ಬನವಾಸಿ: ಇಲ್ಲಿನ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನಕ್ಕೆ (Banavasi News) ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಶುಕ್ರವಾರ (ಡಿ.೧೬) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡದ ಪ್ರಥಮ ರಾಜಧಾನಿಯಾಗಿರುವ ಬನವಾಸಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದೇನೆ. ಪ್ರತಿ ಬಾರಿ ಇಲ್ಲಿಗೆ ಬಂದಾಗ ಉತ್ತರ ಕನ್ನಡ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಬೇಸರವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯು ಕರಾವಳಿ, ಘಟ್ಟ ಪ್ರದೇಶ ಹಾಗೂ ಬಯಲು ಸೀಮೆಯನ್ನು ಒಳಗೊಂಡ ವಿಷೇಶ ಜಿಲ್ಲೆಯಾಗಿದೆ. ಕನ್ನಡದ ದೃಷ್ಟಿಯಿಂದ ಏನೇ ಮಾಡಿದರೂ ಬನವಾಸಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಬೇಕು. ಅದರೆ ಬನವಾಸಿಯ ಅಭಿವೃದ್ಧಿ ಮಾತ್ರ ನನೆಗುದಿಗೆ ಬಿದ್ದಿದೆ. ಕನ್ನಡಿಗರೆಲ್ಲರೂ ಇದರ ಕುರಿತು ವಿಶೇಷ ಜವಾಬ್ದಾರಿ ವಹಿಸಬೇಕು. ತಾಲೂಕು ಹೋರಾಟ ಒಳಗೊಂಡಂತೆ ಬನವಾಸಿಯನ್ನು ಕರ್ನಾಟಕದ ಶ್ರೇಷ್ಠ ಸಾಂಸ್ಕೃತಿಕ ಕೇಂದ್ರವಾಗಿ ಬಳಸಲು ಪ್ರತಿಯೊಬ್ಬರೂ ಸರ್ಕಾರವನ್ನು ಆಗ್ರಹಿಸೋಣ ಎಂದರು.
ಇದನ್ನೂ ಓದಿ Kallurti Temple | ಅಳದಂಗಡಿ ಕಲ್ಲುರ್ಟಿ ದೇಗುಲಕ್ಕೆ ಸಚಿವ ಆನಂದ್ ಸಿಂಗ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ
ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಬನವಾಸಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಉದಯ ಕಾನಳ್ಳಿ ಹಾಗೂ ಸಹೋದರರು ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಟಿ.ಜಿ.ನಾಡಿಗೇರ, ದೇವಸ್ಥಾನ ಆಡಳಿತ ಮಂಡಳಿಯ ಶಾಂತಲಾ ಪುರೋಹಿತ, ಬನವಾಸಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಕಾನಳ್ಳಿ, ಪುರಾತತ್ತ್ವ ಇಲಾಖೆಯ ಅಧಿಕಾರಿ ಅನಂತ್ ಖರೆ, ಅರ್ಚಕರಾದ ನಾಗೇಶ ಪತ್ರೆ, ಸಾಯಿರಾಂ ಕಾನಳ್ಳಿ, ಸಚೀನ್ ಮಾಳವದೆ, ಯುವ ಬ್ರಿಗೇಡ್ ನ ವರ್ಧಮಾನ್ ತ್ಯಾಗಿ, ಧರ್ಮ, ಸುಧೀರ ನಾಯರ್, ಕುಮಾರ್, ಪವನ್ ಕಾನಳ್ಳಿ ಮತ್ತಿತರರು ಇದ್ದರು.
ಇದನ್ನೂ ಓದಿ | Avatar: The Way of Water | ಅವತಾರ್ 2 ಬಗ್ಗೆ ನೆಗೆಟಿವ್ ಟ್ವೀಟ್ ಮಾಡಿದ ತೆಲುಗು ನಿರ್ಮಾಪಕ ನಾಗ ವಂಶಿ!