Site icon Vistara News

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ : ನಿಮಗಿದೋ ಒಳ್ಳೆಯ ಸಮಯ

ವಾಸ್ತವಕ್ಕೂ ಒಳ್ಳೆಯ ಸಮಯವಂತೂ ಹೌದು. ಆದರೆ ಆಲಸ್ಯವನ್ನು ತೊರೆದು ಹೆಜ್ಜೆ ಇರಿಸಬೇಕಾದದು ಅನಿವಾರ್ಯವಾಗಿದೆ. ಪ್ರಶ್ನೆಯನ್ನೂ ಕೇಳುವುದು, ಉತ್ತರವನ್ನೂ ಕೊಡುವುದು ಹೀಗೆ ಎರಡೂ ಕೆಲಸ ಒಟ್ಟಿಗೇ ಮಾಡದಿರಿ. ಕೆಲಸದ ಆಳುವೂ ಉತ್ತಮವಾದ ಸಲಹೆ ನೀಡಲು ಸಾಧ್ಯವಿದೆ ಎಂಬುದನ್ನು ಚೆನ್ನಾಗಿ ತಿಳಿದಿರಿ. ಕೆಲಸ ಸ್ಥಳದಲ್ಲಿ ಬಿಕ್ಕಟ್ಟುಗಳಿವೆ. ಹೆಚ್ಚಿನ ಪರದಾಟಗಳು ಟೆಕ್ಕಿಗಳಿಗೆ ಸಾಧ್ಯ. ಚಿಕ್ಕ ಉದ್ದಿಮೆದಾರರು ಹಾಗೂ ಸರ್ಕಾರಿ ಕೆಲಸಗಾರರಿಗೆ ಸಂತಸ ಇದ್ದರೂ ಒತ್ತಡಗಳಿರುತ್ತವೆ. ಷಣ್ಮುಖನನ್ನು ಆರಾಧಿಸಿ.
ಶುಭ ಸಂಖ್ಯೆ: 8 ಶುಭ ದಿಕ್ಕು: ನೈಋತ್ಯ

ವೃಷಭ: ಗಣೇಶನ ಆರಾಧನೆಯಿಂದ ಲಾಭ

ಶ್ರೀ ಗಣೇಶನ ದಯೆಯಿಂದ ಶತ್ರು ಬಾದೆಯನ್ನು ಕಳೆದುಕೊಳ್ಳುವ ಗಮನಾರ್ಹ ಕಾಲಘಟ್ಟ ಇದಾಗಿದೆ. ಪ್ರತಿದಿನ ಗಣಪತಿ ಅಥರ್ವಶೀರ್ಷವನ್ನು ಪಠಿಸಿ. ಇರಬಹುದಾದ ಮುಂಗೋಪವನ್ನು ಕಳೆದುಕೊಳ್ಳಲು ಇದು ಉತ್ತಮ ಶಕ್ತಿ ಮೂಲವಾಗಿದೆ. ಅನಾವಶ್ಯಕವಾದ ಕೋಪ ಬಾಧೆಯನ್ನು ತರಬಾರದು ಎಂಬುದಕ್ಕಾಗಿ ಇದನ್ನು ಮರೆಯದೇ ರೂಢಿಸಿಕೊಳ್ಳಿ. ಕೆಲವು ಸಲ ಜೂಜು, ರೇಸ್‌, ಪಂದ್ಯ, ಸ್ಪರ್ಧಾತ್ಮಕ ಬಾಜಿಕಟ್ಟುವ ಸಂಗತಿಗಳು ಲಾಭದಾಯಕವಾಗಿ ಕಾಣಬಲ್ಲವು. ಆದರೆ ಫಕ್ಕನೆ ವಿಷಮಯ ರಾಹುವು ನಷ್ಟ ತರುತ್ತಾನೆ. ಎಚ್ಚರ ಇರಲಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ದಕ್ಷಿಣ

ಮಿಥುನ : ದೈವಾನುಗ್ರಹ ಒಲಿದು ಬಂದ ಸಮಯ

ಬುದ್ಧಿವಂತರಾಗುವುದು ಯಾವಾಗಲೂ ದೈವದ ಅನುಗ್ರಹದಿಂದ. ನಿಮಗೆ ಈ ಕುರಿತಾದ ದೈವಾನುಗ್ರಹ ಒಲಿದು ಬಂದ ಸಮಯ. ಆದರೂ ಪೂರ್ವ ಪುಣ್ಯವನ್ನು ಕಡಿದು ತಿನ್ನುತ್ತಿರುವ ಕೇತು ಅವಸರವನ್ನು ನಿಮ್ಮಿಂದ ಉಂಟಾಗಿಸುವ ಮಹಾ ಕಿರುಕುಳಕ್ಕೆ ಅಡಿಗಲ್ಲು ಹಾಕುತ್ತಿರುತ್ತಾನೆ. ಕೇತು ಪೀಡಾ ನಿವಾರಣ ಸ್ತೋತ್ರವನ್ನು ದಿನಕ್ಕೆ 27 ಬಾರಿ ಪಠಿಸಿ. ನಿಮಗೆ ಅನುಭವದ ಗಟ್ಟಿತನ ಇರುವ ಸಣ್ಣ ಕೈಗಾರಿಕೆ, ಹೋಟೆಲ್‌ ಉದ್ಯಮ, ಕಿರಿದಾದ ಬಂಡವಾಳದೊಂದಿಗೆ ಪ್ರಾರಂಭಿಸಿ. ರಾಜಕಾರಣಿಗಳು, ವಿದ್ಯುನ್ಮಾನ ಸಂಬಂಧಿಸಿದ ಉದ್ಯೋಗಿಗಳಿಗೆ ಗೆಲುವಿದೆ.
ಶುಭ ಸಂಖ್ಯೆ : 5 ಶುಭ ದಿಕ್ಕು: ವಾಯವ್ಯ

ಕಟಕ: ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಲಿ

ಕಾಲಗರ್ಭದಲ್ಲಿ ಸುಲಭವಾದ ರೀತಿಯ ವರ್ತಮಾನ ಇರುತ್ತದೆಂಬುದನ್ನು ತಿಳಿಯದೇ ಆ ಹೊತ್ತಿನ ಕೆಲಸ ಅಲ್ಲಲ್ಲೇ ಮಾಡಿ ಮುಗಿಸುವ ನಿರ್ಧಾರಕ್ಕೆ ತೆರೆದುಕೊಳ್ಳಿ. ಸರ್ರನೆ ಹೊರಗಡೆಗೆ ಒಮ್ಮೆ ಹೋಗಿ ಬಂದರೆ ಆಯ್ತು ಎಂಬ ನಿರ್ಧಾರ ನಿಚ್ಚಳವಾದ ಬಿಸಿಲನ್ನು ನಂಬಿ ಹೊರಟರೆ, ಏಕಾಏಕಿ ಕಾರ್ಮೋಡಗಳೇ ಕವಿದು ಬಿರುಗಾಳಿಯ ಸಹಿತದ ಮಳೆ ಸುರಿಯಲಾರಂಭವಾದೀತು. ಮಳೆಯಲ್ಲಿ ತೋಯುವ ಅನಿರೀಕ್ಷಿತ ವಿಚಾರ ಮನಸ್ಸಿಗೆ ಕಿರಿಕಿರಿ. ಹಣಕಾಸಿನ ವಿಚಾರದಲ್ಲಿ ಎಳಸುತನ ಬೇಡ. ಹನುಮಾನ್‌ ಚಾಲೀಸಾ ಓದಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪೂರ್ವ

ಸಿಂಹ: ಮೂವರ ಬಗ್ಗೆ ಎಚ್ಚರವಿರಲಿ!

ಧೈರ್ಯದ ಹೆಜ್ಜೆಗಳು ಧನಲಾಭದ ಪ್ರಯುಕ್ತವಾದ ವರ್ತಮಾನವನ್ನು ಸಶಕ್ತಗೊಳಿಸಲಿದೆ. ಕೌಟುಂಬಿಕ ವಿಷಯಗಳಲ್ಲಿ ಯಾವುದೇ ಕಿರಿಕಿರಿಗಳು ಎದ್ದೇಳದಂತೆ ಕೌಶಲ್ಯದಿಂದ ನಿಭಾಯಿಸಿ. ನಿಮ್ಮ ಬಗೆಗೆ ಮೂವರು ವ್ಯಕ್ತಿಗಳು ಅಸಹನೆ ಹೊಂದಿರುವ ವಿಚಾರದಲ್ಲಿ ಎಚ್ಚರವಾಗಿರಿ. ಭಾಗ್ಯದ ವಿಚಾರ ಅಥವಾ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳುವ ವಿಷಯದಲ್ಲಿ ಕಿರಿಕಿರಿ ತರುತ್ತಿರುತ್ತಾರೆ. ಮಹಾವಿಷ್ಣುವಿನ ಸ್ತುತಿ ಸಕಲ ಕಾಮನೆಗಳ ಸಿದ್ಧಿಗೆ ನಿಮಗೆ ಬಲ ತುಂಬುವ ಸಂಜೀವಿನಿಯಾಗಿ ರಕ್ಷೆ ಕೊಡುತ್ತದೆ.
ಶುಭ ಸಂಖ್ಯೆ : 6 ಶುಭ ದಿಕ್ಕು: ಉತ್ತರ

ಕನ್ಯಾ: ಹಾಸಿಗೆ ಇದ್ದಷ್ಟೇ ಕಾಲು ಚಾಚಿ

ಪರದಾಟಗಳನ್ನು ಎದುರಿಸುವ ವಿಶೇಷ ಚಾತುರ್ಯವನ್ನು ನೀವು ಹೊಂದಿರುತ್ತೀರಿ. ಆದರೂ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದರ ಬಗ್ಗೆ ಚಿಂತನೆಗಳಿರಲಿ. ಹಣಕಾಸಿನ ವಿಚಾರದಲ್ಲಿ ತುಸು ಏರುಪೇರುಗಳು ಎದ್ದೇಳುವ ಸಂದರ್ಭ ಎದುರಾಗಬಹುದು. ನಿಮ್ಮದೇ ಆದ ಕೆಲ ಹಿತಕಾರಕ ಸ್ನೇಹಿತರ ಬೆಂಬಲದಿಂದ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಅದೃಷ್ಟ ಇದೆ. ಆದರೂ ಕೆಲವು ಹಿಡಿತಗಳು ಇರಲಿ. ಹಣದ ಬಗೆಗಿನ ಬಿಗಿ ಇರಲಿ. ಜಗದೀಶ್ವರಿ ದುರ್ಗೆಯನ್ನು ಆರಾಧಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಈಶಾನ್ಯ

ತುಲಾ: ಗೊಂದಲದಿಂದ ಕೂಡಿದ ವಾರ

ಹಲವು ರೀತಿಯ ಎಚ್ಚರಿಕೆಯನ್ನು ಆರೋಗ್ಯದ ಬಗೆಗೆ ಹೊಂದಿರಿ. ಎಲುಬು, ಮಾಂಸಖಂಡಗಳ ಕುರಿತಾದ ಪರಿಸ್ಥಿತಿ ಕಿರಿಕಿರಿಗಳಿಗೆ ದಾರಿ ಮಾಡಬಹುದು. ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಿರಿ. ಮಕ್ಕಳ ವಿಚಾರದಲ್ಲಿ ಆಲಕ್ಷ್ಯಬೇಡ. ದಾರಿಯ ನಡುವೆ ಯಾವುದೋ ಮರೆತು ಹೋದ ಕೆಲಸ ನೆನಪಾಗಿ, ಹೊರಟ ವಿಚಾರವೂ ಮರೆತು, ಹೋದ ವಿಚಾರವೂ ಮರೆತು, ಹೀಗೆ ಎರಡೂ ಕಣ್ಣು ಮುಚ್ಚಾಲೆ ಆಟವಾಗಬಹುದು. ಮನೋ ಮಂಡಲದಲ್ಲಿ ಎಲ್ಲವನ್ನೂ ಎದುರಿಸಿ ನಿಲ್ಲವ ಸ್ಥೈರ್ಯ ಇರಲಿ. ರಾಮ ರಕ್ಷಾಸ್ತ್ರೋತ್ರ ಓದಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ನೈಋತ್ಯ

ವೃಶ್ಚಿಕ: ಅಲ್ಪರನ್ನು ನಂಬಲು ಹೋಗಬೇಡಿ!

ನಿಮ್ಮದಾದ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸೂಕ್ತ ಕಾಲ. ಧೈರ್ಯವನ್ನು ಒಗ್ಗೂಡಿಸಿಕೊಳ್ಳಿ. ರಾಜಕೀಯದ ಮಹತ್ವಾಕಾಂಕ್ಷೆಗಳ ವಿಚಾರ ನೀವೀಗ ಬಲಪಡಿಸಿಕೊಳ್ಳುವುದು ಸೂಕ್ತ. ಯಾವುದೇ ರೀತಿಯ ವಿಳಂಬ ನೆರವೇರದಿರಲಿ. ನಿಮ್ಮದೇ ಆದ ಯೋಜನೆಗಳ ವಿಚಾರದಲ್ಲಿ ಸೂಕ್ತವಾದ ನೆರವು, ನಿಖರವಾದ ದಾರಿ ತೋರಿಸಲು ಹಿರಿಯರೊಬ್ಬರ ಮಾರ್ಗದರ್ಶನ ಸಿಗಲಿದೆ. ಯಾವುದೇ ಕಾರಣಕ್ಕೂ ಅಲ್ಪರನ್ನು ನಂಬಲು ಹೋಗದಿರಿ, ಕನಸುಗಳು ಭಗ್ನವಾದಾವು. ಗಣಪತಿಯನ್ನು ಆರಾಧಿಸಿ.
ಶುಭ ಸಂಖ್ಯೆ :3 ಶುಭ ದಿಕ್ಕು: ಪಶ್ಚಿಮ

ಧನಸ್ಸು: ಹೊಸ ಕೆಲಸ ಹುಡುಕಲು ಸೂಕ್ತ ಸಮಯ

ಮಹಾವಿಷ್ಣುವನ್ನು ಸ್ತುತಿಸಿ. ಸುಖ ಮತ್ತು ಶಾಂತಿ ಒದಗಿಬರಲು ಇದು ಶುಭ ಕಾಲ. ಒಳ್ಳೆಯ ಕೆಲಸವನ್ನು ಹುಡುಕುವುದಾದರೆ ಮುಂದಾಗಿ ಪ್ರಯತ್ನಿಸಿ. ಒಳ್ಳೆಯ ಸ್ನೇಹಿತರು, ಅನಿರೀಕ್ಷಿತವಾಗಿ ಒದಗಿ ಬರುವ ಸಜ್ಜನರಿಂದ ಪ್ರಯೋಜನೆ ಪಡೆಯುವಿರಿ. ಶೇರು ಮಾರುಕಟ್ಟೆಯಲ್ಲಿ ಅಸ್ಥೆ ತೋರಿಸಿ. ಆದರೆ ಅತಿಯಾದ ಆತ್ಮವಿಶ್ವಾಸ ಬೇಡವೇ ಬೇಡ. ನಿಮ್ಮದೇ ಆದ ಬಿಸ್ನೆಸ್‌, ಇಲ್ಲಾ ಬಿಸ್ನೆಸ್‌ನ ವಿಸ್ತರಣೆಗಾಗಿನ ಮನಸ್ಸಿನ ಇಚ್ಛೆಗೆ ರೆಕ್ಕೆ ಬರಲು ಸೂಕ್ತ ಕಾಲ. ಜಗದೀಶ್ವರಿಯಾದ ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ದಕ್ಷಿಣ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಜನರು ದೂರವಾಗುವ ಕಾಲವಿದು

ಹೊಯ್ದಾಟಗಳೇ ಕಿರಿಕಿರಿಯ ಸಂಗತಿಯಾಗಬುದು. ಆ ರೀತಿಯ ಇಕ್ಕಟ್ಟಿನಲ್ಲಿಯೇ ಬಂದು ಸಿಲುಕಿಕೊಳ್ಳುತ್ತೀರಿ. ಹತ್ತಿರದ ಜನರು ದೂರವಾಗುವ ಕಾಲವಿದು, ತಿಳಿದಿರಿ. ಆದರೆ ಭಯ ಬೀಳದಿರಿ. ಚಿತ್ತ ಶುದ್ಧಿ ಮತ್ತು ಚಿತ್ತ ಸ್ಥೈರ್ಯದಿಂದ ವಿಪ್ಲವಗಳನ್ನು ಎದುರಿಸುವ ದೃಢ ಸಂಕಲ್ಪಗಳು ಇರಲಿ. ಯಾವುದೇ ಸಂದರ್ಭದಲ್ಲೂ ಹಣಕಾಸಿನ ಪರಿಸ್ಥಿತಿ ನಿಮ್ಮ ಕಳವಳಕ್ಕೆ ದಾರಿ ಮಾಡುವ ಶಿಷ್ಟವಾದ ಸಂದರ್ಭವಿದು. ನಿಮ್ಮದೇ ಆದ ಸ್ವತಂತ್ರ ಮನೋಭಾವದಲ್ಲಿ ವಿನಯ ಇರಲಿ. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಆಗ್ನೇಯ

ಕುಂಭ: ನಿಂತ ಭೂಮಿಯೇ ಅದುರುವ ಸಮಯ

ಸದಾ ಕಿರಿಕಿರಿ ತರುವ ವಿಚಾರ ಕುಟುಂಬದ ಸದಸ್ಯರಿಂದಲೋ, ಕೆಲಸದ ಸ್ಥಳದಲ್ಲೋ ಇದ್ದೇ ಇರುವ ವರ್ತಮಾನವನ್ನು ಎಚ್ಚರದಿಂದ ನಿಭಾಯಿಸಿ. ಎಲ್ಲಾ ಕಾಲವೂ ವಸಂತ ಕಾಲವಾಗಿರಲು ಸಾಧ್ಯವಿಲ್ಲ. ಚಳಿ, ಮಳೆ, ಸೆಕೆ, ಹಿಮ ಇತ್ಯಾದಿ ಬಳಲಿಕೆಗಳ ನಡುವೆ ಸಾಗುವ ಜೀವನದ ವಾಸ್ತವ ಒಂದೆಡೆ. ಬಿರುಗಾಳಿ, ಬರಸಿಡಿಲು, ಉರಿ ಬಿಸಿಲಿನ ತಾಪತ್ರಯ ಇನ್ನೊಂದೆಡೆ, ನಿಂತ ಭೂಮಿಯೇ ಅದುರುವ ಸಮಯ. ಸಕಲ ಜಗದಾಧಾರ ಮೂರ್ತಿಯಾದ ಸ್ವಾಮಿ ತ್ರ್ಯಯಂಬಕನನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ

ಮೀನ : ಆತ್ಮ ವಿಮರ್ಶೆಗೂ ಅವಕಾಶ ಕಲ್ಪಿಸಿಕೊಳ್ಳಿ

ತಿಳಿದಿತ್ತು, ತಿಳಿದಿದ್ದೇ ಆಗಿತ್ತು ಎಂಬ ವಿಚಾರಗಳು, ದಾರಿಗಳು ಸರ್ರನೆ ಅಪರಿಚಿತ ಸಂಗತಿಗಳಾಗಿ ಮಾರ್ಪಡುವ ದುರ್ಭರ ಸ್ಥಿತಿ ಎದುರಾಗುವ ಕಾಲವಿದು. ನಿಗ್ರಹಿಸಿ ಶಾಂತವಾಗಿ. ಕುಹಕ ಮಾತುಗಳಿಗೆ ಜನರ ಅಲ್ಪತನದ ನಡವಳಿಕೆಗಳಿಗೆ ಮಹತ್ವ ಕೊಡಬೇಡಿ. ನಾನೇನು ತಪ್ಪು ಮಾಡಿದ್ದೇನೆಂಬ ಆತ್ಮ ವಿಮರ್ಶೆಗೂ ಅವಕಾಶ ಕಲ್ಪಿಸಿಕೊಳ್ಳಿ. ನಿಮಗಿಂತಲೂ ಪ್ರಾಜ್ಞರಲ್ಲದವರ ಕೈಕೆಗಳಗೆ ಕೆಲಸ ಮಾಡುವ ಸಂಗತಿಯ ಬಗ್ಗೆ ದುಃಖಿಸಬೇಡಿ. ಕಾಲದ ಓಟ ವ್ಯತಿರಿಕ್ತವಾಗಿರುವಾಗ ಶನಿ ಹಾಗೂ ಚಂದ್ರ ಪೀಡಾ ನಿವಾರಣಾ ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version