Site icon Vistara News

Dress Code | ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಒತ್ತಾಯ

Dress Code Shambhulingeshwara Temple gunavante

ಕಾರವಾರ: ಹೊನ್ನಾವರ ತಾಲೂಕಿನ ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಭ್ಯ ಉಡುಪುಗಳನ್ನು ಧರಿಸಿ ಬರುವ ದೃಷ್ಟಿಯಿಂದ ದೇವಾಲಯದಲ್ಲಿ ವಸ್ತ್ರ ಸಂಹಿತೆ (Dress Code) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ಸದಸ್ಯರು ಶಂಭುಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.

ಶಂಭುಲಿಂಗೇಶ್ವರ ದೇವಸ್ಥಾನವು ಜಿಲ್ಲೆಯ ಪ್ರಮುಖ ದೇವಾಲಯಗಳ ಪೈಕಿ ಒಂದು. ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು, ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯ ನೀಡುವ ಪುಣ್ಯ ಕ್ಷೇತ್ರವಾಗಿದೆ. ಶಂಭುಲಿಂಗೇಶ್ವರ ಅಸ್ತಿತ್ವದಿಂದ ಗುಣವಂತೆ ಊರು ಪಾವನವಾಗಿದೆ. ಇಂತಹ ದೇವಸ್ಥಾನದ ಪಾವಿತ್ರ್ಯವನ್ನು ಜೋಪಾನ ಮಾಡಿದರೆ ಮಾತ್ರ ಅಲ್ಲಿರುವ ದೈವತ್ವದ ಅನುಭವವನ್ನು ಪಡೆಯಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಧರ್ಭದಲ್ಲಿ ಎಂ.ವಿ ಹೆಗಡೆ, ಎಂ.ಎಸ್ ಹೆಗಡೆ, ಜಿ.ಎಸ್ ಗೌಡ, ಶಂಕರ ಗೌಡ, ಮಾಧವ ಪಂಡಿತ್, ದೇವಪ್ಪ ಜಿ ನಾಯ್ಕ್, ಶಂಭು ಕೇಶವ ಗೌಡ, ಶ್ರೀಧರ ಹೆಗಡೆ, ಗೌರೀಶ್ ಗೌಡ, ಶರತ್ ಕುಮಾರ್ ನಾಯ್ಕ, ಗೌರೀಶ್ ಗೌಡ ಉಪಸ್ಥಿತರಿದ್ದರು.

ಇದನ್ನೂ ಓದಿ | Dress code in temple | ಮುರ್ಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯಕ್ಕೆ ಹಿಂದು ಸಂಘಟನೆಗಳ ಮನವಿ

Exit mobile version