Site icon Vistara News

Datta jayanti | ದತ್ತಪೀಠದ ಆಡಳಿತ ಮಂಡಳಿ ಸದಸ್ಯನಿಗೆ ಗನ್ ಮ್ಯಾನ್, ಮನೆಗೆ ಡಿಎಆರ್ ತುಕಡಿ ನಿಯೋಜನೆ

Datta jayanti

ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹಿಂದು ಅರ್ಚಕರಿಂದ ಪೂಜೆ ನಡೆದಿತ್ತು. ಡಿಸೆಂಬರ್‌ ೬ರಿಂದ ೮ರವರೆಗೆ ದತ್ತ ಜಯಂತಿ (Datta jayanti) ಅದ್ಧೂರಿಯಾಗಿ ನಡೆದಿತ್ತು. ಈಗ ದತ್ತಪೀಠದ ಆಡಳಿತ ಮಂಡಳಿ ಸದಸ್ಯ ಹಾಗೂ ಅರ್ಚಕರಿಗೆ ಗನ್‌ ಮ್ಯಾನ್‌ ನಿಯೋಜನೆ ಮಾಡಲಾಗಿದೆ.

ದತ್ತ ಜಯಂತಿ ವೇಳೆ ಕೆಲ ಕಿಡಿಗೇಡಿಗಳು ಸುಮಾರು ೧ ಕಿ.ಮೀ. ದೂರದವರೆಗೆ ಮೊಳೆಯನ್ನು ಹಾಕಿದ್ದರು. ದರ್ಶನಕ್ಕೆ ಅಡ್ಡಿಪಡಿಸುವ ಹಾಗೂ ಅಪಘಾತಗಳು ಸಂಭವಿಸಲಿ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲ ಘಟನೆಗಳಿಂದ ಭೀತಿಗೊಳಾಗಿರುವ ದತ್ತಪೀಠದ ಆಡಳಿತ ಮಂಡಳಿ ಸದಸ್ಯ ಹಾಗೂ ಅರ್ಚಕರು ಭದ್ರತೆ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗನ್ ಮ್ಯಾನ್ ಹಾಗೂ ಮನೆಗೆ ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.

ದತ್ತಪೀಠದ ಆಡಳಿತ ಸಮಿತಿಯ ಏಕೈಕ ಮುಸ್ಲಿಂ ಸದಸ್ಯ ಸೈಯದ್ ಮಹ್ಮದ್ ಬಾಷಾ, ಹಿಂದು ಧರ್ಮದ ಇಬ್ಬರೂ ಅರ್ಚಕರಿಗೂ ಜಿಲ್ಲಾಡಳಿತ ಗನ್ ಮ್ಯಾನ್ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದೆ.

ಇದನ್ನೂ ಓದಿ | Sukhvinder Singh Sukhu | ಪ್ರತಿಭಾ ಸಿಂಗ್‌ ಬದಲು ಸುಖವಿಂದರ್‌ಗೆ ಕೈ ಹೈಕಮಾಂಡ್‌ ಮಣೆ ಹಾಕಲು ಕಾರಣಗಳೇನು?

Exit mobile version