ಬನವಾಸಿ: “ನೀತಿ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನದಿಂದ ದೇಶದ ಸಂಸ್ಕೃತಿ ನಶಿಸುತ್ತಿದೆ” ಎಂದು ಶಿರಸಿ ಹಾಗೂ ತೊಟ್ಟಲಕೇರಿ ಬಣ್ಣದ ಮಠದ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮೀಜಿ ಹೇಳಿದರು.
ಅವರು ಇಲ್ಲಿಯ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ನಡೆದ ಮಹಾರುದ್ರ ಹವನ ಪೂರ್ಣಾಹುತಿ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತ, “ನಿಸರ್ಗದ ಜಯಂತಿಯನ್ನು ಆಚರಿಸುವ ಏಕೈಕ ದೇಶವಿದ್ದರೆ ಅದು ನಮ್ಮ ಭಾರತ ದೇಶ ಮಾತ್ರ. ಪಾಶ್ಚಾತ್ಯ ವೇಷಭೂಷಣಗಳಿಂದ ದೇಶದ ಸಂಸ್ಕೃತಿ ನಾಶವಾಗುತ್ತಿದೆ. ನಾವು ಪಾಶ್ಚಾತ್ಯ ದೇಶಗಳ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ. ನಮ್ಮ ಮಕ್ಕಳಿಗೆ ಸಂಸ್ಕೃತಿಯ ಪಾಠ ಕಲಿಸಬೇಕು. ಆಗ ದೇಶದ ಸಂಪನ್ಮೂಲ ವೃದ್ಧಿಯಾಗಲಿದೆ” ಎಂದು ಹೇಳಿದರು.
ಇದನ್ನೂ ಓದಿ: ವಿಸ್ತಾರ Explainer: ರಾಹುಲ್ ಗಾಂಧಿ ಅನರ್ಹತೆ: ಏನಿದು? ಮುಂದೇನಾಗಲಿದೆ?
“ವಂದೇ ಮಾತರಂ ಎಂಬ ಶಬ್ದದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ವಂದೇ ಮಾತರಂ ಗೀತೆಯನ್ನು ರಾಷ್ಟ್ರೀಯ ಗೀತೆಯನ್ನಾಗಿಸಲು ಸಾಧ್ಯವಾಗಿಲ್ಲ. ರಾಜಕೀಯ ನಾಯಕರಿಂದ ಸಮಾಜ ಒಡೆಯುವ ಕೆಲಸವಾಗುತ್ತಿದೆ. ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಜಾತಿ ರಾಜಕಾರಣ ಮಾಡಲು ಶುರು ಮಾಡಿದ್ದಾರೆ. ಇದು ಹಿಂದೂ ಸಮಾಜಕ್ಕೆ ಮಾರಕವಾಗಲಿದೆ. ಜನಸಂಖ್ಯೆ ಹೆಚ್ಚುತ್ತಿದೆ ಎರಡೇ ಮಕ್ಕಳು ಸಾಕು ಎಂಬ ಕಾನೂನು ಕೇವಲ ಹಿಂದುಗಳಿಗೆ ಅಷ್ಟೇ ಸೀಮಿತವಾಗುತ್ತಿದ್ದು ಮುಸ್ಲಿಂ ಸಮುದಾಯದವರಿಗೆ ಹೇಳುವ ತಾಕತ್ತು ಯಾರಿಗೂ ಇಲ್ಲವಾಗಿದೆ. ಮೇಲ್ಜಾತಿ, ಕೆಳ ಜಾತಿ ಎಂಬ ಧೋರಣೆ ಬಿಟ್ಟು ನಾವೆಲ್ಲರೂ ಹಿಂದು ಅನ್ನುವ ಭಾವನೆ ಎಲ್ಲರಲ್ಲೂ ಮೂಡಿದರೆ ದೇಶ ಸುಭದ್ರವಾಗಿರುತ್ತದೆ” ಎಂದರು.
ಇದನ್ನೂ ಓದಿ: PAK VS AFG: ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಘಫಾನಿಸ್ತಾನ
ಹೊಳೆಮಠದ ಶ್ರೀ ನಾಗಭೂಷಣ ಸ್ವಾಮೀಜಿ ಮಾತನಾಡಿ, “ಬನವಾಸಿಯು ಭಾಷೆ, ಧರ್ಮ, ಪರಂಪರೆ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬೌದ್ಧ, ಜೈನ ಹಾಗೂ ವೈದಿಕ ಧರ್ಮಗಳ ಸಂಗಮವಿದೆ” ಎಂದರು.
ಶ್ರೀ ಮಧುಕೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಶಿವಯೋಗಿ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೀಮಾ ಕೆರೂಡಿ, ಶಾಂತಲಾ ಪುರೋಹಿತ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಶಶಿಕಲಾ ನಾಯ್ಕ್ ನಿರೂಪಿಸಿದರು. ಉದಯ ಕುಮಾರ್ ಕಾನಳ್ಳಿ ಸ್ವಾಗತಿಸಿದರು. ಗೀತಾ ಯಜಮಾನ ಪ್ರಾರ್ಥಿಸಿದರು. ಅರವಿಂದ ಬಳೆಗಾರ ವಂದಿಸಿದರು. ಧರ್ಮಸಭೆಯ ನಂತರ ನವರಾತ್ರಿ ಉತ್ಸವ ಸಮಿತಿ ಹಾಗೂ ವಿವಿಧ ಮಹಿಳಾ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: Reservation : ಮುಸ್ಲಿಂ ಸಮಾಜದ ಮೀಸಲಾತಿ ರದ್ದು ಅವೈಜ್ಞಾನಿಕ, ಸಮಾಜ ಒಡೆಯುವ ಕೆಲಸ ಎಂದ ಕುಮಾರಸ್ವಾಮಿ