ಮೇಷ: ಶಕ್ತಿಯುತ ವರ್ಚಸ್ಸಿನಿಂದ ಗೆಲುವು
ಧೈರ್ಯ, ಸಾಹಸ, ನಾಯಕತ್ವ, ಚಾತುರ್ಯದ ಮಾತುಗಳಿಂದ ಪ್ರಭಾವ ಬೀರುವ ವೈಕ್ತಿತ್ವವನ್ನು ಪ್ರದರ್ಶಿಸುವ ಅವಕಾಶ ಒದಗಿಬರುವುದನ್ನು ಸದುಪಯೋಗಪಡಿಸಿಕೊಳ್ಳಿ. ನಿಮಗೇ ಅರಿಯದಂತೆ ನಿಮ್ಮಲ್ಲಿ ಅಂತರ್ಗತವಾದ ಸೂಕ್ಷ್ಮ ಮಿತಿಗಳನ್ನು, ದೌರ್ಬಲ್ಯಗಳನ್ನು ಅನ್ಯರಿಗೆ ವೇದ್ಯವಾಗದ ಹಾಗೆ ಜಾಣ್ಮೆಯಿಂದಿರಿ. ಯಾವುದೇ ಸಂದರ್ಭದಲ್ಲಿ ಶಕ್ತಿಯುತ ವರ್ಚಸ್ಸು ನಿಮಗೆ ವರ್ತಮಾನದ ಸಂದರ್ಭದಲ್ಲಿ ಜನರ ನಡುವೆ ನಿಲ್ಲಿಸಿ ನಿಮ್ಮನ್ನು ಗೆಲ್ಲಿಸುತ್ತವೆ. ಹೀಗಿರುವಾಗ ಕುಬ್ಜರಾಗದಿರಿ. ಶ್ರೀ ರಾಘವೇಂದ್ರರನ್ನು ಸ್ತುತಿಸಿದರೆ ಒಳಿತು.
ಶುಭ ಸಂಖ್ಯೆ : 6 ಶುಭ ದಿಕ್ಕು: ಪಶ್ಚಿಮ
ವೃಷಭ: ಧನಾಗಮನಕ್ಕೆ ಅವಕಾಶವಿರುವ ಸಮಯ
ಶ್ರೀದೇವಿಯ ಒಲುಮೆಯಿಂದ ವಿವಾಹಾದಿ ಕಾರ್ಯಗಳು ಕುಟುಂಬದಲ್ಲಿ ನೆರವೇರಲು, ಇಲ್ಲಾ ಶುಭ ಸಂದರ್ಭ ಮುಹೂರ್ತಗೊಳ್ಳಲು ಅವಕಾಶ ಲಭ್ಯ. ಹಣಕಾಸಿನ ಕುರಿತು ಎಚ್ಚರ ಇರಲಿ. ಹಣಗಳಿಸುವ ಮಾರ್ಗದಲ್ಲಿ ಅನೇಕ ಅಡೆತಡೆ ಬರುವಂತಿದ್ದರೂ ಧನಾಗಮನಕ್ಕೆ ಅವಕಾಶ ಇದೆ. ತಾಳಿದವನು ಬಾಳಿಯಾನು ಎಂಬುದನ್ನು ಮರೆಯದಿರಿ. ನಿಮ್ಮ ವಿರೋಧಿಗಳೇ ನಿಮಗೆ ಕೆಲವು ಲಾಭಕಾರಕ ಮಾರ್ಗಗಳನ್ನು ತೋರಿಸುವ ಕೆಲಸ ಮಾಡುವ ಸಾಧ್ಯತೆ ಇದೆ. ದುರ್ಗಾಳ ಆರಾಧನೆ ಕ್ಷೇಮ.
ಶುಭ ಸಂಖ್ಯೆ : 8 ಶುಭ ದಿಕ್ಕು: ನೈಋತ್ಯ
ಮಿಥುನ: ಜಾಣ್ಮೆಯಿಂದ ಲಾಭ ಪಡೆಯುವಿರಿ
ಲಾಭಕರವಾದ ಪ್ರವಾಸಗಳು ಜತೆಗೂಡುವ ವಿಶೇಷ ಸಮಯ ಇದಾಗಿದೆ. ಸುಸ್ತು, ಒತ್ತಡ, ಕಿರಿಕಿರಿಗಳನ್ನು ಮನೋದಾಢ್ಯತೆಯಿಂದಲೇ ಗೆಲ್ಲಿ. ಮಕ್ಕಳ ಬಗೆಗೆ ಕಾಳಜಿ ತೋರಿಸಿ. ತಪ್ಪುಗಳಾದರೂ ಧ್ವನಿ ಏರಿಸಿ ತಿದ್ದಲು ಮುಂದಾಗದಿರುವುದೇ ಒಳಿತು. ವಿಶ್ವಾಸ ತೋರಿ ಮಕ್ಕಳ ಮನಸ್ಸನ್ನು ಗೆಲ್ಲಿ. ನಿಮ್ಮ ಜಾಣ್ಮೆ ಹಾಗೂ ವ್ಯವಹಾರಿಕ ಕೌಶಲ್ಯಗಳು ಸೂಕ್ತವಾದ ಚತುರಮತಿಯ ಗಮನವನ್ನು ಸೆಳೆದು ನಿಮಗೆ ಒಳ್ಳೆಯ ಲಾಭ ತರುವ ವರ್ತಮಾನ ಪಕ್ವತೆ ಪಡೆದಿದೆ. ಮಹಾವಿಷ್ಣುವನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ವಾಯವ್ಯ
ಕಟಕ: ಮಾತಿನ ಬಲವೇ ನಿಮ್ಮ ನಿಜವಾದ ಬಲ
ನಡೆದಿದೆ ಹೋರಾಟ, ಹೋರಾಡಿದಷ್ಟೂ ಹೊಸ ಹೊಸ ದುಷ್ಟರು ಎದುರಾಗುತ್ತಾರೆ. ನಿಮ್ಮ ಮಾನಸಿಕ ದಾರ್ಢ್ಯತೆಯನ್ನು ಕಳಕೊಳ್ಳದಿರಿ. ಆರೋಗ್ಯದ ಬಗೆಗೂ ಎಚ್ಚರ ಇರಲಿ. ಮನಸ್ಸು ನಾಗಾಲೋಟ ಪಡೆದಿರುತ್ತದೆ. ಅವಸರ ಮಾಡದಿರಿ. ಸೂಕ್ತ ನಿರ್ಣಯ ಪಡೆದು ಮಾತನಾಡಿ. ಮಾತಿನ ಬಲ ಸದ್ಯ ನಿಮ್ಮ ನಿಜವಾದ ಬಲ. ಆದರೆ ನಿಷ್ಠುರವಾದ ಮಾತುಗಳು ಬೇಡ. ಮಾತು ಮಾಣಿಕ್ಯವಾಗಲಿ. ಆದರೆ ಮಾತನ್ನು ನಡೆಸಿಕೊಡುವ (ಯೋಗ್ಯರ ಜತೆಗಿನ ಮಾತು) ಜವಾಬ್ದಾರಿ ಇರಲಿ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ
ಸಿಂಹ: ಧೈರ್ಯದೊಂದಿಗೆ ವಿವೇಚನೆಯೂ ಇರಲಿ
ಧೈರ್ಯ ನಿಮ್ಮ ಆಸ್ತಿ. ಆದರೆ ಧೈರ್ಯ ಒಂದೇ ಆಸ್ತಿಯಾಗಬಾರದು. ವಿವೇಚನೆ ಇರಲಿ. ನಿಮ್ಮದೇ ಆದ ಕೆಲವು ಮಹತ್ವದ ಗುರಿ ತಲುಪಲು ಸಾಕಷ್ಟು ಅವಕಾಶಗಳಿವೆ. ನಿಮ್ಮ ಪ್ರಯತ್ನಗಳನ್ನು ಯುಕ್ತವಾಗಿ ಸಂವರ್ಧಿಸಿ. ಕಾರ್ಯ ಸಾಧನೆಗಾಗಿ ಮುಂದುವರಿದು ಸಾಗಿ. ಕೌಟುಂಬಿಕ ಸಮಾಚಾರದಲ್ಲಿಯೂ ಸೌಹಾರ್ದತೆಗಾಗಿನ ವಿಷಯಗಳು ನಿಮ್ಮ ಸಂತೋಷವನ್ನು ಸಂವರ್ಧಿಸುವ ಕಾಲ ಇದು. ರಾಹು ಗ್ರಹವನ್ನು ಸಮಾಧಾನಗೊಳಿಸಲೋಸುಗ ಶ್ರೀ ಉಗ್ರ ನರಸಿಂಹನನ್ನು ಸ್ತುತಿಸಿ, ಕ್ಷೇಮವಿದೆ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ
ಕನ್ಯಾ: ಸಾತ್ವಿಕತೆಯೇ ನಿಮ್ಮನ್ನು ಗೆಲ್ಲಿಸಲಿದೆ!
ಕೆಲವು ಸಕ್ಕರೆಯ ಕಾಳುಗಳನ್ನು ಪೂರ್ವದಿಕ್ಕಿನತ್ತ ಯಾರೂ ತುಳಿಯದ ಜಾಗದತ್ತ ಚೆಲ್ಲಿ. ಹಕ್ಕಿಗಳ ಪಾಲಾಗುವ ಸಕ್ಕರೆಯ ಸತ್ವದಿಂದ ಆರ್ಥಿಕತೆಗೆ ಸಂಬಂಧಿಸಿದ ಹಲವು ದುರ್ಭರತೆಗಳನ್ನು ನೀವು ನಿವಾರಿಸಿಕೊಳ್ಳಬಲ್ಲಿರಿ. ಹಿರಿಯರ ಆಸ್ತಿಗೆ ಸಂಬಂಧಿಸಿದ ವಿಚಾರ ತುಸು ಕಗ್ಗಂಟಾಗುವ ಪ್ರಮೇಯಗಳು ಜಾಸ್ತಿ. ಸಂಬಂಧಿಸಿದವರ ಬಳಿ ಶಾಂತವಾಗಿ ಮಾತನಾಡಿ. ಸಾತ್ವಿಕತೆಯೇ ನಿಮ್ಮನ್ನು ಗೆಲ್ಲಿಸುವ ವಜ್ರಾಯುಧವಾಗಿದೆ. ವಿರೋಧಿಗಳಿಗೂ ನೀವು ಬೇಕಾದವರಾಗುತ್ತೀರಿ. ಆದರೆ ಮೈ ಮರೆಯ ಬೇಡಿ. ದತ್ತಾತ್ರೇಯನನ್ನು ಆರಾಧಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ
ತುಲಾ: ಕ್ಲಿಷ್ಟತೆಗಳನ್ನು ಮೆಟ್ಟಿ ನಿಲ್ಲಿ
ಉನ್ನತ ವ್ಯಾಸಂಗದಲ್ಲಿ ನಿರತರಾದರೂ ಏಕಾಗ್ರತೆಯೊಂದಿಗೆ ಅಧ್ಯಯನ ನಡೆಸಿ. ಚಂಚಲ ಮನೋಭಾವ ಮಾರಕವೇ ಆಗಲು ಸಾಧ್ಯ. ಪೂರ್ತಿ ಶಕ್ತಿಯಿಂದ ಗುರಿ ಸಾಧಿಸಲು ಗಣಪತಿಯನ್ನು, ಮಾರುತಿಯನ್ನು ಆರಾಧಿಸಿ. ಲಾಭಕ್ಕಾಗಿನ ದಾರಿಗಾಗಿ ನಿಷ್ಠೆ ಮತ್ತು ಜಾಣ್ಮೆಯಿಂದ ಮುಂದಾಗಿ, ಅವಸರವನ್ನು ಮಾಡದಿರಿ. ಮನೆಯಲ್ಲಿನ ವಾತಾವರಣ ಅಶಾಂತಿಗೆ ದಾರಿಯಾಗುವ ಸಂದರ್ಭ ತಪ್ಪಿಸಿ. ಮಕ್ಕಳು ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಂದಲೇ ದಕ್ಷತೆಯ ದಾರಿ ಹಿಡಿಯಬೇಕು. ಕ್ಲಿಷ್ಟತೆಗಳನ್ನು ಮೆಟ್ಟಿ ನಿಲ್ಲಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ನೈಋತ್ಯ
ವೃಶ್ಚಿಕ: ಬಾಳಸಂಗಾತಿಯ ವಿಷಯದಲ್ಲಿ ಅದೃಷ್ಟವಂತರು!
ಸುಖದಾಯಕನಾದ ಶನೈಶ್ವರನು ನಿಮ್ಮ ಬಗ್ಗೆ ಅಪರೂಪವೇ ಅನ್ನುವಂತೆ ಮೃದುವಾಗಿ ಇದ್ದಾನೆ. ಗುರುವೂ ಆರ್ಧತೆ ಹೊಂದಿದ್ದಾನೆ. ಕುಜನು ತುಸು ಉಸಿರುಗಟ್ಟುವ ಜಾಗೆಯಲ್ಲಿದ್ದರೂ ಆರ್ಥಿಕ ವಿಚಾರಗಳಿಗಾಗಿ ನಿಮಗೆ ಅಪ್ರತ್ಯಕ್ಷವಾದ ಬೆಂಬಲಕ್ಕೆ ಬದ್ಧನಾಗಿರುತ್ತಾನೆ. ಸಹಾಯಕನಾಗುತ್ತಾನೆ. ಬಾಳಸಂಗಾತಿಯ ವಿಚಾರಗಳಲ್ಲೂ ನೀವು ಅದೃಷ್ಟಶಾಲಿಗಳು. ಹೊಂದಾಣಿಕೆಯ ಫಲವಾಗಿ ಮನೆಯಲ್ಲಿ ಶಾಂತಿ ಸ್ಥಿರವಾಗಿರಲು ಅನುಕೂಲಕರ ಸಮಯ. ಕೆಲಸದ ಸ್ಥಳದಲ್ಲೂ ಅದೃಷ್ಟವಿದೆ. ವೆಂಕಟೇಶ್ವರನನ್ನು ಸ್ತುತಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ
ಧನಸ್ಸು: ವಿವಾಹಾಪೇಕ್ಷಿಗಳಿಗೆ ಅನುಕೂಲಕರ ಸಮಯ
ಧೈರ್ಯವನ್ನು ಅನುಗ್ರಹಿಸುವ ಶನೈಶ್ವರನಿರಲು ಹೆದರಿಕೆಯ ಅಗತ್ಯವಿಲ್ಲ. ಮಕ್ಕಳಿಂದ ಹರ್ಷದ ವಾರ್ತೆ ಲಭ್ಯ. ಮದುವೆಯ ವಿಚಾರದಲ್ಲಿ ಅವಕಾಶಗಳು ವಿವಾಹಾಪೇಕ್ಷಿಗಳಿಗೆ ಅನುಕೂಲಕರ. ಗಣೇಶನ ಆರಾಧನೆಯಿಂದ ಬಗೆಹರಿಯದ ವ್ಯಾಜ್ಯಗಳು ನೆರವೇರಲು ಕಾಲ ಸಕಾರಾತ್ಮಕವಾಗಿದೆ. ಬಾಳಸಂಗಾತಿಯ ಆರೋಗ್ಯದ ಕುರಿತು ಗಮನವಿರಲಿ. ಬಹು ಮುಖ್ಯವಾದ ಕೆಲಸದಲ್ಲಿ ಮುಳುಗಿರುವಾಗಲೇ ಕಿರಿಕಿರಿ ತಲೆದೋರುವ ಸಾಧ್ಯತೆ ಜಾಸ್ತಿ. ಶ್ರೀ ತಿಪುರ ಭೈರವಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ
ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮಕರ: ಸಾಲದ ಬಗ್ಗೆ ಎಚ್ಚರವಿರಲಿ
ಆರ್ಥಿಕ ವಿಚಾರ ತುಸುವಾದರೂ ನಿರ್ಲಕ್ಷಕ್ಕೆ ತುತ್ತಾಗದಿರಲಿ. ಸಾಲದ ಬಗ್ಗೆ ಎಚ್ಚರ. ಸಾಲವನ್ನು ಕೊಡುವುದರ ಬಗೆಗೂ ಎಚ್ಚರ. ಹಣದ ವಿಚಾರ ಬೆಂಕಿ ಉಗುಳಿ ಮನದ ಶಾಂತಿಯನ್ನು ಬೆಂದು ಬೇಯಿಸುವ ಸಮಯ ಇದು ಎಚ್ಚರ. ʻʻನಾನು…ನಾನು… ʼʼ ಎಂಬ ಆತ್ಮ ಪ್ರತಿಷ್ಠೆ ಬೇಡ. ಹಲವಾರು ಉನ್ನತ ವಿಚಾರಗಳನ್ನು ಇದು ಹಾಳು ಮಾಡಬಹುದು. ನಿಮ್ಮ ಸಹಾಯ ಪಡೆದವರೇ ಕ್ಷುಲ್ಲಕವಾಗಿ ವರ್ತಿಸುವ ಸಂದರ್ಭ ನೋಡುವಂತೆ ಆಗಬಹುದು. ʻಕಾಲಾಯ ತಸ್ಮೈ ನಮಃʼ ಎಂದು ಸುಮ್ಮನಿರಿ. ರಾಮ ರಕ್ಷಾ ಸ್ತೋತ್ರ ಓದಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ
ಕುಂಭ: ಆತ್ಮವಿಶ್ವಾಸದಿಂದಲೇ ಯಶಸ್ಸು
ವರ್ಚಸ್ಸಿಗೆ ಧಕ್ಕೆ. ಚುನಾವಣೆಯ ವಿಚಾರದಲ್ಲಿ ಆಸ್ಥೆ ತಳೆದವರು ಅನೇಕ ಇಕ್ಕಟ್ಟು, ಬಿಕ್ಕಟ್ಟು ಕೇವಲವಾದ ಜನರ ಚುಚ್ಚು ಮಾತುಗಳು ಬೆನ್ನಟ್ಟಿ ಬರಬಹುದು. ತೂಕವಿಲ್ಲದ ಜನರಿಂದ ಆಚಾರ ಕೇಳಿಸಿಕೊಳ್ಳುವ ಪ್ರಮೇಯ ಎದುರಾದೀತು. ಸಂಕಲ್ಪ, ಸ್ಥೈರ್ಯ ಮನ, ಮನಸ್ಸಿನ ನಿಕ್ಷೇಪವಾಗಲಿ. ಆತ್ಮ ವಿಶ್ವಾಸವಿರಲಿ. ನಿಮ್ಮ ಪ್ರತಿಭೆಯನ್ನು ತೋರಿ ಸರ್ರನೆ ಅಲ್ಪರ ನೆರವಿಗೆ ಒದಗುವಂತೆ ಮಾಡಿಕೊಳ್ಳಬೇಡಿ. ಬೆರಳು ಕೊಟ್ಟರೆ ಹಸ್ತ ನುಂಗುವ ಜನರೇ ಸಿಗುತ್ತಾರೆ. ಹನುಮಾನ್ ಚಾಲೀಸಾ ಓದಿರಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ದಕ್ಷಿಣ
ಮೀನ: ತಾಳ್ಮೆ ಸಮಾಧಾನ ನಿಮ್ಮಲ್ಲಿರಲಿ
ಬೆನ್ನು ಹತ್ತಿದ ಸಾಡೇಸಾತಿ ದಿನಗಳು. ಕುಜನು ಬಲಾಢ್ಯನಾಗಿ ಧನ ಲಾಭದ ವಿಚಾರವಾಗಿ ತುಸು ಬೆಂಬಲ ಕೊಡುವುದು ಸತ್ಯವಾದರೂ ರಾಹುವು ಹಣಕ್ಕೆ ಸಂಚಕಾರ ತರುವ ಕಾಲಘಟ್ಟವಿದು. ಆರೋಗ್ಯದ ಸಂಬಂಧ ಏಕದಂತನನ್ನು ಆರಾಧಿಸಿ. ಶಿವನಿಗೆ ಬಿಲ್ಪಪತ್ರೆ ಏರಿಸಿ, ಮೃತ್ಯುಂಜಯ ಮಂತ್ರ ಪಠಿಸಿ. ದೇವಿಯ ಆರಾಧನೆಯಿಂದಲೂ ಮಾನಸಿಕ ಸಮಾಧಾನ ಸಿಗಲಿದೆ. ಒಟ್ಟಿನಲ್ಲಿ ತಾಳ್ಮೆ ಸಮಾಧಾನ ಮತ್ತು ಬಿಸಿಲ ಬೇಗೆಗೆ ನೆರಳನ್ನು ಉಪಾಯದಿಂದ ಸಾಧಿಸಿಕೊಳ್ಳಿ. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪಶ್ಚಿಮ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?