Site icon Vistara News

Chikkaballapur Nandi Rathothsava: ಸಚಿವ ಸುಧಾಕರ್ ಚಾಲನೆ ಕೊಟ್ಟ ಮರುಕ್ಷಣವೇ ಮುರಿದು ಬಿದ್ದ ಭೋಗನಂದೀಶ್ವರನ ರಥ ಚಕ್ರ

Bhoganandeeshwara's chariot wheel broke down as soon as Minister Sudhakar flagged it off

Bhoganandeeshwara's chariot wheel broke down as soon as Minister Sudhakar flagged it off

ಚಿಕ್ಕಬಳ್ಳಾಪುರ: ಇಲ್ಲಿನ ಭೋಗನಂದೀಶ್ವರ ರಥೋತ್ಸವಕ್ಕೆ (Chikkaballapur Nandi Rathothsava) ಸಚಿವ ಸುಧಾಕರ್​ ಚಾಲನೆ ನೀಡಿದ ಕೆಲವೇ ಕ್ಷಣಗಳಲ್ಲಿ ರಥದ ಚಕ್ರ ಮುರಿದು ಬಿದ್ದ ಘಟನೆ ಭಾನುವಾರ ನಡೆದಿದೆ. ಚಿಕ್ಕಬಳ್ಳಾಪುರದ ದಕ್ಷಿಣ ಕಾಶಿ ನಂದಿ ಗ್ರಾಮದಲ್ಲಿ ಜರಗುವ ಜೋಡಿ ಬ್ರಹ್ಮ ರಥೋತ್ಸವಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

ಶಿವರಾತ್ರಿ ಮುಗಿದ ಮಾರನೇ ದಿನದಂದು ನಡೆಯುವ ಜಾತ್ರೆ ಇದಾಗಿದ್ದು, ಯೋಗ ಮತ್ತು ಭೋಗ ನಂದೀಶ್ವರರ ಜೋಡಿ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ಸಚಿವ ಡಾ.ಕೆ. ಸುಧಾಕರ್‌ ಅವರು ಭಾನುವಾರ (ಫೆ.೧೯) ಜೋಡಿ ರಥೋತ್ಸವಕ್ಕೆ ಚಾಲನೆ ನೀಡಿದ ಕ್ಷಣ ಮಾತ್ರದಲ್ಲೇ ಭೋಗ ನಂದೀಶ್ವರ ರಥದ ಚಕ್ರ ಕಳಚಿದೆ.

ಯೋಗ ನಂದೀಶ್ವರ ರಥ ಮುಂದಕ್ಕೆ ಚಲಿಸುತ್ತಿದ್ದಂತೆ ಇತ್ತ ಭೋಗನಂದೀಶ್ವರ ರಥದ ಚಕ್ರ ಮುರಿದಿದೆ. ಇದರಿಂದಾಗಿ ರಥವೂ ನಿಂತಲ್ಲೇ ನಿಲ್ಲುವಂತಾಯಿತು. ಶ್ರೀಮಂತ ದೇವಸ್ಥಾನ ಎಂದು ಕರೆಸಿಕೊಂಡರಷ್ಟೇ ಸಾಲದು ಗುಣಮಟ್ಟದ ರಥವನ್ನು ರಸ್ತೆಗಿಳಿಸಬೇಕು. ಮುಜರಾಯಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಜಾತ್ರೆಯಲ್ಲಿ ಎದ್ದು ಕಾಣುತ್ತಿದೆ ಎಂದು ಭಕ್ತರು ಕಿಡಿಕಾರಿದರು.

ರಥೋತ್ಸವದಲ್ಲಿ ಮುರಿದು ಬಿದ್ದ ರಥದ ಚಕ್ರ

ಪೊಲೀಸ್‌ ಬಂದೋಬಸ್ತ್‌

ನಂದಿಗ್ರಾಮ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣನ್ನು ಎಸೆದು ಶಿವನ ಭಕ್ತಿಯಲ್ಲಿ ಮಿಂದೆದ್ದರು. ಭೋಗ ನಂದೀಶ್ವರ ರಥದ ಚಕ್ರ ಮುರಿದ ಬಿದ್ದ ಕಾರಣ ಯೋಗ ನಂದೀಶ್ವರನ ರಥದೊಂದಿಗೆ ಮಾತ್ರವೇ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.

ಇದನ್ನೂ ಓದಿ: Sindhuri Vs Roopa : ರೂಪಾಗೆ ಮಾನಸಿಕ ಕಾಯಿಲೆ, ನಾನು ಯಾರಿಗೆ ಫೋಟೊ ಕಳಿಸಿದ್ದೆ ಅಂತ ಹೇಳಲಿ: ರೋಹಿಣಿ ಸಿಂಧೂರಿ ತಿರುಗೇಟು

ರಾತ್ರಿಯೆಲ್ಲ ಜಾಗರಣೆ ಮಾಡಿದ್ದ ಭಕ್ತರು ನಂದಿಯ ಜಾತ್ರೆಯಲ್ಲಿ ಭಾಗವಹಿಸಿ ತೇರಿಗೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಶಿವನಿಗೆ ಸಮರ್ಪಣೆ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version