Site icon Vistara News

Communal harmony | ಧರ್ಮದಂಗಲ್‌ ನಡುವೆ ಸಾಮರಸ್ಯದ ಸಂಭ್ರಮ: ಗಂಗಾವತಿ ದುರ್ಗಮ್ಮನ ಜಾತ್ರೆಯಲ್ಲಿ ಮುಸ್ಲಿಂ ಭಕ್ತರು

gangavati durgamma

ಕೊಪ್ಪಳ: ಎಲ್ಲೆಡೆ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಧರ್ಮ ದಂಗಲ್‌ ನಡೆಯುತ್ತಿದ್ದರೆ, ಜನಸಾಮಾನ್ಯರು ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ದೇವರನ್ನು ಕಾಣುತ್ತಿದ್ದಾರೆ (Communal harmony) ಎನ್ನುವುದಕ್ಕೆ ನಮ್ಮ ಹಲವು ದೇವಸ್ಥಾನಗಳು, ಜಾತ್ರೆಗಳು ಸಾಕ್ಷಿ ನುಡಿಯುತ್ತಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದುರ್ಗಮ್ಮನ ಜಾತ್ರೆಯಲ್ಲಿ ಸಾಕಷ್ಟು ಮುಸ್ಲಿಂ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಳ್ಳುತ್ತಿದ್ದಾರೆ.

ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಇನ್ನೂ ಹಿಂದುಗಳು ಮೊಹರಂ ಸೇರಿದಂತೆ ಮುಸ್ಲಿಂ ಹಬ್ಬಗಳನ್ನು ಆಚರಿಸುವುದು, ಮನೆಗಳಿಗೆ ಹೋಗಿ ಹಬ್ಬದೂಟ ಮಾಡುವ ಸಂಪ್ರದಾಯವಿದೆ. ಅಂತೆಯೇ ಮುಸ್ಲಿಮರು ಜಾತ್ರೆಗಳಿಗೆ ಬಂದು ನಮಸ್ಕರಿಸುತ್ತಾರೆ. ಗಂಗಾವತಿಯಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲೂ ಪ್ರಸಕ್ತ ಜಾತ್ರೆ ನಡೆಯುತ್ತಿದ್ದು, ಅಲ್ಲಿಗೆ ಸಾಕಷ್ಟು ಮಂದಿ ಮುಸ್ಲಿಂ ಭಕ್ತರು ಆಗಮಿಸುತ್ತಿದ್ದಾರೆ.

ಈ ದೇವಸ್ಥಾನ ಗಂಗಾವತಿ ನಗರದಲ್ಲೇ ಇದ್ದು, ಐದು ವರ್ಷಕ್ಕೆ ಒಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಭಾಗದ ದೇವಿ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆ ಸಣ್ಣ ಮಟ್ಟದಲ್ಲಿ ರಥೋತ್ಸವ ನಡೆಯುತ್ತದೆ. ಮುಂದೆ ೩, ೫, ೭, ಹನ್ನೊಂದು ಹೀಗೆ ಬೆಸ ವರ್ಷಗಳ ಅಂತರದಲ್ಲಿ ದೊಡ್ಡ ಮಟ್ಟದ ಜಾತ್ರೆಗಳು ನಡೆಯುತ್ತವೆ. ಗಂಗಾವತಿ ದುರ್ಗಮ್ಮನಿಗೆ ಐದು ವರ್ಷಕ್ಕೊಮ್ಮೆ ಜಾತ್ರೆ.

ಈ ದೇವಸ್ಥಾನಕ್ಕೂ ಹಲವಾರು ಮುಸ್ಲಿಂ ಭಕ್ತರು ನಡೆದುಕೊಳ್ಳುತ್ತಿದ್ದು, ಹಳೆ ತಲೆಮಾರು ಮಾತ್ರವಲ್ಲ ಹೊಸ ತಲೆಮಾರಿನ ಯುವಜನರೂ ಅದೇ ಭಕ್ತಿ ಭಾವವನ್ನು ಹೊಂದಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳು ಕೂಡಾ ತಮ್ಮ ಗೆಳತಿಯರ ಜತೆ ಸೇರಿ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಪೂಜಿಸುತ್ತಾರೆ, ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ. ಗಂಗಾವತಿ ದುರ್ಗಮ್ಮನ ಜಾತ್ರೆ ನಾಳೆವರೆಗೆ ನಡೆಯಲಿದೆ.

ಇದನ್ನೂ ಓದಿ | Hanuma jayanti | ಧರ್ಮ ದಂಗಲ್‌ ನಡುವೆಯೇ ಸಾಮರಸ್ಯ: ಮಾಲೆ ಧರಿಸಿ ಅಂಜನಾದ್ರಿಗೆ ಬಂದ ಮುಸ್ಲಿಂ ವ್ಯಕ್ತಿ

Exit mobile version