Site icon Vistara News

Music Festival | ಜನವರಿ 8ರಿಂದ ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಕರ್ಯಂ, ಸಂಗೀತೋತ್ಸವ

sanker mutt

ಬೆಂಗಳೂರು : ಸದ್ಗುರು ಶ್ರೀ ತ್ಯಾಗಬ್ರಹ್ಮ ಆರಾಧನಾ ಕೈಂಕರ್ಯ ಟ್ರಸ್ಟ್​ ಸಹಯೋಗದಲ್ಲಿ ನಗರದ ಶಂಕರಪುರಮ್​ನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜನವರಿ 8ರಿಂದ 12ರವರೆಗೆ 176ನೇ ಶ್ರೀ ಸದ್ಗುರು ಶ್ರೀ ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಂಕರ್ಯ ನಡೆಯಲಿದೆ. ಜತೆಗೆ ಜನವರಿ 6ರಿಂದ 12ರವರೆಗೆ ಸಂಗೀತೋತ್ಸವ (Music Festival) ಕೂಡ ಆಯೋಜನೆಗೊಂಡಿದೆ.

ಐದು ದಿನಗಳ ಈ ಕಾರ್ಯಕ್ರಮದಲ್ಲಿ ಪೂಜೆ, ಹವನಗಳು, ದೀಪ ನಮಸ್ಕಾರಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗುರುವಂದನೆ, ಚತುರ್ವೇದ ಪಾರಾಯಣ, ಶ್ರೀಮದ್​ ವಾಲ್ಮೀಕಿ ಪಾರಾಯಣ, ಅಖಂಡ ರಾಮನಾಮ ಜಪ, ಪ್ರಸ್ಥಾನತ್ರೇಯ ಪಾರಾಯಣ, ಸುವಾಸಿನಿ, ದಂಪತಿ, ಕನ್ಯಾ ಬ್ರಹ್ಮಚಾರಿ ಪೂಜೆ ನಡೆಯಲಿದೆ.

ಏಳು ದಿನಗಳ ಕಾಲ ನಡೆಯಲಿರುವ ಸಂಗೀತೋತ್ಸವದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರತಿನಿತ್ಯ ಸಂಗೀತ ಗೋಷ್ಠಿಗಳು ಆಯೋಜನೆಗೊಂಡಿವೆ. ದೇಶ, ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿರುವ ಸಂಗೀತ ವಿದ್ವಾನ್​ಗಳು ಇಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಎರಡನೇ ದಿನದ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ

Exit mobile version