Site icon Vistara News

ಶಿರಸಿ: ಲೋಕ ಕಲ್ಯಾಣಕ್ಕಾಗಿ 11 ಯಜ್ಞಕುಂಡಗಳಲ್ಲಿ ಮಹಾರುದ್ರಯಾಗ

ಮಹಾರುದ್ರಯಾಗ

ಶಿರಸಿ: ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಮಹಾರುದ್ರಯಾಗ, ವೈದಕರ ವೇದ ಘೋಷ, ಭಕ್ತರ ಭಕ್ತಿಯ ಪರಾಕಾಷ್ಟೆಯೊಂದಿಗೆ ಶನಿವಾರ ಸಂಪನ್ನಗೊಂಡಿದೆ.

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಕುಟುಂಬ ಲೋಕ ಕಲ್ಯಾಣಾರ್ಥವಾಗಿ ಈ ಮಹಾಯಾಗ ನಡೆಸಿತು. 11 ಯಜ್ಞ ಕುಂಡಗಳನ್ನು ಸ್ಥಾಪಿಸಲಾಗಿತ್ತು. ವಿದ್ವಾನ್ ಕುಮಾರ ಭಟ್ ಕೊಳಗಿಬೀಸ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ನಡೆದ ಈ ಮಹಾಯಾಗದಲ್ಲಿ ವಿ. ವಿನಾಯಕ ಭಟ್ ಹೊಸಳ್ಳಿ, ಆದರ್ಶ ಭಟ್, ಸುಬ್ರಾಯ ಭಟ್, ಶ್ರೀನಾಥ ಭಟ್ ಮತ್ತಿಘಟ್ಟ, ಸುರೇಶ ಭಟ್ ಕಂಚಿಕೊಪ್ಪ, ಮಹಾಬಲೇಶ್ವರ ಭಟ್ ಗೋಳಿ, ರಾಜಾರಾಮ ಭಟ್ ಹೆಗ್ಗರ್ಸಿಮನೆ ಸೇರಿದಂತೆ 151 ವೈದಿಕರು ಪಾಲ್ಗೊಂಡಿದ್ದರು.

ಜಗತ್ತನ್ನು ಕಾಡುತ್ತಿರುವ ಕೊವಿಡ್ -19 ಮಾರಿ ಸಂಪೂರ್ಣ ನಿವಾರಣೆ ಆಗುವಂತೆ ದುರ್ಗಾ ಶಾಂತಿ ನಡೆಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. 11 ಯಜ್ಞ ಕುಂಡದಲ್ಲಿ ಏಕಕಾಲಕ್ಕೆ ಪೂರ್ಣಾಹುತಿ ನಡೆಯಿತು. ಯಜ್ಞದ ಯಜಮಾನತ್ವವನ್ನು ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಪತ್ನಿ ಹೇಮಾ, ಕುಟುಂಬದ ಸದಸ್ಯರಾದ ನಿವೇದಿತಾ ಹಾಗೂ ಅಕ್ಷತ್ ಹೆಗಡೆ ವಹಿಸಿದ್ದರು.

ಯಾಗದಲ್ಲಿ ಪಾಲ್ಗೊಂಡಿರುವ ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್.

ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ದಂಪತಿ, ಶ್ರೀಧರ ಭಟ್ ಕೊಳಗಿಬೀಸ್ ದಂಪತಿ, ಮತ್ತಿಗಾರ ನೇರ್ಲವಳ್ಳಿ ಹಾಗೂ ಕೊಳಗಬೀಸ್ ಸುತ್ತಮುತ್ತಲಿನ ಗ್ರಾಮಗಳ ಜನತೆ ಮಹಾರುದ್ರಯಾಗದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ| ಶ್ರೀನಿವಾಸ್‌ ಹೆಬ್ಬಾರ್‌ ನೇತೃತ್ವದಲ್ಲಿ ಮಾರುತಿ ದೇವಸ್ಥಾನದ ಪ್ರವೇಶದ್ವಾರ ಉದ್ಘಾಟನೆ

Exit mobile version