Site icon Vistara News

Amarnath Yatra : ಅಮರನಾಥ ಯಾತ್ರಾರ್ಥಿಗಳು ಅತಂತ್ರ; ಕನ್ನಡಿಗರ ಏರ್‌ಲಿಫ್ಟ್‌

Amarnath Yatra karnataka pepole

ಗದಗ: ಅಮರನಾಥದಲ್ಲಿ (Amarnath Yatra) ಹವಾಮಾನ ವೈಪರೀತ್ಯ (Climate change) ಹಾಗೂ ಭೂ ಕುಸಿತದಿಂದಾಗಿ ಅಮರನಾಥ ಯಾತ್ರೆ ಕೈಗೊಂಡಿದ್ದ 300ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಿಲುಕಿಗೊಂಡಿದ್ದಾರೆ. ಅದರಲ್ಲಿ‌ ಕರ್ನಾಟಕದ ಒಟ್ಟು 80 ಜನರಲ್ಲಿ ಗದಗನ 23 ಯಾತ್ರಾರ್ಥಿಗಳು ಸಹ ಸಿಲುಕಿಕೊಂಡಿದ್ದರು. ಇದೀಗ ಏರ್‌ಲಿಫ್ಟ್‌ ಮೂಲಕ ರಕ್ಷಣೆ ಮಾಡಲಾಗುತ್ತಿದೆ.

ಪಂಚತರಣಿ ಬೇಸ್ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿರುವ ಯಾತ್ರಾರ್ಥಿಗಳು ಕಳೆದ ಜುಲೈ 4 ರಂದು ಗದಗದಿಂದ ಹೊರಟಿದ್ದರು. ಜುಲೈ 6ರಂದು ಅಮರನಾಥ ತಲುಪಿ 7ರಂದು ಅಮರನಾಥ ದರ್ಶನ ಪಡೆದಿದ್ದರು. ನಂತರ ವಾಪಾಸ್‌ ಬರುವಾಗ ವಿಪರೀತ ಮಳೆ ಹಾಗೂ ಗುಡ್ಡ ಕುಸಿತದಿಂದ ಸಾರಿಗೆ ಸಂಪರ್ಕ ಕಡಿತವಾಗಿತ್ತು.

ಅಮರನಾಥ ಯಾತ್ರಾರ್ಥಿಗಳು

ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಹೆಲಿಕಾಪ್ಟರ್ ಸೇವೆ ಕೂಡಾ ರದ್ದಾಗಿತ್ತು. ಊಟ ನೀರು ಇಲ್ಲದೇ, ಹಸಿವು ನೀಗಿಸಲು ಬಿಸ್ಕತ್ತು ಕೂಡಾ ಸಿಗುತ್ತಿಲ್ಲ ಎಂದು ಯಾತ್ರಾರ್ಥಿಗಳ ಅಳಲು ತೋಡಿಕೊಂಡಿದ್ದರು. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಾಯಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ನಂತರ ಸರ್ಕಾರ ಉಪಹಾರ ಹಾಗೂ ಊಟದ ವ್ಯವಸ್ಥೆ‌ ಮಾಡಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ರಕ್ಷಣಾ ಕಾರ್ಯಚರಣೆ ತಡವಾಗಿತ್ತು.

ಎಲ್ಲರೂ ಸುರಕ್ಷಿತ- ಸಚಿವ ಎಚ್‌.ಕೆ ಪಾಟೀಲ್

ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ್‌ ಯಾತ್ರಾರ್ಥಿಗಳ ಜತೆ ಮಾತನಾಡಿ ಅಲ್ಲಿನ ಸ್ಥಿತಿಗತಿಯ ಮಾಹಿತಿಯನ್ನು ಪಡೆದಿದ್ದಾರೆ. ಕರ್ನಾಟಕದವರು ಸುರಕ್ಷಿತವಾಗಿದ್ದು, ಯಾತ್ರಾರ್ಥಿಗಳು ಯಾರೂ‌ ಸಹ ಆತಂಕ ಪಡುವ ಅವಶ್ಯಕತೆಯಿಲ್ಲ. ಸರ್ಕಾರ ಯಾತ್ರಾರ್ಥಿಗಳನ್ನು ಕರೆತರಲು ಎಲ್ಲ ರೀತಿಯ‌ ಸಿದ್ಧತೆ ನಡೆಸಿದೆ ಎಂದಿದ್ದಾರೆ. ದೂರವಾಣಿ ಮೂಲಕ ಯಾತ್ರಾರ್ಥಿಗಳ ಜತೆ ಮಾತಾಡಿ ಧೈರ್ಯವನ್ನು ತುಂಬಿದ್ದಾರೆ.

ಇದನ್ನೂ ಓದಿ:Anganawadi workers : ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಂಗನವಾಡಿ ಕಾರ್ಯಕರ್ತೆಯರು; ನಾಳೆ ರಾಜ್ಯಾದ್ಯಂತ ಪ್ರತಿಭಟನೆ

ಅಮರನಾಥದಲ್ಲಿ ಸಿಲುಕಿರುವ ಯಾತ್ರಾರ್ಥಿ ವಿಶಾಲ್‌ ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ್ದು, ವೆದರ್‌ ಎಲ್ಲವೂ ಕ್ಲಿಯರ್‌ ಆಗಿದ್ದು, ನಾವಿರುವ ಸ್ಥಳಕ್ಕೆ ಹೆಲಿಕಾಪ್ಟರ್‌ಗಳು ಆಗಮಿಸಿವೆ. ಇನ್ನೊಂದು ಗಂಟೆಯಲ್ಲಿ ಇಲ್ಲಿಂದ ನಮ್ಮನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ. ಪಂಚತರಣಿ ಬೇಸ್ ಕ್ಯಾಂಪ್‌ನಿಂದ ನೀಲಕರಂತ ಬೇಸ್ ಕ್ಯಾಂಪ್‌ಗೆ ರವಾನೆ ಮಾಡಲಾಗುತ್ತದೆ. ನಂತರ ಶ್ರೀನಗರಕ್ಕೆ ನಾವೆಲ್ಲ‌ ಯಾತ್ರಾರ್ಥಿಗಳು ತೆರಳಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version