Site icon Vistara News

Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

Amith Sha

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದೊಂದಿಗೆ 550 ವರ್ಷಗಳ ಕಾಯುವಿಕೆ ಜನವರಿಯಲ್ಲಿ ಕೊನೆಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha ) ಗುರುವಾರ ಹೇಳಿದ್ದಾರೆ. ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಲ್​​ನಲ್ಲಿ ನಡೆದ ಅಂತ್ಯೋದಯ ಮಹಾಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಶಾ, “ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಯೋಜನೆಯಡಿ ಮುಂದಿನ ವರ್ಷ ಅಯೋಧ್ಯೆಗೆ ಮೊದಲ ಭೇಟಿ ನೀಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದು ಹೇಳಿದರು.

ರಾಮಮಂದಿರ ಮುಂದಿನ ಜನವರಿಯಲ್ಲಿ ಉದ್ಘಾಟನೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಆ ಬಳಿಕ ಮಂದಿರವು ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ. ಹಲವು ವರ್ಷಗಳ ವಿವಾದದ ಬಳಿಕ ಮೋದಿ ನೇತೃತ್ವದ ಸರ್ಕಾರ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿತ್ತು. ಅದಕ್ಕಿಂತ ಮೊದಲು ಸುಪ್ರೀಂ ಕೋರ್ಟ್​ ಮಂದಿರ ವ್ಯಾಜ್ಯವನ್ನು ಬಗೆ ಹರಿಸಿತ್ತು. ಬಿಜೆಪಿ ಸರಕಾರವು ಮಂದಿರ ನಿರ್ಮಾಣಕ್ಕೆ ಸರ್ವ ಪ್ರಯತ್ನ ಮಾಡಿದೆ. ಹೀಗಾಗಿ ಅಮಿತ್ ಶಾ ಅವರು ಇದು 550 ವರ್ಷಗಳ ಕನಸು ಎಂದು ಹೇಳಿದ್ದಾರೆ.

ಈ ಯೋಜನೆಯು ರಾಜ್ಯ ಸರ್ಕಾರದ ಐದು ಹೊಸ ಉಪಕ್ರಮಗಳಲ್ಲಿ ಒಂದಾಗಿದೆ. ಹರಿಯಾಣದಲ್ಲಿ ಅಧಿಕಾರ ಪಡೆದ ಒಂಬತ್ತು ವರ್ಷಗಳ ಸಂಭ್ರಮಾಚರಣೆಯನ್ನು ಸರ್ಕಾರದಯೋಜನೆಗಳ ಫಲಾನುಭವಿಗಳೊಂದಿಗೆ ಆಚರಿಸುತ್ತಿರುವುದು ಅತ್ಯಂತ ಅಪರೂಪದ ಕ್ಷಣ ಎಂದು ಹೇಳಿದರು.

ಇದನ್ನೂ ಓದಿ: Onion Price: ಕೇಂದ್ರ ಸರ್ಕಾರದಿಂದಲೇ ಕಿಲೋ 25 ರೂ.ಗೆ ಈರುಳ್ಳಿ ಮಾರಾಟ; ಎಲ್ಲಿ ನೋಡಿ

“ಹರಿಯಾಣವು ಕನಿಷ್ಠ ಬೆಂಬಲ ಬೆಲೆಯಲ್ಲಿ 14 ಬೆಳೆಗಳನ್ನು ಖರೀದಿಸುತ್ತದೆ. ಇದು ದೇಶದಲ್ಲೇ ಅತಿ ಹೆಚ್ಚು ಎಂಬ ದಾಖಲೆ ಹೊಂದಿದೆ. ಹರಿಯಾಣವು ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ಮಾಡುತ್ತಿದೆ. ಕುರುಕ್ಷೇತ್ರದಲ್ಲಿ ಮೊದಲ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಕ್ರೀಡೆ, ಸಶಸ್ತ್ರ ಪಡೆಗಳು ಮತ್ತು ಡೈರಿ ಉದ್ಯಮಗಳಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ಶಾ ಹೇಳಿದರು.

ವಿರೋಧ ಪಕ್ಷಗಳ ದುರಾಡಳಿತದ ಬಗ್ಗೆ ಅಮಿತ್​ ಶಾ ವಾಗ್ದಾಳಿ ನಡೆಸಿದರು. “ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಅಭಿವೃದ್ಧಿ ಅರಿವೇ ಇಲ್ಲ. ಅವರ ಆಡಳಿತಾವಧಿಯಲ್ಲಿ, ವ್ಯಾಪಕ ಭ್ರಷ್ಟಾಚಾರವಿತ್ತು. ದಮದ್ ಜಿ (ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ) ಮಾತ್ರ ಲಾಭ ಪಡೆದುಕೊಂಡಿದ್ದರು. ಜತೆಗೆ (ಓಂ ಪ್ರಕಾಶ್) ಚೌಟಾಲಾ ಅವರ ಆಡಳಿತದಲ್ಲಿ, ಆಪ್ತರಿಗೆ ಮಾತ್ರ ಉದ್ಯೋಗ ಸಿಕ್ಕಿತು ಎಂದು ಅವರು ಹೇಳಿದರು.

“ಕಾಂಗ್ರೆಸ್ ಭ್ರಷ್ಟಾಚಾರ, ಕಮಿಷನ್ ಪಕ್ಷವಾಗಿದೆ. ಪಕ್ಷದ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗಕ್ಕಾಗಿ ಕೆಲಸ ಮಾಡಿದೆ” ಎಂದು ಅಮಿತ್ ಶಾ ಹೇಳಿದ್ದಾರೆ. ಹೇಳಿದರು.

ಇಂಡಿಯಾ ಒಕ್ಕೂಟದ ಬಗ್ಗೆ ವಿರೋಧ

ವಿರೋಧ ಪಕ್ಷಗಳ ಭಾರತ ಮೈತ್ರಿಯ ಬಗ್ಗೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ವಿರುದ್ಧ 27 ರಾಜಕೀಯ ಪಕ್ಷಗಳ ಘಮಾಂಡಿಯಾ ಘಟಬಂಧನ್ ರಚನೆ ಮಾಡಿದ್ದಾರೆ. ಎಲ್ಲರೂ ಸ್ವಾರ್ಥಿಗಳು. ಕೆಲವರು ಪ್ರಧಾನಿಯಾಗಲು ಬಯಸುತ್ತಾರೆ, ಕೆಲವರು ತಮ್ಮ ಮಗ ಪ್ರಧಾನಿ ಅಥವಾ ಸಿಎಂ ಆಗಬೇಕೆಂದು ಬಯಸುತ್ತಾರೆ ಮತ್ತು ಕೆಲವರು ತನಿಖಾ ಸಂಸ್ಥೆಗಳಿಂದ ತಲೆಮರೆಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಪಿಂಚಣಿ ಘೋಷಣೆ

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಜನವರಿ 1 ರಿಂದ ಸಾಮಾಜಿಕ ಪ್ರಯೋಜನ ಯೋಜನೆಗಳ ಅಡಿಯಲ್ಲಿ ಪಿಂಚಣಿಯನ್ನು 2,750 ರೂ.ಗಳಿಂದ 3,000 ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದರು. ಇದರಲ್ಲಿ ವೃದ್ಧಾಪ್ಯ ಪಿಂಚಣಿ ಮತ್ತು ವಿಧವಾ ಪಿಂಚಣಿ ಸೇರಿವೆ. “ನಾವು ವಿವಿಧ ವಿಭಾಗಗಳಲ್ಲಿ 30 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ನೀಡುತ್ತಿದ್ದೇವೆ ಮತ್ತು ನಮ್ಮ ಭರವಸೆಗಳಲ್ಲಿ 95% ಅನ್ನು ಪೂರ್ಣಗೊಳಿಸಿದ್ದೇವೆ” ಎಂದು ಅವರು ಹೇಳಿದರು.

ತಮ್ಮ ಭಾಷಣದಲ್ಲಿ ಖಟ್ಟರ್, “ಜಾತಿ ರಾಜಕೀಯಕ್ಕೆ ಸಂಬಂಧಿಸಿದಂತೆ ಹೊಸ ಪ್ರವೃತ್ತಿ ಶುರುವಾಗಿದೆ. ಇಲ್ಲಿ, ರಾಜಕೀಯ ಪಕ್ಷಗಳು ಈ ಜಾತಿ ಅಥವಾ ಆ ಜಾತಿಯ ಉಪಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ ಎಂದು ಘೋಷಿಸುತ್ತವೆ. ಆದರೆ ನಾವು ಶ್ರೀಮಂತ ಮತ್ತು ಬಡವರು ಎಂಬ ಎರಡು ಜಾತಿಗಳ ನಡುವೆ ಮಾತ್ರ ವ್ಯತ್ಯಾಸವನ್ನು ತೋರಿಸಿದ್ದೇವೆ” ಎಂದು ಖಟ್ಟರ್ ಹೇಳಿದರು.

Exit mobile version