Site icon Vistara News

Hombuja Jain Matha: ಜ. 22ರಿಂದ 27 ರವರೆಗೆ ಹೊಂಬುಜ ಜೈನ ಮಠದಲ್ಲಿ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ

Jagadguru of Hombuja Jain Digambar Mutt Devendra Keerthi Bhattaraka

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಜ. ೨೨ರಿಂದ ೨೭ರವರೆಗೆ ನೂತನ ಮಾನಸ್ತಂಭೋಪರಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ಹೊಂಬುಜ ಜೈನ ದಿಗಂಬರ ಮಠದ (Hombuja Jain Matha) ಜಗದ್ಗುರು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಜ. ೨೨ರಂದು ಭಾನುವಾರ ಮಧ್ಯಾಹ್ನ ೨ ಗಂಟೆಗೆ ಜಿನದತ್ತರಾಯ ಸಭಾ ಮಂಟಪದ ಅರ್ಹದ್ದಾಸ ವೇದಿಕೆಯಲ್ಲಿ ಗಣಾಧಿಪತಿ ಗಣಧರಾಚಾರ್ಯ ಶ್ರೀ ೧೦೮ ಕುಂಥುಸಾಗರ ಮಹಾರಾಜರ ಪರಮಶಿಷ್ಯರಾದ ನವಗ್ರಹ ತೀರ್ಥ ಪ್ರಣೇತ ಪೂಜ್ಯ ರಾಷ್ಟ್ರ ಸಂತ ಆಚಾರ್ಯ ೧೦೮ ಶ್ರೀ ಗುಣಧರನಂದಿ ಮುನಿಮಹಾರಾಜರು ಮತ್ತು ಸಂತ ಶಿರೋಮಣಿ ಆಚಾರ್ಯ ಶ್ರೀ ೧೦೮ ಪುಣ್ಯ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮೂಡುಬಿದರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿ ಮತ್ತು ಸೋಂದಾ ಮಠದ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾ ಸ್ವಾಮೀಜಿ ಹಾಗೂ ಆನಂದಪುರದ ಮುರುಘಾರಾಜೇಂದ್ರ ಸಂಸ್ಥಾನ ಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾ ಸ್ವಾಮೀಜಿ ಅವರ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ಐ.ಎಂ.ಅರುಣ್, ನಿವೃತ್ತ ನ್ಯಾಯಮೂರ್ತಿ
ಅಜಿತ ಗುಂಜಾಳ, ಐಎಎಸ್ ಅಧಿಕಾರಿ ಮನೋಜ್‌ ಜೈನ್, ಅಂತರಿಕ ಭದ್ರತಾ ವಿಭಾಗದ ಪೊಲೀಸ್ ಕಮಿಷನರ್ ಜಿನೇಂದ್ರ ಖನಗಾವಿ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಜ. ೨೩ರಂದು ಸೋಮವಾರ ಜಿನಕಂಚಿ ಶ್ರೀ ಕ್ಷೇತ್ರದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾ ಸ್ವಾಮೀಜಿ, ಕೊಲ್ಲಾಪುರದ ಸ್ವಸ್ತಿ ಲಕ್ಷ್ಮೀಸೇನ ಭಟ್ಟಾರಕರು ಹಾಗೂ ಲಕ್ಕವಳ್ಳಿ ವೈಷಭಸೇನ ಭಟ್ಟಾರಕರು ಉಪಸ್ಥಿತಿಯಲ್ಲಿ ಭಾರತೀಯ ಜೈನ ಮಿಲನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಮತ್ತು ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ, ಮಹಾರಾಷ್ಟ್ರದ ಮಾಜಿ ಸಂಸದ ರಾಜು ಶೆಟ್ಟಿ ಶಿರೂಳ ಭಾಗವಹಿಸುವರು.

ಇದನ್ನೂ ಓದಿ: BBC Documentary On Modi | ಭಾರತೀಯ ಮುಸ್ಲಿಮರು ಭೂತಕಾಲದಿಂದ ಮುಂದೆ ಸಾಗಿದ್ದಾರೆ, ಬಿಬಿಸಿ ಅಲ್ಲೇ ಇದೆ: ಅಲಿಗಢ ಮುಸ್ಲಿಂ ವಿವಿ ಉಪಕುಲಪತಿ

ಜ. ೨೪ರಂದು ಮಂಗಳವಾರ ಮಧ್ಯಾಹ್ನ ಕಾರ್ಕಳದ ಸ್ವಸ್ತಿ ಲಲಿತಕೀರ್ತಿ ಭಟ್ಟಾರಕರು ಮತ್ತು ನಾಂದಣಿ ಸ್ವಸ್ತಿ ಜಿನಸೇನ ಭಟ್ಟಾರಕರ ಗೌರವ ಉಪಸ್ಥಿತಿಯಲ್ಲಿ ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ, ಮಹಾರಾಷ್ಟ್ರದ ಮಾಜಿ ಸಚಿವ, ಶಾಸಕ ರಾಜೇಂದ್ರ ಪಾಟೀಲ್, ಮ.ಶಾ.ಪ್ರಕಾಶ ಅವಾಡೆ, ಡಿ.ಎಸ್.ಅರುಣ್ ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಜ.೨೫ ರಂದು ಬುಧವಾರ ಕನಕಗಿರಿಯ ಸ್ವಸ್ತಿ ಭವನಕೀರ್ತಿ ಭಟ್ಟಾರಕರು, ಸಿಂಹನಗದ್ದೆ ಲಕ್ಷ್ಮಣ ಸೇನಾ ಭಟ್ಟಾರಕರು, ಆರತಿಪುರ ಸಿದ್ಧಾಂತ ಕೀರ್ತಿ ಭಟ್ಟಾರಕರು, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಗೌರವ ಉಪಸ್ಥಿತಿಯಲ್ಲಿ, ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಖ್ಯಾತ ವಿದ್ವಾಂಸ ಪ್ರೊ.ನಾಡೋಜ ಹಂಪ ನಾಗರಾಜಯ್ಯ, ಸಂಸದ ಬಿ.ವೈ.ರಾಘವೇಂದ್ರ, ನಳಿನ್‌ ಕುಮಾರ್ ಕಟೀಲು, ಸಚಿವರಾದ ವಿ.ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಎಸ್.ರುದ್ರೇಗೌಡ ಇನ್ನಿತರರು ಭಾಗವಹಿಸುವರು.

ಇದನ್ನೂ ಓದಿ | WTT Contender | ಡಬ್ಲ್ಯುಟಿಟಿ ಕಂಟೆಂಡರ್‌ ಟೂರ್ನಿ; ಸೆಮಿಫೈನಲ್ ಪ್ರವೇಶಿಸಿದ ​ಮಣಿಕಾ ಬಾತ್ರಾ

ಜ. ೨೬ರಂದು ಗುರುವಾರ ಮಧ್ಯಾಹ್ನ ೨ ಗಂಟೆಗೆ ಶ್ರವಣಬೆಳಗೊಳದ ಜಗದ್ಗುರು ಕರ್ಮಯೋಗಿ ಸ್ವಸ್ತಿ ಚಾರುಕೀರ್ತಿ ಭಟ್ಟಾರಕರು, ಅರಿಹಂತಗಿರಿ ಧವಳಕೀರ್ತಿ ಭಟ್ಟಾರಕರು, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕರು, ವರೂರು ಧರ್ಮಸೇನ ಭಟ್ಟಾರಕರ ಗೌರವ ಉಪಸ್ಥಿತಿಯಲ್ಲಿ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಸಂಜಯ ಪಾಟೀಲ್ ಇನ್ನಿತರ ಗಣ್ಯರು ಪಾಲ್ಗೊ‌ಳ್ಳಲಿದ್ದಾರೆ.

ಜ. ೨೭ರಂದು ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಹೊಂಬುಜ ಜೈನ ಮಠದ ಜಗದ್ಗುರು ಸ್ವಸ್ತಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಅವರ ಗೌರವ ಉಪಸ್ಥಿತಿಯಲ್ಲಿ ಬೆಂಗಳೂರು ಹೈಕೋರ್ಟ್ ನ್ಯಾಯಮೂರ್ತಿ ಪದ್ಮರಾಜ ಎಸ್. ದೇಸಾಯಿ, ಬೆಳ್ತಂಗಡಿ ರತ್ನತ್ರಯ ಜೈನ ತೀರ್ಥ ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯವರ್ಮರಾಜ ಬಲ್ಲಾಳ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

Exit mobile version