Site icon Vistara News

7 Star Sultan: 7 ಸ್ಟಾರ್‌ ಸುಲ್ತಾನ್‌ ಟಗರು ಕುರ್ಬಾನಿ ರದ್ದು; ಹಸುಗೂಸಿನೊಂದಿಗೆ ಬಂದ ಬಾಣಂತಿ

7 star Sultan Tagaru

ಬಾಗಲಕೋಟೆ: ಇಲ್ಲಿನ ಸುತಗುಂಡಾರ ಗ್ರಾಮದ 7 ಸ್ಟಾರ್ ಸುಲ್ತಾನ್ (7 Star Sultan) ಎಂದೇ ಖ್ಯಾತಿ ಪಡೆದಿರುವ ಟಗರನ್ನು ಬಕ್ರೀದ್‌ (Eid al Adha) ಸಮಯದಲ್ಲಿ ಬಲಿ ಕೊಡಲು ಮಾಲೀಕರು ನಿರ್ಧರಿಸಿದ್ದರು. ಆದರೆ ಸೋಶಿಯಲ್‌ ಮೀಡಿಯಾದಲ್ಲಿ 7 ಸ್ಟಾರ್ ಸುಲ್ತಾನ್ ಅಭಿಮಾನಿಗಳಿಂದ ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಬಲಿ ಕೊಡುವ ನಿರ್ಧಾರದಿಂದ ಮಾಲೀಕ ಹಿಂದೆ ಬರುತ್ತಿದ್ದಂತೆ ಸಂತಸಗೊಂಡಿರುವ ಅಭಿಮಾನಿಗಳು 7 ಸ್ಟಾರ್ ಸುಲ್ತಾನ್ ನೋಡಲು ಮುಗಿಬಿದ್ದಿದ್ದಾರೆ.

40 ದಿನದ ಹಸುಗೂಸು ಜತೆಗೆ 7 ಸ್ಟಾರ್ ಸುಲ್ತಾನ್ ಟಗರು ನೋಡಲು ಮಹಿಳೆಯೊಬ್ಬರು ಬಂದಿದ್ದರು. ಶೀರಾದಿಂದ ಬೆಂಗಳೂರಿಗೆ ಬಂದ ಅಭಿಮಾನಿ ಆಶಾ ಕೃಷ್ಣ ಕೌಡಿಮಟ್ಟಿ ಎಂಬುವವರು ಹಸುಗೂಸು ಜತೆಗೆ ಬಂದಿದ್ದರು. ಸುಲ್ತಾನ್ ಜತೆಗೆ ಫೋಟೊ ತೆಗೆಯಿಸಿಕೊಂಡು ಖುಷಿ ಪಟ್ಟರು.

ಮಗುವಿನೊಂದಿಗೆ ಬಂದು 1 ಸ್ಟಾರ್‌ ಸುಲ್ತಾನ್‌ ಟಗರು ಜತೆಗೆ ಫೋಟೊ ಕ್ಲಿಕ್ಕಿಸಿಕೊಂಡ ಅಭಿಮಾನಿ

ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಮಾಲೀಕ

7 ಸ್ಟಾರ್ ಸುಲ್ತಾನ್ (7 Star Sultan) ಹೆಸರಿನ ಟಗರನ್ನು ಜೂನ್‌ 29ರ ಬಕ್ರೀದ್ ಹಬ್ಬಕ್ಕೆ (Bakrid) ಕುರ್ಬಾನಿ ಅಂದರೆ ಬಲಿ ಕೊಡಲು ಮಾಲೀಕ ಯುನೀಸ್ ಮುಂದಾಗಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ 7 ಸ್ಟಾರ್ ಸುಲ್ತಾನ್ ಬಲಿ ಕೊಡುವ ವಿರುದ್ಧ ಅಭಿಯಾನ ಶುರುವಾಗಿತ್ತು. ಅನೇಕ ಅಭಿಮಾನಿಗಳು ಟಗರನ್ನು ಬಲಿಕೊಡಬೇಡಿ ಎಂದು ಮನವಿ ಮಾಡಿದ್ದರು. ಜನರ ಪ್ರೀತಿಗೆ ಮನಸೋತ ಮಾಲೀಕ ಯುನೀಸ್‌ ಮನಸ್ಸು ಬದಲಾಯಿಸಿದ್ದರು.

ಕನ್ನಡದ ಟಗರು ಪಲ್ಯ ಚಿತ್ರದಲ್ಲಿ ನಟಿಸಿದ್ದ 7 ಸ್ಟಾರ್ ಸುಲ್ತಾನ್

ಡಾಲಿ ಧನಂಜಯ್​ ನಿರ್ಮಾಣದ ಟಗರು ಪಲ್ಯ (Tagaru Palya Movie) ಸಿನಿಮಾದಲ್ಲೂ 7 ಸ್ಟಾರ್ ಸುಲ್ತಾನ್ ಟಗರು ನಟಿಸಿದೆ. ಸಿನಿಮಾದ ಪೋಸ್ಟರ್‌ನಲ್ಲಿ 7 ಸ್ಟಾರ್ ಸುಲ್ತಾನ್ ಮಿಂಚಿತ್ತು. ಜಿಲ್ಲೆಯಲ್ಲಿ ಆಯೋಜನೆ ಆಗುತ್ತಿದ್ದ ಟಗರು ಕಾಳಗದಲ್ಲೂ ಗೆದ್ದು ಬಹುಮಾನಗಳನ್ನು ಬಾಚಿಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಟಗರು ತನ್ನದೇ ಆದ ಫ್ಯಾನ್ಸ್‌ ಫಾಲೋವರ್ಸ್‌ ಹೊಂದಿತ್ತು.

ಇದನ್ನೂ ಓದಿ: Eid al Adha: ಬಕ್ರೀದ್‌ ಹಬ್ಬಕ್ಕೆ ಈ ಪ್ರಾಣಿಗಳನ್ನು ಕಡಿದರೆ ಜೈಲು ಶಿಕ್ಷೆ; ಬಿಬಿಎಂಪಿ ಆದೇಶ!

ಅಂದಹಾಗೇ ಮಾಲೀಕ ಯುನೀಸ್‌ 2 ವರ್ಷದ ಹಿಂದೆ ಬಕ್ರೀದ್‌ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ ಟಗರನ್ನು ಖರೀದಿಸಿದ್ದರು. ಈ ನಡುವೆ ಟಗರು ಕಾಳಗದಲ್ಲಿ ಭಾಗಿಯಾಗಿ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು. ಈವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿ, ಸುಮಾರು 20 ಲಕ್ಷದಷ್ಟು ಹಣ, ಚಿನ್ನಾಭರಣ, ವಾಹನಗಳನ್ನು ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ್ ಎಂದು ಹೆಸರಿಟ್ಟಿದ್ದರು. ಸದ್ಯ ಅಭಿಮಾನಿಗಳ ಒತ್ತಾಸೆಗೆ‌ ಮಣಿದು 7 ಸ್ಟಾರ್ ಸುಲ್ತಾನನ ಕುರ್ಬಾನಿ ಕೊಡದಿರಲು ಯುನೀಸ್ ನಿರ್ಧರಿಸಿದ್ದಾರೆ. ಸುಲ್ತಾನ್‌ ಬದಲಿಗೆ ದೇವರಿಗೆ ಬೇರೆ ಟಗರನ್ನು ಬಲಿ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.‌

ಯಾವಾಗ ರಿಲೀಸ್ ಟಗರು ಪಲ್ಯ?

ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ‌ ಮೂರನೇ ಕೊಡುಗೆ ಟಗರು ಪಲ್ಯ. ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದಾರೆ. ಇವರಿಗೆ ಜೋಡಿಯಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ಇದ್ದು, ಎಸ್ ಕೆ ರಾವ್ ಛಾಯಾಗ್ರಹಣ ಇದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ‌ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version