ಮೇಷ: ಬುದ್ಧಿ ಶಕ್ತಿಯಿಂದ ಗೆಲುವು
ಭಾಗ್ಯದ ವಿಚಾರದಲ್ಲಿ ನಿಮ್ಮದೇ ಆದ ಕೆಲವು ಅಳತೆಗೋಲುಗಳೇನಿವೆ ಅವು ವಾಸ್ತವವೇ ಆಗಿವೆ. ಸುದೈವವು ನಿಮ್ಮನ್ನು ನಿಮ್ಮದೇ ಆದ ಅಳತೆಗೋಲಿನ ಪ್ರಕಾರವೇ ಹಲವು ಸಫಲತೆಗಳನ್ನು ತರಲಿವೆ. ಆದರೂ ನಿಮ್ಮದಾದ ಕೆಲವು ಮಿತ್ರರ ಬಗ್ಗೆ ನಿಮಗೆ ಸೂಕ್ತವಾದುದನ್ನು ಅರಿಯಲಾಗದೆ ಕೆಲವು ಸಲ ಬಿಗುವಿನ ವರ್ತಮಾನಕ್ಕೆ ನೀವು ಸಾಗಿ ಬರುತ್ತೀರಿ. ಬುದ್ಧಿ ಬಲವು ನಿಮ್ಮನ್ನು ಕೈಹಿಡಿಯ ಬೇಕಾದದು ಒಂದೆಡೆ. ಜ್ಞಾನವೂ ಜತೆಗಿರಬೇಕು. ಹಿಂದಿನಿಂದ ಯಾರಾದರೂ ಮಾತನಾಡಬಾರದು. ಒಟ್ಟಿನಲ್ಲಿ ಜ್ಞಾನದ ನಡೆ ಭಾಗ್ಯಕ್ಕಾಗಿನ ಒಳಿತುಗಳನ್ನು ನಿಮಗೆ ಪ್ರದಾನಗೊಳಿಸಿ ಹರ್ಷಕ್ಕೆ ಕಾರಣವಾಗುತ್ತದೆ. ಚಂಡಿಕಾಳನ್ನು ಸ್ತುತಿಸಿ.
ಶುಭ ಸಂಖ್ಯೆ: 8 ಶುಭ ದಿಕ್ಕು: ಪೂರ್ವ
ವೃಷಭ: ಸಂಯಮದಿಂದ ವರ್ತಿಸಿ
ಮಾತನ್ನು ನಿಯಂತ್ರಿಸುವ ಜಾಣ್ಮೆ ನಿಮಗೆ ಹೊಸತೇನಲ್ಲ. ಮೌನದಿಂದಲೇ ಅಪಾರವಾದುದನ್ನು ಸಾಧಿಸಲು ಪರಮ ಪವಿತ್ರೆಯಾದ ರಾಜರಾಜೇಶ್ವರಿ ನಿಮಗೆ ಅನುಗ್ರಹಿಸಬಲ್ಲಳು. ಮನೆಯಲ್ಲಿ ಶಾಂತಿ ಸೌಹಾರ್ದತೆಗಳನ್ನು ವಿಸ್ತರಿಸಿಕೊಳ್ಳ ಬಹುದಾಗಿದೆ. ಕೋಪಿಷ್ಠರ ಜತೆ ಸಂಯಮ ಇರಲಿ. ಅನೇಕ ಕೋಪಿಷ್ಠರು ತಮ್ಮ ಕೋಪಕ್ಕಾಗಿ ಪಶ್ಚಾತಾಪ ಪಡಲು ನಿಮ್ಮ ಸಂಯಮ ವಜ್ರಾಯುಧವಾಗಲಿದೆ. ಕೆಲಸದ ಸ್ಥಳದಲ್ಲಿ ದೊಡ್ಡದೊಂದನ್ನು ಪಡೆಯಲು ಕಾಲ ಫಲಭರಿತವಾಗಿದೆ. ಉದರ ಸಂಬಂಧಿ ತೊಂದರೆಗಳಿದ್ದರೆ ಸೂಕ್ತ ಸಲಹೆ ಪಡೆಯಿರಿ. ಉತ್ತಮ ವೈದ್ಯರಿಂದ ಪರಿಣಾಮಕಾರಿಯಾದ ಚಿಕಿತ್ಸೆ ನಿಮಗೆ ಲಭ್ಯ.
ಶುಭ ಸಂಖ್ಯೆ : 2 ಶುಭ ದಿಕ್ಕು: ನೈಋತ್ಯ
ಮಿಥುನ: ಮಾರುತಿಯನ್ನು ಅರಾಧಿಸಿ
ಮುಗಿಯಲಾರವಲ್ಲ ಬೇಗುದಿಯ ಕ್ಷಣಗಳು ಎಂಬ ಅವ್ಯಕ್ತ ಭಯದಲ್ಲಿ ದಿನ ದೂಡುತ್ತಿದ್ದೀರಿ. ಅಷ್ಟಮ ಶನಿ ಕಾಟದಿಂದಾಗಿ ಮನೋಮಂಡಲದಲ್ಲಿ ಅನಿಯಂತ್ರಿತ ಯೋಚನೆಗಳು, ಯೋಜನೆಗಳು ಸಾಕಾರತ್ವಕ್ಕೆ ಬೇಕಾದ ಧಾತುಗಳು ಹತ್ತಿರ ಹತ್ತಿರಕ್ಕೆ ಬಂದು ಕೈ ತಪ್ಪಿ ಹೋಗುವ ವಿಷಾಧ ಯೋಗ ನಿಮ್ಮದಾಗಿದೆ. ಜಗಳಕ್ಕೆ ಹೋಗಬೇಡಿ. ಮಾತಿಗೆ ಅರ್ಥವಾಗಲಿ, ನ್ಯಾಯವನ್ನಾದಗಲೀ ಒದಗಿಸುವವರು ಸಿಗದ ದುರ್ಭರ ದಿನಗಳಿವು. ಆದರೂ ಗುರು ಬಲದ ಅದಮ್ಯ ಚೈತನ್ಯದ ನಿಕ್ಷೇಪಗಳು ನಿಮ್ಮ ಇಂದಿನ ದಾರುಣತೆಯಿಂದೊದಗಿದ ಅನುಭವಗಳ ಮೂಲಕವೇ ದಿವ್ಯ ಒಂದನ್ನು ಕಟ್ಟಿಕೊಡುತ್ತವೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ
ಕಟಕ: ಆಭರಣಗಳ ಕುರಿತು ಎಚ್ಚರ ಇರಲಿ
ವಿಚಿತ್ರವಾದ ಭಯವೊಂದರಿಂದ ನರಳುವ ಸಾಧ್ಯತೆ. ನಿದ್ರೆಗೂ ಸಂಚಕಾರದ ಸಂದರ್ಭ ಉಂಟಾಗಬಹುದು. ಕೆಲವು ವ್ಯಕ್ತಿಗಳ ಮಾತು ಹೀಗೆ ಕೆಂಡದ ದಾರಿಯನ್ನು ನಿರ್ಮಿಸಬಹುದು. ಭಕ್ತಿಯಿಂದ ರಾಮನನ್ನು ಆರಾಧಿಸಿ. ರಾಮ ರಕ್ಷಾ ಸ್ತ್ರೋತ್ರ ಉತ್ತಮವಾದ ರಕ್ಷಣೆ ನೀಡಲು ಅವಕಾಶ ಮಾಡಿಕೊಡಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿ. ಓದು ಅರಗಿಸಿಕೊಂಡಿದ್ದನ್ನು ತಿಳಿಯಲು ಓದಿರುವುದನ್ನು ಟಿಪ್ಪಣಿ ಮಾಡಿಕೊಳ್ಳಿ. ಬಂಗಾರದ ಆಭರಣಗಳ ಕುರಿತು ಎಚ್ಚರ ಇರಲಿ. ಜನರು ಹೀಗೇ ಎಂದು ತಿಳಿಯವುದು ಕಷ್ಟದ ವಿಚಾರವಾಗಹತ್ತಿದೆ ನಿಮಗೆ. ನಂಬಿಸುತ್ತಾರೆ, ಮಾತು ತಪ್ಪುತ್ತಾರೆ. ಇಂಥವರನ್ನು ಎಚ್ಚರದಿಂದ ನಿಯಂತ್ರಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪಶ್ಚಿಮ
ಸಿಂಹ: ವ್ಯಾಜ್ಯವನ್ನು ಬಗೆಹರಿಸಿಕೊಳ್ಳುವ ಅವಕಾಶ
ಫಲಕಾರಿಯಾದ ಪ್ರಯತ್ನಗಳಿಂದಾಗಿ ನಿಮ್ಮ ಆತ್ಮವಿಶ್ವಾಸ ಸಂವರ್ಧಿಸಲಿದೆ. ಜಮೀನಿನ ಅಥವಾ ಮನೆಯ ಗಡಿ ಸಂಬಂಧವಾದ ವ್ಯಾಜ್ಯವನ್ನೂ ಸಮಾಧಾನಕರವಾಗಿ ಬಗೆಹರಿಸಿಕೊಳ್ಳುವ ಸುಸಂದರ್ಭ ಬಂದರೆ ಬಳಸಿಕೊಳ್ಳಿ. ನಿಮ್ಮ ಅಳೆದು ಹೊಯ್ದು ಕಾದು ನೋಡುವ ವಿಧಾನ ತಪ್ಪು ಎಂಬುದಲ್ಲ. ಆದರೆ ಏನೋ ಕಿಂಚಿತ್ ಉದಾರವಾದ ಮನೋಭಾವ ಎಂತಹ ವೈರಿಯನ್ನೂ ಗೆಲ್ಲುವ, ವಿರೋಧಿಯ ಮನಃ ಪರಿವರ್ತನೆಗೆ ವೇದಿಕೆ ರಚಿಸುವ ಸದೃಢ ಶಕ್ತಿ ನಿಮಗಿದೆ. ಬಾಳ ಸಂಗಾತಿಯ ಕಾರಣದಿಂದಾಗಿಯೂ ಪ್ರಾಪ್ತಿಗೊಳ್ಳಬೇಕಾದ ವಿಚಾರಕ್ಕೆ ಕಾಲ ಉತ್ತಮ. ಭೈರವಿಯನ್ನು ಆರಾಧಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಈಶಾನ್ಯ
ಕನ್ಯಾ: ಒತ್ತಡಗಳನ್ನು ತಾಳ್ಮೆಯಿಂದ ನಿಭಾಯಿಸಿ
ವಾಹನ ಓಡಿಸುವಾಗ ಎಚ್ಚರ ಇರಲಿ. ಜತೆಗೆ ಸಕ್ಕರೆ ಕಾಯಿಲೆ ಬಗ್ಗೆ ಎಚ್ಚರ ಇರಲಿ. ಧನ್ವಂತರಿಯನ್ನು ವಿಷ್ಣು ಮುಖೇನವಾಗಿ ಸ್ತುತಿಸಿ. ಮಕ್ಕಳು ಸ್ವಲ್ಪ ಹೆಚ್ಚಿನ ಗಮನವನ್ನು ಬಯಸುತ್ತಾರೆ. ವಸ್ತು ಸ್ಥಿತಿ ರಬ್ಬರ್ ಎಳೆದಂತೆ. ಜಾಸ್ತಿ ಎಳೆದರೆ ಹರಿದುಹೋಗುತ್ತದೆ. ಬಹಳಷ್ಟು ಎಳೆಯುತ್ತಲೇ ಇರಬಾರದು, ಅದಕ್ಕೂ ನಿಯಂತ್ರಣವಿರಬೇಕು. ಒಟ್ಟಿನಲ್ಲಿ ಒತ್ತಡಗಳನ್ನು ನಿಭಾಯಿಸುವ ತಾಳ್ಮೆ ಹೊಂದಿರಿ. ನಮಗಿಂತಲೂ ಮೂರು ಪಟ್ಟು ಭಾರವಾದ ಗಂಟನ್ನು ಹೊರಲಾಗದು. ನಿಜ, ಆದರೆ ಆತ್ಮ ವಿಶ್ವಾಸದಿಂದ ಎಳೆದು ತರಬಹುದು. ಎದುರಿಗಿರುವುದನ್ನು ಆಲಕ್ಷಿಸದಿರಿ. ನಿಯಂತ್ರಿಸಿ. ಬುದ್ಧಿ ಬಲಕ್ಕೆ ಎಂದೂ ಧಕ್ಕೆ ಬಾರದು. ಮುಖ್ಯ ಪ್ರಾಣನನ್ನು ಸ್ತುತಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ನೈಋತ್ಯ
ತುಲಾ: ಹೊಸ ಯೋಜನೆಗಳಿಗೆ ಉತ್ತಮ ಅವಕಾಶ
ವರ್ಚಸ್ಸನ್ನು ಸಂವರ್ಧಿಸಿಕೊಳ್ಳಲು ಇದೀಗ ಸುಸಂದರ್ಭ. ನಿಮ್ಮ ಮಾರ್ಗದರ್ಶನವನ್ನು ಜನ ಬಯಸುತ್ತಾರೆ. ನಿಮ್ಮ ಮಾತಿಗೆ ತೂಕವಿರುತ್ತದೆ. ನಿಮ್ಮ ವೈಯುಕ್ತಿಕ ಅಭ್ಯುತ್ಥಾನದ ಜತೆಗೆ ಜನ ಸಮೂಹದ ಬಗೆಗೂ ನೀವು ಸಕಾರಾತ್ಮಕ ಸ್ಪಂದನಗಳನ್ನು ಹೊಂದಿರಬೇಕಾಗುತ್ತದೆ. ಸ್ವಲ್ಪ ಒತ್ತಡ ನಿರ್ಮಾಣವಾಗುವುದು ಸಹಜ. ಮೇಧಾಶಕ್ತಿಯಲ್ಲಿ ನಿಮಗೆ ನಿಮ್ಮದೇ ಆದ ವಿಶೇಷತೆ ಇದ್ದಿರುವುದರಿಂದ ಕೆಲವು ಹೊಸ ಯೋಜನೆಗಳನ್ನು ಸಾಕಾರಗೊಳಿಸಿಕೊಳ್ಳಲು ಉತ್ತಮ ಅವಕಾಶ. ಹಣಕಾಸಿನ ವಿಚಾರದಲ್ಲಿ ಕೆಲವು ಗೊಂದಲಗಳಿದ್ದರೂ ನೀವು ಅವನ್ನೆಲ್ಲ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದೀರಿ. ಇದನ್ನು ವರಲಕ್ಷ್ಮೀಯ ಸ್ತುತಿಯಿಂದ ಸುಲಭ ಮಾಡಿಕೊಳ್ಳಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಈಶಾನ್ಯ
ವೃಶ್ಚಿಕ: ಖುಷಿಯನ್ನು ತರುವ ದಿನಗಳು
ಖುಷಿಯಲ್ಲಿ ಇರಬಹುದಾದ ದಿನಗಳಾಗಿವೆ. ಆಗಿದ್ದನ್ನು ಮರೆತು ನಿಜವಾದ ಸಾತ್ವಿಕತೆಯಿಂದ ಬರುವ ಜನರನ್ನು ಸ್ವಾಗತಿಸಿ. ನಿಮ್ಮ ಮುಂದಿನ ದಿನಗಳಲ್ಲಿ ನಷ್ಟವನ್ನು ತುಂಬಿಕೊಡುವಲ್ಲಿ ಇವರು ನಿಮ್ಮ ಬೆಂಬಲಕ್ಕೆ ಬರಬಲ್ಲರು. ಪಶ್ಚಾತ್ತಾಪದ ಕಾವು ಇವರನ್ನು ಆಂತರ್ಯದಲ್ಲಿ ಶುದ್ಧಗೊಳಿಸಿರುತ್ತದೆ. ಅಂಥದೇ ವಿಚಾರವನ್ನು ನಿಮ್ಮಿಂದಲೂ ಇವರು ಬಯಸಿರುತ್ತಾರೆ. ವರ್ಚಸ್ಸನ್ನು ಗಟ್ಟಿಗಳಿಸಿಕೊಳ್ಳಲು ನಿಮಗೀಗ ಅವಕಾಶಗಳು ಹಲವಾರು. ಗೋದಿ ಹಿಟ್ಟನ್ನು ಉಪಯೋಗಿಸಿ ಮಾಡಿದ ಸಿಹಿ ವಸ್ತುವನ್ನು ಗಣೇಶನಿಗೆ ನೈವೇದ್ಯ ಮಾಡಿ. ಗಣಪತಿಯ ಆರಾಧನೆಯಿಂದಾಗಿ ಮಾನಸಿಕವಾದ ಜಾಢ್ಯತೆ ದೂರವಾಗಿ ಧೈರ್ಯದ ಹೆಜ್ಜೆ ಇಡಲು ವೇದಿಕೆ ಸಜ್ಜಾಗಲಿದೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ
ಧನಸ್ಸು: ಸೋಲಿಗೆ ಅಂಜಬೇಡಿ
ವಿದ್ಯೆ ಸುಮ್ಮನೆ ಒಂದು ಗಂಟಾಗಿ ಕುಳಿತಿರಬಾರದು. ವಾಣಿಯನ್ನು, ನರಸಿಂಹ ಮತ್ತು ಮಹಾಗೌರಿಯನ್ನು ಆರಾಧಿಸಿ. ನಿಮ್ಮ ಅದೃಷ್ಟದ ವಿಷಯ ರೂಪುಗೊಳ್ಳಲಿ ಸುಸಂಬದ್ಧವಾಗಿ ಎಂಬ ನಿಮ್ಮ ನಿರೀಕ್ಷೆ ತಪ್ಪೇನಲ್ಲ. ನಿಮ್ಮಲ್ಲಿ ಪ್ರತಿಭೆ ಇದೆ. ಆದರೆ ಕೆಲವು ಜಂಜಡಗಳನ್ನು ದಾಟುತ್ತೇನೆ ಎಂಬ ಹಟಬೇಕು. ಹಟ ಆಹಂ ಆಗಬಾರದು. ಜನ ಆಹಂಕಾರಿಗಳು ಎಂದು ಸೀಲು ಹೊಡೆಯಲು ಕಾತರರಾಗಿದ್ದಾರೆ. ಹೆಣಗಾಡಿ, ಬದುಕು ಕಡೆಗೂ ಒಂದು ಹೋರಾಟಕ್ಕಾಗಿನ ಅವಕಾಶ. ಗೆಲುವನ್ನು ಅರಿಯದ ಶಕ್ತಿಯ ಅನುಗ್ರಹಕ್ಕಾಗಿ ಬಿಡಿ. ನಿಮ್ಮ ಕರ್ತವ್ಯ ಮಾಡಿ. ಸೋಲಿಗೆ ಅಂಜದಿರುವ ನಿಮ್ಮ ಗುಣ ಗೆಲುವಿಗಾಗಿನ ಮೊದಲ ಹೆಜ್ಜೆ ಆಗುತ್ತದೆ.
ಶುಭ ಸಂಖ್ಯೆ: 4 ಶುಭ ದಿಕ್ಕು: ಉತ್ತರ
ಮಕರ: ಸಹನೆಯಿಂದಲೇ ಇರಿ
ನಿಮ್ಮದೇ ಆದ ವಿಶಿಷ್ಟ ಶಿಸ್ತು, ಕ್ರಮ ವರಿತು, ಅರಿವಿನೊಂದಿಗಿನ ಬಲು ಎಚ್ಚರದ ಹೆಜ್ಜೆ ಒಳಿತಿಗೆ ದಾರಿ ತೆರೆಯುತ್ತದೆ. ಏನೋ ಒಂದು ಆತಂಕ ಇಷ್ಟಾದರೂ ಮನೆ ಮಾಡಿರುತ್ತದೆ. ಪೂರ್ಣ ಪ್ರಮಾಣದ ಗುರಿ ತಲುಪುವ ಧಾವಂತಕ್ಕೆ ಅರಿತಿರುವ ಕಾರಣಗಳು ಅಚಾನಕ್ಕಾಗಿ ವಕ್ಕರಿಸಿಕೊಂಡು ನಿಮ್ಮ ಸಹನೆಯನ್ನು ಪರೀಕ್ಷಿಸುತ್ತದೆ. ಸಹನೆ ಹೀಗಾಗಿ ಇದ್ದೇ ಇರಲಿ. ಗುರಿ ತಲುಪುವ ನಿರ್ಧಾರಕ್ಕಾಗಿ ಪ್ರಯತ್ನಗಳನ್ನು ಕೈಬಿಡದಿರಿ. ಅಲ್ಪದ ನಡವಳಿಕೆಗಳ ಬಗ್ಗೆ ಗೊಂದಲ, ಬೇಸರ ಬೇಡ. ನಿಮ್ಮ ವಿರೋಧಿಗಳು ನಿಶ್ಯಬ್ದವಾಗಿ ನಿಮ್ಮ ವೈಫಲ್ಯಗಮನಿಸಲು ಕಾದಿರುತ್ತಾರೆ. ಒಳಿತುಗಳನ್ನರಿತರೂ ಗಮನಿಸದಂತಿರುತ್ತಾರೆ. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ
ಕುಂಭ: ಯಶಸ್ಸಿನ ಬಗ್ಗೆ ನಿಗಾ ಇರಲಿ
ಬೇಡವೆಂದರೂ ಮನಸ್ಸು ಜೇನಿನ ಗೂಡಾಗಿ ಬಯಸಿದ ಪರಿವರ್ತನೆಯಿಂದ ನಿಮಗೆ ಹೊರೆಯೇ ಆಗಬಹುದು. ಜೇನು ನೀಡುವ ಬದಲು ಜೇನಿನ ದಂತಕ್ಷತ ಉರಿ ಎಬ್ಬಿಸಬಹುದಾಗಿದೆ. ಯಶಸ್ಸಿಗಾಗಿ ಹೆಣಗಾಡಬೇಕಾಗುತ್ತದೆ. ನಿಮಗೆ ತುಸುವೂ ಸಹಕಾರ ನೀಡದ ವ್ಯಕ್ತಿಗಳನ್ನು ವ್ಯರ್ಥವಾಗಿ ಹಚ್ಚಿಕೊಳ್ಳದಿರಿ. ಯಶಸ್ಸಿನ ಏಣಿಯ ಮೆಟ್ಟಿಲುಗಳು ಸಲೀಸಾಗಿದ್ದವು ಎನ್ನುವುದು ಈಗ ಸರ್ವತ್ರವಾಗಿ ಗೆದ್ದಲು ಹುಳುಗಳ ಆಕ್ರಮಣದಿಂದ ದುರ್ಬಲವಾಗುತ್ತವೆ. ಗೆದ್ದಲ್ಲಿಯೇ ಸೋಲನ್ನು ಸ್ವೀಕರಿಸುವ ಪ್ರಮೆಯ ಬಾರದಂತೆ ನಿಗಾವಹಿಸಿ. ಮನದ ಅಂಗಳದಲ್ಲಿ ರೂಪುಗೊಂಡು ಸಾಕ್ಷಾತ್ಕಾರ ನೀಡುವ ಹನುಮಂತನನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಪೂರ್ವ
ಮೀನ: ಸೂರ್ಯ, ಶನೈಶ್ವರರನ್ನು ಆರಾಧಿಸಿ
ವಿವಿಧ ಯೋಜನೆಗಳನ್ನು ಬರು ಹಚ್ಚುವ ಆಗಾಧ ದಾವಂತವನ್ನು ಕೇತುವು ಚಮತ್ಕಾರದಿಂದ ರೂಪಿಸಿ ಬಸವಳಿಸುವ ಸಾಧ್ಯತೆಗಳು ಅಧಿಕ. ಥಟ್ ಅಂತ ನಿರ್ಧಾರಕ್ಕೆ ಬರಬೇಡಿ. ಮುಖ್ಯವಾಗಿ ಚಂದ್ರನ ಗೋಚಾರದ ಓಡಾಟಗಳು ನಿಮ್ಮ ಏಕಾಗ್ರತೆಯನ್ನು ಭಂಗಗೊಳಿಸುವ ವಿಷಯದಲ್ಲಿ ಮುಂದರಿಯದಿರಲು ಪ್ರಧಾನವಾಗಿ ಸೂರ್ಯನಿಂದ ಸಿದ್ಧಿಗೊಳ್ಳುವ ಬಲ ಪಡೆಯಬೇಕಾದ ಅವಶ್ಯಕತೆ ಇದೆ. ಶನೈಶ್ವರನೂ ಸಿದ್ಧಿಗಾಗಿ ನಿಮ್ಮನ್ನು ಅನುಗ್ರಹಿಸಬೇಕು. ಈ ವಿಷಯದಲ್ಲಿ ಶ್ರಮಿಕರು, ಕಾರ್ಮಿಕರು ನಿಜವಾದ ಪ್ರಯತ್ನ ಒಗ್ಗೂಡಿಸಿದಲ್ಲಿ ನಿಮ್ಮದಾದ ವಹಿವಾಟಿನ ಸಾಮ್ರಾಜ್ಯಕ್ಕೆ ಹೊಸ ಹೊಳಪು ನೀಡಲು ನೈತಿಕ ಶಕ್ತಿ ಸಿಗುತ್ತದೆ. ಮೇಧಾ ದಕ್ಷಿಣಾಮೂರ್ತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ವಾಯವ್ಯ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?