ರಿಪ್ಪನ್‌ಪೇಟೆ: ಜೈನ ಬೀಜಾಕ್ಷರಿ ಮಂತ್ರವನ್ನು ನಿತ್ಯ ಪಠಣ ಮಾಡುವುದರಿಂದ ನಮಗೆ ಎದುರಾಗಿರುವ ನೂರೆಂಟು ಸಮಸ್ಯೆಗಳು ಪರಿಹಾರವಾಗುವುದು ಎಂದು ರಾಷ್ಟ್ರ ಸಂತ ಆಚಾರ್ಯ ೧೦೮ ಗುಣಧರ ನಂದಿ ಮುನಿ ಮಹಾರಾಜರು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಪವಿತ್ರ ಯಾತ್ರಾ ಸ್ಥಳವಾದ ಹೊಂಬುಜ ಅತಿಶಯ ಮಹಾ ಕ್ಷೇತ್ರದಲ್ಲಿ (Hombuja Jain Matha) ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಶುಕ್ರವಾರ (ಜ.೨೭) ಕೊನೆಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಹೊಂಬುಜ ಜೈನ ಮಠದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವವು ದೇವರಾಯ ಇಂದ್ರ ಸಾಕ್ಷಾತ್ಕಾರ ಮಾಡಿದಂತಾಗಿದ್ದು, ಈ ಪುಣ್ಯ ಕಾರ್ಯ ಜನಮಾನಸದಲ್ಲಿ ನೂರಾರು ವರ್ಷ ಕಾಲ ಉಳಿಯುವಂತಾಗಿದೆ. ಜೈನ ಬೀಜಾಕ್ಷರ ಮಂತ್ರ ಪಠಣದಿಂದ ಅನಂತ ಶಕ್ತಿ ವೃದ್ಧಿಯಾಗುವುದು ಮತ್ತು ಸಂಕಷ್ಟಗಳು ಪರಿಹಾರವಾಗುವುದು ಎಂದು ಹೇಳಿದರು.
ಇದನ್ನೂ ಓದಿ | Pathaan Movie: ಮೂರು ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ. ಕ್ಲಬ್ ಸೇರಿದ ʻಪಠಾಣ್ʼ
ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.ವಾತ್ಸಲ್ಯ ಮುನಿಶ್ರೀ ೧೦೮ ಪುಣ್ಯಸಾಗರ ಮಹಾರಾಜರು ಅರ್ಯಿಕಾ ೧೦೫ ನೂತನಮತಿ ಮಾತಾಜೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಪದ್ಮರಾಜ ಎನ್.ದೇಸಾಯಿ, ಡಾ.ಜೀವಂಧರ ಜೈನ, ವಿಜಯಪಾಟ್ನಿ, ಧನ್ಯಕುಮಾರ ಗುಂಡೆ, ವಿಜಯ ಕುಚನೂರೆ, ಆಶೋಕ ಪಾಪಡಿವಾಲ್, ರಜನೀಶ್ ಜೈನ್, ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಭಾಕರ ಗೋಗಿ, ಭದ್ರಾವತಿ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಕಾಶ ಚಂದ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಿ.ಡಿ.ಅಶೋಕ ಕುಮಾರ ಸ್ವಾಗತಿಸಿದರು. ಯಶೋಧರ ಇಂದ್ರ ವಂದಿಸಿದರು.
ಇದನ್ನೂ ಓದಿ | Taraka Ratna: ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್: ನಟ ಬಾಲಕೃಷ್ಣ ಹೇಳಿದ್ದೇನು?