Site icon Vistara News

Dyamavva Jatre: ದ್ಯಾಮವ್ವ ದೇವಿ ಜಾತ್ರೆಗೆ ಆಗಮಿಸಿ ದರುಶನ ಪಡೆದ ಶಿವರಾಜ್‌ ಕುಮಾರ್ ಕುಟುಂಬ, 5 ಲಕ್ಷ ದೇಣಿಗೆ

Shivarajkumar Dyamavva Devi Fair soraba

#image_title

ಸೊರಬ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಳಿಯಂದಿರಾದ ಚಿತ್ರನಟ ಡಾ.ಶಿವರಾಜ್‌ ಕುಮಾರ್ ಹಾಗೂ ಟಿಪಿಎಂಎಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ತಿಲಕ್ ಕುಮಾರ್ ದಂಪತಿ ಸಮೇತ ದ್ಯಾಮವ್ವ ದೇವಿ ಜಾತ್ರೆಗೆ (Dyamavva Jatre) ಆಗಮಿಸಿ ದೇವಿಯ ದರ್ಶನ ಪಡೆದು ತಲಾ ೫ ಲಕ್ಷ ರೂ. ದೇಣಿಗೆಯನ್ನು ದೇವಸ್ಥಾನ ಸಮಿತಿಗೆ ನೀಡಿದರು.

#image_title

ಒಂಬತ್ತು ವರ್ಷಕ್ಕೊಮ್ಮೆ ನಡೆಯುವ ಆನವಟ್ಟಿ ಸಮೀಪದ ಕುಬಟೂರು ದ್ಯಾಮವ್ವ ದೇವಿ ಜಾತ್ರೆಗೆ ನಟ ಶಿವಕುಮಾರ್ ಆಗಮಿಸುತ್ತಿದ್ದಂತೆ, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಸಂಭ್ರಮಿಸಿದರು. ವೇದ ಚಿತ್ರದ ೫೦ ನೇ ದಿನ ಸಂಭ್ರಮವನ್ನು ನಿರ್ಮಾಪಕಿ ಗೀತಾ ಶಿವಕುಮಾರ್ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ಶಿವಕುಮಾರ್ ಅವರು ಬೊಂಬೆ ಹೇಳುತೈತೆ, ಬೊಂಬೆ ಹೇಳುತೈತೆ ನೀನೇ ರಾಜಕುಮಾರ್, ವೇದ ಚಿತ್ರದ ಯಾವನೋ ಇವನು ಗಿಲಕ್ಕೋ ಗೀತೆಗಳನ್ನು ಹಾಡಿ ರಂಜಿಸಿದರು.

ಇದನ್ನೂ ಓದಿ: Karnataka Election : ನಮ್ಮ 123 ಸೀಟು ಅತ್ಲಾಗಿರಲಿ, ನಿಮ್ಮ ಸೀಟಿನ ಕಥೆ ಹೇಳಿ; ಸಿದ್ದರಾಮಯ್ಯಗೆ ಕುಮಾರಸ್ವಾಮಿ ವ್ಯಂಗ್ಯ

ʼಜಾತ್ರೆಯ ಮೊದಲ ದಿನವೇ ಬರಲು ಸಾಧ್ಯವಾಗಲಿಲ್ಲ. ಪತ್ನಿ ಗೀತಾ ಅವರ ಕಾಲು ಆಕಸ್ಮಿಕವಾಗಿ ಮೂಳೆ ಮುರಿತ ವಾಗಿರುವುದರಿಂದ, ನಡೆದಾಡಲು ಸಾಧ್ಯವಾಗದ ಸ್ಥಿತಿ ಆಗಿತ್ತು. ಇನ್ನೂ ಕಾಲು ನೋವು ಇದೆ. ಆದರೆ ದೇವಿಯ ದರ್ಶನ ಪಡೆಯುವ ಸಲುವಾಗಿ ನೋವನ್ನು ಸಹಿಸಿಕೊಂಡು ಬಂದಿದ್ದೇವೆʼ ಎಂದು ಡಾ. ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ತಿಳಿಸಿದರು.

ಸುಜಾತಾ ತಿಲಕ್ ಕುಮಾರ್ ಮಾತನಾಡಿ, ʼತಂದೆಯ ಗುಣಗಳನ್ನೇ ಹೊಂದಿರುವ ತಮ್ಮ ಮಧು ಬಂಗಾರಪ್ಪ ಅವರು ಗುರುವಾರ (ಫೆ.೯) ೩೦ ಸಾವಿರಕ್ಕೂ ಹೆಚ್ಚು ಜನರಿಗೆ ಊಟ ವ್ಯವಸ್ಥೆ ಮಾಡಿ ದೇವಿಗೆ ಭಕ್ತಿ ಸಮರ್ಪಿದ್ದಾರೆ. ತಂದೆ ಕಾಲದಿಂದಲ್ಲೂ ಕುಟುಂಬದವರು ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮ ಆಚರಿಸುತ್ತಿವೆ. ಗ್ರಾಮಸ್ಥರು ನಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಹೃದಯ ಪೂರ್ವಕ ಅಭಿನಂದನೆಗಳುʼ ಎಂದರು.

ಕೆಪಿಸಿಸಿ ರಾಜ್ಯ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ʼನಮ್ಮ ಕುಟುಂಬದ ಮೇಲೆ ಈ ಮಣ್ಣಿನ ಋಣವಿದೆ. ಜಾತ್ಯಾತೀತವಾಗಿ ತಾಲೂಕಿನ ಜನರ ಆರ್ಶೀವಾದವಿರುವುದರಿಂದ ಎಷ್ಟೇ ನೋವು ಇದ್ದರೂ ಗೀತಾಕ್ಕ ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ. ತಾಲೂಕಿನ ಜನರ ಆರ್ಶೀವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿʼ ಎಂದರು.

ಇದನ್ನೂ ಓದಿ: Kantara Movie: ಕಾಂತಾರ-2ಗೆ ಊರ್ವಶಿ ರೌಟೇಲಾ? ರಿಷಬ್‌ ಶೆಟ್ಟಿ ಜತೆ ಫೋಟೊ ಹಂಚಿಕೊಂಡ ನಟಿ

Exit mobile version