Site icon Vistara News

Raksha Bandhan | ಅಪ್ಪು ಭಾವಚಿತ್ರದ ರಾಖಿಗಳಿಗೆ ಸಖತ್ ಡಿಮ್ಯಾಂಡ್

Raksha Bandhan

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ಹಲವು ತಿಂಗಳುಗಳೇ ಕಳೆದರೂ ಅವರ ಮೇಲಿನ ಅಭಿಮಾನ ಜನರಿಗೆ ಕಡಿಮೆಯಾಗಿಲ್ಲ. ಅವರನ್ನು ಒಂದಿಲ್ಲೊಂದು ರೀತಿಯಲ್ಲಿ ಜನರು ಸ್ಮರಿಸಿಕೊಳ್ಳುತ್ತಲೇ ಇದ್ದಾರೆ. ಇದೀಗ ರಕ್ಷಾ ಬಂಧನದ(Raksha Bandhan) ಸಂದರ್ಭದಲ್ಲಿಯೂ ಅವರನ್ನು ನೆನಪಿಸಿಕೊಳ್ಳುತ್ತಿದ್ದು, ಅಪ್ಪು ಭಾವಚಿತ್ರವಿರುವ ರಾಖಿಗಳಿಗೆ ಸಖತ್‌ ಡಿಮ್ಯಾಂಡ್‌ ಸೃಷ್ಟಿಯಾಗಿದೆ.

ಸಹೋದರತ್ವದ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬ ಗುರುವಾರ ನಡೆಯಲಿದೆ. ರಕ್ಷಾ ಬಂಧನಕ್ಕಾಗಿ ಮಾರುಕಟ್ಟೆಯಲ್ಲಿ ನಾನಾ‌ ರೀತಿಯ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಆದರೆ ಅಪ್ಪು ಭಾವಚಿತ್ರದ ರಾಖಿಗೆ ಬಹಳ ಬೇಡಿಕೆ ಇದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಅಪ್ಪು ಫೋಟೊ ಇರುವ ರಾಖಿಗಳು ಹೆಚ್ಚು ಮಾರಾಟವಾಗಿವೆ.

ಅಪ್ಪು ಭಾವಚಿತ್ರ ಇರುವ ರಾಖಿಗಳನ್ನು ಜನರು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಕುಷ್ಟಗಿ ಪಟ್ಟಣದ ಅಂಗಡಿಯೊಂದರಲ್ಲಿಯೇ ಅಪ್ಪು ಭಾವಚಿತ್ರವಿರುವ 3 ಸಾವಿರಕ್ಕೂ ಅಧಿಕ ರಾಖಿಗಳು ಮಾರಾಟವಾಗಿವೆ ಎಂದು ಅಂಗಡಿ ಮಾಲೀಕ ಶಿವಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ | Rakhi Fashion | ರಕ್ಷಾಬಂಧನಕ್ಕೆ 5 ಟ್ರೆಂಡಿ ಔಟ್‌ಫಿಟ್ಸ್

Exit mobile version