Site icon Vistara News

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Ramalinga Reddy

ಬೆಂಗಳೂರು: ರಾಜ್ಯದ ದೇವಸ್ಥಾನಗಳ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸಚಿವ ರಾಮಲಿಂಗಾ ರೆಡ್ಡಿ ಮುಜರಾಯಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಇನ್ನು ಮುಂದೆ ಹೇಗೆಂದರೆ ಹಾಗೆ ದೇವಸ್ಥಾನ ಕಟ್ಟುವಂತಿಲ್ಲ. ದೇವಾಲಯಗಳ ನಿರ್ಮಾಣ ಕುರಿತಂತೆ ಸರ್ಕಾರ ತಯಾರಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಸಭೆ ನಡೆಸಿದ್ದಾರೆ. ಎ ಮತ್ತು ಬಿ ದರ್ಜೆಯ ಎಲ್ಲ ದೇಗುಲಗಳಲ್ಲಿ 2 ತಿಂಗಳ ಒಳಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸುವಂತೆ ಸಚಿವರು ಸೂಚಿಸಿದ್ದಾರೆ.

ತಸ್ಥಿಕ್‌ ಹಣ ನೇರವಾಗಿ ಅರ್ಚಕರ ಅಕೌಂಟ್‌ಗೆ

ತಸ್ತೀಕ್ ಹಣ ನೇರವಾಗಿ ಅರ್ಚಕರಿಗೆ ತಲುಪುವ ವ್ಯವಸ್ಥೆಯನ್ನು ಜಾರಿ ಮಾಡುತ್ತೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು. ಈ ಸಂಬಂಧ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ರಾಜ್ಯದ ದೇವಾಲಯಗಳಿಗೆ ಶೀಘ್ರ ಡಿಜಿಟಲ್ ಟಚ್!

ದೇಗುಲದಲ್ಲಿ ಭಕ್ತರಿಗೆ ಕಾಣುವಂತೆ ಹುಂಡಿಗಳನ್ನು ಇಡಲು ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ. ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್ ಲೈನ್ ಸೇವೆಯೂ ಬರಲಿದೆ. ಸೆ.21ಕ್ಕೆ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಆ್ಯಪ್ ಮೂಲಕವೇ ದೇವಸ್ಥಾನದ ಶೇ. 40 ರಷ್ಟು ರೂಂ ಬುಕ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ದೇವಸ್ಥಾನಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಖಡಕ್‌ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Ganesh chaturthi : ಈ ಏರಿಯಾದಲ್ಲಿ ಗಣೇಶ ಕೂರಿಸುವಂತಿಲ್ಲ, ಡಿಜೆಗೆ ಅವಕಾಶವೇ ಇಲ್ಲ; ಪೊಲೀಸ್‌ ಗೈಡ್‌ಲೈನ್ಸ್‌!

ಕಾಶಿ ಯಾತ್ರೆ ಹೋಗುವವರಿಗೆ ಸರ್ಕಾರ ಬಂಪರ್ ಗಿಫ್ಟ್!

ಕಾಶಿ ಯಾತ್ರೆ, ಮಾನಸ ಸರೋವರ ಯಾತ್ರೆ, ಭಾರತ್ ಗೌರವ್ ಕಾಶಿ ಯಾತ್ರೆಗೆ ಸಹಾಯ ಧನ ನೀಡಲು ವಿಶೇಷ ಆ್ಯಪ್‌ವೊಂದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದಾರೆ. ಯಾತ್ರಾರ್ಥಿಗಳು ಆನ್‌ಲೈನ್‌ ಮೂಲಕವೇ ಸಹಾಯ ಧನವನ್ನು ಪಡೆಯಬಹುದು. ರೈಲ್ವೇ ಟಿಕೆಟ್‌ ಹಾಗೂ ದೇವಸ್ಥಾನದ ಮುಂದೆ ತಾವಿರುವ ಫೋಟೊವನ್ನು ಅಪ್‌ಲೋಡ್‌ ಮಾಡಿದರೆ ಸರಕಾರದ ಸಹಾಯ ಧನ ಬರಲಿದೆ. ಈ ಹಿಂದೆಲ್ಲ ಯಾತ್ರಾರ್ಥಿಗಳು ಸಹಾಯಧನಕ್ಕಾಗಿ ಪ್ರಮಾಣಪತ್ರವನ್ನು ನೀಡಬೇಕಿತ್ತು. ಆದರೆ ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ. ಕಾಶಿ ಸೇರಿದಂತೆ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಮೊದಲಿದ್ದ ಸಬ್ಸಿಡಿಯನ್ನು ಹೆಚ್ಚಳ ಮಾಡಲಾಗಿದೆ.

ಅಧಿಕಾರಿಗಳಿಗೆ ಸಚಿವರು ಕೊಟ್ಟ ಸೂಚನೆಗಳೇನು?

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version