Site icon Vistara News

Ganesha Chaturthi : ಬಣ್ಣ ಬಳಸದೆ ಸಿರಿಧಾನ್ಯದಿಂದಲೇ ಕಲರ್‌ಫುಲ್‌ ಗಣಪನ ಕ್ರಿಯೇಟ್‌ ಮಾಡಿದ ಹಾವೇರಿಯ ಗಣೇಶ

Siridhanya Ganapa

ಹಾವೇರಿ: ಗಣೇಶ ಎಂದರೆ ಕಲರ್‌ಫುಲ್‌ (Colorful Ganesha). ಎಲ್ಲೆಡೆ ಪ್ರತಿಷ್ಠಾಪನೆ ಮಾಡುವ ಗಣಪ ಹಲವು ಬಣ್ಣಗಳಿಂದ ರಾರಾಜಿಸುತ್ತಾನೆ. ಆದರೆ, ಗಣಪನಿಗೆ ಬಣ್ಣ ತುಂಬಲು ಕೃತಕ ಬಣ್ಣಗಳೇ ಬೇಕಾಗಿಲ್ಲ (No need of Artificial color). ಕೇವಲ ಸಿರಿಧಾನ್ಯ ಬಳಸಿ ಕಲರ್‌ ಫುಲ್‌ ಗಣೇಶನನ್ನು ಸೃಷ್ಟಿಸಬಹುದು ಎಂದು ತೋರಿಸಿದ್ದಾರೆ ಹಾವೇರಿಯ ಒಬ್ಬ ಕಲಾವಿದ (Artist from Haveri). ಅಚ್ಚರಿ ಮತ್ತು ಕಾಕತಾಳೀಯವೆಂದರೆ ಅವರ ಹೆಸರು ಕೂಡಾ ಗಣೇಶ! ಗಣೇಶ ಚತುರ್ಥಿಯ ಅಂಗವಾಗಿ ಹಾವೇರಿಯ ಈ ಕಲಾವಿದ ಯಾವುದೇ ಬಣ್ಣಗಳನ್ನು ಬಳಸದೆ ಐದು ತರಹದ ಸಿರಿಧಾನ್ಯ ಬಳಸಿ ಶ್ರೀ ಗಣಪತಿಯ ಚಿತ್ರವನ್ನು ಬಿಡಿಸಿದ್ದಾರೆ (Ganesha from Siridhanya).

ಹಾವೇರಿಯ ಚಿನ್ನ ಬೆಳ್ಳಿ ಕೆಲಸಗಾರ ಹವ್ಯಾಸಿ ಯುವ ಕಲಾವಿದ ಗಣೇಶ ವೆಂಕಟೇಶ ರಾಯ್ಕರ್ ಅವರು ರಾಗಿ, ನವಣೆ, ಹಾರಕ , ಸಾಮೆ , ಕೊರಲೆ, ಕಾಳಮೆಣಸುಗಳನ್ನು ಉಪಯೋಗಿಸಿ ಎಂಟು ದಿನದಲ್ಲಿ ಗಣೇಶನನ್ನು ಕ್ರಿಯೇಟ್‌ ಮಾಡಿದ್ದಾರೆ. ದಿನದ ಎಲ್ಲ ಕೆಲಸ ಮುಗಿದ ಮೇಲೆ ರಾತ್ರಿ ವೇಳೆ 2 ಗಂಟೆ ಸಮಯ ಮೀಸಲಿಟ್ಟು ಚಿತ್ರವನ್ನು ಬಿಡಿಸಿದ್ದಾರೆ.

ಬಳಸಿದ ರಾಗಿ 2840! ಪ್ರತಿಯೊಂದಕ್ಕೂ ಲೆಕ್ಕ!

ಗಣೇಶ ಅವರು ತಾವು ಸಿರಿ ಧಾನ್ಯ ಬಳಸಿ ಗಣೇಶನ ಚಿತ್ರ ಬಿಡಿಸಿದ್ದು ಮಾತ್ರವಲ್ಲ, ಎಷ್ಟೆಷ್ಟು ಸಿರಿಧಾನ್ಯ ಬಳಸಿದ್ದೇನೆ ಎಂದು ಲೆಕ್ಕ ಕೂಡಾ ಇಟ್ಟಿದ್ದಾರೆ. ಶ್ರೀ ಗಣಪತಿಯ ಚಿತ್ರವನ್ನು ಬಿಡಿಸಲು 2840 ರಾಗಿ, 329 ನವಣೆ, 44 ಹಾರಕ, 65 ಸಾಮೆ, 33 ಕೊರಲೆ, 2 ಕಾಳಮೆಣಸು ಬಳಸಿದ್ದಾರೆ.

ಸಿರಿಧಾನ್ಯವನ್ನೇ ಬಳಸಿ ಚಿತ್ರ ಬರೆದಿದ್ದು ಯಾಕೆಂದರೆ..

ಸಿರಿಧಾನ್ಯಗಳನ್ನೇ ಯಾಕೆ ಬಳಸಿ ಚಿತ್ರವನ್ನು ಬರೆದಿದ್ದೀರಿ ಎನ್ನುವ ಪ್ರಶ್ನೆಗೆ ಅವರು ಹೇಳಿದ ಉತ್ತರ: ಹಿಂದಿನ ಕಾಲದಲ್ಲಿ ಸಿರಿಧಾನ್ಯದ ಮಹತ್ವ ತಿಳಿದು ಅದನ್ನೇ ಬಳಸುತ್ತಿದ್ದರು ಅದರಿಂದ ಆರೋಗ್ಯವಾಗಿದ್ದರು ಆದರೆ ಈಗಿನ ಕಾಲದಲ್ಲಿ ಬಹುತೇಕ ಜನರಿಗೆ ಅದರ ಮಹತ್ವ ಗೊತ್ತಿಲ್ಲ ಆದ ಕಾರಣ ನಾನು ಸಿರಿಧಾನ್ಯದಲ್ಲಿ ಚಿತ್ರ ರಚಿಸಿ ಸಿರಿಧಾನ್ಯದಲ್ಲಿ ಎಷ್ಟು ಸುಂದರ ಚಿತ್ರ ರಚನೆ ಆಗುತ್ತೆ ಅಂದರೆ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಬಾರದು ಎನ್ನುವ ಉದ್ದೇಶದಿಂದ ಸಿರಿಧಾನ್ಯದ ಚಿತ್ರ ರಚಿಸಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.

ಇದನ್ನೂ ಓದಿ: Ganesh Chaturthi: ಗಣಪ ನಮಗೇಕೆ ಇಷ್ಟು ಆಪ್ತ?

ಮಣ್ಣಿನ ಗಣಪತಿ ಮಾಡುವುದೂ ಗೊತ್ತು.. ಆದರೆ..

ಗಣೇಶ ಅವರು ಆರಂಭದಲ್ಲಿ ಮಣ್ಣಿನಲ್ಲಿ ಗಣಪತಿಯ ವಿಗ್ರಹಗಳನ್ನು ಮಾಡುತ್ತಿದ್ದರು. ಆದರೆ ಅವರು ಜಗತ್ತಿಗೆ ಏನಾದರೂ ಒಂದು ಹೊಸತನ್ನು ತೋರಿಸಬೇಕು ವಿಶೇಷವಾಗಿ ಏನನ್ನಾದರೂ ಮಾಡಬೇಕು ಎಂದು ಯೋಚಿಸಿದಾಗ ಹೊಳೆದದ್ದೇ ಸಿರಿಧಾನ್ಯಗಳಲ್ಲಿ ಬಿಡಿಸುವ ಚಿತ್ತಾರ .

‘ಕಲೆಯಲ್ಲಿ ಸ್ವಂತಿಕೆ ಇರಬೇಕು ಎಂದು ನನ್ನದೇ ಆದ ಪ್ರತ್ಯೇಕ ಶೈಲಿಯನ್ನು ರೂಢಿಸಿಕೊಂಡು ಸಿರಿಧಾನ್ಯಗಳ ಮೂಲಕ ಚಿತ್ರಗಳನ್ನು ಬಿಡಿಸುವ ಹವ್ಯಾಸದಲ್ಲಿ ಮಗ್ನನಾಗಿದ್ದೇನೆ ಎನ್ನುತ್ತಾರೆ ಗಣೇಶ. ಇವರ ಈ ಚಿತ್ರವನ್ನು ಅವರ ಬಂಗಾರದ ಅಂಗಡಿಯಲ್ಲಿ ನೋಡಬಹುದು.

Exit mobile version