ಕಷ್ಟ, ಭಯದಿಂದ ದೂರವಾಗಲು ಹನುಮಾನ್ ಚಾಲೀಸಾ (Hanuman Chalisa) ಪಠಿಸುವಂತೆ ಮನೆಯ ಹಿರಿಯರು ಮಕ್ಕಳಿಗೆ ಹೇಳುತ್ತಾರೆ. ಹನುಮಾನ್ ಚಾಲೀಸಾವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮತ್ತು ಸರಿಯಾಗಿ ಓದಿದರೆ ಮಾತ್ರ ಅದರ ಪ್ರಯೋಜನವನ್ನು ಪಡೆಯಲು ಸಾಧ್ಯ. ಹನುಮಾನ್ ಚಾಲೀಸಾ ಓದುವಾಗ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು.
ಹನುಮಾನ್ ಚಾಲೀಸವನ್ನು 16ನೇ ಶತಮಾನದಲ್ಲಿ ಕವಿ-ಸಂತ (poet-saint) ತುಳಸಿದಾಸರು (Tulsidas) ರಚಿಸಿದರು ಎಂದು ಹೇಳಲಾಗುತ್ತದೆ. ತುಳಸಿದಾಸರ ಹಲವಾರು ಕೃತಿಗಳಲ್ಲಿ ಹನುಮಾನ್ ಚಾಲೀಸಾವು ಅವರ ಅತ್ಯಂತ ಪ್ರಸಿದ್ಧ ಸಂಯೋಜನೆಗಳಲ್ಲಿ ಒಂದಾಗಿದೆ. ಅನಂತರದ ಸ್ಥಾನದಲ್ಲಿದೆ ಅವರ ರಾಮಚರಿತಮಾನಸ (Ramcharitmanas).
ಹನುಮಾನ್ ಚಾಲೀಸ ಸ್ತೋತ್ರವು ಹಿಂದೂ ಭಕ್ತಿ ಮತ್ತು ಸಾಹಿತ್ಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಭಗವಾನ್ ಹನುಮಂತನ ಸದ್ಗುಣಗಳು ಮತ್ತು ಕಾರ್ಯಗಳನ್ನು ವಿವರಿಸುವ ಇದು ಶಕ್ತಿ, ರಕ್ಷಣೆ ಮತ್ತು ಬುದ್ಧಿವಂತಿಕೆಗಾಗಿ ಹನುಮಾನ್ ದೇವರ ಆಶೀರ್ವಾದವನ್ನು ಕೋರುತ್ತದೆ.
ಚಾಲೀಸಾ ಎಂದರೇನು?
ಚಾಲೀಸಾ ಎಂಬುದು ಹಿಂದಿಯಿಂದ ಬಂದ ಪದವಾಗಿದೆ. “ಚಾಲಿಸಾ” ಎಂಬ ಪದವು 40 ಸಂಖ್ಯೆಯನ್ನು ಸೂಚಿಸುತ್ತದೆ. ಇದು ಹನುಮಾನ್ ಚಾಲೀಸಾವನ್ನು ನಿರ್ದಿಷ್ಟ ಅವಧಿಗೆ ಸಾಂಪ್ರದಾಯಿಕವಾಗಿ 40 ದಿನಗಳವರೆಗೆ ಅದರ ಸಂಪೂರ್ಣ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಲು ಪಠಿಸಬೇಕು ಎಂಬ ನಂಬಿಕೆಯನ್ನು ಸೂಚಿಸುತ್ತದೆ.
ಯಾವ ತಪ್ಪುಗಳನ್ನು ಮಾಡಬಾರದು?
ಹನುಮಾನ್ ಚಾಲೀಸಾವನ್ನು ಪಠಿಸುವಾಗ ಈ ಐದು ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಹಿರಿಯರು. ಹನುಮಂತನ ಆಶೀರ್ವಾದ ಮತ್ತು ರಕ್ಷಣೆಗಾಗಿ ಹನುಮಾನ್ ಚಾಲೀಸಾವನ್ನು ಪಠಿಸುವಾಗ ಸರಿಯಾಗಿ ಮತ್ತು ಗೌರವಾನ್ವಿತವಾಗಿ ಪಠಿಸಬೇಕು. ಇದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ.
ಒಮ್ಮೆ ನೀವು ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿದರೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಮಾಡಬೇಕು. ಸ್ತೋತ್ರದ ಆಧ್ಯಾತ್ಮಿಕ ಶಕ್ತಿಯ ಸಂಪೂರ್ಣ ಪ್ರಯೋಜನ ಪಡೆಯಲು 21 ಅಥವಾ 40 ದಿನಗಳವರೆಗೆ ಹನುಮಾನ್ ಚಾಲೀಸವನ್ನು ಪಠಿಸಬೇಕು.
ಯಾವುದೇ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗುವ ಮೊದಲು ಶುದ್ಧವಾದ ಬಟ್ಟೆಗಳನ್ನು ಧರಿಸುವುದು ಅತ್ಯಗತ್ಯ. ಸ್ವಚ್ಛವಾದ ಉಡುಪು ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಮನಸ್ಸನ್ನು ಶುದ್ಧೀಕರಿಸುತ್ತದೆ. ನಿತ್ಯ ಪಠಣಕ್ಕಾಗಿ ಪವಿತ್ರ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಹನುಮಾನ್ ಚಾಲೀಸಾವನ್ನು ಪಠಿಸಲು ಬಯಸುವವರು ಮದ್ಯ ಮತ್ತು ಮಾಂಸ ಸೇವನೆಯಿಂದ ದೂರವಿರಿ. ಈ ಶಿಸ್ತು ಅಳವಡಿಸಿಕೊಳ್ಳುವುದು ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಆಚರಣೆಯ ಪವಿತ್ರತೆಗೆ ಗೌರವವನ್ನು ತೋರಿಸುತ್ತದೆ.
ಚಾಲೀಸಾವನ್ನು ಪೂರ್ಣಗೊಳಿಸಲು ಅವಸರ ಅವಸರವಾಗಿ ಓದಬೇಡಿ. ಗಮನವನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿ ಪಠಿಸಿ.
ಇದನ್ನೂ ಓದಿ: Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ
ಹನುಮಾನ್ ಚಾಲೀಸಾವನ್ನು ಪಠಿಸಲು ಸೂಕ್ತವಾದ ಸಮಯ ಬ್ರಾಹ್ಮಿ ಮುಹೂರ್ತ. ಈ ಅವಧಿಯು ಯಾವುದೇ ಆಧ್ಯಾತ್ಮಿಕ ಚಟುವಟಿಕೆಯನ್ನು ಪ್ರಾರಂಭಿಸಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬ್ರಹ್ಮ ಮುಹೂರ್ತದ ವೇಳೆ ಸ್ತೋತ್ರವನ್ನು ಪಠಿಸುವುದು ಅದರ ಆಧ್ಯಾತ್ಮಿಕ ಪ್ರಯೋಜನಗಳನ್ನು ವರ್ಧಿಸುತ್ತದೆ ಮತ್ತು ದೈವಿಕತೆಯೊಂದಿಗೆ ಹೆಚ್ಚು ಆಳವಾಗಿ ಸಂಪರ್ಕಿಸುತ್ತದೆ.
ಹನುಮಾನ್ ಚಾಲೀಸವು ಎಲ್ಲಾ ಸಮಸ್ಯೆಗಳು ಮತ್ತು ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುತ್ತದೆ.