Site icon Vistara News

Ellamavasya | ಎಳ್ಳಮಾವಾಸ್ಯೆ ಪ್ರಯುಕ್ತ ಒಂದೇ ದೇವಾಲಯದಲ್ಲಿ 40ಕ್ಕೂ ಹೆಚ್ಚು ಶಕ್ತಿ ದೇವತೆಗಳ ಸಮಾಗಮ

shakti devate kote sri seetharamanjaneya devalaya

ಶಿವಮೊಗ್ಗ: ಇಲ್ಲಿನ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಶುಕ್ರವಾರ (ಡಿ.೨೩) ಶಕ್ತಿ ದೇವತೆಗಳ ಸಮಾಗಮವಾಗಿತ್ತು. ಎಳ್ಳಮಾವಾಸ್ಯೆ (Ellamavasya) ದಿನ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಸಮಾಗಮ ಪೂಜೆ ನಡೆಯಿತು.

ಕಳೆದ 24 ವರ್ಷಗಳಿಂದ ಇಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಶಕ್ತಿ ದೇವತೆಗಳ ಸಮಾವೇಶದಲ್ಲಿ ನಗರದ ವಿವಿಧ ಬಡಾವಣೆಗಳಿಂದ 40ಕ್ಕೂ ಹೆಚ್ಚು ಶಕ್ತಿ ದೇವತೆಗಳು ಇಲ್ಲಿಗೆ ಆಗಮಿಸಿದ್ದವು. ಒಂದೇ ದೇವಾಲಯದಲ್ಲಿ 40ಕ್ಕೂ ಹೆಚ್ಚು ದೇವತೆಗಳನ್ನು ಕಂಡು ಭಕ್ತರು, ಪುನೀತರಾದರು. ಕೋಟೆ ಶ್ರೀ ಸೀತಾರಾಮಂಜನೇಯ ದೇವಾಲಯದಲ್ಲಿ ಈ ಹಿಂದೆ ನರಸಿಂಹ ಮೂರ್ತಿ ಅಯ್ಯಂಗರ್ ಎಂಬ ಪ್ರಧಾನ ಅರ್ಚಕರ ಆಶಯದಂತೆ ಈ ಶಕ್ತಿ ದೇವತೆಗಳ ಸಮಾವೇಶವನ್ನು ಇಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಈ ದೇವಾಲಯದಲ್ಲಿ ಹಿಂದುಳಿದ ಜನಾಂಗಗಳ ಶಕ್ತಿ ದೇವತೆಗಳನ್ನು ಒಂದೆಡೆ ಸೇರಿಸಬೇಕೆಂದು ಮತ್ತು ಮೇಲ್ಪಂಕ್ತಿ, ಕೆಳಪಂಕ್ತಿ ಎಂಬ ಭೇದ ಭಾವವನ್ನು ಹೋಗಲಾಡಿಸುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ಈ ಸಮಾವೇಶವನ್ನು ಆಯೋಜಿಸುತ್ತಾ ಬಂದಿದೆ.


ಇಲ್ಲಿನ ಪ್ರಧಾನ ಅರ್ಚಕ ನರಸಿಂಹ ಮೂರ್ತಿ ಅಯ್ಯಂಗಾರ್‌ ಅವರು ದೇವತೆಗಳ ಸಮಾಗಮವನ್ನು, ಅಕ್ಕ ತಂಗಿಯರ ಸಮಾವೇಶ ಎಂದು ಕರೆಯುತ್ತಿದ್ದರು. ಆದರೆ, ಕ್ರಮೇಣ ಶಕ್ತಿ ದೇವತೆಗಳ ಸಮಾವೇಶ ಎಂದು ಬದಲಾಗಿದೆ. ಅಣ್ಣನ ಮನೆಗೆ ಅಕ್ಕ-ತಂಗಿಯರು ಬಂದು ಬಾಗಿನ ಸ್ವೀಕರಿಸಿ ಹೋಗುವ ಪದ್ಧತಿಯಂತೆ ಈ ಸಮಾವೇಶವನ್ನು ಇಲ್ಲಿ ನಡೆಸಲಾಗುತ್ತಿದೆ. ಕಳೆದ 14 ವರ್ಷಗಳಿಂದ ನಡೆಯುತ್ತಿರುವ ಈ ಸಮಾವೇಶದಲ್ಲಿ ಈ ಬಾರಿ 40 ಕ್ಕೂ ಹೆಚ್ಚು ದೇವತೆಗಳನ್ನು ಇಲ್ಲಿಗೆ ಕರೆತರಲಾಗಿತ್ತು. ಭಜನೆ, ಅನ್ನ ಸಂತರ್ಪಣೆ, ಮಡಿಲಕ್ಕಿ ಸಮರ್ಪಣೆ, ಮಹಾಮಂಗಳಾರತಿ ನಡೆಯಿತು. ರಾತ್ರಿ ದೀಪಾರಾಧನೆ ನಂತರ ದೇವತೆಗಳು ತಮ್ಮ ಸ್ವಸ್ಥಾನಕ್ಕೆ ಹೋಗುವುದು ಈಗಲೂ ಆಚರಣೆಯಲ್ಲಿದೆ.

ಇದನ್ನೂ ಓದಿ | Kareena Kapoor | ಕಾಲೇಜಿನಲ್ಲಿ ಕರೀನಾ ಕಪೂರ್‌‌ಗೆ ಅಟೆಂಡೆನ್ಸ್‌ ಪ್ರಾಬ್ಲಮ್‌ ಇತ್ತು, ಅದನ್ನು ಕ್ಲಿಯರ್‌ ಮಾಡಿದ್ದು ನಟ ವಿವೇಕ್ ಒಬೆರಾಯ್ ಅಂತೆ

Exit mobile version