Site icon Vistara News

Grama Devi Jatre: ಯಲ್ಲಾಪುರ ಶ್ರೀ ಗ್ರಾಮ ದೇವಿ ಜಾತ್ರೆ ಸಂಪನ್ನ

grama devi jatre yallapura

#image_title

ಯಲ್ಲಾಪುರ: ಫೆ.22ರಂದು ಆರಂಭಗೊಂಡು 9 ದಿನಗಳವರೆಗೆ ವೈಭವದಿಂದ ಜರುಗಿದ ಯಲ್ಲಾಪುರ ಶ್ರೀ ಗ್ರಾಮ ದೇವಿ ಜಾತ್ರೆಗೆ (Grama Devi Jatre) ಗುರುವಾರ (ಮಾ.2) ತೆರೆ ಬಿದ್ದಿದೆ.

ಮಧ್ಯಾಹ್ನ 1.30ರ ಮಹಾಮಂಗಳಾರತಿಯೊಂದಿಗೆ ಕೊನೆಗೊಂಡ ಸೇವಾ ಕಾರ್ಯಗಳ ನಂತರ ಧಾರ್ಮಿಕ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ಸಂಜೆ 5 ಗಂಟೆ ಸುಮಾರಿಗೆ ದೇವಿಯರು ವಿಸರ್ಜನಾ ಗದ್ದುಗೆಯಲ್ಲಿ ಆಸೀನರಾದರು. ಜಾತ್ರೆಯ ಕೊನೆಯ ದಿನವಾದ ಗುರುವಾರ (ಮಾ.2) ಮಧ್ಯಾಹ್ನ 1.30ರ ವರೆಗೆ ಭಕ್ತಾದಿಗಳಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದರಿಂದ ಹೆಚ್ಚಿನ ಜನಸಂದಣಿ ಕಂಡುಬಂದಿತು.

ಮಹಾ ಮಂಗಳಾರತಿಯ ನಂತರ ಜಾತ್ರೆಯ ಕೊನೆಯ ಧಾರ್ಮಿಕ ವಿಧಾನಗಳು ನಡೆದು, 4 ಗಂಟೆ ಹೊತ್ತಿಗೆ ಗದ್ದುಗೆಯಿಂದ ದೇವಿಯರನ್ನು ಹೊರತರಲಾಯಿತು. ನಂತರ ಮಾತಂಗಿ ಚಪ್ಪರಕ್ಕೆ ಅಗ್ನಿ ಸ್ಪರ್ಶ ಮಾಡಿ, ದೇವಿಯರ ಮೆರವಣಿಗೆ ಆರಂಭವಾಯಿತು. ಕೊನೆಯ ದಿನ ದೇವಿಯರ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಅಪಾರ ಜನಸ್ತೋಮವೇ ಹರಿದು ಬಂದಿತ್ತು. ದೇವಿ ಮೈದಾನದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಅಂಬೇಡ್ಕರ್‌ ವೃತ್ತದಿಂದ ಸಾಗಿ, ಶ್ರೀ ದೇವಿಯರು ಮುಂಡಗೋಡ ರಸ್ತೆಯಲ್ಲಿರುವ ವಿಸರ್ಜನಾ ಗದ್ದುಗೆಯಲ್ಲಿ ಆಸೀನರಾಗುವುದರೊಂದಿಗೆ ಜಾತ್ರೆಯು ಸಂಪನ್ನಗೊಂಡಿತು.

ಇದನ್ನೂ ಓದಿ: Navavidha Bhakti : ಮುಕ್ತಿ ನೀಡುವ ಭಕ್ತಿ

ಮಧ್ಯರಾತ್ರಿ ಸಾರ್ವಜನಿಕರ ಅನುಪಸ್ಥಿತಿಯಲ್ಲಿ ನಗರದ ಸಂಪೂರ್ಣ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ ದೇವಿಯರನ್ನು ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಮಾ. 13 ರಂದು ದೇವಸ್ಥಾನದಲ್ಲಿ ದೇವಿಯರ ಪುನರ್‌ ಪ್ರತಿಷ್ಠಾಪನೆ ಆಗಲಿದೆ.

ಇದನ್ನೂ ಓದಿ: WPL 2023: ಮಹಿಳಾ ಪ್ರೀಮಿಯರ್ ಲೀಗ್​ನ ಸಂಪೂರ್ಣ ಮಾಹಿತಿ

Exit mobile version