ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Kukke Subrahmanya Temple) ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಡಿಸೆಂಬರ್ 10ರಿಂದ ಡಿಸೆಂಬರ್ 24ರವರೆಗೆ ಚಂಪಾ ಷಷ್ಠಿ (Champa Shashti) ಮಹೋತ್ಸವ (Kukke Temple) ನಡೆಯಲಿದೆ.
ಶೋಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿಯಿಂದ (ಡಿ. 12ರ ಆದಿತ್ಯವಾರದಿಂದ) ಮಾರ್ಗಶಿರ ಶುದ್ಧ ದ್ವಾದಶಿವರೆಗೆ (ಡಿಸೆಂಬರ್ 24) ವಾರ್ಷಿಕ ಜಾತ್ರಾ ಉತ್ಸವಾದಿಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಯಾವಾಗ? ಏನೇನು ಕಾರ್ಯಕ್ರಮ?
10-12-2023 ಆದಿತ್ಯವಾರ: ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ
11-12-2023 ಸೋಮವಾರ: ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ
12-12-2023: ಮಂಗಳವಾರ: ಲಕ್ಷ ದೀಪೋತ್ಸವ
13-12-2023: ಶೇಷವಾಹನೋತ್ಸವ
14-12-2023: ಅಶ್ವವಾಹನೋತ್ಸವ
15-12-2023: ಮಯೂರ ವಾಹನೋತ್ಸವ
16-12-2023: ರಾತ್ರಿ ಹೂವಿನ ತೇರಿನ ಉತ್ಸವ
17-12-2023: ಪಂಚಮಿ ರಥೋತ್ಸವ, ತೈಲಾಭ್ಯಂಜನ
18-12-2023: ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ
19-12-2023: ಶ್ರೀ ದೇವರ ಅವಕೃತೋತ್ಸವ, ನೌಕಾವಿಹಾರ
24-12-2023: ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ
ಡಿಸೆಂಬರ್ 9ರಂದು ಮೂಲಮೃತ್ತಿಕಾ ಪ್ರಸಾದ ವಿತರಣೆ ಮತ್ತು 2024ರ ಜನವರಿ 16ರಂದು ಕಿರುಷಷ್ಠಿ ಮಹೋತ್ಸವ ಜರುಗಲಿದೆ. ಡಿಸೆಂಬರ್ 10ರಿಂದ 12ರವರೆಗೆ ಭಕ್ತರು ಸಲ್ಲಿಸುವ ಹಸಿರು ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ದೇವಸ್ಥಾನದಲ್ಲಿ ನಡೆಯುವ ಸೇವೆಗಳ ದರ ಇಂತಿದೆ
1.ಮಹಾರಥೋತ್ಸವ: 25,000 ರೂ.
2. ಚಿಕ್ಕ ರಥೋತ್ಸವ: 8,000 ರೂ.
3. ಚಂದ್ರಮಂಡಲ ಉತ್ಸವ: 6,000 ರೂ.
4. ಹೂವಿನ ತೇರಿನ ಉತ್ಸವ: 5,000 ರೂ.
5. ಬಂಡಿ ಉತ್ಸವ: 3,000 ರೂ.
6. ಮಹಾಭಿಷೇಕ: 6,000 ರೂ.
7. ದೀಪಾರಾಧನೆ, ಪಾಲಕಿ ಉತ್ಸವ: 2,500 ರೂ.
8. ಮಹಾಪೂಜೆ,ಪಾಲಕಿ ಉತ್ಸವ: 1,500 ರೂ.
9. ಸಪರಿವಾರ ಸೇವಾ: 2,000 ರೂ.
10. ನಾಗಪ್ರತಿಷ್ಠೆ: 400 ರೂ.
11. ಆಶ್ಲೇಷ ಬಲಿ: 400 ರೂ.
12. ಮಹಾಪೂಜೆ (ಇಡೀ ದಿನದ್ದು): 400 ರೂ.
13. ಮಹಾಪೂಜೆ (ಮಧ್ಯಾಹ್ನ): 250 ರೂ.
14. ಪಂಚಾಮೃತ ಅಭಿಷೇಕ: 75 ರೂ.
15. ರುದ್ರಾಭಿಷೇಕ: 75 ರೂ.
16. ಕ್ಷೀರಾಭಿಷೇಕ: 50 ರೂ.
17. ಶೇಷ ಸೇವೆ: 100 ರೂ.
18. ಹರಿವಾಣ ನೈವೇದ್ಯ: 100 ರೂ.
19. ಕಾರ್ತಿಕ ಪೂಜೆ: 50 ರೂ.
20. ಪಂಚಕಜ್ಜಾಯ: 20 ರೂ.
21. ಲಾಡು ಪ್ರಸಾದ: 20 ರೂ.
22. ತೀರ್ಥ ಬಾಟ್ಲಿ: 10 ರೂ.
ಇದನ್ನೂ ಓದಿ : Ananthapura Lake Temple: ಅನಂತಪುರ ಕ್ಷೇತ್ರದ ಕೆರೆಯಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷ; ಭಕ್ತರಲ್ಲಿ ಸಂತಸ
ಅಂಚೆ ಮೂಲಕವೂ ಪ್ರಸಾದ ಕಳುಹಿಸುವ ವ್ಯವಸ್ಥೆ ಇದೆ
ಮನಿಯಾರ್ಡರ್, ಡಿ.ಡಿ., ಚೆಕ್ಕು ಮೂಲಕ ಕಾಣಿಕೆ ರೂ. 50.00 ಯಾ ಅದಕ್ಕಿಂತ ಅಧಿಕ ಹಣ ಕಳುಹಿಸುವ ಭಕ್ತಾದಿಗಳಿಗೆ ಅಂಚೆ ಮೂಲಕ ಪ್ರಸಾದವನ್ನು ಕಳುಹಿಸಲಾಗುವುದು. ದೇವಳದ ಇ-ಹುಂಡಿ ಸೇವೆಗೆ ಯಾವುದೇ ಯುಪಿಐ ಮೂಲಕ ಮೊತ್ತವನ್ನು ಪಾವತಿ ಮಾಡಬಹುದು ಎಂದು ತಿಳಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ