Site icon Vistara News

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ಅದ್ಭುತಗಳ ಸಾಧಿಸಲು ಅವಕಾಶ

ಮಾತಿನ ಮೇಲೆ ನಿಯಂತ್ರಣವಿರಲಿ. ಅದ್ಭುತಗಳನ್ನು ಸಾಧಿಸಬಲ್ಲಿರಿ. ಜಗದ್ವಂದ್ಯನಾದ ಪರಮ ಗುರು ಕೃಷ್ಣನಂಥವರು ಮಾತನಾಡುವಾಗ ಕೇಳಿಸಿಕೊಳ್ಳಿ. ಹಲವು ಉನ್ನತ ಸ್ತರಗಳನ್ನು ತಲುಪಲು ಸಾಧ್ಯವಿದೆ. ಭರಣಿ ನಕ್ಷತ್ರದವರು ಮಕ್ಕಳ ಬಗೆಗೆ ಹೆಚ್ಚು ಎಚ್ಚರದಲ್ಲಿ ಇರಬೇಕು. ತಲೆಮಾರಿನ ಅಂತರ ಬಹುದೊಡ್ಡ ಮಾರಕ ಘಟಕ. ಸೂಕ್ಷ್ಮತೆಗಳು ಬೇಕೇ ಬೇಕು. ಎಚ್ಚರದಿಂದ ವ್ಯವಹರಿಸಿ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗೆ ಶನೈಶ್ವರನಿಂದ ಪ್ರಾಪ್ತಿಗೆ ಬಾಧೆ ಇದೆ. ನಿಮ್ಮ ಮುಂದಿನ ನಾಲ್ಕು ತಿಂಗಳ ಯಶಸ್ಸಿನ ವಿಚಾರದಲ್ಲಿ ಕ್ಷೋಭೆಯ ವಿರುದ್ಧವಾದ ಸೂಕ್ತ ಶಕ್ತಿಯನ್ನು ಸಂಪಾದಿಸಿಕೊಂಡಿರಿ.
ಶುಭ ಸಂಖ್ಯೆ: 8 ಶುಭ ದಿಕ್ಕು: ನೈಋತ್ಯ

ವೃಷಭ: ಲಾಭ ತಂದುಕೊಡಲಿರುವ ವಾರ

ಲಾಭದ ವಿಚಾರದಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಪ್ರೀತಿ ಪ್ರೇಮಗಳ ವಿಚಾರದಲ್ಲಿ ಸುಮ್ಮನೆ ಮನಸ್ಸಿನ ನೋವನ್ನು ಆಹ್ವಾನಿಸಿಕೊಳ್ಳದಿರಿ. ಪೂರ್ವ ದಿಕ್ಕಿನಿಂದ ಹಲವಾರು ಶುಭ ಸೂಚಕ ಪ್ರೇರಣೆಗಳನ್ನು ಕೈಗೊಂಡ ಕಾರ್ಯದಲ್ಲಿನ ಯಶಸ್ಸನ್ನು ಸಂಪಾದಿಸಬಲ್ಲಿರಿ. ಎರಡು ಜನ ನಿಮ್ಮನ್ನು ಶತಾಯು ಗತಾಯು ಕಂಗೆಡಿಸಬೇಕು, ಮಣ್ಣು ತಿನ್ನಿಸಬೇಕು ಎಂಬ ಯೋಚನೆಯಲ್ಲಿ ಇರುತ್ತಾರೆ. ನೀವು ಹೆದರಿದರೆ ಹಿಂದಕ್ಕೇ ಸರಿದು ಸರಿದು ಬರುವುದು ಅನಿವಾರ್ಯವಾಗುತ್ತದೆ. ಮುಂದೆ, ಮುಂದೆ ಎಂದು ಧೈರ್ಯದ ಹೆಜ್ಜೆ ಇಡಿ. ವಾಸ್ತವಕ್ಕೂ ತಿಳಿಯಲಾಗದ ನಿಗೂಢ ಶಕ್ತಿ ನಿಮಗೆ ಅನುಗ್ರಹ ಮಾಡಲಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ಪೂರ್ವ

ಮಿಥುನ: ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಇರಲಿ

ಮಕ್ಕಳ ವಿಚಾರದಲ್ಲಿ ಕೆಲವು ಸಮಸ್ಯಾತ್ಮಕ ವರ್ತಮಾನವನ್ನು ಎದುರಿಸಲು ಕಾಲ ಈಗ ಮುನ್ನುಗ್ಗುತ್ತಿದೆ. ಮೂಲ ಜಾತಕ ಕುಂಡಲಿಯಲ್ಲಿ ರಾಹುವಿನ ಪಾತ್ರವೇನಾದರೂ ಮಕ್ಕಳ ಸಂದರ್ಭದಲ್ಲಿ ಕೂಡಿದ್ದರೆ ಪರಿಣಾಮದ ದೃಷ್ಟಿಯಿಂದ ದೊಡ್ಡದೇ ಆದ ಆಘಾತ ಆಗುವ ಸಂಭವ ಜಾಸ್ತಿ ಇದೆ. ಸಿಹಿ ತಿನಿಸಿನ ಮಾರಾಟಗಾರರು, ರಫ್ತುಗಾರರು, ತಿನಿಸುಗಳಿಗೆ ಮೂಲ ಘಟಕಗಳನ್ನು ಒದಗಿಸುವವರು ಹೆಚ್ಚಿನಗಳಿಕೆಗೆ ಬೇಕಾದ ದಾರಿಯಲ್ಲಿ ವಿಜೃಂಭಿಸುತ್ತೀರಿ. ಆದರೆ ಅಲರ್ಜಿ ಸಂಬಂಧದ ವಿಷಯಗಳ ಬಗ್ಗೆ ನಿರ್ಲಕ್ಷ್ಯ ತೋರದಿರಿ. ಹಳೆಯ ಕಡತ ಒಂದರ ಕಣ್ಣು ಮುಚ್ಚಾಲೆ ಆಟ ಕಿರಕಿರಿಗೆ ತಳ್ಳಿ ಪರದಾಡಿಸಬಹುದು. ಶಿವ ಸ್ತುತಿ ಕ್ಷೇಮ.
ಶುಭ ಸಂಖ್ಯೆ : 7 ಶುಭ ದಿಕ್ಕು: ಆಗ್ನೇಯ

ಕಟಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು

ಹಲವು ರೀತಿಯ ಕ್ಷೇತ್ರಗಳಲ್ಲಿ ನಿಮ್ಮ ಪ್ರತಿಭೆಯನ್ನು ಪರೀಕ್ಷಿಸಬಹುದಾಗಿದೆ. ನಿಮ್ಮ ಮನಸ್ಸಿನ ಏಕಾಗ್ರತೆಯೇ ನಿಮ್ಮ ದೋಷ. ಇದನ್ನು ನಿಯಂತ್ರಿಸಿಕೊಳ್ಳಿ. ದತ್ತಾತ್ರೇಯ ಮೂಲ ಮಂತ್ರ ಪಠಣ ಸಿದ್ಧಿಗೆ ದಾರಿ ಮಾಡಿಕೊಡಬಹುದು. ನಿಮ್ಮ ಭೂಮಿಯ ಒಟ್ಟೂ ಆಸ್ತಿಯ ವಿಚಾರದಲ್ಲಿ ಕೆಲವರು ಆಸ್ತಿ ಕಬಳಿಸುವ ಹೊಂಚು ಹಾಕುತ್ತಲೇ ಇದ್ದಾರೆ. ಭೂ ಸಂವರ್ಧನ ಸಿದ್ಧ ರೂಪಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವಿದೆ. ಮುಂದಿನ ಪ್ರಮೋಷನ್‌ ವಿಚಾರದಲ್ಲಿ ಪುಷ್ಯ ನಕ್ಷತ್ರದವರು ತುಸು ಮುತುವರ್ಜಿ ವಹಿಸಿ, ಗೆಲ್ಲಬೇಕು. ಆರೋಗ್ಯದ ವಿಚಾರದಲ್ಲಿ ಅದೃಷ್ಟಶಾಲಿಗಳಾಗಿದ್ದೀರಿ. ವಿಶೇಷವಾಗಿ ಕಪ್ಪುಬಣ್ಣಗಳಿಂದ ದೂರವಿರಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಸಿಂಹ: ಧನ ಪ್ರಾಪ್ತಿಗೆ ದಾರಿ ಇದೆ

ಭಯವನ್ನು ತೊರೆದು ಮುನ್ನುಗ್ಗಲು ಕಲಿಯಿರಿ. ಧೈರ್ಯವೇ ನಿಮ್ಮ ರಕ್ಷಾ ಕವಚ ಎಂಬುದನ್ನು ಮರೆಯಲೇಬೇಡಿ. ಅಡೆ-ತಡೆಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ ಮೂಕನೂ ವಾಚಾಳಿಯಾಗುವ, ಹೆಳವನೂ ಹಿಮಾಲಯ ಏರುವ ಶಕ್ತಿಯನ್ನು ಭಗವಂತನಿಂದ ಪಡೆಯುತ್ತಾನೆ. ಹೀಗಾಗಿ ನಂಬಿಕೆ ಇರಿಸಿ, ಗೆಲ್ಲುತ್ತೀರಿ. ಹೊಸ ಹೊಸ ಕೆಲಸಗಳು ನಿಮಗಾಗಿ ಒದಗಿ ಬಂದು ಧನ ಪ್ರಾಪ್ತಿಗೆ ದಾರಿ ಇದೆ. ವೈರಿಗಳಿಂದಲೇ ಅನುಕೂಲವಾಗುವ ಹಾಗೆ ಸೂರ್ಯನ ಭರ್ಜರಿ ಬೆಂಬಲ ನಿಮಗೆ ಒದಗಿ ಬರಲಿದೆ. ಚುನಾವಣೆಯನ್ನು ಎದುರಿಸುವ ಸಾಮರ್ಥ್ಯ ಇದೆ; ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ

ಕನ್ಯಾ: ವಂಚಕರ ಬಗ್ಗೆ ಇರಲಿ ಎಚ್ಚರ

ನಷ್ಟದ ದಾರಿ ಹಿಡಿಯುವ ಅಪಾಯವಿದೆ. ಬೆಟ್ಟಿಂಗ್‌, ಕುದುರೆ ಜೂಜು, ಕಾರ್ಡ್ಸ್‌ ಅಥವಾ ಯಾವುದೇ ಹಣದ ಬಾಬ್ತಿನ ವಿಚಾರ ಇರುವ ಸಂದರ್ಭದಲ್ಲಿ ಮೈ ಮರೆಯದಿರಿ. ಯಾಮಾರಿಸಿ ಹಣ ಕಿಳುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ. ಹೆಡೆ ತೆರೆದು ಕಚ್ಚುವ ಹಾವು ಹುತ್ತದಲ್ಲಿಯೇ ಇರಬೇಕಿಲ್ಲ. ಸುತ್ತಮುತ್ತ ಅಥವಾ ಅಕ್ಕಪಕ್ಕದಲ್ಲೇ ಇರುತ್ತದೆ. ಸಾಂಸಾರಿಕ ವಿಚಾರದಲ್ಲಿ ಚರ್ಚೆಯ ಗೊಡವೆಗೆ ಹೋಗಬೇಡಿ. ಶಾಂತಿಯಿಂದ ಇರಿ. ಬಂಗಾರದ ಒಡವೆಗಳ ಕುರಿತು ಎಚ್ಚರ ಇರಲಿ. ಕಾಯುತ್ತಿರುವ ಜನ ಧುತ್ತನೆ ಎಗರಿಸಿ ಬಿಡಬಹುದು ಎಚ್ಚರ. ಶ್ರೀ ಲಕ್ಷ್ಮೀಯ ಸ್ತುತಿ ಮಾಡಿ, ಕ್ಷೇಮವಾಗಿರುವಿರಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ದಕ್ಚಿಣ

ತುಲಾ: ಮನೆ-ಸೈಟು ಖರೀದಿಗೆ ಸೂಕ್ತ ವಾರ

ಮನೆ ಕಟ್ಟುವ ಕೆಲಸವಾಗಲಿ, ಜಮೀನು ಅಥವಾ ಸೈಟಿನ ವಿಚಾರವಾಗಲಿ ನಿಮಗೆ ಅನುಕೂಲಕರ ವಾತಾವರಣ. ಈ ವಾರದಲ್ಲಿ ಮನಸ್ಸಿಗೆ ತಕ್ಕಂತೆ ಬೆಂಬಲ ಲಭ್ಯ. ಶ್ರೀ ದೇವಿ ದುರ್ಗಾಂಬಿಕೆಯನ್ನು ಆರಾಧಿಸಿ. ನಿಮ್ಮ ಅಂತ ಸತ್ವದ ಪೂರ್ತಿ ಒಳಹೊರಗುಗಳಿಗೆ ದೇವಿಯ ಅನುಗ್ರಹ ಲಭ್ಯ. ಪ್ರವಾಸ ಕಾರ್ಯಕ್ರಮ ಎದುರಾದರೆ ಮುಂದೂಡಿ. ಮುಂದೂಡಲು ಆಗದಿದ್ದರೆ ಮಾರುತಿಗೆ ತುಳಸಿ ದಳ ಅರ್ಪಿಸಿ ಪ್ರವಾಸಕ್ಕೆ ಮುಂದಾಗಿ. ಮಾರುತ ಶಕ್ತಿಯ ರಕ್ಷೆಯಿಂದ ಸೋಲು ಶತಃ ಸಿದ್ಧವಾದಾಗಲೂ ದಿವ್ಯವಾದ ನೆರವೊಂದು ಮಿಂಚಿನ ಸಂಚಾರ ನಡೆಸಿ ಕೈಹಿಡಿಯಲಿದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ವಾಯವ್ಯ

ವೃಶ್ಚಿಕ: ನೆನಪಿರಲಿ, ತಾಳಿದವನು ಬಾಳಿಯಾನು

ಕೆಲವರನ್ನು ಸಂಪೂರ್ಣವಾಗಿ ದೂರವಿಡಿ. ಇಲ್ಲದಿದ್ದರೆ ಅವರು ನಿಮ್ಮ ಶಕ್ತಿ ಸಾಮರ್ಥ್ಯವನ್ನು ನಿಯಂತ್ರಿಸಿ, ಕೃತಿಮವಾದ ಬಂಧನಕ್ಕೆ ನಿಮ್ಮನ್ನು ದೂಡುತ್ತಾರೆ. ಆಸ್ತಿಯ ವಿಚಾರದಲ್ಲಿ ಹತ್ತರದವರೇ ಗುರುಗುಡಬಹುದು. ಗುಬ್ಬಿ ಅಥವಾ ಪರಿವಾಳಗಳಿಗೆ ಅಕ್ಕಿ ಚೆಲ್ಲಿ. ಕೆಲವು ನಾಗ ದೋಷಗಳನ್ನು ನಿವಾರಿಸಿಕೊಳ್ಳಲು ವೈನತೇಯ ಶಕ್ತಿ ಲಭ್ಯವಾಗಲು ಅವಕಾಶ ಸಿಗುತ್ತದೆ. ತಾಳಿದವನು ಬಾಳಿಯಾನು ಎಂಬ ಮಾತು ನೆನಪಿರಲಿ. ತಾಳ್ಮೆಯಿಂದ ಅನೇಕ ಆಶ್ಚರ್ಯಕರ ಬೆಳವಣಿಗೆಗಳನ್ನು ಸಾಧಿಸಬಲ್ಲಿರಿ. ನೀರಿನಿಂದ ಭಯವಿದೆ. ಶ್ರೀ ದೇವಿ ಗಂಗಾಬಿಕೆಯನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಈಶಾನ್ಯ

ಧನಸ್ಸು: ಶಾಂತಿಯ ಮಂತ್ರ ಗೆಲುವಿನ ತಂತ್ರ

ಧನು ರಾಶಿಯವರಿಗೆ ಪ್ರತ್ಯಕ್ಷ ಬೆಂಕಿಯಲ್ಲಿ ನಿಂತ ಅನುಭವ ಇರುತ್ತದೆ. ಸಕಲ ಜೀವಾತ್ಮಗಳ ರಕ್ಷಣೆಗೆ ಬದ್ಧವಾಗಿರುವ ಶ್ರೀ ಕಾಲಭೈರವನನ್ನು, ಮಹಾವಿಷ್ಣುವನ್ನು ಆರಾಧಿಸಿ. ಚುನಾವಣೆಯ ಸಂದರ್ಭದ ಒತ್ತಡಗಳನ್ನು, ಹೊಸ ಸವಾಲುಗಳು ಎದುರಾಗಲಿವೆ. ನಿಮ್ಮ ಜಾತಕದಲ್ಲಿ ರಾಹು ಗ್ರಹದ ಶಕ್ತಿ ಹಾಗೂ ಮಿತಿಗಳನ್ನು ತಿಳಿದು ಕಾರ್ಯಕ್ರಮ ಪಟ್ಟಿ ತಯಾರಿಸಿಕೊಳ್ಳಿ. ಕಗ್ಗತ್ತಲ್ಲನ್ನು ದಾಟಿ ಹೊಸ ಬೆಳಕು ಕಾಣಲು ಕುಮಾರ ಸ್ವಾಮಿಯನ್ನು ಆರಾಧಿಸಿ. ಚಿನ್ನ ಮತ್ತು ಬೆಳ್ಳಿ, ಮುತ್ತು, ರತ್ನ ವ್ಯಾಪಾರಿಗಳು ಹೊಸ ಬಂಡವಾಳ ಹಾಕಲು ಏಕಾಏಕಿ ಮನಸ್ಸು ಮಾಡಿ ದುಡುಕದಿರಿ. ಶಾಂತಿ ಇರಲಿ.
ಶುಭ ಸಂಖ್ಯೆ: 1 ಶುಭ ದಿಕ್ಕು: ಪಶ್ಚಿಮ

ಮಕರ: ಬಣ್ಣದ ಮಾತುಗಳಿಗೆ ಮರುಳಾಗದಿರಿ

ಯಾರಿಗೂ ಗುಟ್ಟಿನ ವಿಷಯ ಹೇಳಲು ಹೋಗದಿರಿ. ಗುಟ್ಟಿನ ವಿಷಯ ಅರಿಯಲೂ ಹೋಗದಿರಿ. ತೀರಾ ಆಪ್ತತೆಯಿಂದ ಕೆಲಸ ಮಾಡಿ ನಿಮ್ಮ ಒಳ್ಳೆಯ ತನ ತೋರಿದರೂ ಕೊಂಕಿನ ಮಾತು ಕೇಳಿಸಿಕೊಂಡೀರಿ, ತಲೆ ಕೆಡಿಸಿಕೊಳ್ಳದಿರಿ. ಜಗತ್ತಿನ ಪ್ರಾರಬದ್ಧವೇ ಅದು. ಕೆಲಸ ಆಗಬೇಕಾದಾಗ ನೀವೇ ಇಂದ್ರ, ನೀವೇ ಚಂದ್ರ. ಕೆಲಸ ಆದ ಮೇಲೆ ಕಾಗದವನ್ನು ಮುದ್ದೆ ಕಟ್ಟಿ ಎಸೆದಂತೆ ನಿಮ್ಮನ್ನು ಎಸೆಯುತ್ತಾರೆ. ಬಣ್ಣದ ಮಾತುಗಳಿಗೆ ಮರುಳಾಗದಿರಿ. “ಕಷ್ಟದಲ್ಲಿ ಕಲ್ಲಾಗು, ಮನೆಗೆ ಮಲ್ಲಿಗೆಯಾಗುʼʼ ಎಂಬು ಮಾತುಗಳೆಲ್ಲ ಕೇಳಲು ಚೆಂದವಂತೂ ಹೌದು. ಯೋಗ್ಯತೆ ಇದ್ದವರಿಗೆ ಗೌರವ ಕೊಡಿ. ಶಿವ ಸ್ತುತಿ ಉತ್ತಮ.
ಶುಭ ಸಂಖ್ಯೆ : 3 ಶುಭ ದಿಕ್ಕು: ವಾಯವ್ಯ

ಕುಂಭ: ನಂಬಿ ಕೆಡಬೇಡಿ ನಂಬದೆಯೂ ಇರಬೇಡಿ

ಆರ್ಥಿಕ ಬಾಧೆ ಕಷ್ಟಕರವೇ ಆಗಲಿದೆ. ಯಾವುದೋ ತಿಳಿಯದ ಖರ್ಚು ಮೈದಳೆದು ನಿಂತಿರುತ್ತದೆ ನಿಂತಿರುತ್ತದೆ. ಹತ್ತಿರದವರೂ ಕೆಲವು ನೋವಿನ ವಿಚಾರಗಳಿಗೆ ಕಾರಣಾ ಗುತ್ತಾರೆ. ಆಕಸ್ಮಾತ್ತಾಗಿ ಪರಿಚಯ ಆದವರನ್ನು ನಂಬಲು ಹೋಗದಿರಿ. ಧನಿಷ್ಠಾ ನಕ್ಷತ್ರದವರು ಬೇಗನೇ ನಷ್ಟಕ್ಕೆ ತುತ್ತಾಗಬಹುದು. ಮೂಲ ಜಾತಕ ಕಂಡಲಿಯಲ್ಲಿ ಗುರು ಮತ್ತು ಮಂಗಳನ ದೌರ್ಬಲ್ಯ ಇದ್ದಲ್ಲಿ ಸುದರ್ಶನ ಯಂತ್ರ ಧಾರಣೆಯಿಂದ ಮುಂದಿನ ಮೂರು ವರ್ಷ ಅನುಕೂಲಕರವಾಗಲಿದೆ. ನೀರಿನ ಸಂಬಂಧವಾದ ಇಲ್ಲವೇ, ಜಲ ಜನ್ಯ ಸರಕುಗಳ ಮೂಲಕ ಲಾಭವನ್ನು ಗಳಿಸಲು ಅವಕಾಶ ಹೇರಳ. ವಿರುದ್ಧ ಲಿಂಗಿಯೊಬ್ಬರು ಅಪಾಯ ತರಬಹುದು. ಎಚ್ಚರಿಕೆ ಇರಲಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪೂರ್ವ

ಮೀನ: ಸಾಧನೆಗೆ ಆತ್ಮವಿಶ್ವಾಸವೇ ಕೀಲಿಕೈ

ಸಮೃದ್ಧಿಗಾಗಿನ ಹಲವು ಯೋಜನೆಗಳಿಗೆ ದಾರಿ ರೂಪಿಸಿಕೊಳ್ಳಿ. ಉತ್ತರ ದಿಕ್ಕಿನಿಂದ ಅಶುಭ ವಾರ್ತೆಗಳೇ ಬರುತ್ತಿರುತ್ತವೆ. ಆದರೂ ಆತ್ಮ ವಿಶ್ವಾಸ ಬಿಡದಿರಿ. ಪ್ರಲೋಭನೆಗಳಿಗೆ ಒಳಗಾಗದಿರಿ. ನಿಯೋಜಿತ ಕಾರ್ಯಗಳ ಸಂಬಂಧವಾದ ತರ್ಕಬದ್ಧ ಪ್ರಾಜೆಕ್ಟ್‌ ವರ್ಕ್‌ ಸೂಕ್ತವಾಗಿ ಮಾಡಿಕೊಳ್ಳಿ. ಬುದ್ಧಿವಂತ ಜನರು ನಿಮ್ಮಿಂದ ಪ್ರಯೋಜನ ಪಡೆಯಲು ಇದರಿಂದ ಸಹಾಯವಾಗಲಿದೆ. ವಿರುದ್ಧ ಲಿಂಗಿಗಳ ಬಣ್ಣದ ಮಾತಿಗೆ ಮರುಳಾಗದಿರಿ. ಮಾರುತಿಯ ಸಂಬಂಧವಾದ ಸ್ತುತಿಯ ಮೂಲಕ ಪವಾಡ ಸದೃಶವಾದ ಉತ್ತಮ ಬೆಳವಣಿಗೆಗಳ ದಾರಿ ಸಿಗುತ್ತಿರುತ್ತದೆ. ಸಾಲದ ವಿಚಾರದಲ್ಲಿ ಎಚ್ಚರ ಬೇಕೇಬೇಕು.
ಶುಭ ಸಂಖ್ಯೆ : 6 ಶುಭ ದಿಕ್ಕು: ದಕ್ಷಿಣ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version