Site icon Vistara News

Coconut in Worship: ಪೂಜೆ, ಶುಭ ಕಾರ್ಯಗಳಲ್ಲಿ ತೆಂಗಿನಕಾಯಿ ಬಳಸುವುದೇಕೆ ಗೊತ್ತಿದೆಯೆ?

Coconut in Worship

ಹಿಂದೂ ಧರ್ಮದಲ್ಲಿ (hindu  religion) ಪ್ರತಿ ದಿನವೂ ವಿಶೇಷವಾಗಿದೆ. ಯಾಕೆಂದರೆ ಪ್ರತಿ ದಿನ (every day) ಯಾವುದಾದರೊಂದು ದೇವರಿಗೆ (god) ಸಮರ್ಪಿತವಾಗಿದೆ. ಶ್ರದ್ದಾ, ಭಕ್ತಿಯಿಂದ ಪ್ರತಿಯೊಬ್ಬರೂ ಆಯಾ ದಿನಕ್ಕೆ ತಕ್ಕಂತೆ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇದರಿಂದ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ.

ಯಾವುದೇ ಶುಭ ಕಾರ್ಯವಿರಲಿ ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು (Coconut in Worship) ಬಳಸುವುದು ವಾಡಿಕೆ. ಪೂಜೆಯಲ್ಲಿ ತೆಂಗಿನಕಾಯಿಗೆ ವಿಶೇಷ ಮಹತ್ವವಿದೆ. ಯಾವುದೇ ಹೊಸ ಕೆಲಸದ ಪ್ರಾರಂಭದಲ್ಲಿ ತೆಂಗಿನಕಾಯಿಯನ್ನು ಒಡೆಯುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ತೆಂಗಿನಕಾಯಿಯನ್ನು ಎಲ್ಲಾ ರೀತಿಯ ಶುಭ ಕಾರ್ಯಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಪೂಜೆಯ ಸಮಯದಲ್ಲಿ ತೆಂಗಿನಕಾಯಿಯನ್ನು ಬಳಸುವುದರಿಂದ ಅನೇಕ ರೀತಿಯ ದೋಷಗಳು ನಿವಾರಣೆಯಾಗುತ್ತವೆ ಎನ್ನುತ್ತದೆ ಶಾಸ್ತ್ರ.

ಎಲ್ಲಾ ಹಣ್ಣುಗಳಲ್ಲಿ ತೆಂಗಿನಕಾಯಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ತೆಂಗಿನಕಾಯಿಯನ್ನು ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದ ಎಲ್ಲಾ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇದು ಇಲ್ಲದ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.

ತೆಂಗಿನಕಾಯಿಯನ್ನು ಪೂಜೆಯಲ್ಲಿ ಏಕೆ ಬಳಸುತ್ತಾರೆ?

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಬಹುತೇಕ ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆಯುವ ಅಥವಾ ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವುದು ಶ್ರೇಯಸ್ಕರ ಎಂದು ಪರಿಗಣಿಸಲಾಗುತ್ತದೆ.

ತೆಂಗಿನಕಾಯಿಗೆ ಪೂಜಾ ವಸ್ತುವಾಗಿಯೂ ಪ್ರಾಮುಖ್ಯತೆ ಇದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ವ್ಯಕ್ತಿಯ ದುಃಖ ಮತ್ತು ನೋವುಗಳು ದೂರವಾಗುತ್ತವೆ ಮತ್ತು ಒಬ್ಬ ವ್ಯಕ್ತಿಯು ಸಂಪತ್ತು ಮತ್ತು ಇತರ ಅನುಗ್ರಹಗಳನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಪ್ರಸಾದವಾಗಿ ಸ್ವೀಕರಿಸಿದ ತೆಂಗಿನಕಾಯಿಯನ್ನು ತಿನ್ನುವುದರಿಂದ ದೈಹಿಕ ದೌರ್ಬಲ್ಯ ದೂರವಾಗುತ್ತದೆ.


ಶುಭ ಕಾರ್ಯಗಳಲ್ಲಿ ತೆಂಗಿನಕಾಯಿ ಬಳಕೆ

ತೆಂಗಿನಕಾಯಿಯನ್ನು ಹಿಂದೂ ಧರ್ಮದಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ತೆಂಗಿನಕಾಯಿ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿದೆ. ದೇವರಿಗೆ ತೆಂಗಿನಕಾಯಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಿದ ಅನಂತರ ಅದನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.

ತೆಂಗಿನಕಾಯಿಯ ಮಹತ್ವ

ತೆಂಗಿನಕಾಯಿ ಭಗವಾನ್ ನಾರಾಯಣನಿಗೆ ಅಚ್ಚುಮೆಚ್ಚು. ತೆಂಗಿನಕಾಯಿಯ ಹೊರ ಮೇಲ್ಮೈಯನ್ನು ಅಹಂಕಾರದ ಮತ್ತು ಮೃದುವಾದ ಬಿಳಿ ಒಳ ಮೇಲ್ಮೈಯನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ತೆಂಗಿನಕಾಯಿಯನ್ನು ಒಡೆಯುವುದು ಎಂದರೆ ನಾವು ನಮ್ಮ ಅಹಂಕಾರವನ್ನು ದೇವರ ಪಾದಕ್ಕೆ ಸಮರ್ಪಿಸಿದಂತೆ.


ಮೂರು ದೇವತೆಗಳಿರುವ ತೆಂಗಿನಕಾಯಿಗಳು

ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ಇದರಲ್ಲಿ ಮೂರು ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ವಾಸಿಸುತ್ತಾರೆ ಎಂದು ನಂಬಲಾಗಿದೆ. ತೆಂಗಿನಕಾಯಿಯ ಮೇಲಿನ ಮೂರು ಕಣ್ಣುಗಳನ್ನು ಶಿವನ ಮೂರು ಕಣ್ಣುಗಳಿಗೆ ಹೋಲಿಸಲಾಗುತ್ತದೆ. ಆದ್ದರಿಂದ, ತೆಂಗಿನಕಾಯಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ. ರಾಮ- ಸೀತಾ ವಿವಾಹವಾಗಲಿ, ಶಿವ- ಪಾರ್ವತಿಯರ ವಿವಾಹವಾಗಲಿ ಎಲ್ಲಾ ಮದುವೆಗಳಲ್ಲಿ ಕಲಶದ ಮೇಲೆ ತೆಂಗಿನಕಾಯಿಯನ್ನು ಇಟ್ಟು ಪೂಜಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ವಾಸ್ತು ಸಲಹೆ ಪಾಲಿಸಿ

ತೆಂಗಿನಕಾಯಿ ಒಡೆಯುವುದೇಕೆ?

ಗಣಪತಿ ದೇವರಿಗೆ ತೆಂಗಿನಕಾಯಿ ಎಂದರೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಆದ್ದರಿಂದ, ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಗಣಪತಿ ದೇವರನ್ನು ಸ್ಮರಿಸಿ ಪೂಜಿಸಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ತೆಂಗಿನಕಾಯಿ ಒಡೆಯುವುದು ಆ ಕೆಲಸವನ್ನು ಸುಗಮವಾಗಿ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಲಕ್ಷ್ಮಿ ದೇವಿಗೆ ಏಕಮುಖ ತೆಂಗಿನಕಾಯಿ ತುಂಬಾ ಪ್ರಿಯವಾಗಿದೆ. ಇದನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವುದು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ.

Exit mobile version