ಚಿಕ್ಕಮಗಳೂರು: ಕಳೆದೊಂದು ವಾರದಿಂದ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ (Datta Mala Abhiyan) ಭಾನುವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಸಾವಿರಾರು ದತ್ತಭಕ್ತರು ದತ್ತ ಪಾದುಕೆ ದರ್ಶನ ಪಡೆದು ಪುನೀತರಾದರು. ಇದೇ ವೇಳೆ ದೇವಾಲಯದ ಹೊರಭಾಗದಲ್ಲಿ ಹೋಮ-ಹವನ ನಡೆಸಿ, ದತ್ತಪೀಠ ಹಿಂದೂಗಳದ್ದೆಂದು ದತ್ತ ಭಕ್ತರು ಆಗ್ರಹಿಸಿದರು.
ದತ್ತಮಾಲಾ ಅಭಿಯಾನದ ಕೊನೆಯ ದಿನ ನಗರದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ದತ್ತ ಭಕ್ತರಿಂದ ಬೃಹತ್ ಶೋಭಾಯಾತ್ರೆ ನೆರವೇರಿತು. ಸರ್ಕಾರ ಮುಸ್ಲಿಮರ ಓಲೈಕೆ ಮುಂದಾಗಿದೆ, ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹ ಕೇಳಿ ಬಂತು.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ದತ್ತಪೀಠ ಸಂಪೂರ್ಣ ಹಿಂದುಗಳ ಪೀಠವಾಗಬೇಕು. ಇಲ್ಲಿದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ ಹಿಂದುಗಳ ಪೂಜೆಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | Hasanamba Temple : ನಾವೇನು ದನ ಕಾಯೋಕೆ ಇದ್ದೀವಾ! ಹಾಸನಾಂಬ ಉತ್ಸವದಲ್ಲಿ ಡಿಸಿಗೆ ಶಾಸಕ ಸ್ವರೂಪ್ ಪ್ರಕಾಶ್ ಕ್ಲಾಸ್
ಬೆಳಗ್ಗೆ ಶಂಕರಮಠದಿಂದ ಆರಂಭಗೊಂಡ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ದತ್ತಪೀಠಕ್ಕೆ ತೆರಳಿತು. ಈ ವೇಳೆ ಮಾಲಾಧಾರಿಗಳು ಹೋಮ-ಹವನ ನಡೆಸಿದರು. ವಿವಿಧ ಮಠಗಳ ಸ್ವಾಮೀಜಿಗಳು, ದತ್ತಪೀಠವವನ್ನು ಹಿಂದುಗಳಿಗೆ ಒಪ್ಪಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
5 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದ ದತ್ತಮಾಲಾ ಅಭಿಯಾನಕ್ಕೆ ನಗರದಾದ್ಯಂತ ಹಾಗೂ ದತ್ತಪೀಠ ಆವರಣದಲ್ಲಿ ಪೊಲೀಸ್ ಇಲಾಖೆ ಕೂಡ ಸಾಕಷ್ಟು ಬಿಗಿ ಭದ್ರತೆ ಏರ್ಪಡಿಸಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ 2000ಕ್ಕೂ ಅಧಿಕ ಪೊಲೀಸರನ್ನು ದತ್ತಪೀಠ ಹಾಗೂ ನಗರದಾದ್ಯಂತ ನಿಯೋಜಿಸಲಾಗಿತ್ತು.
ಒಟ್ಟಾರೆ, ಕಳೆದೊಂದು ವಾರದಿಂದ ಕೆಸರಿಮಯವಾಗಿದ್ದ ಕಾಫಿನಾಡು, ಪೊಲೀಸರು ಸರ್ಪಗಾವಲಿನಿಂದ ಯಾವುದೇ ಅಹಿತಕರ ಘಟನೆ ನಡೆಯದೇ ಎಲ್ಲಾ ಶಾಂತರೀತಿಯಲ್ಲಿ ಮುಕ್ತಾಯವಾಗಿದ್ದು, ಎಂದಿನಂತೆ ದತ್ತಪೀಠ ಹಿಂದುಗಳ ಪೀಠ, ಅದನ್ನ ಹಿಂದೂಗಳಿಗೆ ಒಪ್ಪಿಸಬೇಕೆಂಬ ಕೂಗು ಬಲವಾಗಿ ಕೇಳಿಬಂತು.
ಗಣೇಶ ಪೂಜೆ ಕುರಿತ ಸಾಣೇನಹಳ್ಳಿ ಶ್ರೀಗಳ ಹೇಳಿಕೆಗೆ ಮುತಾಲಿಕ್ ಆಕ್ಷೇಪ
ಚಿಕ್ಕಮಗಳೂರು: ಸಾಣೇನಹಳ್ಳಿ ಗುರುಗಳ ಬಗ್ಗೆ ಬಹಳ ಗೌರವ ಇದೆ. ವಚನವನ್ನು ನುಡಿಸಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ, ಅದು ಸ್ವಾಗತಾರ್ಹ. ಶುಭ ಕಾರ್ಯ ಮಾಡುವುದಾದರೇ ಪ್ರಥಮ ಪೂಜೆ ಗಣೇಶನಿಗೆ ಮಾಡುತ್ತಾರೆ. ಕೆಲಸ ನಿರ್ವಿಘ್ನವಾಗಿ ನಡೆಯಲಿ ಎಂದು ಸಾವಿರಾರು ವರ್ಷದಿಂದ ಗಣೇಶ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಇದೇನೂ ತಪ್ಪಲ್ಲ, ನಮ್ಮ ನಂಬಿಕೆ, ವಿಶ್ವಾಸ. ಅದರ ಮೇಲೆ ಅಪಪ್ರಚಾರ, ಘಾಸಿ ಮಾಡುವುದು ಗುರುಗಳಿಗೆ ಶೋಭೆ ತರುವಂತಹದ್ದಲ್ಲ. ಇದನ್ನ ನಾನು ಖಂಡಿಸುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಇದನ್ನೂ ಓದಿ | Drought Study: ಬರ ಪರಿಹಾರವಿಲ್ಲ, ಖಜಾನೆ ಖಾಲಿ ಎಂದು ರಾಜ್ಯ ಸರ್ಕಾರ ಘೋಷಿಸಲಿ: ಸಿ.ಟಿ.ರವಿ ಕಿಡಿ
ಗಣೇಶನ ಮೂರ್ತಿ ಪೂಜಿಸುವುದು ನಮ್ಮ ಸಂಸ್ಕೃತಿಯಲ್ಲ ಎಂವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಗಣೇಶನ ಪೂಜೆ ಮಾಡಬಾರದು ಎಂದು ಹೇಳುವ ಹಕ್ಕು ನಿಮಗಿಲ್ಲ, ಸಂವಿಧಾನದಲ್ಲೇ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಬೇರೆಯವರ ನಂಬಿಕೆಗೆ ಘಾಸಿಗೊಳಿಸುವುದು ತಪ್ಪು ಅಂತ ಸಂವಿಧಾನ ಹೇಳಿದೆ. ನೀವು ಮಾಡಬೇಡಿ, ನಿಮ್ಮ ಪರಂಪರೆಯಲ್ಲಿ ಏನಿದೆ ಅದನ್ನು ಮಾಡಿ. ಇವತ್ತು ಗಣೇಶನ ಹಬ್ಬ ಎಲ್ಲರನ್ನೂ ಒಗ್ಗೂಡಿಸುತ್ತಿದೆ. ಜಾತಿ, ಮತ ಪ್ರಾಂತ, ಪಕ್ಷ ಭೇದ ಬಿಟ್ಟು ಒಂದಾಗಿ ಗಣೇಶನ ವಿಸರ್ಜನೆ ಮಾಡುವ ಸಂಪದ್ರಾಯ ಪ್ರಾರಂಭವಾಗಿದೆ. ಅದಕ್ಯಾಕೆ ನೀವು ಧಕ್ಕೆ ಮಾಡುತ್ತೀರಿ ಎಂದು ಕಿಡಿ ಕಾರಿದರು.