Site icon Vistara News

Hasanamba Temple : ನಾವೇನು ದನ ಕಾಯೋಕೆ ಇದ್ದೀವಾ! ಹಾಸನಾಂಬ ಉತ್ಸವದಲ್ಲಿ ಡಿಸಿಗೆ ಶಾಸಕ ಸ್ವರೂಪ್‌ ಪ್ರಕಾಶ್‌ ಕ್ಲಾಸ್‌

MLA Swaroop Prakash upset with DC Satyabhama at Hasanamba festival

ಹಾಸನ: ಹಾಸನಾಂಬೆ ಸಾರ್ವಜನಿಕ ದರ್ಶನದ (Hasanamba Temple) 2ನೇ ದಿನವು ಜನ ಸಾಗರವೇ ಹರಿದು ಬಂದಿದೆ. ಇನ್ನು ಪ್ರತಿ ವರ್ಷ ಹಾಸನಾಂಬೆ ಉತ್ಸವದಲ್ಲಿ ಗದ್ದಲ ಗಲಾಟೆ ಇದ್ದೆ ಇರುತ್ತೆ. ಈ ಬಾರಿ ಹಾಸನಾಂಬೆ ಉತ್ಸವದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಸ್ಥಳೀಯ ಶಾಸಕರ ಕಡೆಗಣನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ನಡೆಗೆ ಶಾಸಕ ಸ್ವರೂಪ್‌ ಪ್ರಕಾಶ್‌ ಆಕ್ರೋಶ ಹೊರಹಾಕಿದರು. ಹಾಸನಾಂಬ ದೇವಾಲಯದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಏಕಪಕ್ಷೀಯ ಆಡಳಿತ ನಡೆಸುತ್ತಿದ್ದಾರೆ. ಶಾಸಕರನ್ನು ಯಾವುದಕ್ಕೂ ಪರಿಗಣಿಸುತ್ತಿಲ್ಲ. ಕಳಸ ಪ್ರತಿಷ್ಠಾಪನೆ, ಹೆಲಿ ಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಸತ್ಯಭಾವರೇ ಚಾಲನೆ ನೀಡಿದ್ದಾರೆ. ಈ ಬಾರಿ ಹಾಸನಾಂಬ ಉತ್ಸವ ಆಗಿಲ್ಲ, ಸತ್ಯಭಾಮ ಉತ್ಸವ ಆಗಿದೆ ಎಂದು ಶಾಸಕ ಸ್ವರೂಪ್‌ ಪ್ರಕಾಶ್‌ ದೇಗುಲದ ಮುಂಭಾಗ ಕಿರಿಕಾರಿದರು.

ಇದನ್ನೂ ಓದಿ: Physical Abuse : 7 ವರ್ಷದ ಬಾಲಕಿ ಮೇಲೆ ಎರಗಿದ ಶಾಲಾ ಶಿಕ್ಷಕ ಅರೆಸ್ಟ್‌!

ನಗರಸಭೆ ಸದಸ್ಯರು, ಬಿಜೆಪಿ ಸದಸ್ಯರು, ಜೆಡಿಎಸ್ ಮುಖಂಡರು ಆಕ್ರೋಶ ಹೊರಹಾಕಿದರು. ಇದೇ ವೇಳೆ ಜಿಲ್ಲಾಧಿಕಾರಿ ಸತ್ಯಭಾವ ಅವರನ್ನು ಶಾಸಕ ಸ್ವರೂಪ್ ಪ್ರಕಾಶ್ ತರಾಟೆಗೆ ತೆಗೆದುಕೊಂಡರು. ಕಳಸ ಪ್ರತಿಷ್ಠಾಪನೆಗೆ ಯಾಕೆ ಕರೆದಿಲ್ಲ? ನಾವೇನು ದನ ಕಾಯೋಕೆ ಇದ್ದೀವಾ ಎಂದು ಸಿಟ್ಟಾದರು.

ಕುಟುಂಬದವರೊಂದಿಗೆ ಕಳಸ ಪ್ರತಿಷ್ಠಾಪನೆ ಮಾಡಿದ ಡಿಸಿ ಸತ್ಯಭಾಮ

ಹೆಲಿ ಟೂರಿಸಂಗೆ ಚಾಲನೆ ನೀಡಿದ್ದೀರಿ ನಮ್ಮನ್ನ ಕಡೆಗಣಿಸಿದ್ದೀರಿ. ತಮ್ಮ ಕುಟುಂಬದ ಕಾರ್ಯಕ್ರಮದಂತೆ ನೀವು ನಿಮ್ಮ ಪತಿ ಕೂತುಕೊಂಡು ಹೇಗೆ ಹೋಮ ಮಾಡಿದ್ದೀರಿ? ಎಂದು ಡಿಸಿಗೆ ಪ್ರಶ್ನೆಗಳ ಸುರಿಮಳೆಗೈದರು. ಇದೇ ವೇಳೆ ಹಾಸನಾಂಬೆ ದೇಗುಲದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಶಾಸಕರನ್ನು ಸೌಜನ್ಯಕ್ಕಾದರೂ ಕರೆದಿಲ್ಲ ಎಂದು ಶಾಸಕರ ಬೆಂಬಲಿಗರು ಆಕ್ರೋಶ ಹೊರಹಾಕಿದರು.

24 ಗಂಟೆಯು ಹಾಸನಾಂಬೆ ದರ್ಶನ

ಶನಿವಾರ ಆಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೇ ದರ್ಶನ ಆರಂಭವಾಗಿದ್ದು, ಕಿ.ಮೀ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಶನಿವಾರದಿಂದ 24 ಗಂಟೆಯು ಹಾಸನಾಂಬೆ ದರ್ಶನ ಭಾಗ್ಯ ಇರಲಿದೆ. ಮಧ್ಯಾಹ್ನ 1-30 ರಿಂದ 3, ಮುಂಜಾನೆ 2 ರಿಂದ 4 ನೈವೇದ್ಯ ಪೂಜೆಗೆ ಬಿಡುವು ಇರಲಿದೆ. ನೈವೇದ್ಯ ಅವಧಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ 24 ಗಂಟೆಯು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version