ರಿಪ್ಪನ್‌ಪೇಟೆ: ಮೊಗಲರ ಕಾಲದಲ್ಲಿ ಜೈನರು ಅವನತಿಯತ್ತ ಸಾಗುವಂತಾಗಿತ್ತು. ನಂತರದಲ್ಲಿ ಭಟ್ಟಾರಕರು ಜೈನ ಧರ್ಮವನ್ನು ಕನ್ಯಾಕುಮಾರಿಯಿಂದ ಕಾಶ್ಮೀರದ ಎಲ್ಲೆಡೆಯಲ್ಲಿ ಜೈನ ಧರ್ಮೀಯರ ಅವಶೇಷಗಳ ಉಳಿಯುವಿಕೆಯೊಂದಿಗೆ ಅಹಿಂಸಾ ತತ್ತ್ವ ಭೋದನೆಯೊಂದಿಗೆ ಜೈನ ಪರಂಪರೆಯನ್ನು (Hombuja Jain Matha) ಉಳಿಸುವಲ್ಲಿ ಯಶ್ವಸಿಯಾಗಿದ್ದಾರೆಂದು ರಾಷ್ಟ್ರ ಸಂತ ೧೦೮ ಗುಣಧರ ನಂದಿ ಮುನಿಮಹಾರಾಜರು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಇದನ್ನೂ ಓದಿ | leopard attack: ಕುಂತರೂ ನಿಂತರೂ ಚಿರತೆಯದ್ದೇ ಭೀತಿ; ಮಂಡ್ಯದಲ್ಲಿ ನಾಯಿ, ಮೈಸೂರಲ್ಲಿ ಎಮ್ಮೆ ಎಳೆದೊಯ್ದ ಚಿರತೆ
ಜೈನ ಧರ್ಮದ ಮೂಲ ಮಂತ್ರ ಅಹಿಂಸಾ ತತ್ತ್ವ ಸಿದ್ಧಾಂತದಿಂದ ಭಾರತ ದೇಶ ಅದ್ಭುತ ಭಾರತವಾಗಿದೆ. ಜಗತ್ತಿನಾದ್ಯಂತ ಜೈನ ಧರ್ಮದ ಇತಿಹಾಸವಿದೆ. ವೇದಗಳ ಕಾಲದಲ್ಲಿಯೂ ಜೈನ ಧರ್ಮಕ್ಕೆ ಹೆಚ್ಚು ಪ್ರಾತಿನಿಧ್ಯ ಇತ್ತು ಎಂದು ಉಲ್ಲೇಖಿಸಿದ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳ ಆಹಾರ ದಾನ, ಅಭಯ ದಾನ, ಶಾಸ್ತ್ರಾ ದಾನ ಹಾಗೂ ಔಷಧ ದಾನ ಎಂಬ ನಾಲ್ಕು ದಾನಗಳ ಮೂಲಕ ಜಗತ್ತಿನೆಲ್ಲೆಡೆ ಜೈನ ಪರಂಪರೆಯನ್ನು ಬೆಳಗಿಸಿದ ಕೀರ್ತಿ ಜೈನ ಧರ್ಮದ್ದಾಗಿದೆ. ಅದನ್ನು ಪರಿಪಾಲಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳದ ಸುರೇಂದ್ರ ಕುಮಾರ್ ಮಾತನಾಡಿ, ಕೇವಲ ೧೨ ವರ್ಷದಲ್ಲಿ ಹೊಂಬುಜ ಜೈನ ಮಠ ಇಷ್ಟು ಅಭಿವೃದ್ಧಿಯಾಗಿರುವುದರ ಬಗ್ಗೆ ಶ್ರೀಗಳ ಸಮಾಜಮುಖಿ ಚಿಂತನೆ ಮತ್ತು ಧರ್ಮದ ಪರಿಪಾಲನೆ ಪ್ರಶಂಸನೀಯ. ಶ್ರೀಕ್ಷೇತ್ರದ ಅಮ್ಮನವರ ಕೃಪಾಕಟಾಕ್ಷವೇ ಇಲ್ಲಿನ ಈ ಪ್ರಗತಿಗೆ ಶ್ರೀರಕ್ಷೆ ಎಂದರು.
ಕೊಲ್ಲಾಪುರ ಲಕ್ಷಸೇನ ಭಟ್ಟಾರಕರು ಉಪದೇಶ ನೀಡಿ, ಎಲ್ಲ ಧರ್ಮದ ಸಾರವೂ ಸೇರಿದಂತೆ ಜೈನ ಧರ್ಮದ ಸಾರವೂ ಒಂದೇಯಾಗಿದೆ ಎಂದರು.
ಇದನ್ನೂ ಓದಿ | KGF Kannada Movie : ಕೆಜಿಎಫ್ 5 ಕೂಡ ತೆರೆಗೆ ಬರುತ್ತೆ; ಆದರೆ ನಾಯಕ ಯಶ್ ಅಲ್ಲ! ಸಲಾರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಕಿ ಭಾಯ್?
ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾಕರ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಮಾರಂಭದ ನೇತೃತ್ವವನ್ನು ವಹಿಸಿದ್ದರು. ವಾತ್ಸಲ್ಯ ಮುನಿಶ್ರೀ ೧೦೮ ಪುಣ್ಯಸಾಗರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಭಾರತೀಯ ಜೈನ ಮಿಲನ್ ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್, ಕರ್ನಾಟಕ
ಭಾರತೀಯ ಜೈನ ಮಿಲನ ನಿಯೋಜಿತ ಅಧ್ಯಕ್ಷ ಯುವರಾಜ ಭಂಡಾರಿ, ಭಾರತೀಯ ಜೈನ ಮಿಲನ ವಲಯ ೮ ಕಾರ್ಯಾಧ್ಯಕ್ಷ ಕೆ. ಪ್ರಸನ್ನ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಶೋಧರ ಇಂದ್ರ ಬಿದರೂರು ಸ್ವಾಗತಿಸಿದರು. ಕುಮುದಾ ನಾಗಭೂಷಣ ನಿರೂಪಿಸಿದರು. ಗ್ರಾಪಂ ಉಪಾಧ್ಯಕ್ಷ ದೇವೇಂದ್ರ ವಂದಿಸಿದರು.
ಇದನ್ನೂ ಓದಿ | ಕೆ.ಆರ್. ಮಾರ್ಕೆಟ್ ಫ್ಲೈಓವರ್ ಮೇಲಿಂದ ದುಡ್ಡಿನ ಸುರಿಮಳೆ; ಗರಿ ಗರಿ ನೋಟಿಗೆ ಮುಗಿಬಿದ್ದ ಜನ!