Site icon Vistara News

Banada Hunnime | ಬನದ ಹುಣ್ಣಿಮೆ ಪ್ರಯುಕ್ತ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ

banada hunnime Chandragutti Renukamba Temple

ಸೊರಬ: ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಗ್ರಾಮದ ರೇಣುಕಾಂಬ ದೇವಸ್ಥಾನದಲ್ಲಿ ಬನದ ಹುಣ್ಣಿಮೆ (Banada Hunnime) ಪ್ರಯುಕ್ತ ಸಾವಿರಾರು ಭಕ್ತರು ಶುಕ್ರವಾರ (ಜ.೬) ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಹಬ್ಬದ ನಿಮಿತ್ತ ದೇವಿಯ ಮೂರ್ತಿಯನ್ನು ತಲೆ ಮೇಲೆ ಹೊತ್ತುಕೊಂಡು ಸಾವಿರಾರು ಭಕ್ತರು ರಸ್ತೆಯುದ್ದಕ್ಕೂ ದೀಡ್ ನಮಸ್ಕಾರ ಹಾಕುತ್ತಾ ಊದೋ ಊದೋ, ಯಲ್ಲಮ್ಮ ಇನ್ನಾಲ್ಕು ಊದೋ ಊದೋ……. ಎನ್ನುವ ಮೂಲಕ ಭಕ್ತಿ ಪ್ರದರ್ಶಿಸಿದರು.

ಬನದ ಹುಣ್ಣಿಮೆ ಪೂರ್ವದಲ್ಲಿ ಬರುವ ಹೊಸ್ತಿಲ ಹುಣ್ಣಿಮೆಯಲ್ಲಿ ಶ್ರೀದೇವಿಯು ವೈಧವ್ಯದಲ್ಲಿ ಇರುವುದರಿಂದ ಹಸಿರು ಬಳೆ, ಕುಪ್ಪಸ ಸೇರಿದಂತೆ ಮುತ್ತೈದೆ ವಸ್ತುಗಳನ್ನು ಪೂಜೆಗೆ ಸಲ್ಲಿಸುವಂತಿರಲಿಲ್ಲ. ಭಕ್ತರು ಒಂದು ತಿಂಗಳ ಕಾಲ ದೇವಿಗೆ ಮಡ್ಲಿಗೆ ತುಂಬಿಸಿರಲಿಲ್ಲ. ಆದರೆ, ಶುಕ್ರವಾರ ಬನದ ಬನದ ಹುಣ್ಣಿಮೆಯು ಮುತ್ತೈದೆಯರ ಹುಣ್ಣಿಮೆ ಎಂದು ಪ್ರಸಿದ್ಧಿ ಪಡೆದುಕೊಂಡ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಬಳೆ ಅಂಗಡಿಗಳಲ್ಲಿ ಹೊಸ ಬಳೆ, ಹಸಿರು ಕುಪ್ಪಸ ತೊಟ್ಟುಕೊಂಡು ತೊಟ್ಟಿಲು ಬಾವಿ ಪೂಜೆ, ಮೆಟ್ಟಿಲು ಪೂಜೆ, ದಿಂಡು ಕಟ್ಟುವುದು, ಬೇವು ಉಡುವುದು, ಚೌಲ, ಕಿವಿ ಚುಚ್ಚುವುದು ಧಾರ್ಮಿಕ ಸೇವೆ ನಡೆಸಿದರು.

ಇದನ್ನೂ ಓದಿ | Sonu Sood | ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಕುಳಿತ ವಿಡಿಯೊ ಬಗ್ಗೆ ಕ್ಷಮೆಯಾಚಿಸಿದ ನಟ ಸೋನು ಸೂದ್

ಪ್ರತಿ ಹುಣ್ಣಿಮೆಯಂದು ಸಾವಿರಾರು ಭಕ್ತರು ಬಯಲು ಸೀಮೆಯ ರಾಯಚೂರು, ಹಾವೇರಿ, ಕೊಪ್ಪಳ, ಗದಗ, ದಾವಣಗೆರೆ ಹಾಗೂ ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುತ್ತಾರೆ. ಬೇರೆಲ್ಲಾ ಕ್ಷೇತ್ರಗಳಿಗಿಂತ ಇಲ್ಲಿ ಮೆಟ್ಟಿಲು ಪೂಜೆ ಭಿನ್ನವಾಗಿದ್ದು, ದೇವಿಯ ದರ್ಶನಕ್ಕೆ ಬರುವ ಭಕ್ತರು ಮೆಟ್ಟಿಲು ಪೂಜೆ ಸಲ್ಲಿಸಿದ ನಂತರವೇ ಬೆಟ್ಟ ಏರಿ ರೇಣುಕಾ ದೇವಿಯ ದರ್ಶನ ಪಡೆಯುತ್ತಾರೆ. ಇದರಂತೆ ಪಡ್ಡಲಿಗೆ ಸೇವೆಯು ವಿಶಿಷ್ಟವಾಗಿದ್ದು, ದೇವಿಯ ಸನ್ನಿಧಿಯಲ್ಲಿ ಹಣ್ಣು ಕಾಯಿ ಪೂಜೆ ಸಲ್ಲಿಸಿ ನಂತರ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯ ಭಕ್ಷ್ಯಗಳನ್ನು ಪಡ್ಡಲಿಗೆಯಲ್ಲಿ ತುಂಬಿಟ್ಟು ದೇವಸ್ಥಾನದ ಮುಂಭಾಗದಲ್ಲಿನ ತೊಟ್ಟಿಲು ಬಾವಿಯಲ್ಲಿ ವಿಶೇಷ ನೈವೇದ್ಯ ಮಾಡಲಾಗುತ್ತದೆ.

ಸಂಜೆ ದೇವಿಯ ಉತ್ಸವ ಮೂರ್ತಿಯೊಂದಿಗೆ ಬೆಟ್ಟದಿಂದ ಕೆಳಗೆ ತರುವಾಗ ಭಕ್ತರು ಹರಕೆಯ ರೂಪದಲ್ಲಿ ಸಲ್ಲಿಸುವ ಬೆಳ್ಳಿ, ಬಂಗಾರ, ಧಾನ್ಯ, ವಸ್ತ್ರ, ನಗದು ಹಣವನ್ನು ಮುಜರಾಯಿ ಇಲಾಖೆಯ ಅಧಿಕಾರಿಗಳು ತಾಲೂಕು ಕಚೇರಿಯ ಖಜಾನೆಗೆ ತೆಗೆದುಕೊಂಡು ಹೋಗುತ್ತಾರೆ.

ಇದನ್ನೂ ಓದಿ | Chilli price | ಮಾರುಕಟ್ಟೆಯ ಸೀಸನ್‌ನಲ್ಲೂ ಇಳಿಕೆಯಾಗದ ಮೆಣಸಿನಕಾಯಿ ದರ

Exit mobile version