Site icon Vistara News

Ram Mandir : ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನಿಸಲಾದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ

Ram Mandir1

ವಿಸ್ತಾರ ನ್ಯೂಸ್​, ಬೆಂಗಳೂರು: ಭಾರತೀಯರ ಬಹು ನಿರೀಕ್ಷೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿದೆ. ದೇಶ ವಿದೇಶಗಳ ಹಲವಾರು ಗಣ್ಯರು ಭಾಗವಹಿಸುವ ಬೃಹತ್​ ಕಾರ್ಯಕ್ರಮಕ್ಕಾಗಿ ಇಡೀ ರಾಷ್ಟ್ರವು ಕುತೂಹಲದಿಂದ ಕಾಯುತ್ತಿದೆ. ವಿಶೇಷವೆಂದರೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಮಾಜಿ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಅವರಂತಹ ಹಲವಾರು ಕ್ರಿಕೆಟಿಗರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್​​ ವಿರಾಟ್ ಕೊಹ್ಲಿ ಸೇರಿದಂತೆ ಪ್ರಸ್ತುತ ಭಾರತೀಯ ಕ್ರಿಕೆಟಿಗರಿಗೆ ತಮ್ಮ ಕೆಲವು ಸಹ ಆಟಗಾರರೊಂದಿಗೆ ಆಹ್ವಾನಗಳು ಬಂದಿವೆ. ವಿಶೇಷವೆಂದರೆ, ಇಂದೋರ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಭಾರತದ ಎರಡನೇ ಟಿ 20 ಪಂದ್ಯದ ನಂತರ ವಿರಾಟ್ ಕೊಹ್ಲಿ ಮುಂಬಯಿಗೆ ಹೋಗಿದ್ದರು. ಅಲ್ಲಿ ಅವರು ರಾಮಮಂದಿರ ಆಹ್ವಾನ ಸ್ವೀಕರಿಸಿದ್ದರು.

ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ನಾಯಕಿ ಹರ್ಮನ್​​ಪ್ರೀತ್​​ ಕೌರ್ ಜನವರಿ 20 ಆಹ್ವಾನಿತರ ಪಟ್ಟಿಗೆ ಸೇರ್ಪಡೆಗೊಂಡಿದ್ದರು.

ಸಚಿನ್​ಗೆ ಮೊದಲು

ಸಚಿನ್ ತೆಂಡೂಲ್ಕರ್ ಅವರು ಮೊದಲು ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ಸ್ವೀಕರಿಸಿದ್ದರು. ನಂತರ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ಹರ್ಮನ್ಪ್ರೀತ್ ಕೌರ್ ಅವರಿಗೂ ಆಹ್ವಾನವನ್ನು ನೀಡಲಾಯಿತು. ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಅಲ್ಲಿಗೆ ಹೋಗಲು ಅನುಮತಿ ನೀಡಿದೆ.

ಇದನ್ನೂ ಓದಿ : Ram Mandir : ಪ್ರಾಣಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಸಿಂಗಾರಗೊಂಡಿರುವ ಮಂದಿರದ ಮನಮೋಹಕ ಚಿತ್ರಗಳು ಇಲ್ಲಿವೆ

ಜನವರಿ 25ರಿಂದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಭಾರತ ಕ್ರಿಕೆಟ್ ತಂಡ ಹೈದರಾಬಾದ್​ನಲ್ಲಿ ಸೇರಿದೆ. ಕೊಹ್ಲಿ ಜನವರಿ 21 ರ ಭಾನುವಾರ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಜನವರಿ 22ರಂದು ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲು ಅಯೋಧ್ಯೆಗೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ.

ಆಹ್ವಾನ ಪಡೆದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ

Exit mobile version