ಬೆಂಗಳೂರು: ಬ್ರಾಹ್ಮಣ ಸಮುದಾಯದ (Brahmin community) ಸಿರಿನಾಡು ಮಹಾಸಭಾದಿಂದ ಸೆ.24ರಂದು ಬೆಳಗ್ಗೆ 11 ಗಂಟೆಗೆ ಸಮುದಾಯದ ಎಲ್ಲ ಉಪ ಪಂಗಡಗಳ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿದೆ. ಶೇಷಾದ್ರಿಪುರ ಕಾಲೇಜು ಹಿಂಭಾಗದಲ್ಲಿರುವ ಬಡಗನಾಡು ಸಂಘದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್. ಕುಮಾರ್, ಸಚಿವರಾದ ಮುನಿರತ್ನ ಮತ್ತು ಡಾ. ಅಶ್ವತ್ಥನಾರಾಯಣ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಹಾರ್ನಳ್ಳಿ ಅಶೋಕ್, ವಿಶ್ವ ವಿಪ್ರ ಪರಿಷತ್ ಅಧ್ಯಕ್ಷ ಎಸ್. ರಘುನಾಥ್ ಹಾಗೂ ಮಾನಸ ವೈದ್ಯಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಯುವ ನಾಯಕ ಡಾ.ಎಚ್.ಎಸ್.ಶಶಿಧರ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದಾರೆ.
ಬ್ರಾಹ್ಮಣ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಸಮುದಾಯದ ಬಲವರ್ಧನೆಯ ಉದ್ದೇಶವನ್ನು ಹೊಂದಲಾಗಿದೆ ಎಂದು ಸಿರಿನಾಡು ಮಹಾಸಭಾ ಉಪಾಧ್ಯಕ್ಷ ವೆಂಕಟ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಹಿರಿಯ ಪತ್ರಕರ್ತ ಎಚ್.ಎಸ್.ವೃಷಭ ರಾಜುಗೆ ಕೆಯುಡಬ್ಲ್ಯುಜೆ ಸನ್ಮಾನ