ಬಾಗಲಕೋಟೆ: ಇಲ್ಲಿನ ಮುಧೋಳ ನಗರದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಭಂಡಾರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಗ್ರಾಮ ದೇವತೆಗಳಾದ ದ್ಯಾಮವ್ವ, ದುರ್ಗವ್ವ ದೇವಿ ಜಾತ್ರೆ ಮಂಗಳವಾರ ಅದ್ಧೂರಿಯಾಗಿ ತೆರೆ ಕಂಡಿದೆ. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ನಡೆದಿರಲಿಲ್ಲ. ಇದೀಗ ಏಳನೇ ವರ್ಷಕ್ಕೆ ಜಾತ್ರೆ ನಡೆದೆದಂತಾಗಿದೆ.
ಐದು ದಿನಗಳ ಕಾಲ ನಡೆಯುವ ಭಂಡಾರ ಜಾತ್ರೆಗೆ ಮಂಗಳವಾರ ಕೊನೆಯ ದಿನವಾಗಿತ್ತು. ಟನ್ ಗಟ್ಟಲೆ ಭಂಡಾರ ಎರೆಚಿ ಜನರು ಸಂಭ್ರಮಿಸಿದರು. ದುರ್ಗವ್ವ ದೇವಿ ಓಣಿಯ ದೇವಸ್ಥಾನದಿಂದ ಭಂಡಾರ ಜಾತ್ರೆಯ ಮೆರವಣಿಗೆ ನಡೆಯಿತು. ದೇವಿಗೆ ಭಕ್ತರು ಉಡಿ ತುಂಬಿ ಪ್ರಾರ್ಥಿಸಿ ರಸ್ತೆ ಉದ್ದಕ್ಕೂ ಭಂಡಾರ ಎರಚುತ್ತಾ ದೇವಿಗೆ ಘೋಷಣೆ ಕೂಗುತ್ತಾ ಜಾತ್ರೆಯನ್ನು ಆಚರಿಸಿದರು.
ಇದನ್ನೂ ಓದಿ | ಆಷಾಢದಲ್ಲಿ ದೂರುವಿರುವ ನವಜೋಡಿಗಾಗಿಯೇ ನಡೆಯುತ್ತೆ ಈ ವಿಶೇಷ ಜಾತ್ರೆ!