ತುಮಕೂರು: ಇಲ್ಲಿನ ಕರಿಗಿರಿ ಕ್ಷೇತ್ರದ ಇತಿಹಾಸ ಪ್ರಸಿದ್ಧ ದೇವರಾಯನದುರ್ಗ ಬೆಟ್ಟದಲ್ಲಿರುವ ಶ್ರೀ ಭೋಗ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಫೆ.10ರಿಂದ 12ರವರೆಗೆ ಕುಂಭಾಭಿಷೇಕ ಮಹೋತ್ಸವ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಮೂರೂ ದಿನಗಳ ಧಾರ್ಮಿಕ ಕಾರ್ಯಕ್ರಮಗಳು ವಿದ್ವಾನ್ ಶೇಷಾದ್ರಿ ಎಸ್.ಆರ್.ಶೇಷಾದ್ರಿಭಟ್ಟರ್ ನೇತೃತ್ವದಲ್ಲಿ ನೆರವೇರಲಿವೆ. ಫೆ.12ರಂದು ನಡೆಯಲಿರುವ ಮಹಾಕುಂಭಾಭಿಷೇಕ ಮಹೋತ್ಸವವನ್ನು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಾಧೀಶ್ವರರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸುವರು.
ಫೆ.10ರಂದು ಶುಕ್ರವಾರ ಸಂಜೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಸಂಜೆ 6ಕ್ಕೆ ಆಚಾರ್ಯಾದಿ ಋತ್ವಿಗ್ವರಣ, ಸ್ವಸ್ತಿವಾಚನ, ಶುದ್ಧಿಪುಣ್ಯಾಹ, ವಾಸ್ತುಹೋಮ ಪರ್ಯಗ್ನಿಕರಣ, ಕಳಸಸ್ಥಾಪನೆ, ಮಹಾನಿವೇದನ, ಮಹಾಮಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಫೆ.11ರಂದು ಬೆಳಗ್ಗೆ 9ಗಂಟೆಗೆ ಪುಣ್ಯಾಹ ವಾಚನ, ಕಳಸಾರಾಧನೆ, ಪಂಚಗವ್ಯಸ್ನಪನ, ಛಾಯಾಸ್ನಾಪನ, ಶಾಂತಿಹೋಮ ಪ್ರಧಾನ ಹೋಮಗಳು, ಪಾರಾಯಣಗಳು, ಮಹಾನಿವೇದನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5.30ಕ್ಕೆ ವಿಮಾನಗೋಪುರದ ಕಳಸ ಸ್ಥಾಪನೆ (ನವರತ್ನ), ಸಂಜೆ 6ಕ್ಕೆ ಶುದ್ಧಿ ಪುಣ್ಯಾಹ, 108 ಗರುಡ ಗಾಯತ್ರಿ ಹೋಮಗಳು, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿವೆ.
ಫೆ.8ರಂದು ಬೆಳಗ್ಗೆ 8ಗಂಟೆಯಿಂದ ಪುಣ್ಯಾಹ, ಕಲಶಾರಾಧನೆ, ಶಾಂತಿಹೋಮ, ಪುಣ್ಯಾಹುತಿ, ಕುಂಭೋದ್ವಾಸನೆ, ವಿಮಾನಗೋಪುರ ಮತ್ತು ರಾಜಗೋಪುರ ಕುಂಭಾಭಿಷೇಕ, ಅಲಂಕಾರ, ಮಹಾನಿವೇದನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಇದನ್ನೂ ಓದಿ: Chandra Grahan 2022 | ಚಂದ್ರ ಗ್ರಹಣ ಕಾಲದಲ್ಲಿ ದೇವರಿಗಿಲ್ಲ ಪೂಜೆ-ಪುನಸ್ಕಾರ; ಭಕ್ತರಿಗಿಲ್ಲ ದರ್ಶನ ಭಾಗ್ಯ