ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಫೆ. 11 ರಂದು ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈಶ್ವರ ಮಂಗಲದಲ್ಲಿರುವ ಹನುಮಗಿರಿ ಆಂಜನೇಯ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಅಮರ ಗಿರಿ’ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ.
ಹನುಮ ಗಿರಿಯಲ್ಲಿ ಈಗಾಗಲೇ ರಾಮಾಯಣದ ಸಂಪೂರ್ಣ ಮಾಹಿತಿ ಇರುವ ಕಲ್ಲಿನ ಕೆತ್ತನೆಗಳಿದ್ದು ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಇದೀಗ ಅಮರ ಗಿರಿ ಮೂಲಕ ಸಮಗ್ರ ಭಾರತ ದರ್ಶನದ ಪರಿಚಯ ನೀಡುವ ಶಿಲ್ಪಗಳು ಹಾಗೂ ಚಿತ್ತಾರಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಶ್ರೀ ಭಾರತೀ ಅಮರ ಜ್ಯೋತಿ ಮಂದಿರದ ಬಳಿಕ ಭಾರತಾಂಬೆಯನ್ನು ಕೊಂಡಾಡುವ ’ವಂದೇ ಮಾತರಂ’ ಶಿಲಾ ಫಲಕ ದರ್ಶನ. ಫಲಕದ ಹಿಂದೆ ಯೋಧನ ಪ್ರತಿಮೆ. ಗಿರಿಯನ್ನು ಇಳಿಯುತ್ತಾ ಬರುತ್ತಿದ್ದಂತೆ ಭವ್ಯ ಭಾರತದ ರಕ್ಷಣಾ ವ್ಯವಸ್ಥೆಯನ್ನು ನೆನಪಿಸುವಂತ ದೃಶ್ಯವನ್ನು ಇಲ್ಲಿ ಸೃಷ್ಟಿಸಲಾಗಿದೆ.
ಇದನ್ನೂ ಓದಿ: Hockey India: ಭಾರತ ಹಾಕಿ ತಂಡದ ಕೋಚ್ ಹುದ್ದೆಗೆ ವಿದೇಶಿಯರ ರೇಸ್
ಅಷ್ಟ ಭುಜಾಕೃತಿಯ ಆಲಯವನ್ನು ನಿರ್ಮಾಣ ಮಾಡಿದ್ದು ಅದರ ಒಳ ಭಾಗದಲ್ಲಿ ’ಭಾರತ ಮಾತೆ’ಯ ಆರು ಅಡಿ ಎತ್ತರದ ಅಮೃತ ಶಿಲೆಯ ವಿಗ್ರಹ, ಹಿಂದೆ ಅಖಂಡ ಭಾರತದ ಚಿತ್ತಾರದಲ್ಲಿ ಆಂಜನೇಯ ಮತ್ತು ಪಾರ್ವತಿ ಪರಮೇಶ್ವರ, ಭಾರತ ಮಾತೆಯ ಎಡ, ಬಲಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ (ಜೈ ಜವಾನ್, ಜೈ ಕಿಸಾನ್) ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಸುಮಾರು ನೂರು ಜನರು ಕುಳಿತುಕೊಳ್ಳಬಹುದಾದಷ್ಟು ವಿಶಾಲ ಸ್ಥಳವನ್ನು ಅಷ್ಟ ಭುಜಾಕೃತಿಯ ಆಲಯವನ್ನು ಹೊಂದಿದೆ.
ಫೆ. 11 ರಂದು ಜಿಲ್ಲೆಗೆ ಆಗಮಿಸುವ ಗೃಹ ಸಚಿವ ಅಮಿತ್ ಶಾ ಈಶ್ವರಮಂಗಲಕ್ಕೆ ತೆರಳಿ ಹನುಮ ಗಿರಿಯಲ್ಲಿನ ಅಮರ ಗಿರಿ ಮಂದಿರದ ಅಷ್ಟ ಭುಜಾಕೃತಿಯ ಆಲಯದೊಳಗೆ ಇರುವ ಭಾರತಾಂಬೆಗೆ ಪುಷ್ಪಾರ್ಚನೆ ನಡೆಸಿ ದೀಪ ಬೆಳಗುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 20 ರಿಂದ 30 ನಿಮಿಷಗಳ ಕಾಲ ಈ ಭಾಗದಲ್ಲಿ ಶಾ ಇರಲಿದ್ದಾರೆ.
ಇದನ್ನೂ ಓದಿ: Kiara Sidharth Wedding: ಕಿಯಾರಾ ಸಿದ್ಧಾರ್ಥ್ ಮದುವೆಗೆ ಬರುವವರಿಗೆ ಸಿಗಲಿದೆ ಐಷಾರಾಮಿ ಸೌಕರ್ಯ