Site icon Vistara News

Hanuma Jayanti 2023: ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ; ಭಕ್ತಾದಿಗಳಿಗೆ ತಂಪು ಪಾನೀಯ ವಿತರಿಸಿದ ಮುಸ್ಲಿಮರು

#image_title

ತುಮಕೂರು/ಕೊಪ್ಪಳ: ಐತಿಹಾಸಿಕ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ (Shettihalli Anjaneya Swamy Rathotsava) ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಭಾವೈಕ್ಯತೆ ಮೆರೆದಿದ್ದಾರೆ. ರಂಜಾನ್ ಉಪವಾಸ ಮಾಡುತ್ತಿದ್ದರೂ ರಥೋತ್ಸವಕ್ಕೆ ಬರುವ ಭಕ್ತಾದಿಗಳಿಗೆ (Hanuma Jayanti 2023) ತಂಪು ಪಾನೀಯ ವಿತರಿಸಿದರು.

ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಯುವಕರಿಂದ ಪಾನೀಯ ವಿತರಣೆ

ಪೆಂಡಾಲ್ವೊಂದನ್ನು ತಾವೇ ನಿರ್ಮಿಸಿಕೊಂಡು ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸ್ವಾಗತ ಕೋರಿದರು. ಮೋತಿ ಮಸ್ಜಿದ್‌ ತಂಡದವರು ಕಲ್ಲಂಗಡಿ ಹಣ್ಣು, ಹಾಲು, ಡ್ರೈ ಫ್ರೂಟ್ಸ್ ಹಾಕಿ ತಾವೇ ವಿಶೇಷವಾದ ತಂಪು ಪಾನೀಯವನ್ನು ತಯಾರಿಸಿದ್ದರು. ಬಿಸಿಲ ಧಗೆಗೆ ಭಕ್ತಾದಿಗಳು ನಾ ಮುಂದು ತಾ ಮುಂದು ಎಂದು ಪಾನೀಯ ಕುಡಿದು ದಣಿವಾರಿಸಿಕೊಂಡರು.

ಹನುಮನ ನಾಮಸ್ಮರಣೆ

ಹನುಮ‌ ಜಯಂತಿ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಹನುಮ ಜಯಂತಿಗಾಗಿ ಸಾವಿರಾರು ಭಕ್ತರು ಮಾಲೆ ಧರಿಸಿ, ಇರಮುಡಿ ಕಟ್ಟಿಕೊಂಡು ಅಂಜನಾದ್ರಿಯಲ್ಲಿ ಇರುಮುಡಿ ಸಮರ್ಪಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು.

ಅಂಜನಾದ್ರಿ ಬೆಟ್ಟದಲ್ಲಿ ಹೋಮಹವನದಲ್ಲಿ ಭಕ್ತಾದಿಗಳು

ಕರ್ನಾಟಕ, ಮಹಾರಾಷ್ಟ್ರದಿಂದ ಭಕ್ತಾದಿಗಳು ಆಗಮಿಸಿದ್ದು ಎಲ್ಲೆಡೆ ರಾಮ ಜಪ, ಹನುಮ ಜಪದೊಂದಿಗೆ ಅಂಜನಾದ್ರಿ ಪರ್ವತ ಏರಿದರು. ಇನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉಪಾಹಾರ ವ್ಯವಸ್ಥೆ ಇರಲಿಲ್ಲ. ಆದರೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಲ್ಲದೆ, ಭದ್ರತೆಯನ್ನು ಕಲ್ಪಿಸಲಾಗಿತ್ತು.

ಸುಪ್ರಸಿದ್ಧ ತುಳಸಿಗೇರಿಯ ಆಂಜನೇಯ ದೇಗುಲ

ಇದನ್ನೂ ಓದಿ: Bengaluru Karaga 2023: ಬೆಂಗಳೂರು ಕರಗ ಮಹೋತ್ಸವದಲ್ಲಿ ಅಗ್ನಿ ಅವಘಡ: ಕರ್ಪೂರ ಸೇವೆ ವೇಳೆ ಹೊತ್ತಿ ಉರಿದ ವಾಹನಗಳು

ಇತ್ತ ಬಾಗಲಕೋಟೆ ತಾಲೂಕಿನ ತುಳಸಿಗೇರಿಯ ಸುಪ್ರಸಿದ್ಧ ಆಂಜನೇಯ ದೇಗುಲದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ವರ್ಷಗಳ ಇತಿಹಾಸ ಇರುವ ಪ್ರಸಿದ್ಧ ದೇವಾಲಯಕ್ಕೆ ಭಕ್ತ ಸಮೂಹ ವಿಶೇಷ ಪೂಜೆ ಸಲ್ಲಿಸಿತು.

ಅಂಜನಾದ್ರಿಯಲ್ಲಿ ಹನುಮ ಜಪ

Exit mobile version