Site icon Vistara News

Banavasi Temple | ಶ್ರೀ ಮಧುಕೇಶ್ವರ ದೇವಸ್ಥಾನದ ಮಹಾರಥ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ಲಕ್ಷ ರೂ. ದೇಣಿಗೆ

Dharmasthala Rural Development Project Madhukeshwara Temple banavasi temple

ಬನವಾಸಿ: ಇಲ್ಲಿನ ಶ್ರೀ ಮಧುಕೇಶ್ವರ ದೇವಸ್ಥಾನದ (Banavasi Temple) ನೂತನ ಮಹಾರಥ ನಿರ್ಮಾಣಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ಲಕ್ಷ ರೂ. ದೇಣಿಗೆಯ ಚೆಕ್ ಅನ್ನು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮಹಾ ರಥ ನಿರ್ಮಾಣ ಸಮಿತಿಗೆ ಮಂಗಳವಾರ (ಜ.೩) ವಿತರಿಸಲಾಯಿತು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯಕ್ ಚೆಕ್ ವಿತರಿಸಿ ಮಾತನಾಡಿ, ಶ್ರೀ ಮಧುಕೇಶ್ವರ ದೇವರ ಮಹಾರಥ ನಿರ್ಮಾಣಕ್ಕೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು 3 ಲಕ್ಷ ರೂ. ನೀಡಿದ್ದಾರೆ. ಕಳೆದ 40 ವರ್ಷಗಳಿಂದ ವ್ಯಕ್ತಿಯನ್ನು ಶಕ್ತಿಯನ್ನಾಗಿಸುವ ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿದೆ. ಶಿಥಿಲವಾದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮೋತ್ಥಾನ ಟ್ರಸ್ಟ್ ಮುಖಾಂತರ ಸಹಾಯ ಧನ ನೀಡಲಾಗುತ್ತಿದೆ. ಅದರಲ್ಲೂ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಲಾಗುತ್ತಿದೆ. ಬನವಾಸಿಯ ಮಹಾರಥವೂ ಮುಂದಿನ ಪೀಳಿಗೆಗೆ ಸಾಕ್ಷಿಯಾಗಲಿದೆ. ದೇವಸ್ಥಾನದ ಎಲ್ಲ ಕಾರ್ಯಕ್ರಮಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.

ಇದನ್ನೂ ಓದಿ | Justice B V Nagarathna | ಇತಿಹಾಸ ಬರೆಯಲಿದ್ದಾರೆ ಭಿನ್ನ ವ್ಯಕ್ತಿತ್ವದ ಕನ್ನಡತಿ ಜಸ್ಟೀಸ್ ಬಿ.ವಿ ನಾಗರತ್ನ!

ಆರ್ಥಿಕ ಸಮಿತಿಯ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಚೆಕ್ ಸ್ವೀಕರಿಸಿ ಮಾತನಾಡಿ, ಮಹಾರಥ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ದೈವಿ ಸಂಕಲ್ಪ ಕಾರ್ಯಕ್ಕೆ ಸಂಕಷ್ಟದ ಸಮಯದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದಿಂದ 3 ಲಕ್ಷ ರೂ. ದೇಣಿಗೆಯ ರೂಪದಲ್ಲಿ ಪ್ರಸಾದ ವಿತರಣೆಯಾಗಿದೆ. ಧರ್ಮಾಧಿಕಾರಿಗಳು ನೀಡಿದ ಈ ದೇಣಿಗೆಯು ಮುಂದಿನ ಕಾರ್ಯಗಳಿಗೆ ಕಲ್ಪವೃಕ್ಷವಾಗಲಿದೆ. ರಥ ಸಮರ್ಪಣಾ ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ ಬಹುಮುಖ್ಯ ಎಂದರು.

ಇದನ್ನೂ ಓದಿ | Prajadhwani Yatre | ಬಸ್‌ ಯಾತ್ರೆಗೆ ಎರಡು ತಂಡ ಪ್ರಕಟಿಸಿದ ಕಾಂಗ್ರೆಸ್‌; ʼಪ್ರಜಾಧ್ವನಿ ಯಾತ್ರೆʼ ಎಂದು ನಾಮಕರಣ?

ಮಹಾರಥ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಭಟ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಪ್ರಕಾಶ ಬಂಗ್ಲೆ ಮಾತನಾಡಿದರು. ಈ ಸಂದರ್ಭದಲ್ಲಿ ಶಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯಕ್ ಹಾಗೂ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್ ಅವರನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಸದಸ್ಯರಾದ ಸೀಮಾ ಕೆರೂಡಿ, ಶಾಂತಲಾ ಪುರೋಹಿತ, ಶಂಕರ ಉಪ್ಪಾರ, ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್, ಮೇಲ್ವಿಚಾರಕ ನಾಗರಾಜ, ರಾಮನಾಥ ಹೆಗಡೆ, ಶಿವಾನಂದ ಮಧುರವಳ್ಳಿ, ಸಾಯಿರಾಂ ಕಾನಳ್ಳಿ, ಭಾಸ್ಕರ್ ಶೇಟ್, ಪ್ರಶಾಂತ ಶೇಟ್, ಗಂಗಾ ಸಹವಾಸಿ, ಚಂದ್ರಕಲಾ ಗೌಡ, ಸೇವಾ ಪ್ರತಿನಿಧಿ ಸವಿತಾ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಇದ್ದರು. ಮೇಲ್ವಿಚಾರಕ ನಾಗರಾಜ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ಇದನ್ನೂ ಓದಿ | Siddheshwar swamiji | ನಡೆದಾಡುವ ದೇವರ ಅಂತಿಮ ಯಾತ್ರೆ: ಶೋಕ ಸಾಗರದಲ್ಲಿ ಜನಸಾಗರ

Exit mobile version