Site icon Vistara News

Donation of camels: ಐತಿಹಾಸಿಕ ಫಕೀರೇಶ್ವರ ಸಂಸ್ಥಾನಮಠಕ್ಕೆ ಒಂಟೆಗಳ ದೇಣಿಗೆ ನೀಡಿದ ಭಕ್ತಗಣ

#image_title

ಗದಗ: ಹಿಂದು- ಮುಸ್ಲಿಂ ಐಕ್ಯತೆ ಸಾರುತ್ತಿರುವ ಶಿರಹಟ್ಟಿಯ ಶ್ರೀ ಫಕೀರೇಶ್ವರ ಸಂಸ್ಥಾನಮಠಕ್ಕೆ ಭಕ್ತರು ಒಂಟೆಗಳನ್ನು ದೇಣಿಗೆಯಾಗಿ (Donation of camels) ನೀಡಿದ್ದಾರೆ. ಲಕ್ಷ್ಮೇಶ್ವರದ ಚಂದನ ಶಿಕ್ಷಣ ಸಂಸ್ಥೆ ಹಾಗೂ ಟಿ. ಈಶ್ವರ ಅವರ ಕುಟುಂಬದವರು ಗುಜರಾತ್‌ನಿಂದ ಒಂಟೆಗಳನ್ನು ತರಿಸಿದ್ದಾರೆ.

ಫಕೀರೇಶ್ವರ ಸಂಸ್ಥಾನ ಮಠದ 13ನೇ ಪಟ್ಟಾಧ್ಯಕ್ಷರು ಜಗದ್ಗುರು ಫಕೀರ ಸಿದ್ದರಾಮ ಸ್ವಾಮಿಗಳ ಬಯಕೆಯಂತೆ ಶ್ರೀ ಮಠಕ್ಕೆ ಒಂಟೆಗಳ ಕೊಡುಗೆ ನೀಡಲಾಗುತ್ತಿದೆ. ಶ್ರೀಮಠದಲ್ಲಿ ಹಿಂದಿನಿಂದಲೂ ಆನೆ, ಒಂಟೆಗಳ ವೈಭವ ಇದ್ದು, ರಾಜ ಮನೆತನದ ಸಂಪರ್ಕ ಇದ್ದ ಹಿನ್ನೆಲೆ ಮಠದಲ್ಲಿ ಒಂಟೆ, ಆನೆಗಳ ರಾಜಾಧಿಪತ್ಯ ಇತ್ತು. ಆನೆ ಹಿಂದುಗಳ ಸಂಕೇತವಾದರೆ, ಒಂಟೆಯನ್ನು ಮುಸ್ಲಿಮರ ಸಂಕೇತವಾಗಿದೆ.

ಟಿ ಈಶ್ವರ ಕುಟುಂಬದವರು 15 ವರ್ಷಗಳ ಹಿಂದೆಯೂ 2 ಒಂಟೆಗಳನ್ನು ಕೊಡುಗೆಯಾಗಿ ನೀಡಿದ್ದರು. ಆದರೆ ಇತ್ತೀಚೆಗೆ ಮಠದಲ್ಲಿದ್ದ ಒಂಟೆಗಳು ವಯೋಸಹಜದಿಂದ ಮೃತಪಟ್ಟಿದ್ದವು. ಹೀಗಾಗಿ ಇದೀಗ ಗುಜರಾತ್‌ನಿಂದ ಎರಡು ಒಂಟೆಗಳನ್ನು ತರಿಸಲಾಗಿದೆ. 5 ವರ್ಷದ ಹೆಣ್ಣು ಒಂಟೆ, 6 ವರ್ಷದ ಗಂಡು ಒಂಟೆಗೆ ಲಕ್ಷ್ಮೇಶ್ವರದ ಪಟ್ಟಣದ ಚಂದನ ಸ್ಕೂಲ್‌ನಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಮಠಕ್ಕೆ ಕೊಡುಗೆಯಾಗಿ ನೀಡಲಾಗಿದೆ.

ಇದನ್ನೂ ಓದಿ: Karnataka Election 2023: ಎಣ್ಣೆ ಪ್ರಿಯರಿಗೆ ಶಾಕ್‌; ಕರ್ನಾಟಕದಲ್ಲಿ ಮೇ 8 ರಿಂದ ಮದ್ಯ ಮಾರಾಟ ಬಂದ್‌

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಂಟೆಗಳ ಮೆರವಣಿಗೆಯೊಂದಿಗೆ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠಕ್ಕೆ ದೇಣಿಗೆ ನೀಡಲಾಗಿದೆ. ಮೆರವಣಿಗೆಯಲ್ಲಿ ಸೋಮೇಶ್ವರ ದೇವಸ್ಥಾನ, ದರ್ಗಾಕ್ಕೆಲ್ಲ ಒಂಟೆಗಳನ್ನು ಕರೆದ್ಯೊಯ್ಯಲಾಗಿದೆ. ಹಿಂದು-ಮುಸ್ಲಿಮರ ಭಾವೈಕ್ಯತೆಯನ್ನು ಸಾರುವ ಉದ್ದೇಶದಿಂದ ಮೆರವಣಿಗೆಯನ್ನು ಮಾಡುವ ಪ್ರತೀತಿಯನ್ನು ನಡೆಸಿಕೊಂಡು ಬರಲಾಗಿದೆ.

Exit mobile version