Site icon Vistara News

ಕನಸಿನಲ್ಲಿ ಬಂದ ಬಂಗಾಳಿ ಅಂಬಾದೇವಿ; ದರ್ಗಾ ಪಕ್ಕದಲ್ಲೇ ಗುಡಿ ಕಟ್ಟಿದ ಮುಸ್ಲಿಂ ವ್ಯಕ್ತಿ!

Bengali Ambadevi Muslim family Pooja

ಕೊಪ್ಪಳ: ದೇವರೊಬ್ಬ ನಾಮ ಹಲವು ಎಂಬ ಮಾತಿದೆ. ದಿನಾ ಬೆಳಗಾದರೆ ಧಾರ್ಮಿಕ ಸಂಘರ್ಷದ ಸುದ್ದಿಗಳನ್ನು ಕೇಳುತ್ತಿರುವ ನಮಗೆ ಭಾವಕ್ಯತೆಯನ್ನು ಸಾರುವ ಸುದ್ದಿಗಳು ಹೆಚ್ಚು ಆಪ್ಯಾಯಮಾನ ಎನಿಸುತ್ತದೆ. ಅಂಥದ್ದೇ ಒಂದು ಕೊಪ್ಪಳದಲ್ಲಿ ವರದಿಯಾಗಿದೆ. ಧರ್ಮದ ಹೆಸರಿನಲ್ಲಿ ಬಡಿದಾಡಿಕೊಳ್ಳವರ ಮಧ್ಯೆ ಕೊಪ್ಪಳದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಬಂಗಾಳಿ ಅಂಬಾದೇವಿಗೆ ಗುಡಿಯೊಂದನ್ನು ಕಟ್ಟಿಸಿ ಪೂಜಿಸುತ್ತಿದ್ದಾರೆ. ಅಬ್ಬುಸಾಹೇಬ್‌ ಎಂಬುವವರ ಕನಸಿನಲ್ಲಿ ಅಂಬಾದೇವಿ ಪ್ರತ್ಯಕ್ಷವಾಗಿದ್ದಕ್ಕೆ ದರ್ಗಾ ಪಕ್ಕದಲ್ಲೇ ಅಂಬಾದೇವಿ ದೇಗುಲ ನಿರ್ಮಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಬ್ಬುಸಾಹೇಬ್ ಮೂಲತಃ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದವರು. ಹಿಟ್ನಾಳ ಗ್ರಾಮದಲ್ಲಿ ಅಬ್ಬುಸಾಹೇಬ್‌ ಪಂಕ್ಚರ್ ಶಾಪ್ ಇಟ್ಟುಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ವಿಕಲಚೇತನರಾಗಿರುವ ಅಬ್ಬುಸಾಹೇಬ್‌ ಚಿಕ್ಕ ವಯಸ್ಸಿನಿಂದಲೇ ಎಲ್ಲ ಧರ್ಮಗಳು ಒಂದೇ ಎಂಬ ಭಾವನೆಯನ್ನು ಮೈಗೂಡಿಸಿಕೊಂಡು ಬಂದವರು.

ಅಂಬಾದೇವಿ ದೇವಸ್ಥಾನ

ಇತ್ತೀಚೆಗೆ ಅಬ್ಬುಸಾಹೇಬ್‌ ಕನಸಿನಲ್ಲಿ ಬಂಗಾಳಿ ಅಂಬಾದೇವಿ ಕಾಣಿಸಿಕೊಂಡಿದ್ದರು. ಹೀಗಾಗಿ ದರ್ಗಾದ ಪಕ್ಕದಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಿ ನಿತ್ಯ ಪೂಜೆಯನ್ನು ಇವರೇ ಸಲ್ಲಿಸುತ್ತಿದ್ದಾರೆ. ಈ ಮೂಲಕ ಗ್ರಾಮದಲ್ಲಿ ಭಾವೈಕ್ಯತೆ ಮೂಡಿಸಿದ್ದಾರೆ. ಕನಸಿನಲ್ಲಿ ಬಂದ ದೇವಿಯ ಭಕ್ತನಾದ ಅಬ್ಬಿಸಾಹೇಬ್‌, ಜನರಲ್ಲಿ ಭಾವೈಕ್ಯ ಮೂಡಿಸುವ ನಿಟ್ಟಿನಲ್ಲಿ ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯದ ಆಶ್ರಯ ನಿರ್ಮಾಣವಾಗಿದೆ. 5 ತಿಂಗಳ ಹಿಂದಷ್ಟೇ ಆಶ್ರಮದ ಭಕ್ತರೆಲ್ಲರೂ ಕೂಡಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಇತ್ತ ಜನರು ಈ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಸಲ್ಲಿಸಿ ಹೋಗುತ್ತಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ದೇವಿ ಪೂಜೆ ಮಾಡುವ ಅಬ್ಬು ಸಾಹೇಬರು ದೇಶದಲ್ಲಿ ಭಾವೈಕ್ಯತೆ ಇನ್ನು ಹೆಚ್ಚಾಗಬೇಕು ಎಂದು ಆಶಿಸಿದ್ದಾರೆ.

ದರ್ಗಾ ಪಕ್ಕದಲ್ಲೇ ಅಂಬಾದೇವಿ ದೇವಸ್ಥಾನ ನಿರ್ಮಾಣ ಮಾಡಿದ ಮುಸ್ಲಿಂ ವ್ಯಕ್ತಿ

ಮುಸ್ಲಿಮರ ಮನೆಯಲ್ಲೂ ವರಮಹಾಲಕ್ಷ್ಮೀ ಪೂಜೆ! ಎಲ್ಲಿದು ಸಾಮರಸ್ಯ?

ಪ್ರತಿ ವರ್ಷವೂ ಈ ಮನೆಯಿಂದ ಸಾಮರಸ್ಯದ ಸುದ್ದಿ ಬರುತ್ತದೆ. ಅಂತೆಯೇ ಈ ವರ್ಷವೂ ಬಂದಿದೆ. ಅದೇನೆಂದರೆ ಮುಸ್ಲಿಂ ಧರ್ಮಿಯರ ಮನೆಯಲ್ಲಿ ವರಮಹಾಲಕ್ಷ್ಮೀ (Varamahalakshmi festival) ಆಚರಣೆ. ಅದುವೇ ಅಳವಂಡಿ ಗ್ರಾಮದ ನಜೀರುದ್ದೀನ್ ಅವರ ಕುಟುಂಬದಲ್ಲಿ ನಡೆದ ವರಮಹಾಲಕ್ಷ್ಮೀ ಆಚರಣೆ.

ಪ್ರತಿ ವರ್ಷವೂ ಅವರ ಮನೆಯಲ್ಲಿ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಪ್ರತಿರೂಪವಾಗಿರುವ ವರ ಮಹಾಲಕ್ಷ್ಮೀ ಪೂಜೆ ನಡೆಯುತ್ತಿದೆ. ಅಂತೆಯೇ ಆಗಸ್ಟ್​​ 25ರಂದು ಶುಕ್ರವಾರ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗಿದೆ. ಹಿಂದೂ ಸಂಪ್ರದಾಯದ ಹಾಗೆ ಮನೆಗೆ ತಳಿರು ತೋರಣಗಳನ್ನು ಕಟ್ಟಿ ವರಮಹಾಲಕ್ಷ್ಮೀಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿದ್ದಾರೆ. ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದು ಸಿಗಲಾರದು.

ಸಾಮರಸ್ಯದ ಗ್ರಾಮ

ಅಳವಂಡಿ ಗ್ರಾಮ ಮೊದಲಿನಿಂದಲೂ ಸಾಮರಸ್ಯದ ತವರೂರು. ಇಲ್ಲಿ ಎಲ್ಲ ಸಮುದಾಯಗಳ ಆಚರಣೆಗಳನ್ನು ಒಟ್ಟಾಗಿ ಆಚರಿಸಲಾಗುತ್ತದೆ. ಹಿಂದೂ – ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರಿಗೆ ಪೂಜೆಗಳು ವಿಶೇಷವಲ್ಲ. ಆದರೆ, ಪ್ರತಿಯೊಬ್ಬರಿಗೂ ಗೌರವ ನೀಡಬೇಕು ಹಾಗೂ ವಿಶೇಷವಾಗಿ ಹಬ್ಬಗಳನ್ನು ಆಚರಿಸಬೇಕು ಎಂಬುದೇ ಅವರ ಗುರಿ.

ನಜೀರ್​ ಅವರ ಕುಟುಂಬ ಕಳೆದ ಮೂರು ವರ್ಷಗಳಿಂದ ಸಂಪ್ರದಾಯ ಬದ್ಧವಾಗಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಅಳವಂಡಿ ಗ್ರಾಮದ ನಜುರುದ್ದೀನ್ ಬಿಸರಳ್ಳಿ‌ ಅವರು ಮುಸ್ಲಿಂ ಕುಟುಂಬದ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಅರಿಶಿಣ ಕುಂಕುಮ ಕೊಟ್ಟು ಶುಭ ಕೋರಿದ್ದಾರೆ.

ಹಬ್ಬದ ಪ್ರಯುಕ್ತ ಮನೆಯಲ್ಲಿ ದೀಪಾಲಂಕಾರ, ವಿಶೇಷ ಪೂಜೆ ಮಾಡಿದ್ದಾರೆ. ಹೋಳಿಗೆ ನೈವೇದ್ಯ, ವಿವಿಧ ತರಹದ ಹಣ್ಣುಗಳು ಸಮರ್ಪಿಸಿ, ಹಣತೆ ಹಚ್ಚಿ ಸಂಭ್ರಮಿಸಿದ್ದಾರೆ. ಮನೆಯನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣ ಕಟ್ಟಿ ಸಿಂಗರಿಸಲಾಗಿದೆ. ನಜೀರುದ್ದೀನ್ ಬಿಸರಳ್ಳಿ‌ ಅವರು ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸರ್ವ ಧರ್ಮದ ಸ್ನೇಹಿತರನ್ನು ಆಹ್ವಾನಿಸಿ ಆತಿಥ್ಯ ಸತ್ಕರಿಸಿದ್ದಾರೆ.

ನಜೀರ್​ ಅವರ ಕುಟುಂಬ ಕಳೆದ ಮೂರು ವರ್ಷಗಳಿಂದ ಸಂಪ್ರದಾಯ ಬದ್ಧವಾಗಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಅಳವಂಡಿ ಗ್ರಾಮದ ನಜುರುದ್ದೀನ್ ಬಿಸರಳ್ಳಿ‌ ಅವರು ಮುಸ್ಲಿಂ ಕುಟುಂಬದ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಅರಶಿಣ ಕುಂಕುಮ ಕೊಟ್ಟು ಶುಭ ಕೋರಿದ್ದಾರೆ.

ಹಬ್ಬದ ಪ್ರಯುಕ್ತ ಮನೆಯಲ್ಲಿ ದೀಪಾಲಂಕಾರ, ವಿಶೇಷ ಪೂಜೆ ಮಾಡಿದ್ದಾರೆ. ಹೋಳಿಗೆ ನೈವೇದ್ಯ, ವಿವಿಧ ತರಹದ ಹಣ್ಣುಗಳು ಸಮರ್ಪಿಸಿ, ಹಣತೆ ಹಚ್ಚಿ ಸಂಭ್ರಮಿಸಿದ್ದಾರೆ. ಮನೆಯನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ನಜೀರುದ್ದೀನ್ ಬಿಸರಳ್ಳಿ‌ ಅವರು ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸರ್ವ ಧರ್ಮದ ಸ್ನೇಹಿತರನ್ನು ಆಹ್ವಾನಿಸಿ ಆತಿಥ್ಯ ಸತ್ಕರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version