Site icon Vistara News

Letter to God | ದೇವರೇ.. ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರ‍್ಯಾರೂ ತಾಳಿ ಕಟ್ಟಬಾರದು; ಮಾಯಮ್ಮದೇವಮ್ಮನಿಗೆ ಭಕ್ತೆಯ ಪತ್ರ ವೈರಲ್‌

ಚಾಮರಾಜನಗರ: ದೇವರೇ ನನ್ನ ಮೂರ್ತಿನ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು! ಹೀಗೆ ದೇವರಿಗೆ ಪ್ರೇಮಿಯೊಬ್ಬಳು ಬರೆದಿರುವ ಹರಕೆ (Letter to God) ಪತ್ರ ವೈರಲ್‌ ಆಗಿದೆ.

ಇಲ್ಲಿನ ತಾಲೂಕಿನ ಮುಕ್ಕಡಹಳ್ಳಿಯ ಮಾಯಮ್ಮದೇವಮ್ಮ ದೇವಾಲಯಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಈ ವೇಳೆ ದೇವಿ ಬಳಿ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಹುಂಡಿಯಲ್ಲಿ ಕಾಣಿಕೆಯ ಜತೆಗೆ ಭಕ್ತರ ಹರಕೆ ಪತ್ರವೂ ಲಭ್ಯವಾಗಿದೆ.

ದೇವರಿಗೆ ಪತ್ರ ಬರೆದ ಭಕ್ತರೊಬ್ಬರು ಹುಂಡಿಗೆ ಹಾಕಿರುವ ಪತ್ರ ವೈರಲ್‌ ಆಗಿದೆ. ಹುಂಡಿ ಎಣಿಕೆ ಸಂದರ್ಭದಲ್ಲಿ ಪ್ರೇಮಿಯೊಬ್ಬಳ ಚೀಟಿ ಸಿಕ್ಕಿದ್ದು, ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದೆಂದು ಬರೆದಿದ್ದಾರೆ.

ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ದೇವರೇ ನನಗೆ ಹೆಣ್ಣನ್ನು ಕರುಣಿಸು ಎಂದು ಭಕ್ತನೊಬ್ಬ ಬರೆದಿದ್ದ ಪತ್ರ ಮಂಗಳವಾರ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಭಕ್ತೆಯೊಬ್ಬಳ ಪತ್ರ ಸಿಕ್ಕಿದೆ.

ಇದನ್ನೂ ಓದಿ | Murder case | 24 ಬಾರಿ ಕಲ್ಲಿನಿಂದ ಜಜ್ಜಿ ಕೊಲೆ‌; ತಿಂಗಳ ಬಳಿಕ ಹಂತಕಿ ಸರೋಜ ಅರೆಸ್ಟ್‌

Exit mobile version