Site icon Vistara News

Chaturmasya 2023 : ಹರಿಹರಪುರ ಶ್ರೀಗಳ ಚಾತುರ್ಮಾಸ್ಯ; ನಾಳೆ ಯತಿ ಸಮ್ಮೇಳನ

Sreemath Hariharapura Mahaswamiji

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿದ್ದು, ಜು.11 ರಂದು ʻಚಾತುರ್ಮಾಸ್ಯ ಯತಿ ಸಮ್ಮೇಳನʼ ಏರ್ಪಡಿಸಲಾಗಿದೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಈ ಚಾತುರ್ಮಾಸ್ಯ ಯತಿ ಸಮ್ಮೇಳನ ನಡೆಯಲಿದ್ದು, ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದಜೀ, ಸ್ವಾಮಿ ವೀರೇಶಾನಂದಜೀ, ಸ್ವಾಮಿ ಯೋಗೇಶ್ವರಾನಂದಜೀ, ಸ್ವಾಮಿ ಮಹೇಶ್ವರಾನಂದಜೀ, ಸ್ವಾಮಿ ಪ್ರಕಶಾನಂದಜೀ, ಸ್ವಾಮಿ ಅಭಯಾನಂದಜೀ, ಸ್ವಾಮಿ ಶಾಂತಾನಂದಜೀ, ಸ್ವಾಮಿ ಸದಾನಂದಜೀ, ಸ್ವಾಮೀ ವಿಜಯಾನಂದಜೀ ಸೇರಿದಂತೆ ಒಟ್ಟು 11 ಮಂತಿ ಯತಿವರ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಸ್ವಾಮಿಗಳವರ ಹಾಗೂ ಎಲ್ಲ ಯತಿಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಹರಿಹರಪುರ ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಎಸ್‌. ರವಿಶಂಕರ್‌ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೂರನೇ ಬಾರಿಗೆ ಶ್ರೀಗಳು ಇಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿದ್ದು, ಪ್ರತಿನಿತ್ಯ ಬೆಳಗ್ಗೆ ಭಜನೆ, ಸತ್ಸಂಗ ಕಾರ್ಯಕ್ರಮಗಳು ನಡೆಯುತ್ತಿದ್ದು, ಶ್ರೀ ಮಠದ ಆರಾಧ್ಯ ದೇವರಾದ ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ನಿತ್ಯ ಕಲ್ಯಾಣೋತ್ಸವ ಸೇವೆ ನಡೆಯುತ್ತಿದೆ.

ಇದನ್ನೂ ಓದಿ: Chaturmas 2023 : ಜು.3 ರಿಂದ ಚತುರ್ಮಾಸ್ಯ; ಯಾವ ಯತಿವರ್ಯರ ವ್ರತಾಚರಣೆ ಎಲ್ಲಿ?

ಚಾತುರ್ಮಾಸ್ಯ ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಗೋಪಾಲಯ್ಯ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್‌ ಹಾರ್ನಹಳ್ಳಿ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಸೆಪ್ಟೆಂಬರ್‌ 29ರ ವರೆಗೆ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದು, ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.

Exit mobile version