Site icon Vistara News

Bengaluru Karaga: ದ್ರೌಪದಮ್ಮನಿಗೆ ಉಯ್ಯಾಲೆ ಪೂಜೆ

bengaluru karaga

ಬೆಂಗಳೂರು: ಬೆಂಗಳೂರಿನ ಪಾರಂಪರಿಕ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಅರ್ಚಕರು ನಿನ್ನೆ ರಾತ್ರಿ ದ್ರೌಪದಮ್ಮನಿಗೆ ಉಯ್ಯಾಲೆ ಪೂಜೆ ನೆರವೇರಿಸಿದರು.

ನಿನ್ನೆ ರಾತ್ರಿ ಸಾಂಪ್ರದಾಯಿಕವಾಗಿ ನಡೆದ ಉಯ್ಯಾಲೆ ಪೂಜೆ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕ ವೃಂದದವರು ಹಾಗೂ ತಿಗಳ ಸಮುದಾಯದವರು ಭಾಗಿಯಾದರು.

ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ದ್ರೌಪದಮ್ಮ ದೇವಸ್ಥಾನದಲ್ಲಿ ರಾತ್ರಿ ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾತ್ರಿ ಇಡೀ ಭಕ್ತಾದಿಗಳು ದೇವಿಯ ದರ್ಶನ ಪಡೆದಿದ್ದು, ನಂತರ ಪ್ರಸಾದ ರೂಪವಾಗಿ ಹಣ್ಣು ಫಲಾಹಾರ ಪಡೆದರು.

ಐತಿಹಾಸಿಕ ಬೆಂಗಳೂರು ಕರಗಕ್ಕೆ ಮಾ.29ರಂದು ಚಾಲನೆ ದೊರೆತಿದೆ. ಬುಧವಾರ ರಾತ್ರಿ 10 ಗಂಟೆಗೆ ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಧ್ವಜಸ್ತಂಭ ನೆಡುವ ಮೂಲಕ ಕರಗಕ್ಕೆ ಚಾಲನೆ ನೀಡಲಾಯಿತು. 9 ದಿನಗಳ ಕಾಲ ಉತ್ಸವ ನಡೆಯುತ್ತಿದೆ.

ಏಪ್ರಿಲ್ 4ರಂದು ಹಸಿ ಕರಗ, ಏ. 6ಕ್ಕೆ ಶಕ್ತ್ಯೂತ್ಸವ ನಡೆಯಲಿದೆ. ಈ ಬಾರಿಯೂ ಕರಗ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗುತ್ತದೆ. ಈ ವರ್ಷ ಕೂಡ ಜ್ಞಾನೇಂದ್ರ ಅವರು (12ನೇ ಬಾರಿ) ಕರಗ ಹೊರಲಿದ್ದಾರೆ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru karaga 2023: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಉತ್ಸವ; ಚುನಾವಣೆ ನೀತಿ ಸಂಹಿತೆಯ ಎಫೆಕ್ಟ್‌ ಏನು?

Exit mobile version