Site icon Vistara News

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ಆತುರ ಬೇಡ, ಆತಂಕವೂ ಬೇಡ

ಭಾವನಾತ್ಮಕವಾದ ವಿಷಯದಲ್ಲಿ ಕೆಲವು ಸಲ ಕಠಿಣವಾಗಿ ವರ್ತಿಸುವ ವಿಚಾರವನ್ನು ಸೂಕ್ತವಾಗಿ ತೀರ್ಮಾನಿಸಿಯೇ ಅಂತಿಮ ನಿರ್ಧಾರಕ್ಕೆ ಬನ್ನಿ. ನಿಮ್ಮ ಆತುರದಿಂದ ಕೆಲವು ಮಹತ್ವದ ವ್ಯಕ್ತಿಗಳಿಂದ ಅನಾವಶ್ಯಕವಾಗಿ ದೂರವಾಗುವ, ಸ್ನೇಹ ಕಳೆದುಕೊಳ್ಳುವ ದುರಾದೃಷ್ಟ ಎದುರಾಗಬಹುದು. ಬೌದ್ಧಿಕವಾಗಿ ಇಡುವ ನಿಮ್ಮ ಆನೇಕ ಹೆಜ್ಜೆಗಳು ಹಲವಾರು ರೀತಿಯ ಲಾಭದ ವಿಚಾರಗಳಲ್ಲಿ ನಿಮಗೆ ಅನುಕೂಲ ಮಾಡಿಕೊಡಬಲ್ಲವು. ಉತ್ತರ ದಿಕ್ಕಿಗೆ ಪ್ರತಿ ದಿನ ಬೆಳಗ್ಗೆ ಒಂದು ಚಿಟಿಕೆ ಸಕ್ಕರೆ ಚೆಲ್ಲಿ, ಸಂಪತ್ತಿನ ಪ್ರಾಪ್ತಿಗೆ ಇದರಿಂದ ದಾರಿ ಲಭ್ಯ.
ಶುಭ ಸಂಖ್ಯೆ: 4 ಶುಭ ದಿಕ್ಕು: ವಾಯವ್ಯ

ವೃಷಭ: ಗಣೇಶನ ಆರಾಧನೆಯಿಂದ ಬದುಕು ಬದಲು

ಅಡಿಗಡಿಗೆ ಅಸಹಾಯಕ ಸ್ಥಿತಿ ಎದುರಿಸುವ ವರ್ತಮಾನ ನಿಶ್ಚಿತವಾದರೂ ಹಿರಿಯ ವ್ಯಕ್ತಿಗಳಿಂದ ನಿಮ್ಮ ಬದುಕಿನ ದಾರಿ ಬದಲಾಗಲೂ ಸದ್ಯದ ವರ್ತಮಾನ ತನ್ನ ಅಮೃತತ್ವವನ್ನು ನಿಮಗೆ ಧಾರೆ ಎರೆಯಬಹುದು. ಅಸಹಾಯಕ ಸ್ಥಿತಿಯನ್ನೋ, ಸವಾಲನ್ನೂ ಧೈರ್ಯದಿಂದ ಎದುರಿಸಿ ಗೆಲ್ಲಿ. ಕೆಂಪು ಪುಷ್ಪಗಳಿಂದ ನೀವು ಗಣಪತಿಯನ್ನು ಆರಾಧಿಸಿದರೆ ಹಣಕಾಸಿನ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಗೆ ನಿಶ್ಚಿತವಾದ ದಾರಿ ಗೋಚರಿಸಲು ಅನೇಕ ಸಾಧ್ಯತೆಗಳಿವೆ. ಉತ್ತರ ದಿಕ್ಕಿಗೆ ಮುಖಮಾಡಿ ಕುಳಿತು ಶಿವ ಸ್ತುತಿ ಮಾಡಿ. ಮಾನಸಿಕ ಸಮಾಧಾನ ಲಭ್ಯ.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ

ಮಿಥುನ: ಪ್ರಿಯವಾದ ಸತ್ಯವನ್ನಷ್ಟೇ ಮಾತನಾಡಿ!

ಕೆಲವು ಮಟ್ಟಿಗಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯವಾದೀತು. ಆರ್ಥಿಕತೆಯ ವಿಚಾರದಲ್ಲಿ ಸಂವರ್ಧನೆಗಾಗಿನ ದಾರಿ ನಮಗೆ ಗೋಚರಕ್ಕೆ ಬರುವುದು ದೈವ ಕೃಪೆಯ ಭಾಗವೇ ಆಗಿದೆ. ಕೆಲವು ಸಲ ದೃಢವಾದ ಮಾತುಗಳನ್ನು ಆಡಲು ಕಷ್ಟವಾಗಬಹುದು. ಆದರೆ ಪ್ರಿಯವಾದ ಸತ್ಯವನ್ನೇ ಬಹಿರಂಗಪಡಿಸಿ. ಅಪ್ರಿಯವಾದ ಸತ್ಯ ಹೇಳುವ ಸಂದರ್ಭ ಬಂದರೂ ಮೃದುವಾಗಿಯೇ ಹೇಳಿ. ನಿಮ್ಮ ಮಾತುಗಳಿಂದ ಎದುರಾಳಿಯ ಮನಃ ಪರಿವರ್ತನೆಗೆ ದಾರಿ ಇದೆ. ದುರ್ಗಾಷ್ಟಕ ಪಠಿಸಿ ಕ್ಷೇಮ ವಾಗಿರುತ್ತೀರಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ನೈಋತ್ಯ

ಕಟಕ: ನಿಮ್ಮ ವಿದ್ವತ್ತೇ ನಿಮಗೆ ವಜ್ರಾಯುಧ

ಲಾಭವನ್ನೇ ಕೊಡುವ ಜವಾಬ್ದಾರಿ ಹೊತ್ತ ಕುಜನಿಂದಾಗಿ ಅನೇಕ ಯೋಗಗಳಿವೆಯಾದರೂ ಆವರಿಸುವ ಅಷ್ಟಮ ಶನಿ ಕಾಟ, ಹತ್ತಿರ ಹತ್ತಿರ ಬರುವ ಒಳಿತುಗಳನ್ನು ಇನ್ನಿಲ್ಲದ ರೀತಿಯಲ್ಲಿ ವಿಳಂಬಿಸಲು ಮುಂದಾಗಿ ಗೋಳಾಟ ತರಬಹುದಾಗಿದೆ. ಶನೈಶ್ವರ ಸ್ವಾಮಿಯನ್ನು ಎದುರಿಸಿ ನಿಲ್ಲಲು ಸಾಧ್ಯವಿಲ್ಲವಾದರೂ, ನ್ಯಾಯದ ದಾರಿಯಲ್ಲಿ ಆತ್ಮಸ್ಥೈರ್ಯ ಇದ್ದರೆ ವರ್ತಮಾನದಲ್ಲಿ ಹಲವು ರೀತಿಯ ನಿರಾಸೆಗಳಿಂದ ಹೊರ ಬರಲು ಸಾಧ್ಯತೆ ಅಧಿಕ. ನಿಮ್ಮ ವಿದ್ವತ್ತಿನ ಬಲವೇ ನಿಮ್ಮ ವಜ್ರಾಯುಧ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ

ಸಿಂಹ: ಹೊಸ ಬಂಡವಾಳ ಹೂಡಿಕೆ ಬೇಡ

ಹೂಂಕರಿಸುವ ತುರ್ತು ಎದುರಾದರೂ ಸಿಂಹವಾಗಿ ಜಿಗಿದು ಗೆಲ್ಲಲು ಅದೃಷ್ಟ ಕೈ ಕೊಡುತ್ತಿರುವ ಕಾಲವಾಗಿದೆ. ಹೇಗೋ ಸುಧಾರಿಸಿಕೊಂಡು ಹೋಗುವ ಬುದ್ಧಿಮತ್ತೆ ಪ್ರದರ್ಶಿಸುವ ಅವಸರದಲ್ಲಿ ಕಾಯಕಲ್ಪ ಮಾಡಲು ಸಾಧ್ಯವಿರದ ಕೈಗಾರಿಕೆ, ವ್ಯಾಪಾರ, ವ್ಯವಹಾರಕ್ಕೆ ಹೊಸ ಬಂಡವಾಳವನ್ನು ಸುರಿಯುವ ಕೆಲಸ ಮಾಡದಿರಿ. ದೂರ್ವಾಂಕುರಗಳನ್ನು, ಕೆಂಪು ಹೂಗಳನ್ನು ಏರಿಸಿ ಗಣೇಶನನ್ನು ಆರಾಧಿಸಿ. ಸರ್ವಸ್ವವನ್ನೂ ಗೆಲ್ಲಿಸಿ ಜಿಗಿಸುವ ನಿಟ್ಟಿನತ್ತ ಗಣೇಶನ ಅನುಗ್ರಹ ನಿಮ್ಮ ಪಾಲಿಗೆ ಸಂಜೀವಿನಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಪೂರ್ವ

ಕನ್ಯಾ: ಕೃಷ್ಣನಿಂದ ಕೆಲಸದ ಸ್ಥಳದಲ್ಲಿ ಕಿರಿಕಿರಿ ದೂರ

ಮಾತು ನಿಯಂತ್ರಣದಲ್ಲಿರುವುದು ಆವಶ್ಯಕ. ಬಾಳ ಸಂಗಾತಿಯಿಂದ ಒಳಿತಿದೆ. ಅಗಾಧವಾದ ರೀತಿಯಲ್ಲಿಯೇ ಒಳಿತಿನ ಒಟ್ಟೂ ಮೊತ್ತ ನಿಮ್ಮ ಪಾಲಿನ ಸುರಕ್ಷೆಯೇ ಆಗಿದೆ. ಕೆಲವು ಶತ್ರುಗಳು ವಾಸ್ತವಕ್ಕೂ ಅಪಾಯಕಾರಿಯೇ ಆಗಿರುತ್ತಾರೆ. ಆದರೆ ಸೋತು ನಡೆಯಿರಿ. ಪರಿಣಾಮದಲ್ಲಿ ಲಾಭವೇ ಪ್ರಾಪ್ತಿಯಾಗಲು ಶತ್ರುಗಳಿಂದಲೂ ಲಾಭ ಒದಗಿ, ಅದೃಷ್ಟದ ವಿಷಯವಾಗಿರುತ್ತದೆ. ರಾಹುವು ವಿಷಮ ಸ್ಥಾನ ಸಂಭೂತನಾಗಿ ಇರುವುದರಿಂದ ತುಳಸೀದಳಗಳಿಂದ ಶ್ರೀ ಕೃಷ್ಣನನ್ನು ಆರಾಧಿಸಿ. ಕೆಲಸದ ಸ್ಥಳದಲ್ಲಿನ ಕಿರಿಕಿರಿ ಇದರಿಂದ ದೂರ.
ಶುಭ ಸಂಖ್ಯೆ : 2 ಶುಭ ದಿಕ್ಕು: ವಾಯವ್ಯ

ತುಲಾ: ಒತ್ತಡಗಳಿರುವ ವಾರ

ತಕ್ಕಡಿಯ ಪರಡಿಗಳು ತೂಗಾಡುತ್ತಲಿವೆ. ಬಿರುಸಿನ ಮಾತು ಬೇಡವೇ ಬೇಡ. ಲಾಭವೇ ಮಾತಿನಿಂದ ಇನ್ನಷ್ಟು ಕಡಿತಗಳು ಹಣಕಾಸಿನ ವಿಷಯದಲ್ಲಿ ಸಾಧ್ಯವಾದೀತು ಎಚ್ಚರ. ಪರಿಣಾಮಕಾರಿಯಾದ ಬುಧನು ಒಣಗಿದ ಶುಷ್ಕ ಭೂಮಿಯಲ್ಲೂ ಕೆಲವು ನಳನಳಿಸುವ ಹಸಿರಿನ ಚಿಗುರು, ಸಸ್ಯ, ಬಳ್ಳಿಗಳನ್ನು ಚಿಗುರಿಸಿ ಮನದ ಉಲ್ಲಾಸಕ್ಕೆ ಕಾರಣನಾಗುತ್ತಾನೆ. ಕಾರ್ಯವಾಸಿ ಕತ್ತೆ ಕಾಲು ಎಂಬುದನ್ನು ತಿಳಿದಿರಿ. ನಿಮಗೆ ಇದರಿಂದಾಗಿ ಬಿರು ಬಿಸಿಲಿನ ಮಾರ್ಗದಲ್ಲೂ ತಂಗಾಳಿ ತೂರಿ ಬರಬಹುದು. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ದಕ್ಷಿಣ

ವೃಶ್ಚಿಕ: ಮಾತಿನಿಂದಲೇ ಗೆಲುವು

ತಂಗಾಳಿ ಬೀಸೋ ಸಮಯ ಹೌದಾದರೂ ತಂಗಾಳಿಯಲ್ಲಿನ ಹೆಚ್ಚು ಓಡಾಟ, ನಡೆದಾಟಗಳು ಕೌಟುಂಬಿಕ ಅಂಶಗಳ ನಿಟ್ಟಿನಲ್ಲಿ ಸಣ್ಣ ಬಿರುಗಾಳಿಯನ್ನು ಎಬ್ಬಿಸಲೂ ಸಾಧ್ಯ. ಮುಖ್ಯವಾಗಿ ರವಿಯೂ ಶನೈಶ್ವರನನ್ನು ಪರಸ್ಪರ ಯುದ್ಧದಲ್ಲಿ ಸಂಪೂರ್ಣವಾಗಿ ಮುಳುಗಿರುವ ಕಾರಣ ಕೆಲವು ಧೈರ್ಯ ಕಳಕೊಳ್ಳುವ ಸಂದರ್ಭವನ್ನು ನೀವು ಎದುರಿಸುವ ಸಾಧ್ಯತೆ ಇರುತ್ತದೆ. ಆದರೂ ಮೇಧಾವಿಗಳಾದ ನೀವು ನಿಮ್ಮ ಪ್ರತಿಭಾ ಪೂರ್ಣವಾದ ಮಾತಿನಿಂದಲೇ ಉಂಟಾಗುವ ಅಸಮತೋಲನ ನೀಗಿಸಿಕೊಳ್ಳಬಲ್ಲಿರಿ. ನರಸಿಂಹನ ಸ್ತುತಿ ಉತ್ತಮ.
ಶುಭ ಸಂಖ್ಯೆ : 1 ಶುಭ ದಿಕ್ಕು: ಪಶ್ಚಿಮ

ಧನಸ್ಸು: ಪಾರ್ವತಿಯೇ ನಿಮಗೆ ರಕ್ಷಾ ಕವಚ!

ಹಲವು ರೀತಿಯ ಲಾಭಗಳು ನಿಮ್ಮ ದೈನಂದಿನ ವಸ್ತು ಸ್ಥಿತಿಯಾಗಲು ಕಾಲ ಈಗ ಪಕ್ವವಾಗಿದೆ. ಹೊಟೇಲ್‌ ಬ್ಯುಸಿನೆಸ್‌, ಸಾಫ್ಟ್‌ವೇರ್‌ ಎಂಜಿನಿಯರಿಂಗ್‌, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಮನಸ್ಸು ಮಾಡುವ ಸಿನಿಮಾ ರಂಗ, ಕಿರು ತೆರೆಯಲ್ಲಿ ಮಿಂಚುವ ಅಭಿಲಾಷೆ ಹೊತ್ತವರಿಗೆ ಇದು ಪರ್ವಕಾಲ. ಆದರೆ ಕೆಲಸದ ಸ್ಥಳದಲ್ಲಿ ಹುಳಿ ಹಿಂಡುವ ಜನ ಇರಲಾರರು ಎಂದೇನಲ್ಲ. ಆದರೆ ಸಕಲ ಅಭ್ಯುದಯಗಳಿಗಾಗಿನ ಕಲಶಗಳನ್ನು ಕೈಯಲ್ಲಿ ಹಿಡಿದ ಸರ್ವ ಮಂಗಳೆ ಪಾರ್ವತಿ ನಿಮಗೆ ರಕ್ಷಾ ಕವಚವಾಗಿದ್ದಾಳೆ. ಅವಳನ್ನು ಆರಾಧಿಸಿ, ಗೆಲುವಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ಉತ್ತರ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಬಾಯಿ ಮಾತಿಗೆ ಮರುಳಾಗದಿರಿ

ಬಹು ನಿರೀಕ್ಷೆಯ ಸಂಗತಿಗಳು ತಿಳಿದ ವೇಗದಲ್ಲಿ ಸಫಲತೆ ಹೊಂದಲು ಕಷ್ಟ ಆಗಬಹುದು. ಹೆಡೆ ತೆರೆದೇ ಇರುವ ರಾಹು ಸುಖ ಸ್ಥಾನವನ್ನು ದುರ್ಬಲಗೊಳಿಸುತ್ತಲೇ ಇದ್ದ ವಿಚಾರ ನಿಮಗೆ ಈಗ ಒದಗಿದ ವಸ್ತು ಸ್ಥಿತಿಯಲ್ಲ. ಹೀಗಾಗಿ ಹಗಲು ಕನಸು ಕಾಣದಿರಿ. ನೀರು ಸಿಗಲೇ ಬೇಕೆಂಬ ಸ್ಥಳದಲ್ಲಿ ನೀರು ಸಿಗದೇ ಹೋದಾಗ ನಿರಾಸೆಯ ಕ್ರೌರ್ಯ ಸಹಿಸಲಸದಳ. ಇದನ್ನು ಅರಿತೇ ಚಾತುರ್ಯದ ಹೆಜ್ಜೆ ಇರಿಸಿ. ನಿಮ್ಮನ್ನು ಯಾಮಾರಿಸಲುವ ಜನ ಜಾಸ್ತಿ. ಯೋಚಿಸದೇ ಬಾಯಿ ಮಾತಿಗೆ ಮರುಳಾಗದಿರಿ. ರಾಮ ರಕ್ಷ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಈಶಾನ್ಯ

ಕುಂಭ: ಆರ್ಥಿಕ ವಿಚಾರದಲ್ಲಿ ಶಿಸ್ತು ಇರಲಿ

ಸುಲಭವಾಗಿ ಗೆಲ್ಲುವ ಕೆಲಸಗಳು ಹಾಗೆ ಸುಲಭವಲ್ಲ ಎಂಬ ಸತ್ಯದ ಅರಿವು ವೇದ್ಯವಾಗುತ್ತವೆ. ಆರ್ಥಿಕ ವಿಚಾರದಲ್ಲಿ ಶಿಸ್ತು, ನ್ಯಾಯ ಇರಲಿ. ಸಂಪಾದಿಸಬಲ್ಲಿರಿ. ಕೆಲವು ಉಳಿತಾಯಗಳಿಗೂ ದಾರಿ ಸಾಧ್ಯ. ಕೆಲಸದ ಸ್ಥಳದಲ್ಲಿನ ನೆಲ ಅದುರುವ ಅನುಭವ ವೇದ್ಯವಾಗುತ್ತದೆ. ಆದರೆ ಶಾಂತವಾಗಿರಿ. ಯಾವುದೂ ಅನಿವಾರ್ಯವಲ್ಲ. ಯಾರೂ ಅನಿವಾರ್ಯವಲ್ಲ. ಜಗದ ಸಮಸ್ತ ಆಧಾರನಾದ ಮಹಾವಿಷ್ಣುವನ್ನು ಆರಾಧಿಸಿ, ಅರಿಷ್ಟಗಳು ಸುಟ್ಟು ಕರಗಲು ಶಿವನನ್ನು ಸ್ತುತಿಸಿ. ಜಗನ್ಮಾತೆ ಮಹಾಲಕ್ಷ್ಮೀಯನ್ನು ಸ್ತುತಿಸಿ, ಲಾಭ ಇದೆ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪಶ್ಚಿಮ

ಮೀನ: ಒತ್ತಡ, ಗೊಂದಲಗಳಿರುವ ವಾರ

ಎನಗೆ ಎದುರಿಲ್ಲ ಎಂದು ಸರಳವಾಗಿ, ನಿಶ್ಚಿತವಾದ ಗುರಿಯನ್ನು ತೊಡಕುಗಳಿರದೆ ತಲುಪಿಸಲು ಸಹಾಯ ಮಾಡುತ್ತಿದ್ದ ದಿನಗಳು ಎಲ್ಲಿಗೆ ಹೋದವು ಎಂಬುದರ ಬಗ್ಗೆ ಸಮಸ್ಯೆ ಎದ್ದಿರುವ ಕಾಲ ಇದು. ಎದ್ದೇಳದಿದ್ದರೆ, ಸರ್ರನೆ ಎದ್ದೇಳಲು ಇದೀಗ ಸಮಯವಾಗಿದೆ. ಎಚ್ಚರ ಇರಲಿ, “ಚಲ್ತಾ ಹೈ ಧೋರಣೆʼʼಗಳಿಂದ ಬಾಧೆಗಳೇ ಜಾಸ್ತಿ. ಗುರಿ ತಲುಪಲು ಆಲಸ್ಯವಿರದೆ ಕೆಲಸ ಮಾಡಿ. ಶ್ರಮದ ಪರಿಣಾಮವಾದ ಪೂರ್ತಿ ಲಾಭ ಅಶಕ್ಯವೇ ಆದರೂ ಹಲವರ ಸಂತಾಪ, ಕ್ಲಪ್ತ ಸಂರ್ಭದ ಬೆಂಬಲ ಲಭ್ಯವಿದೆ. ಹನುಮಾನ್‌ ಚಾಲೀಸ್‌ ಓದಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಉತ್ತರ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version