Site icon Vistara News

ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?

ಜ್ಯೋತಿಷ ಶಾಸ್ತ್ರದಲ್ಲಿ ಶುಕ್ರ ಗ್ರಹ ಐದನೇ ಸ್ಥಾನದಲ್ಲಿರುವ ಗ್ರಹ. ಶುಕ್ರ ಗ್ರಹ ಅನೇಕ ಶುಭಫಲಗಳನ್ನು ಪ್ರಾಪ್ತಿಸುತ್ತಾನೆ. ವಿವಿಧ ಸ್ಥಾನಗಳಲ್ಲಿ ಇದ್ದಾಗ ವಿವಿಧ ಫಲಗಳನ್ನು ನೀಡುತ್ತಾನೆ. ಶುಕ್ರಗ್ರಹ ಯಾವ ಮನೆಯಲ್ಲಿದ್ದರೆ ಯಾವೆಲ್ಲಾ ಫಲ ನೀಡುತ್ತಾನೆ ಎಂಬ ಮಾಹಿತಿ ಇಲ್ಲಿದೆ;

ಭಾವಾಶ್ರಿತ ರಾಶಿಫಲ

ಶುಕ್ರಗ್ರಹವು ಜಾತಕದ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ಈ ಜಾತಕದವರು ಆಕರ್ಷಕ ಮೈಕಟ್ಟು ಹೊಂದಿರುತ್ತಾರೆ ಹಾಗೂ ಆರೋಗ್ಯವಂತ ಶರೀರವುಳ್ಳುತ್ತಾರೆ. ಈ ಜಾತಕದವರು ಸಾಮಾನ್ಯವಾಗಿ ದೀರ್ಘ ಆಯಸ್ಸಿನವರಾಗಿರುತ್ತಾರೆ.

ದ್ವಿತೀಯ ಸ್ಥಾನದಲ್ಲಿ ಶುಕ್ರನಿದ್ದರೆ ಧನಸಂಪತ್ತನ್ನು ಹೊಂದುತ್ತಾರೆ. ಇವರಿಗೆ ಭಾಷಾಜ್ಞಾನ ಪ್ರಾಪ್ತಿಯಾಗಿರುತ್ತದೆ ಹಾಗೂ ಕವಿಯಾಗುವ ಗುಣ ಇರುತ್ತದೆ. ಇವರು ವೈಭವದಿಂದ ಬದುಕುವವರಾಗಿರುತ್ತಾರೆ.

ತೃತಿಯ ಭಾವದಲ್ಲಿರುವ ಶುಕ್ರ ಶುಭಫಲಗಳನ್ನು ನೀಡುವುದಿಲ್ಲ. ಈ ಜಾತಕದವರು ಪತ್ನಿ, ಸುಖ, ಸಂಪತ್ತಿನಿಂದ ಹೀನರಾಗಿರುತ್ತಾರೆ. ಈ ಜಾತಕದವರನ್ನು ಜನರು ತಿರಸ್ಕೃತ ದೃಷ್ಟಿಯಿಂದ ನೋಡುತ್ತಾರೆ.

ಚರ್ತುರ್ಥಭಾವದಲ್ಲಿ ಶುಕ್ರ ಸರ್ವಸಂಪತ್ತನ್ನು ಅನುಗ್ರಹಿಸುತ್ತಾನೆ. ಸುಂದರವಾದ ಮನೆ, ವಾಹನ, ಆಭೂಷಣಗಳು ಈ ಜಾತಕದವರ ಪಾಲಿಗಿರುತ್ತದೆ. ಸುಗಂಧ ದ್ರವ್ಯ ಕೂಡ ಈ ಜಾತಕದವರಿಗೆ ಪ್ರಾಪ್ತಿಯಾಗಲಿದೆ.

ಶುಕ್ರನು ಪಂಚಮ ಭಾವದಲ್ಲಿದ್ದರೆ ಮೇಧಾವಿಯಾಗಿರುತ್ತಾರೆ. ಇವರು ರಾಜಸಮಾನರಾದ ವೈಭವಶಾಲಿಯಾಗಿರುತ್ತಾರೆ ಹಾಗೂ ವಿಪುಲ ಧನ ಸಂಪತ್ತು ಹೊಂದಿರುವವರಾಗಿರುತ್ತಾರೆ. ಇವರಿಗೆ ಸತ್ಪುತ್ರರು ಪ್ರಾಪ್ತಿಯಾಗಲಿದ್ದು, ಸದಾ ಸುಖಿಯಾಗಿರುತ್ತಾರೆ.

ಷಷ್ಟಮದಲ್ಲಿ ಶುಕ್ರನಿರುವ ಜಾತಕದವರಿಗೆ ಶತ್ರುಗಳಿರುವುದಿಲ್ಲ. ಆದರೆ, ಇವರು ಧನಹೀನನಾಗಿರುತ್ತಾರೆ. ಜೀವನದಲ್ಲಿ ಅನೇಕ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ಉಂಟಾಗುತ್ತದೆ, ಮುಖ್ಯವಾಗಿ ಸ್ತ್ರೀಯರ ಮೂಲಕ ಚಾರಿತ್ರ್ಯವಧೆ ಹೊಂದುವ ಸಾಧ್ಯತೆಯಿರುತ್ತದೆ. ಈ ಜಾತಕದವರ ಶರೀರವು ಜರ್ಜರಿತವಾಗುತ್ತದೆ.

ಶುಕ್ರನು ಸಪ್ತಮಭಾವದಲ್ಲಿದ್ದರೆ ಮನಸ್ಸಿನ ಮೇಲೆ ನಿಯಂತ್ರಣವಿರುವುದಿಲ್ಲ. ಸುಂದರವಾದ ಪತ್ನಿಯಿದ್ದರೂ ಇತರ ಸ್ತ್ರೀಯರಲ್ಲಿ ಆಸಕ್ತಿಯುಳ್ಳುತ್ತಾರೆ. ಇವರಿಗೆ ಧನಸಂಪತ್ತು ಲಭಿಸಿ ಶ್ರೀಮಂತರಾಗಿರುತ್ತಾರೆ. ಆದರೆ, ತನ್ನ ಪತ್ನಿಯನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾಗುತ್ತದೆ.

ಅಷ್ಟಮದ ಶುಕ್ರನು ಜಾತಕದವರಿಗೆ ದೀರ್ಘ ಆಯಸ್ಸು ಕರುಣಿಸುತ್ತಾನೆ. ಬಾಳಿನಲ್ಲಿ ಧನಿಕರಾಗಿರುತ್ತಾರೆ ಹಾಗೂ ಜಮೀನಿನ ಯಜಮಾನರಾಗುವ ಅವಕಾಶವಿರುತ್ತದೆ.

ನವಮ ಭಾವದಲ್ಲಿರುವ ಶುಕ್ರ ಜಾತಕರಿಗೆ ರಾಜಕೃಪೆಗೆ ಪಾತ್ರರಾಗುವಂತೆ ಮಾಡುತ್ತಾನೆ. ಅಧಿಕ ಧನ-ಧಾನ್ಯ ಸಂಪತ್ತು ಹೊಂದಿರುವ ಭಾಗ್ಯವಂತರಾಗುತ್ತಾರೆ. ಪತ್ನಿ, ಪುತ್ರರು ಹಾಗೂ ಬಾಂಧವರಿಂದ ಯುಕ್ತರಾಗಿರುತ್ತಾರೆ.

ದಶಮದಲ್ಲಿ ಶುಕ್ರನಿರುವಾಗ ಬಂಧು ಬಾಂಧವರು ಹಾಗೂ ಸೇವಕರೊಂದಿಗೆ ಸುಖವಾಗಿರುವ ಬದುಕು ಲಭಿಸಿಯತ್ತದೆ. ಯಶಸ್ವಿ ಜೀವನ ಇವರದ್ದಾಗಿರುತ್ತದೆ. ಒಳ್ಳೆಯ ವ್ಯವಸಾಯ ಹೊಂದಿರುತ್ತಾರೆ ಹಾಗೂ ಅನೇಕ ಆಶ್ರಿತರ ಪಾಲಕರಾಗಿರುತ್ತಾರೆ.

ಶುಕ್ರನು ಏಕಾದಶ ಭಾವದಲ್ಲಿದ್ದರೆ ಪರಸ್ತ್ರೀಯರಲ್ಲಿ ಆಸಕ್ತಿಯಿರುವ ಮನೋಭಾವದವರಾಗಿರುತ್ತಾರೆ. ಇವರು ಧನವಂತರಾಗಿ ಸುಖವಾಗಿ ಬದುಕುವಂತಾಗುತ್ತದೆ.

ದ್ವಾದಶ ಸ್ಥಾನದಲ್ಲಿ ಶುಕ್ರನು ವಿಪುಲ ಧನಸಂಪತ್ತು ಪ್ರಾಪ್ತಿಸುತ್ತಾನೆ. ವೈಭವದ ಜೀವನ ಇವರದ್ದಾಗಿರುತ್ತದೆ ಹಾಗೂ ರತಿಸುಖವುಳ್ಳನಾಗಿರುತ್ತಾರೆ.

ಇದನ್ನೂ ಓದಿ: ಗುರು ಗ್ರಹ ನೀಡುವ ಭಾವಫಲಗಳ ಬಗ್ಗೆ ಮಾಹಿತಿ ಇದೆಯೇ?

Exit mobile version