. ಆದಾಯ ತಾರದಿರುವ ಕಾರಣಗಳಿಗಾಗಿ ಸಾಲ ಮಾಡಲೇಬೇಡಿ. ಸಾಲ ಕೊಡಲೂ ಬೇಡಿ. ಹಣ ಕೈ ಜಾರಿದರೆ ಹೋಯ್ತು ಎಂದೇ ಅರ್ಥ. ಶೇರು ವಹಿವಾಟಿನ ವಿಚಾರದಲ್ಲಿ ದುರಾಸೆ ಬೇಡ. ಅರಿತು ಹೆಜ್ಜೆ ಇಡಿ. ಯಾರಿಗೂ ಸಾಲ ಕೊಡಬೇಡಿ. ತುಂಬಾ ತೊಂದರೆ ಎದ್ದೇಳಬಹುದು ಎಚ್ಚರ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ದಕ್ಷಿಣ

ಮೀನ: ಗುರು ಬಲ ಬಂದರೂ ಗುರುವಿಗಿದೆ ರಾಹು ಬಾಧೆ

ಸಾಡೇಸಾತಿ ಶನಿಕಾಟದ ನಡುವೆ ಗುರುಬಲ ಒದಗಿ ಬಂದುದು ಹೌದಾದರೂ ಗುರುವಿಗೇ ಇದೆ ಈಗ ರಾಹುವಿನ ಬಾಧೆ. ಗುರು ಬಲ ಇದ್ದರೂ ಇರದಂತಿರುವ ಇರುಳಿನ ಕತ್ತಲು ಯಾತನಾಮಯವಾಗಿರುವ ಕಾಲ ಘಟ್ಟ ಇದು. ದ್ರವ್ಯ ನಾಶ. ಆರ್ಥಿಕ ವಿಷಯಗಳಲ್ಲಿ ಬಾಧೆ. ಧೈರ್ಯವೇ ಬರುತ್ತಿಲ್ಲ ಎಂಬ ಅರ್ತನಾದ ದೇಹದ ಕಣಕಣದಲ್ಲಿಯೂ ಇರುವ ಸದ್ಯದ ದಾರುಣತೆ. ಮಕ್ಕಳೂ ಕಿರಿಕಿರಿ ತರುವ ಕಾಲವಾಗಿದೆ ಇದು. ಕುಲದೈವವನ್ನು ಪ್ರಾರ್ಥಿಸಿ. ಹನುಮಾನ್‌ ಚಾಲೀಸಾ ಓದಿ. ಸುಡುವ ನೆಲದಲ್ಲೂ ತಂಪು ರಕ್ಷಣೆ ಸಿಗಲು ಇದು ದಾರಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಪೂರ್ವ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version