ಮೇಷ: ಧನಾಗಮನದ ಕಾಲ
ಬುದ್ಧಿ ಶಕ್ತಿಯೇ ನಿಮಗೆ ವರ್ತಮಾನವನ್ನು ಗೆಲ್ಲಲು ಅವಕಾಶ ನೀಡುತ್ತದೆ. ಯಾವುದೇ ಕಾರಣಗಳಿಗಾಗಿಯೂ ನಿಮ್ಮ ವಿರುದ್ಧ ಯಾರೂ ಟೀಕೆ ಮಾಡಲೇಬಾರದು ಎಂಬ ಯೋಚನೆಯಲ್ಲಿ ಇರಬೇಡಿ. ನಿಮ್ಮ ಪಾಲಿಗೆ ಧನಾಗಮನದ ವಿಷಯದಲ್ಲಿ ಅದೃಷ್ಟ ಇದ್ದಿರುವುದು ಸ್ಪಷ್ಟವಿದೆ. ಆದರೆ ಮಾತುಗಳಲ್ಲಿ ಪೂರ್ತಿ ನಿಯಂತ್ರಣ ಹೊಂದಿರಿ. ಪಶ್ಚಿಮ ದಿಕ್ಕಿಗೆ ಪ್ರತಿದಿನ ಬೆಳಗ್ಗೆ ಒಂದು ಚಿಟಿಕೆ ಸಕ್ಕರೆಯನ್ನು ಪೂರ್ವ ದಿಕ್ಕಿನಲ್ಲಿ ಮನೆಯ ಎದುರಿಗೆ ಚೆಲ್ಲಿ. ತುಳಸೀ ದಳಗಳೊಂದಿಗೆ ವಿಷ್ಣುವನ್ನು ಆರಾಧಿಸಿ.
ಶುಭ ಸಂಖ್ಯೆ: 7 ಶುಭ ದಿಕ್ಕು: ಪೂರ್ವ
ವೃಷಭ: ರಾಹುವಿನ ರಗಳೆಗಳಿವೆ ಎಚ್ಚರ!
ರಾಹುವಿನ ಉಪಟಳವಿದೆಯಾದ್ದರಿಂದ ಯಾವುದೇ ಕಾಗದ ಪತ್ರಗಳಿಗೂ ಯೋಚಿಸದೇ ಹಸ್ತಾಕ್ಷರ ಹಾಕದಿರಿ. ತೊಂದರೆಗೆ ಸಿಲುಕಿಹಾಕಿಕೊಳ್ಳುವ ವಿಚಾರ ಹೇರಳವಾಗಿದೆ. ಎಂಜಿನಿಯರ್‌ಗಳಿಗೆ ಕೆಲಸದ ಬದಲಾವಣೆಗೆ ಅವಕಾಶ ಕೂಡಿ ಬರಲು ಸಾಧ್ಯ. ಸಣ್ಣ ಪ್ರಮಾಣದ ಕರ್ಪೂರದ ತುಂಡನ್ನು ಉತ್ತರ ದಿಕ್ಕಿಗೆ ಎಸೆಯುವುದರ ಮೂಲಕ ಪರಿಹಾರ ಸಿಗಲಾರದ ಕ್ಲಿಷ್ಟ ವಿಷಯಗಳಲ್ಲೂ ಯಶಸ್ಸಿಗೆ ದಾರಿ ಸಿಗುವುದು ಸುಲಭವಾಗುತ್ತದೆ. ಮಹಾಲಕ್ಷ್ಮೀ ಅಷ್ಟೋತ್ತರ ಸ್ತೋತ್ರವನ್ನು ಪಠಿಸಿ, ಹಣಕಾಸಿನ ವಿಷಯದಲ್ಲಿ ಉತ್ತಮ ಫಲ ದೊರೆಯಲಿದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ನೈಋತ್ಯ
ಮಿಥುನ: ಕೆಲಸದಲ್ಲಿ ಮನಸ್ತಾಪ ಬೇಡ
ನಿಮ್ಮದೇ ಆದ ಕೆಲಸಗಳಲ್ಲಿ ಅಸ್ಥೆಯಿಂದ ಕೆಲಸ ಮಾಡುವುದರ ಜತೆಗೆ ಬಾಳಸಂಗಾತಿಯ ಸಹಾಯದೊಂದಿಗೆ ಸ್ವಂತದ್ದೇ ಆದ ಚಿಕ್ಕ ಪ್ರಮಾಣದ ಬಿಸಿನೆಸ್ ಶುರು ಮಾಡಲು ಅವಕಾಶ ಒದಗಿ ಬರುತ್ತದೆ. ಅಳಿಲುಗಳಿಗೆ ತಿನ್ನುವ ಪದಾರ್ಥವನ್ನು ಅರ್ಪಿಸಿ. ಮಾನಸಿಕವಾದ ಒತ್ತಡಗಳಿಂದ ದೂರವಾಗಲು ಇದರಿಂದ ಸಹಾಯ ಒದಗಲು ಸಾಧ್ಯ. ಯಾವುದೇ ರೀತಿಯ ಮನಸ್ತಾಪವನ್ನೂ ಕೆಲಸದ ಸ್ಥಳದಲ್ಲಿ ಬಾಸ್ ಜತೆಗೇ ಇರಲಿ, ಸಹೋದ್ಯೋಗಿಗಳ ಜತೆಗಾಗಲಿ ಮಾಡಿಕೊಳ್ಳದಿರಿ. ಓಂಕಾರ ರೂಪನಾಗಿರುವ ಶಿವನನ್ನ ಸ್ತುತಿಸಿ, ಒಳ್ಳೆಯದಾಗುತ್ತದೆ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ
ಕಟಕ: ಶಾಂತವಾಗಿದ್ದರೆ ಗೆಲುವು ಖಚಿತ
ನಿಮ್ಮದೇ ಆದ ಕೆಲಸದಲ್ಲಿನ ಒತ್ತಡಗಳ ಜತೆ ಕೆಲವು ಹೊಸ ಜವಾಬ್ದಾರಿಗಳು ಸೇರಿಕೊಳ್ಳಲು ರಾಹುವಿನ ಕಿತಾಪತಿಯಿಂದ ವೇಳೆ ಕೂಡಿ ಬರಬಹುದು. ಒಬ್ಬ ವಿರೋಧಿಯಿಂದಾಗಿ ಮನಃಶಾಂತಿಗೆ ಧಕ್ಕೆ ಯಾಗಬಹುದು. ಶಾಂತವಾಗಿಯೇ ಇರಿ. ಸದ್ದಿಲ್ಲದೆ ವಿರೋಧಿಗೆ ಪಾಠ ಕಲಿಸುವ ಚಾತುರ್ಯದಲ್ಲಿ ನೀವು ಗೆಲ್ಲಲು ಸಾಧ್ಯತೆ ಜಾಸ್ತಿ. ರಾಜಕಾರಣಿಗಳಿಗೆ ಮುನ್ನುಗ್ಗುವ ಕಾರಣಕ್ಕೇ ಬೇಕಾದ ಧೈರ್ಯಕ್ಕೆ ಹೆಚ್ಚಿನ ಬಲಬೇಕು. ಏಕಾಏಕಿ ಯಾವುದೇ ನಿರ್ಧಾರ ತಳೆಯದಿರಿ. ಮಾರುತಿ ಆರಾಧನೆಯಿಂದ ನೆಮ್ಮದಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಪಶ್ಚಿಮ
ಸಿಂಹ: ಕೈ ಕೆಸರಾದರೆ ಬಾಯಿ ಮೊಸರು!
ನಿಮ್ಮ ಪರಿಸರದಲ್ಲಿ ನೀವು ಜನಪ್ರಿಯತೆ ಪಡೆಯಲು ಉತ್ತಮ ಅವಕಾಶವಿದೆ. ಯಾವುದೇ ಕಾರಣಕ್ಕೂ ಸಾಲವನ್ನು ಕೊಡುವ ಅಥವಾ ಪಡೆಯುವ ಕೆಲಸಕ್ಕೆ ಮುಂದಾಗದಿರಿ. ಹಣದ ವಿಚಾರದಲ್ಲಿ ಶ್ರಮದಿಂದ ದುಡಿದೇ ಹಲವು ಉಳಿತಾಯಗಳಿಗೆ, ಇಲ್ಲಾ, ಇನ್ನಿತರ ಅಗತ್ಯವಾದ ಖರ್ಚು ವೆಚ್ಚಗಳಿಗೆ ದಾರಿ ಮಾಡಿಕೊಳ್ಳಬೇಕೇ ವಿನಾ, ಯಾವುದೋ ಬೇಡವಾದ ದಾರಿ ಹಿಡಿಯಬೇಡಿ. ಕಾಲಿಗೆ ಸಂಬಂಧಿಸಿದ ತಾಪತ್ರಯಗಳು ಒದಗಿ ಬರಬಹುದಾಗಿದೆ, ಎಚ್ಚರ ಇರಲಿ. ಶ್ರೀ ದುರ್ಗೆಯನ್ನು ಆರಾಧಿಸಿ.
ಶುಭ ಸಂಖ್ಯೆ :3 ಶುಭ ದಿಕ್ಕು: ಆಗ್ನೇಯ
ಕನ್ಯಾ: ಹಣ ಹೂಡುವಾಗ ಇರಲಿ ಎಚ್ಚರ
ಸಿನಿಮಾ, ರಾಜಕೀಯ, ಲಾಟರಿ, ಜೂಚು, ಭೂಮಿ, ಚರಾಸ್ತಿಗಳ ಸಂಬಂಧವಾದ ವಿಷಯದಲ್ಲಿ ಅತ್ಯಂತ ಜಾಗರೂಕತೆಯಿಂದ ಸಂಯಮದಿಂದ ಹಣ ತೊಡಗಿಸಿ. ಶನೈಶ್ವರ ಸ್ವಾಮಿಯ ವಿಚಾರದಲ್ಲಿ ಹೆಚ್ಚಿನ ನಿಯಮ ನಿಷ್ಠೆ ಇದ್ದಿರಲಿ. ಪ್ರತಿ ದಿನ ಹನುಮಾನ್ ಚಾಲೀಸಾ ಓದಿ. ಹೂವಿನ ವ್ಯಾಪಾರಿಗಳಾಗಲಿ, ಬೇಕರಿ ಅಥವಾ ಸಿಹಿ ತಿಂಡಿಯ ವ್ಯಾಪಾರವೇ ಇರಲಿ, ಬೇಗನೆ ಹಾಳಾಗುವ ಸರಕುಗಳ ಬಗ್ಗೆ ನಿಗಾ ಇರಲಿ. ಬೇಡದ ಉಪದ್ವ್ಯಾಪಗಳಿಂದ ನಷ್ಟಕ್ಕೆ ದಾರಿ ಆಗದಂತಿರಲಿ. ಜಗನ್ನಾಥನ ಆರಾಧನೆಯಿಂದ ಸಿದ್ಧಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಪಶ್ಚಿಮ
ತುಲಾ: ಅನಾವಶ್ಯಕ ಖರ್ಚು ವೆಚ್ಚ ಬೇಡ
ರಾಜಕೀಯದ ಕನುಸಕಾಣುವುದು ತಪ್ಪೇನಲ್ಲ, ಆದರೆ ಎದುರಿಸಬೇಕಾದ ಎದುರಾಳಿಯನ್ನು ಚುನಾವಣಾ ಕಣದಲ್ಲಿ ಎದುರಿಸುವ ತಾಲೀಮನ್ನು ಸೂಕ್ತವಾಗಿ ನಡೆಸಿ. ನಿಮ್ಮ ತೀಕ್ಷ್ಣ ಬುದ್ಧಿ ಮತ್ತೆಯಿಂದ ಎದುರಾಳಿಯನ್ನು ಕಟ್ಟಿ ಹಿಡಿಯುವ ಉತ್ತಮ ಪ್ರಯತ್ನ ಹಾಗೂ ಯಶಸ್ಸು ನಿಮ್ಮ ಚಾತುರ್ಯದ ಚೌಕಟ್ಟಿನಲ್ಲಿ ದಟ್ಟವಾದ ಪ್ರಮಾಣದಲ್ಲಿ ಹಿಡಿಯ ಹೊರಟರೆ ಅಸಾಧ್ಯವೇನಲ್ಲ. ಅನಾವಶ್ಯಕ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ನಿಮ್ಮ ಹತ್ತಿರದ ಹಿರಿಯ ಬಂಧುಗಳಿಂದ ಸಹಾಯ ಸಿಗಲಿದೆ. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ
ವೃಶ್ಚಿಕ: ಕೆಲಸಗಾರರ ಬಗ್ಗೆ ಎಚ್ಚರದಿಂದಿರಿ
ದಾರಿಯುದ್ದಕ್ಕೂ ಸಾಗಿ ಹೊರಡುವ ಕೆಲಸದಲ್ಲಿ ಸಕಾರಾತ್ಮಕ ಚಿಂತನೆ, ತರ್ಕಗಳು ತುಂಬಿಕೊಂಡಿರಲಿ. ನಿಮ್ಮ ವ್ಯಾಪಾರ ವಹಿವಾಟಿನ ಜವಾಬ್ದಾರಿಯನ್ನು ಕೆಲಸಗಾರರ ಮೇಲೆ ಬಿಡಬೇಡಿ. ಕ್ಯಾಮರಾ ಸಂಯೋಜನೆಗಳು, ಇತರ ಯಾವುದೇ ಗಣಕ ಯಂತ್ರಗಳ ಮೂಲಕ ವ್ಯಾಪಾರ ವ್ಯವಹಾರದ ಆಗು-ಹೋಗುಗಳ ವಿಷಯವನ್ನು ಕೆಲಸಗಾರರು ಯಾಮಾರಿಸಲು ಸಾಧ್ಯವಿದೆ. ಮೀಟರ್ ಬಡ್ಡಿಗೆ ಸಾಲ ಪಡೆಯದಿರಿ. ಸಾಲವನ್ನು ಪಡೆಯುವುದೇ ಆದ ಪಕ್ಷದಲ್ಲಿ ಬ್ಯಾಂಕ್ ಜತೆ ಸಂಪರ್ಕ ಸಾಧಿಸಿ. ಸತ್ಯನಾರಾಯಣ ಸ್ವಾಮಿ ಸ್ತುತಿ ಉತ್ತಮ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪೂರ್ವ
ಧನಸ್ಸು: ಅಪರಿಚಿತರಿಂದಲೇ ನಿಮಗೆ ನೆರವು!
ಕೇವಲ ನಕಾರಾತ್ಮಕ ವಿಚಾರಗಳೇ ನಿಮ್ಮನ್ನು ಸುತ್ತಿಕೊಳ್ಳಬಹುದು. ಆದರೆ ಎಲ್ಲರ ಬಗ್ಗೆಯೂ ತೆರೆದ ಮನಸ್ಸಿನವರಾಗಿರಿ. ರವಿ ಬುಧರ ಕಾರಣದಿಂದ ತೀರಾ ಅಪರಿಚಿತ ವ್ಯಕ್ತಿಗಳೇ ನಿಮಗೆ ಒಳಿತಿಗೆ ಸಹಾಯ ಮಾಡಲಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ನಿಶ್ಚಿತವಾದ ಬಜೆಟ್‌ನೊಂದಿಗೆ ಮುಂದುವರಿಯಿರಿ. ನಿಮ್ಮ ಅನುಭವದ ವಿಶಾಲವಾದ ಗಟ್ಟಿ ಶಕ್ತಿ ನಿಮಗೆ ಹೊಸದೇ ಅವಕಾಶ ಒಂದನ್ನು ಸೃಷ್ಟಿಸುತ್ತದೆ. ಸಾಲಕ್ಕಾಗಿ ಮುಂದಾಗದಿರಿ. ಶ್ರೀ ಲಲಿತಾಂಬಿಕೆಯನ್ನು ಆರಾಧಿಸಿ, ಸೂಕ್ತ ಸಹಾಯಕ್ಕಾಗಿ ಪ್ರಾರ್ಥನೆ ಮಾಡಿ.
ಶುಭ ಸಂಖ್ಯೆ: 9 ಶುಭ ದಿಕ್ಕು: ನೈಋತ್ಯ
ಮಕರ: ತಾಳಿದವನು ಬಾಳಿಯಾನು
ಕೇವಲ ನಿಮ್ಮಿಂದ ಏನು ಪಡೆಯಬಹುದೆಂಬುದಕ್ಕೆ ಬರುತ್ತಾರೆಯೇ ವಿನಾ ನಿಮಗೆ ಸಹಕರಿಸುವವರು ನಿಮಗೆ ಸಿಗಲಾರರು. ಚಿಂತೆ ಬೇಡ, ನಿಮಗೆ ನೀವೇ ಸಹಾಯಕರಾಗಿ ನಿಂತುಕೊಳ್ಳಿ. ಹಲವಾರು ರೀತಿಯ ಜನರನ್ನು ಸಂಧಿಸುತ್ತೀರಿ ಅವರಲ್ಲಿ ನೀಲಿ ಬಟ್ಟೆ ಧರಿಸಿದ ಹಿರಿಯರೋರ್ವರು ನಿಮಗೆ ಸೂಕ್ತವಾದ ಮಾರ್ಗದರ್ಶನ ಮಾಡಲು ಮುಂದಾಗುತ್ತಾರೆ. ನಿಮಗೆ ಎದುರಿಸುವುದು ಅಸಾಧ್ಯ ಎಂಬ ರೀತಿಯಲ್ಲಿ ಕಿರಿಕಿರಿಗಳು ಬಂದರೂ ತಾಳಿದವನು ಬಾಳಿಯಾನು ಎಂಬ ವಿಚಾರ ಮರೆಯದಿರಿ. ಗುರು ಶ್ರೀ ನರಸಿಂಹನನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ವಾಯವ್ಯ
ಕುಂಭ: ಮಕ್ಕಳಿಂದ ಬರಲಿದೆ ಶುಭ ಸುದ್ದಿ
ವಿಶಾಲವಾದ ಜಗತ್ತಿನಲ್ಲಿ ಒಂದೇ ಒಂದು ನಿಮ್ಮದು ಎಂಬುದನ್ನು ನಂಬಿ ಶ್ರೀ ಮೂಕಾಂಬಿಕೆಯನ್ನು ಅರಾಧಿಸಿ. ತಾಯಿಯ ಅನುಗ್ರಹದಿಂದ ಕೆಲಸದ ಸ್ಥಳದಲ್ಲಿ, ಹೊಸದೇ ಆದ ಪ್ರಭಾವಿ ಮನುಷ್ಯರ ಮೂಲಕ ನಿಮಗೆ ಜರೂರಾದ ಸಹಾಯ ಸಿಗಲಿಕ್ಕೆ ಅವಕಾಶಗಳು ಒದಗಿ ಬರಲಿವೆ. ನಿಮ್ಮ ಮಕ್ಕಳ ಬಳಿ ತಾಳ್ಮೆಯಿಂದಲೇ ಮಾತನಾಡಿ. ತಂದೆ ತಾಯಿ ಒಂದೇ ರೀತಿಯಲ್ಲಿ ಮಕ್ಕಳ ಬಳಿ ಮಾತನಾಡಿದಾಗ ಅದ್ಭುತವಾದ ಒಳಿತಿನ ದಾರಿ, ಅವರಿಗೆ ಬದುಕಿನ ಸಂಪನ್ನತೆಯೊದಗಲು ತಳಹದಿ ಸಿಗುತ್ತದೆ. ಅವರಿಂದ ಶುಭ ಸುದ್ದಿ ಲಭ್ಯ.
ಶುಭ ಸಂಖ್ಯೆ : 2 ಶುಭ ದಿಕ್ಕು: ಉತ್ತರ
ಮೀನ: ಪ್ರಮೋಷನ್ ಪಡೆಯುವ ಸಾಧ್ಯತೆ
ವಿಶಾಲವಾದ ಭೂಮಿಯಲ್ಲಿ ಎಲ್ಲವನ್ನೂ ಮಾಡಿ ಗೆಲ್ಲುತ್ತೇನೆ ಎಂಬ ನಿಮ್ಮ ಅನಿಸಿಕೆ ಸೂಕ್ತವೇ ಆಗಿದೆ. ಆದರೆ ಒಮ್ಮೆಗೆ ಒಂದೇ ಕೆಲಸ ಮಾಡಿ. ದಿವ್ಯವಾದ ಹಾಗೂ ಅನೂಹ್ಯ ಮೂಲದ ಸಿದ್ಧಿಯನ್ನು ಶ್ರೀ ಗುರು ದತ್ತಾತ್ರಯ ಸ್ವಾಮಿ ಒದಗಿಸಲಿದ್ದಾನೆ. ಪ್ರಮೋಷನ್‌ಗಳಿಗೆ ಅವಕಾಶವಿದೆ. ಪ್ರಣಯದ ವಿಚಾರಗಳು ಚಂದ್ರ ಗ್ರಹದ ಕಾರಣದಿಂದಾಗಿ ಅವಸರದ ನಿರ್ಣಯಕ್ಕೆ ತಲುಪಲು ಅವಕಾಶ ಮಾಡಬಹುದು, ಎಚ್ಚರ ಇರಲಿ. ನಿಮ್ಮ ಹತ್ತಿರದ ಬಂಧುಗಳಲ್ಲಿ (ಎಲ್ಲರೂ ಅಲ್ಲ) ಕೆಲವರು ನಿಮ್ಮ ಲಾಭಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸಹಾಯ ಮಾಡುತ್ತಾರೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ
ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್ ನಂ.: 9632980996
ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?