Site icon Vistara News

Weekly Horoscope | ಈ ವಾರ ತುಲಾ ರಾಶಿಗೆ ಗುರು ಬಲವಿದೆ; ನಿಮ್ಮ ವಾರ ಭವಿಷ್ಯ ಹೇಗಿದೆ ನೋಡಿಕೊಳ್ಳಿ

horoscope today

ವಾರ ಭವಿಷ್ಯ

ಮೇಷ: ಸಾಧನೆ ಮಾಡಲು ಸಕಾಲ

ಸಹಜವಾಗಿಯೇ ಪರದಾಟಗಳು ಇರುತ್ತವೆಯಾದರೂ ವರ್ಚಸ್ಸಿಗೆ ಅಧಿಕ ಶಕ್ತಿಯನ್ನು ಒದಗಿಸುವ ಕುಜನು ನಿಮಗೆ ಪರದಾಟಗಳನ್ನು ಗೆಲ್ಲಲು ಬೇಕಾದ ಧೈರ್ಯವನ್ನು ಒದಗಿಸುವಲ್ಲಿ ಸಹಕಾರಿಯಾಗುತ್ತಾನೆ. ಒಬ್ಬ ವ್ಯಕ್ತಿಯ ಕಿರುಕುಳದಿಂದ ಅನುಪಮವಾದದೊಂದು ಕೈಗೂಡಲು ತುಸು ವಿಳಂಬವಾಗುತ್ತದೆ. ಬಹುತೇಕವಾಗಿ ಮಕ್ಕಳಿಂದ ಒಳಿತಿನ ವಾರ್ತೆ ಲಭ್ಯ. ಕೆಲಸದ ವಿಚಾರದಲ್ಲಿ ಏನೋ ಯಾಂತ್ರಿಕತೆ ಎಂಬ ಭಾವನೆ ಆವರಿಸಬಹುದು. ನಿಮ್ಮ ಭಾವುಕ ಮನೋಸ್ಥಿತಿಯ ತಾಕಲಾಟಗಳನ್ನು ಸಮರ್ಥವಾಗಿ ನಿಯಂತ್ರಿಸುವಿರಾದರೆ ಹಲವು ರೀತಿಯ ಸಾಧನೆಗಳನ್ನು ಮಾಡುವಿರಿ. ಧೂರ್ತರನ್ನು ನಿಯಂತ್ರಿಸಿ. ಗಣಪತಿಯ ಆರಾಧನೆ ಒಳಿತು ತರಲಿದೆ.
ಶುಭ ಸಂಖ್ಯೆ: 6 ಶುಭ ದಿಕ್ಕು: ಉತ್ತರ

ವೃಷಭ: ಆಲಸ್ಯ ಬಿಡಿ, ಅಚಲರಾಗಿರಿ

ಈ ವಾರ ನೀವು ಗೆಲ್ಲುವಿರಿ. ಮನಸ್ಸು ಗುರಿ ತಲುಪುವ ವಿಚಾರದಲ್ಲಿ ಉತ್ತಮ ಸ್ಪಂದನೆಗಳನ್ನು ಗುರುತಿಸುತ್ತದೆ. ಆದರೆ ಆಮೆ ಮತ್ತು ಮೊದಲ ಕಥೆ ನೆನಪುಮಾಡಿಕೊಳ್ಳಿ. “ಆಲಸ್ಯಂ ಅಮೃತಂ ವಿಷಂʼʼ. ಶನೈಶ್ವರನು ʼಚಲ್ತಾಹೈʼ ಎಂಬ ಧೋರಣೆಯನ್ನು ಬಿತ್ತಲು ಮುಂದಾಗುತ್ತಾನೆ. ಜಾಗ್ರತರಾಗಿರಬೇಕು. ತಲುಪಿಯೇ ತೀರುವೆನೆಂಬ ಗಟ್ಟಿಯಾದ ನಂಬಿಕೆಯ ಬುಡ ಅಲ್ಲಾಡಲು ಪ್ರಾರಂಭವಾಗದಂತೆ ಗಮನ ಹರಿಸಿ. ನೀಲಿ ಬಟ್ಟೆಯ ಮೇಲೆ ಕಪ್ಪು ಬಟ್ಟೆ ಇರಿಸಿ, ಮಾರುತಿಯನ್ನು ನೆನೆಯಿರಿ. ಹೆಬ್ಬಂಡೆಯಂತೆ ಎದುರಾಗುವ ಅಡೆ ತಡೆಗಳನ್ನು ಒಡೆದು ನೀಲಾಗಸದಲ್ಲಿ ಸಂತಸದಿಂದ ವಿಹರಿಸಲು ಸಾಧ್ಯವಿದೆ. ಮನಸ್ಸು ಸಂತಸಗೊಂಡಾಗ ನಿಮ್ಮ ಸಾಮರ್ಥ್ಯ ಇಮ್ಮಡಿಯಾಗಲಿದೆ.
ಶುಭ ಸಂಖ್ಯೆ : 9 ಶುಭ ದಿಕ್ಕು: ನೈಋತ್ಯ

ಮಿಥುನ: ಯೋಚಿಸಿ, ವಿಶ್ಲೇಷಿಸಿ, ಮುನ್ನೆಡೆಯಿರಿ

ಸರ್ಪದೋಷವೇ ನಿಮ್ಮ ದೊಡ್ಡ ತಾಪತ್ರಯ. ಒಂದೇ ಬಾರಿಗೆ ಎರಡು ರೀತಿಯ ವಿಚಾರಗಳು ಬಂದು ಒಂದನ್ನೂ ಮಾಡಲಾಗದ ಶೂನ್ಯ ಸ್ಥಿತಿ ಆವರಿಸದಂತೆ ನೋಡಿಕೊಳ್ಳಿ. ಅಮೂಲ್ಯವಾದುದನ್ನು ಅಜ್ಞಾನದಿಂದ ಎಡಗಾಲಿನಲ್ಲಿ ಒದ್ದು ಕಳಿಸದಿರಿ. ನೂರು ಬಾರಿಯಾದರೂ ಸರಿ, ಒಂದು ವಿಚಾರವನ್ನು ಮನದಲ್ಲೇ ವಿಶ್ಲೇಷಿಸಿ. ಇದರಿಂದಾಗಿ ಅಮೂಲ್ಯವಾದುದನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಸುಲಭವಾಗುತ್ತದೆ. ಹಲವು ಸಲ ಹೊಸದನ್ನು ಕೈವಶಪಡಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಇದ್ದಿರುವುದನ್ನು ಕಳೆದುಕೊಳ್ಳಲು ಅವಕಾಶ ಮಾಡಿಕೊಡಬಾರದು. ಮಿಠಾಯಿ, ಸರಕುಗಳ ವ್ಯಾಪಾರ ಲಾಭಕರ. ನರಸಿಂಹನನ್ನು ಸ್ತುತಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಪೂರ್ವ

ಕಟಕ: ಕೂಗಾಟದಿಂದ ಕೇಡು

ಧೈರ್ಯವನ್ನು ನಿಮ್ಮ ಬಂಡವಾಳವನ್ನಾಗಿಸಿಕೊಳ್ಳಿ. ಮೂಲ ಜಾತಕದಲ್ಲಿ ದೌರ್ಬಲ್ಯವಿದ್ದಾಗ ನಿಮ್ಮ ಮನೋಸ್ಥಿತಿಯ ಏರಿಳಿತಗಳನ್ನು ಸೂಕ್ತವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳಿ. ಒಮ್ಮೆಗೇ ಕೂಗಾಡಲು ಮುಂದಾಗದಿರಿ. ಕೂಗಾಟದ ಫಲವಾಗಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಎದುರಾ ದೀತು. ಮುಖ ಬೆಲೆಯ ಮೇಲೆ ವಸ್ತುವಿನ ಗುಣಮಟ್ಟ ಅಳೆಯದಿರಿ. ಎಲೆಕ್ಟ್ರಾನಿಕ್‌ ವಲಯ, ಸಿನಿಮಾ, ಬಡಿಗೆಯ ವೃತ್ತಿ, ಹೊಟೇಲ್‌, ರೆಸ್ಟೋರೆಂಟ್‌ ವೃತ್ತಿಯ ಜನ ಗಳಿಸುವ ವಿಚಾರದಲ್ಲಿ ಫಲದಾಯಕವಾದುದನ್ನು ಈ ವಾರ ನಿರೀಕ್ಷಿಸಬಹುದಾಗಿದೆ. ವಜ್ರಾಭರಣ ಗಳ ವಿಚಾರದಲ್ಲಿ ಎಚ್ಚರ ಇರಲಿ. ಬಿಳಿ ಹೂಗಳಿಂದ ವೆಂಕಟೇಶ್ವರನನ್ನು ಪೂಜಿಸಿ, ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಶುಭ ಸಂಖ್ಯೆ : 3 ಶುಭ ದಿಕ್ಕು: ದಕ್ಷಿಣ

ಸಿಂಹ: ಆತ್ಮೀಯರ ಗುರುತಿಸಲು ಕೂಡಿ ಬಂದ ಕಾಲ

ಆರ್ಥಿಕ ಸಾಮರ್ಥ್ಯವು ಬಲವಾಗುವುದು ಸತ್ಯವಂತೂ ಹೌದು. ಆದರೆ ಆರ್ಥಿಕ ರೂಪದಲ್ಲಿ ಬಂದದ್ದು ಖರ್ಚಾಗುವ ರೀತಿಯೂ ನಿಯಂತ್ರಣಕ್ಕೆ ಸಿಗಲಾರದ ಸ್ಥಿತಿಯಲ್ಲಿ ಬಾಧೆ ಸೃಷ್ಟಿಸುತ್ತಿರುತ್ತದೆ. ಶನೈಶ್ವರನ ಜಪ ಮಾಡಿ. ಕೆಲವು ಅರಿಷ್ಟಗಳನ್ನು ಕಳೆದುಕೊಳ್ಳಲು ಇದರಿಂದ ದಾರಿ ಲಭ್ಯ. ಜತೆಗೆ ಗಣೇಶನನ್ನು ಸ್ತುತಿಸಿ. ಇದರಿಂದ ಎದುರಾಗಿಯೇ ತೀರುವ ಅಡೆತಡೆಗಳನ್ನು ಎದುರಿಸುವ ಧೈರ್ಯ ಸ್ಥೈರ್ಯ ಲಭ್ಯ. ನಿಮ್ಮನ್ನು ಅನ್ಯರು ನಿರ್ಲಕ್ಷಿಸುತ್ತಿದ್ದಾರೆಂಬ ಭಾವನೆ ಬರುತ್ತಿರುತ್ತದೆ. ಸುಳ್ಳೇನಲ್ಲ, ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದಿರಿ. ನಿಜವಾದ ಆತ್ಮೀಯರು ಯಾರು ಎಂಬುದನ್ನು ಗುರುತಿಸಲು ಕಾಲವು ಈಗ ನಿಮ್ಮ ನೆರವಿಗೆ ಬರುತ್ತಿದೆ. ಆದರೆ ನೋವು ಆಗುತ್ತದೆ. ಸಂಯಮದಿಂದಿರಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ನೈಋತ್ಯ

ಕನ್ಯಾ: ಬ್ಬಿಣ ಕಾದಾಗಲೇ ಬಡಿಯಬೇಕು!

ಮಾತಿನ ಮೂಲಕವಾಗಿ ಗೆಲ್ಲಲು ಇದು ಸೂಕ್ತವಾದ ಸಮಯ. ಆದರೆ ನಿಮ್ಮ ದಾರಿ ನಿಮ್ಮ ಲೆಕ್ಕಾಚಾರದ ರೀತಿಯಲ್ಲೇ ಹೋಗುತ್ತದೆ ಎಂಬ ಅತಿಯಾದ ನಿರೀಕ್ಷೆ ಬೇಡ. ಕಲ್ಲು ಕುಟ್ಟಿ ನೀರು ತೆಗೆಯುವ ಸ್ಥೈರ್ಯ ಬಿಡದಿರಿ. ಧೈರ್ಯವು ನಿಮಗೆ ಅವಸರದ ಪ್ರವೃತ್ತಿ ತೋರಿ ಸಿದರೆ ಬರಲಾರದು. ಕಬ್ಬಿಣ ಕೆಂಪಾದ ಮೇಲೆಯೇ ಬಡಿಯಬೇಕು. ನಮಗೆ ಬೇಕಾದ ರೂಪಕ್ಕೆ ಅದನ್ನು ತಿರುಗಿಸಿಕೊಳ್ಳಬಹುದು. ಇಬ್ಬಗೆಯ ನೀತಿ ಬೇಡ. ಒಂದೇ ದಾರಿ ಎಂಬುದನ್ನು ಖಚಿತ ಮಾಡಿಕೊಳ್ಳಿ. ಬ್ಯಾಂಕ್‌ ಸಾಲದಲ್ಲಿಯೇ ಹೊಸ ಯೋಜನೆ ರೂಪಿಸಲು ಮುಂದಾಗಿ. ಕೈಸಾಲ, ಮೀಟರ್‌ ಬಡ್ಡಿಸಾಲ ಬೇಡ. ಶ್ರೀ ಗುರು ದತ್ತಾತ್ರೇಯನ ಆರಾಧನೆಯಿಂದ ಲಾಭ.
ಶುಭ ಸಂಖ್ಯೆ : 6 ಶುಭ ದಿಕ್ಕು: ಉತ್ತರ

ತುಲಾ: ಗುರು ಬಲದವೇ ನಿಮ್ಮ ಶಕ್ತಿ

ನೀವು ಯೋಚಿಸುವುದೇ ಒಂದು ನಡೆಯುವುದೇ ಇನ್ನೊಂದಾದಾಗ ಚಿಂತಾಕ್ರಾಂತರಾಗುವ ಸರದಿ ತಲೆದೋರುತ್ತದೆ. ದಡ್ಡರ ಬಳಿ ಮಾತು ಬೇಡ ಎಂದು ಅಂದುಕೊಂಡರೂ ದಡ್ಡರು ಸಿಗುತ್ತಿರುತ್ತಾರೆ. ಈಶ್ವರೇಚ್ಛೆಯೇ ನಡೆಯುವಂಥದು ಎಂಬ ವಿನಯ ಸಂಪಾದಿಸಿಕೊಳ್ಳಿ. ಅನುಗ್ರಹ ಯಾರಿಂದಲೇ ಸಿಗಲಿ, ಅದು ದಿವ್ಯವಾದದು. ಗುರು ಬಲವು ಇದೆ. ಇಂಥದೊಂದು ಅನುಗ್ರಹ ವರ್ತಮಾನವನ್ನು ನಿಧಾನವಾದರೂ ಪ್ರಧಾನವಾದುದರ ಕಡೆಗೆ ತಲುಪಿಸಲು ಸಹಾಯ ಮಾಡುತ್ತದೆ. ಶ್ರೀದೇವಿ ಖಡ್ಗ ಮಾಲಿನಿಯನ್ನು ಆರಾಧಿಸಿ. ಅನಾವಶ್ಯಕ ಪೀಡೆಗಳನ್ನು ಕತ್ತರಿಸುವ ಶಕ್ತಿ ನಿಮಗೆ ಒದಗಿ ಬರಲು ಸಾಧ್ಯ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪೂರ್ವ

ವೃಶ್ಚಿಕ: ಲೋಕದ ಡೊಂಕ ನೀವೇಕೆ ತಿದ್ದುವಿರಿ?

ನಿಮ್ಮದೇ ಆದ ತರ್ಕ ಸಿದ್ಧಾಂತಗಳನ್ನು ಅನುಸರಿಸಿ. ಆದರೆ ಊರಿಗೇ ಒಂದು ದಾರಿಯಾದರೆ ಪೋರನಿಗೇ ಒಂದು ದಾರಿ ಎಂದಾಗುವುದು ಬೇಡ. ಜನರು ತೀರಾ ಇಕ್ಕಟ್ಟಿಗೆ ಸಿಲುಕಿಸುವ ವರ್ತಮಾನ ಸೃಷ್ಟಿಯಾಗದಂತೆ ನೋಡಿಕೊಳ್ಳಿ. ನಿಮ್ಮನ್ನು ಪರೀಕ್ಷಿಸಲು ಜನ ಮುಂದಾಗುತ್ತಾರೆ. ಆಗಲೂ ತಾಳ್ಮೆ ಇರಲಿ. ನಸೀಬು ಸರಿ ಇರದಿರುವಾಗ ದುರ್ಬಲನೂ ಹೆಡೆ ತೆರೆದ ಹಾವಿನಂತೆ ಮುಗಿ ಬೀಳುತ್ತಾರೆ. ಜಗದ ಡೊಂಕನ್ನು ತಿದ್ದಲು ಮುಂದಾಗದಿರಿ. ನಿಮ್ಮನ್ನು ಸೂಕ್ತವಾದ ದಾರಿಗೆ ತಂದಿರಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿ. ಯಾವಾಗಲೂ ಸ್ವಾರ್ಥಿಯಾಗಬಾರದು. ಆದರೆ ಪೂರ್ತಿ ನಿಸ್ವಾರ್ಥಿಯೂ ಆಗಬಾರದು. ಶ್ರೀ ರಮಣ ಶ್ರೀ ಮನ್ನಾರಾಯಣನನ್ನು ಧ್ಯಾನಿಸಿದರೆ ಒಳಿತು.
ಶುಭ ಸಂಖ್ಯೆ : 1 ಶುಭ ದಿಕ್ಕು: ಆಗ್ನೇಯ

ಧನಸ್ಸು: ಭರವಸೆಯ ನಗು ಮಾಸದಿರಲಿ

ನಿಮ್ಮ ದಿನಗಳು ಈಗ ನಿಮ್ಮನ್ನು ಪ್ರಶ್ನಾರ್ಹ ಸ್ಥಿತಿಯಲ್ಲಿ ನಿಲ್ಲಿಸುತ್ತವೆ. ನಿಮ್ಮ ಈ ವರೆಗಿನ ಒಳ್ಳೆಯ ಕೆಲಸಗಳ್ಯಾವವೂ ಗಮನಕ್ಕೆ ಬಾರವು. ಸಣ್ಣ ತಪ್ಪನ್ನು ದೊಡ್ಡದಾಗಿ ಮಾಡಿ ತೋರಿಸುತ್ತಾರೆ. ನಿಮ್ಮದೇ ಆದ ಕಿರುನಗು, ಭರವಸೆಯ ನಗು ಮಾಸದಿರಲಿ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಕೊಟ್ಟಂತೆ ಎಂಬ ಗಾದೆಯ ವಾಸ್ತವ ನಿಮ್ಮ ಅನುಭವಕ್ಕೆ ಬರುವ ಸಂದರ್ಭವಾಗಿದೆ ಇದು. ಕೃಷಿಯ ವಿಚಾರ, ನಿಮ್ಮ ಕೆಲಸದ ವಿಚಾರ ಭಾವನಾತ್ಮಕ ಉಮ್ಮಳದಿಂದ ತೊಂದರೆಗೆ ಸಿಲುಕದಂತೆ ಆಗುವುದು ಬೇಡ. ಸಜ್ಜನರೇ ತೊಂದರೆಕೊಡುವಾಗ ಬೇಸರ ಸಹಜ. ಆದರೆ ಆಹ್ವಾನವನ್ನು ಸ್ವೀಕರಿಸಿ, ಎದುರಿಸಿ. ರಾಮರಕ್ಷಾ ಸ್ತೋತ್ರ ಓದಿ.
ಶುಭ ಸಂಖ್ಯೆ: 8 ಶುಭ ದಿಕ್ಕು: ಪಶ್ಚಿಮ

ಮಕರ: ನಿಮ್ಮದೇ ಆದ ಶಿಸ್ತು, ನೈಪುಣ್ಯ ನಿಮಗಿರಲಿ

ಸೋಜಿಗಪಡುವ ರೀತಿಯಲ್ಲಿ, ಆಡುವ ಮಾತೇ ಬೇರೆ, ನಡೆದುಕೊಳ್ಳುವ ರೀತಿಯೇ ಬೇರೆ ಎಂಬ ಸಂದಿಗ್ಧತೆ ಇದ್ದಿರುವ ಜನರನ್ನು ಸಂಧಿಸಬೇಕಾಗುತ್ತದೆ. ಯಾಕೆ ಎಂಬ ಪ್ರಶ್ನೆ ಕೇಳಬೇಡಿ. ನಿಧಾನವಾಗಿ ಇಂಥವರಿಂದ ದೂರವಾಗಿ. ಕೆಲವು ವಿಚಾರಗಳಲ್ಲಿ ತರ್ಕ ಇರುವುದಿಲ್ಲ. ಹೀಗಾಗಿ ಅನಾವಶ್ಯಕ ಶ್ರಮಕ್ಕೆ ನಿಮ್ಮನ್ನು ತೊಡಗಿಸಿಕೊಳ್ಳದಿರಿ. ನಿಮ್ಮ ತೂಕ ಕೆಳಗಿಳಿಯುವ ಸ್ಥಿತಿಯನ್ನು ಪಾತಕಿಗಳು ನಿರ್ಮೀಸುತ್ತಾರೆ. ಎಚ್ಚರ ಇರಲಿ. ವ್ಯಕ್ತಿತ್ವಕ್ಕೆ ಬರುವ ಕುಂದನ್ನು ಸರಿಪಡಿಸಿಕೊಳ್ಳುವುದು ಕಷ್ಟದ ವಿಷಯವಾಗುತ್ತದೆ. ನಿಮ್ಮದೇ ಆದ ಶಿಸ್ತು ಹಾಗೂ ನೈಪುಣ್ಯವನ್ನು ವಿನಯದಿಂದ ಪ್ರದರ್ಶಿಸಿ. ಹನುಮಾನ್‌ ಚಾಲೀಸ್‌ ಓದಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ವಾಯವ್ಯ

ಕುಂಭ: ಹಿತವಚನ ಕೇಳಿ, ಹಿರಿ ಹಿರಿ ಹಿಗ್ಗದಿರಿ

ತಪ್ಪುಗಳನ್ನು ಮಾಡಲು ಹೋಗದಿರಿ. ಬಂಡೆಯ ಮೇಲೆ ನೀವು ಬೀಳುವುದು, ಬಂಡೆಯು ನಿಮ್ಮ ಮೇಲೆ ಬೀಳುವುದು ಹೀಗೆ ಇವೆರಡೂ ಪರಿಣಾಮದಲ್ಲಿ ಒಂದೇ. ತೊಂದರೆ ಸೃಷ್ಟಿಸುತ್ತವೆ. ನಿಮ್ಮ ನಿಲುವನ್ನು ಟೀಕಿಸುವವರ ಬಗೆಗೂ ಆದರವಿರಲಿ. ತಾನೇ ಸರ್ವಜ್ಞ ಎನ್ನುವ ಭಾವನೆ ಬೇಡ. ನಿಮ್ಮದಾದ ಹಿತವಚನ, ಸಲಹೆ, ಸೂಚನೆಗಳನ್ನು ಯಾರಾದರೂ ಕೇಳಿದರೆ ಮಾತ್ರ ಕೊಡಲು ಮುಂದಾಗಿ. ತಪ್ಪು ಜನರನ್ನು ಆದರದಿಂದ ಕಾಣುವ ಉಪದ್ವ್ಯಾಪಕ್ಕೆ ಮುಂದಾಗದಿರಿ. ನಿಮಗೀಗ ಗಂಭೀರವಾದ ಸಕಾರಾತ್ಮ ಬೆಂಬಲ ನೀಡುವ ಜನರ ಅವಶ್ಯಕತೆ ಇದೆ. ಕಾಯ್ದೆ ಕಾನೂನುಗಳ ವಿಷಯದಲ್ಲಿ ಎಚ್ಚರಿಕೆ ಇರಲಿ. ಸರ್ವಜನ ಪೂಜಿತ ಈಶ್ವರನನ್ನು ಆರಾಧಿಸಿ. ಎಚ್ಚರಿಕೆ ಇರಲಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಮೀನ: ನಿಮಗೆ ಮೌನವೇ ಮಹಾ ಮದ್ದು

ಚಾತುರ್ಯವನ್ನು ನಿಮಗೆ ಬೋಧಿಸಬೇಕಾದ್ದೇನೂ ಇಲ್ಲ. ಆದರೂ ಕೆಲವು ನೇರವಾದ, ಖಾರವಾದ ಮಾತುಗಳನ್ನು ಜನರು ನಿಮ್ಮ ಬದಲಾವಣೆಯ ದೃಷ್ಟಿಯಿಂದ ಅಗತ್ಯ ಎಂಬ ತಂತ್ರದೊಂದಿಗೆ ನಿಮ್ಮನ್ನು ಕಾಡುತ್ತಾರೆ. ಸುಮ್ಮನಿರಿ. ಸುಮ್ಮನಿರುವ ನಿಮ್ಮ ಕ್ರಿಯೆಯಿಂದ ದೈತ್ಯ ಶಕ್ತಿಯೂ ನಿಮ್ಮನ್ನು ಕಂಡು ಹೆದರಲಾರಂಭಿಸುತ್ತದೆ. ಭೂಮಿ ವ್ಯವಹಾರವನ್ನು ಬಹು ವೆಚ್ಚದೊಂದಿಗೆ ಪ್ರಾರಂಭಿಸಿ. ನೀವು ತಿಳಿದಷ್ಟು ಮೇಲೇರಲು ಸಾಧ್ಯವಾಗದ ವಹಿವಾಟುಗಳನ್ನು ಪರರು ತಾವು ನಡೆಸುವ ಉಮೇದು ತೋರಿಸಬಹುದು. ಒಮ್ಮೆಗೆ ವಹಿವಾಟು ಕುದುರಿಸದಿರಿ. ಸಾಧಕ ಬಾಧಕ ಅರಿಯಬಹುದಾದ ನೀವು ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಿ. ಶಿವ ಸ್ತುತಿಯು ಕ್ಷೇಮಕರ.
ಶುಭ ಸಂಖ್ಯೆ : 4 ಶುಭ ದಿಕ್ಕು: ಈಶಾನ್ಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version