Site icon Vistara News

Bengaluru Karaga: ಬುಧವಾರ ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ; 9 ದಿನ ನಡೆಯಲಿದೆ ಉತ್ಸವ

bengaluru karaga

bengaluru karaga

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗಕ್ಕೆ ಮಾ.29ರಂದು ಚಾಲನೆ ದೊರೆಯಲಿದ್ದು, ಬುಧವಾರ ರಾತ್ರಿ 10 ಗಂಟೆಗೆ ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಧ್ವಜಸ್ತಂಭ ನೆಡುವ ಮೂಲಕ ಕರಗಕ್ಕೆ (Bengaluru Karaga) ಚಾಲನೆ ನೀಡಲಾಗುತ್ತದೆ. 9 ದಿನಗಳ ಕಾಲ ಉತ್ಸವ ನಡೆಯಲಿದೆ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ತಿಳಿಸಿದ್ದಾರೆ.

ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕರಗವನ್ನು ಬಹಳ ವಿಜೃಂಭಣೆಯಿಂದ ಮಾಡಲು ತಯಾರಿ ನಡೆಸಲಾಗಿದೆ. 9 ಬಾಗಿಲು ಪೂಜೆ ಆಗಲಿದ್ದು, ಏಪ್ರಿಲ್ 4ರಂದು ಹಸಿ ಕರಗ, ಏ. 6ಕ್ಕೆ ಶಕ್ತ್ಯೂತ್ಸವ ನಡೆಯಲಿದೆ. ಈ ಬಾರಿಯೂ ಕರಗ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗುತ್ತದೆ. ಈ ವರ್ಷ ಕೂಡ ಜ್ಞಾನೇಂದ್ರ ಅವರು (12ನೇ ಬಾರಿ) ಕರಗ ಹೊರಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?

ಉತ್ಸವದ ವೇಳೆ ಭದ್ರತೆ ಒದಗಿಸಲು ಪೊಲೀಸರ ಜತೆ ಸಭೆ ಕರೆದಿದ್ದೇವೆ. ಟ್ರಾಫಿಕ್ ನಿಯಂತ್ರಣ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದೇವೆ. ಯಾವುದೇ ಧರ್ಮ ದಂಗಲ್‌ಗೆ ಅವಕಾಶ ನೀಡದೆ ಕರಗ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶ್ರೀರಾಮನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

ಬೆಂಗಳೂರು: ಶ್ರೀರಾಮ ನವಮಿ (Ram Navami 2023) ಹಬ್ಬದ ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ. ಮಾರ್ಚ್‌ 30ರ ಗುರುವಾರ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬಂಧ ಪಾಲಿಕೆಯ ಜಂಟಿ ನಿರ್ದೇಶಕರು (ಪಶುಪಾಲನೆ) ಆದೇಶ ಹೊರಡಿಸಿದ್ದಾರೆ.

ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ, ಶ್ರೀರಾಮ ರಥೋತ್ಸವ

ಶಿರಸಿ: ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಮಾ.29 ರಿಂದ 31ರವರೆಗೆ ಶ್ರೀರಾಮ ನವಮಿ ಉತ್ಸವ (Sri Rama Navami Utsava) ಹಾಗೂ ಶ್ರೀರಾಮ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಮಿತಿಯ ಅಧ್ಯಕ್ಷ ವಿಷ್ಣು ಹರಿಕಾಂತ ತಿಳಿಸಿದರು.

ಶ್ರೀ ಸದ್ಗರು ನಿತ್ಯಾನಂದ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮಾ.29 ಹಾಗೂ 30ರಂದು ಪ್ರತಿದಿನ ಬೆಳಗ್ಗೆ 7 ಗಂಟೆಗೆ ಅಖಂಡ ಶ್ರೀರಾಮ ತಾರಕ ಜಪವನ್ನು ಹಮ್ಮಿಕೊಳ್ಳಲಾಗಿದೆ. ಮಾ.30ರ ಬೆಳಗ್ಗೆ 11.30 ರಿಂದ ಶ್ರೀರಾಮ ನವಮಿ ಉತ್ಸವದಲ್ಲಿ ಮಠದ ಆವರಣದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮಾ.31 ರಂದು ಶ್ರೀರಾಮ ರಥೋತ್ಸವಕ್ಕೆ ಚಾಲನೆ ನಿಡಲಾಗುತ್ತದೆ‌. ಬೆಳಗ್ಗೆ 6 ಗಂಟೆಗೆ ಮಹಾಭಿಷೇಕ ನಡೆಯಲಿದ್ದು, ಸಂಜೆ 5.30ಕ್ಕೆ ರಥಾರೋಹಣ ಪೂಜೆ ಹಾಗೂ ರಥಾನಯನ ನೆರವೇರಲಿದೆ” ಎಂದರು.

Exit mobile version