ಯಲ್ಲಾಪುರ: ಭಾರತ ವಿಶ್ವಗುರು ಆಗಬೇಕು. ಭಾರತ ಉಳಿದರೆ ಮಾತ್ರ ಜಗತ್ತಿನ ಉಳಿವು ಸಾಧ್ಯ. ಇಡೀ ರಾಷ್ಟ್ರದ ಶ್ರೇಯೋಭಿವೃದ್ಧಿ ಆಗಬೇಕು. ನಮ್ಮ ಸಂಸ್ಕೃತಿಯ ಭಾಗವಾದ ಪರಾಯಣಗಳ (Chaturveda Parayana) ಮೂಲಕ, ದೇಶದ ಅಭಿೃದ್ಧಿಗಾಗಿ ಕೋರುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದೆ. ಅದಕ್ಕಾಗಿ ಇಲ್ಲಿ ಸೇರಿರುವ ಎಲ್ಲ ಜನರು ಕೊಡುಗೆ ನೀಡುತ್ತೀರೆಂಬ ವಿಶ್ವಾಸವಿದೆ ಎಂದು ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಗಣಪತಿ ಮಾನಿಗದ್ದೆ ಹೇಳಿದರು.
ರಾಷ್ಟ್ರ ಕ್ಷೇಮವನ್ನು ಸಂಕಲ್ಪ ಮಾಡಿ ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ (ಮಾ.3) ಪ್ರಾರಂಭಗೊಂಡ ಚತುರ್ವೇದ ಪಾರಾಯಣ, ಪುರಾಣಗಳ ಪಾರಾಯಣ ಮತ್ತು ಗುರುಪಾದುಕಾ ಪೂಜಾ ಕಾರ್ಯಕ್ರಮಗಳನ್ನು ಆರಂಭಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Lokayukta raid : ಮಾಡಾಳು ಚನ್ನಗಿರಿ ನಿವಾಸದಲ್ಲಿ 16.5 ಲಕ್ಷ ವಶ; 1.5 ಲಕ್ಷ ರೂ. ವಾಪಸ್ ಹೆಂಡ್ತಿ ಕೈಗೆ ಕೊಟ್ಟ ಪೊಲೀಸರು!
“ಹಿರಿಯ ಋತ್ವಿಜ ಶಂಕರ ಭಟ್ ಬಾಲಿಗದ್ದೆ ಮಾತನಾಡಿ, ಇದೊಂದು ರಾಷ್ಟ್ರಾಭಿವೃದ್ಧಿಯ ಮಹಾನ್ ಕಾರ್ಯ. ಇತಿಹಾಸದಲ್ಲಿ ಬರೆದಿಡುವಂತಹ ಅಪರೂಪದ ಕಾರ್ಯಕ್ರಮ. ಈ ಹಿಂದೆ ಮಹಾನ್ ಋಷಿವರ್ಯರು ಮಾಡಿದಂತಹ ಕಾರ್ಯಕ್ರಮದ ಭಾಗ ಇದಾಗಿದೆ. ಅನೇಕ ವಿದ್ವಾಂಸರನ್ನು ಒಂದೆಡೆ ಸೇರಿಸಿ ನಡೆಯುತ್ತಿರುವ ಈ ಕಾರ್ಯ ಮಹತ್ವದ್ದಾಗಿದೆ. ಭಾರತ ಹಿಂದಿನಂತೆ ಮತ್ತೆ ಪ್ರಥಮ ಸ್ಥಾನಕ್ಕೇರಬೇಕು. ಇಂದಿನಿಂದ 7 ದಿನಗಳ ಕಾಲ 40 ಋತ್ವಿಜರಿಂದ ಈ ಕಾರ್ಯವು ನಡೆಯಲಿದ್ದು, ಹಿರಿಯರೊಂದಿಗೆ ಯುವ ವಿದ್ವಾಂಸರ ತಂಡ ಇರುವುದರಿಂದ ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವಿದೆ” ಎಂದರು.
ಇದನ್ನೂ ಓದಿ: Hallmark: ಹಾಲ್‌ಮಾರ್ಕ್ ಇಲ್ಲದ ಆಭರಣ ಮಾರಾಟ ಮುಂದಿನ ತಿಂಗಳಿನಿಂದ ನಿಷೇಧ
ವಿಜಯೀ ಭವ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಟ್ ಮಾತನಾಡಿ, ಬೆಳಗ್ಗೆ ಗೃಹ ಶಾಂತಿ, ಮಹಾಗಣಪತಿ ಹವನ, ನಂತರ ಪುರಾಣ ಪಾರಾಯಣ, ಸಂಜೆ ಮತ್ತೆ ಪಾರಾಯಣ. 6 ದಿನಗಳ ಕಾಲ ಸತತವಾಗಿ ಕಾರ್ಯ ನಡೆದು ಸಂಕಲ್ಪವಾದ ಎಲ್ಲ ಪಾರಾಯಣಗಳು ಸಂಪೂರ್ಣಗೊಳ್ಳಲಿದೆ. ಮಾ.6 ರಂದು ಸಂಜೆ 5.30 ಕ್ಕೆ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಆಗಮಿಸಲಿದ್ದು, ಗುರುಪಾದುಕಾ ಪೂಜೆ ಮತ್ತು ಆಶೀರ್ವಚನ ನಡೆಯಲಿದೆ. ಮಾ.9 ರಂದು ಪೂರ್ಣಾಹುತಿಯೊಂದಿಗೆ ಎಲ್ಲ ಕಾರ್ಯಗಳು ಸಂಪನ್ನಗೊಳ್ಳಲಿವೆ” ಎಂದರು.
ಇದನ್ನೂ ಓದಿ: Viral Video: ಕಿಚಡಿಗೆ ಒಗ್ಗರಣೆ ಹಾಕುವುದು ಹೇಗೆಂದು ಬಿಲ್ ಗೇಟ್ಸ್ಗೆ ಕಲಿಸಿಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ!